ಶಾಸ್ತ್ರೀಜಿ ಮ್ಯಾಜಿಕ್ ಮಾಡಿದ್ದು! ಜಮಾನಾದ ಜೋಕುಗಳು -೧೪

ಶಾಸ್ತ್ರೀಜಿ ಮ್ಯಾಜಿಕ್ ಮಾಡಿದ್ದು! ಜಮಾನಾದ ಜೋಕುಗಳು -೧೪

       ಸ್ವಾತಂತ್ರ ಸಿಕ್ಕ ಹೊಸದರಲ್ಲಿ ಆಗರ್ಭ ಶ್ರೀಮಂತನೊಬ್ಬ ಅಂದಿನ ಪ್ರಮುಖ ರಾಜಕೀಯ ನೇತಾರರಿಗೆಲ್ಲಾ ಔತಣಕೂಟವನ್ನು ಏರ್ಪಡಿಸಿದ್ದ. ಆ ಔತಣ ಕೂಟದಲ್ಲಿ ನೆಹ್ರೂಜಿ, ಶಾಸ್ತ್ರೀಜಿ ಮುಂತಾದ ಹೇಮಾಹೇಮಿಗಳೆಲ್ಲಾ ಪಾಲ್ಗೊಂಡಿದ್ದರು. ಔತಣಕ್ಕಾಗಿ ಬಂಗಾರದ ತಟ್ಟೆ,  ಬಂಗಾರದ ಲೋಟ, ಬಂಗಾರದ ಚಮಚ ಹಾಗು ಬಂಗಾರದ ಪಾತ್ರೆಗಳನ್ನೇ ಉಪಯೋಗಿಸಿದ್ದರು. ಅದನ್ನು ನೋಡಿದ ನೆಹ್ರೂಗೆ ಹೇಗಾದರು ಮಾಡಿ ಒಂದು ಚಮಚವನ್ನಾದರು ತನ್ನದಾಗಿಸಿಕೊಳ್ಳಬೇಕೆಂದು ಆಸೆ ಆಯಿತು. ಯಾರೂ ನೋಡದೇ ಇದ್ದಾಗ ಮೆಲ್ಲನೆ ಒಂದು ಚಮಚೆಯನ್ನು ಜೇಬಿಗೆ ಇಳಿಸಿಕೊಂಡು ಏನೂ ಆಗಿಲ್ಲವೆಂಬಂತೆ ಸುಮ್ಮನಾದರು. ಆದರೆ ಅದು ಹೇಗೋ ಈ ಸಂಗತಿ ಶಾಸ್ತ್ರಿಯವರ ಕಣ್ಣಿಗೆ ಬಿತ್ತು. ಅವರು ನೆಹ್ರೂಗೆ ಪಾಠ ಕಲಿಸಬೇಕೆಂದುಕೊಂಡು ಒಂದು ಉಪಾಯ ಮಾಡಿದರು. ಅದರಂತೆ, ಎಲ್ಲರನ್ನೂ ಕೂಗಿ ಕರೆದು ತಾನೊಂದು ಮ್ಯಾಜಿಕ್ ಮಾಡುವುದಾಗಿ ಹೇಳಿದರು. ಬಂದಿದ್ದ ಅತಿಥಿಗಳೆನ್ನೆಲ್ಲಾ ಉದ್ದೇಶಿಸಿ, "ನೋಡಿ ಈ ಚಮಚವನ್ನು ನನ್ನ ಜೇಬಿನಲ್ಲಿ ಹಾಕಿ, ನೆಹ್ರೂನ ಜೇಬಿನಲ್ಲಿ ಸಿಗುವಂತೆ ಮಾಡುತ್ತೇನೆ" ಎಂದು ಹೇಳಿದರು ಮತ್ತು ಅದರಂತೆ ಮಾಡಿದಾಗ ನೆಹ್ರೂರ ಜೇಬಿನಲ್ಲಿದ್ದ ಚಮಚ ಹೊರಗೆ ಬಂತು.

 
(ವಿ.ಸೂ.: ಇದು ೭೦-೮೦ರ ದಶಕದಲ್ಲಿ ಪ್ರಚಲಿತವಿದ್ದ ಒಂದು ಹಾಸ್ಯ ಪ್ರಸಂಗವಷ್ಟೇ!)
Rating
No votes yet

Comments