ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ .
ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ...
ಅಲ್ಲಿ ಹಾದು ಹೋಗುವಾಗ ಅವರೂ ಸ್ವಾಗತಿಸಿ ... ಗೌರವಿಸುವರು ... ಆದರೆ ... ಶಿವಾಜಿಯ ಸಂಗಡಿಗರು ಸ್ಥಳೀಯರನ್ನು ಕೆಣಕಿ ಸ್ವಲ್ಪ ಗೊಂದಲ ಉಂಟಾಗುವದು . ಅದೇನು ಅಂತ ನೋಡಿ ಬಗೆ ಹರಿಸಲು ಹೋದ ರಾಜನನ್ನು ಶಿವಾಜಿಯ ಕಡೆಯವರು ತಪ್ಪು ಕಲ್ಪನೆಯಿಂದ ಕೊಂದು ಬಿಡುವರು. ಆದರೆ ಅವನು ಸಾಯುವ ಮೊದಲು ಹೆಂಡತಿಯಿಂದ - ಇವಳು ಮಲ್ಲಮ್ಮ - ಶಿವಾಜಿಯನ್ನು ಕೊಲ್ಲುವದಾಗಿ - ವಚನ ತೆಗೆದುಕೊಳ್ಳುವನು ..
ಅವಳು ... ಹೌದು ... ಶಿವಾಜಿಯನ್ನು ಸಮಯ ಸಾಧಿಸಿ ... ಹಿಡಿದುಹಾಕುವಳು ... ನಂತರ ಶಿವಾಜಿಯು ಅವರಿಗೆಲ್ಲ ಸಮಾಧಾನ ಹೇಳಿ , ಅವಳ ಮಗನನ್ನು ತನ್ನ ಹತ್ತಿರ ಕರೆದುಕೊಂಡು ಮುದ್ದು ಮಾಡುವನು . ಶಿಲಾಶಾಸನವೊಂದರಲ್ಲಿ ಗ್ರೂಪ್ ಫೋಟೋ ತರಹದ ಕೆತ್ತನೆ ಇದ್ದು ಮಲ್ಲಮ್ಮ , ಶಿವಾಜಿ , ಶಿವಾಜಿಯ ತೊಡೆಯ ಮೇಲೆ ಮಲ್ಲಮ್ಮನ ಮಗನು , ಅಷ್ಟೇ ಏಕೆ , ಮಲ್ಲಮ್ಮನ ಮೆಚ್ಚಿನ ನಾಯಿ ಕೂಡ ಇದೆಯಂತೆ .

ಇದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ , ’ಶಿವಾಜಿ ಮಲ್ಲಮ್ಮ ಯಾಂಚೆ ಸಮರೋತ್ಸವ’ ಎಂಬ ಪುಸ್ತಕದಲ್ಲಿ ಇರುವದಾಗಿ ಕಸ್ತೂರಿಯಲ್ಲಿ ಓದಿದ ನೆನಪು .
ಈ ಮಲ್ಲಮ್ಮ ಬೆಳವಡಿ ಮಲ್ಲಮ್ಮ ಇರಬಹುದು. ಈ ಬೆಳವಡಿ ಎಲ್ಲಿದೆ .. ಯಾರಾದರೂ ಗೊತ್ತಿದ್ದರೆ ತಿಳಿಸಿ.

Rating
No votes yet

Comments