ಶಿವಶಕ್ತಿ
ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು ಬಿಟ್ಟಿರದಾರದವರೇ ಆಗಿದ್ದಾರೆ.
ಕಾಳಿದಾಸನ ರಘುವಂಶದ ಪದ್ಯ ಹೀಗಿದೆ:
ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ
ಇದನ್ನೇ ಕನ್ನಡದಲ್ಲಿ ನಾನು ಹಿಂದೆ ಹೀಗೆ ಅನುವಾದಿಸಿದ್ದೆ.
ನಾ ತಲೆವಾಗುವೆ ಶಿವಶಿವೆಗೆ
ಈ ಜಗದೆಲ್ಲರ ಹೆತ್ತವರ
ಬಿಡದೊಡಗೂಡಿಯೆ ಇಹರಿವರು
ಮಾತಿನ ಜೊತೆಯಲಿ ಹುರುಳಂತೆ
ಬಹುಶಃ ಶಿವ-ಶಕ್ತಿಯರ ಬಗ್ಗೆಯ ಈ ಪದ್ಯ ನೆನಪಾಗಿದ್ದಕ್ಕೂ, ಇವತ್ತು ಮೇ ೧ ನೇ ತಾರೀಕು ಆಗಿರುವುದಕ್ಕೂ ಸಂಬಂಧವಿರಬಹುದೇನೋ! ಏಕೆಂದರೆ ಶಿವಶಕ್ತಿ ಅನ್ನುವ ಒಂದು ಹೊಸ ರಾಗವನ್ನು ಕಲ್ಪಿಸಿ, ಅದರಲ್ಲೊಂದು ಒಳ್ಳೇ ರಚನೆ ಮಾಡಿದ ಜಿ.ಎನ್.ಬಾಲಸುಬ್ರಮಣ್ಯಂ ( ಜಿಎನ್ ಬಿ) ಅವರನ್ನು ನೆನೆಯುವ ದಿನವಿದು. ಇದೇ ದಿವಸ ೧೯೬೫ರಲ್ಲಿ ಅವರು ದಿವಂಗತರಾದರು.
ಆ ಶಿವಶಕ್ತಿ ರಾಗದಲ್ಲೇ, ನಾನು ಮಾಡಿದ ಒಂದು ರಚನೆಯನ್ನು ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ. ಕೇಳಿ, ಏನನ್ನಿಸಿತು ಅಂತ ಬರೀತೀರಲ್ಲ?
http://www.mixcloud.com/ramaprasad/a-swara-composition/
-ಹಂಸಾನಂದಿ
Comments
ಉ: ಶಿವಶಕ್ತಿ
ಹಂಸಾನಂದಿಯವರೆ, ರಾಗ-ತಾಳ ಏನೂ ಗೊತ್ತಿಲ್ಲ ನನಗೆ.
ಸ್ವರ ಮಾತ್ರ ಸೂಪರ್- http://www.mixcloud.com/ramaprasad/a-swara-composition/
In reply to ಉ: ಶಿವಶಕ್ತಿ by ಗಣೇಶ
ಉ: ಶಿವಶಕ್ತಿ
+ ೧. ಅದೂ, ಬೆಳಗಿನ ಜಾವ ಕೇಳಿದೆ - ಸುಪ್ರಭಾತದ ಹಾಗೆ ದೈವಿಕ ಅನುಭೂತಿ :-)
ಉ: ಶಿವಶಕ್ತಿ
ಅಭಿನಂದನೆಗಳು.
In reply to ಉ: ಶಿವಶಕ್ತಿ by kavinagaraj
ಉ: ಶಿವಶಕ್ತಿ
ಧನ್ಯವಾದಗಳು ಗಣೇಶ ಅವರೆ ಮತ್ತು ಕವಿನಾಗರಾಜರೆ.