ಶಿವ ಶಿವೆಯರ ಸರಸ

4

ಚಂದಿರನು ಬೂದಿಚದುರಿದ ಜಟೆಯೊಳಹೊಗುವ
ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ
ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ-
ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!

 

ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨)

 

ಜಟಾಗುಲ್ಮೋತ್ಸಂಗಂ ಪ್ರವಿಶತಿ ಶಶೀ ಭಸ್ಮಗಹನಂ

ಫಣೀಂದ್ರೋಽಪಿ  ಸ್ಕಂಧಾದ್ ಅವತರತಿ ಲೀಲಾಂಚಿತಫಣಃ | 

ವೃಷಃ ಶಾಠ್ಯಂ ಕೃತ್ವಾ ವಿಲಿಖತಿ ಖುರಾಗ್ರೇಣ ನಯನಂ 

ಯದಾ ಶಂಭುಶ್ಚುಂಬತ್ಯಚಲದುಹಿತುರ್ವಕ್ತ್ರ ಕಮಲಂ   ||

 

जटा-गुल्मोत्सङ्गं प्रविशति शशी भस्म-गहनं
फणीन्द्रोऽपि स्कन्धाद् अवतरति लीलाञ्चित-फणः ।
वृषः शाठ्यं कृत्वा विलिखति खुराग्रेण नयनं
यदा शम्भुश् चुम्बत्यचलदुहितुर् वक्त्र-कमलम् ॥

- ಹಂಸಾನಂದಿ

 

ಕೊ: ಸಂಸ್ಕೃತ ಪದ್ಯದಲ್ಲಿ ಇರುವ ಲಾಲಿತ್ಯವನ್ನು ಅನುವಾದದಲ್ಲಿ ತರಲು ಕಷ್ಟಸಾಧ್ಯ! 

 

ಕೊ.ಕೊ: ಮೂಲವು ಶಿಖರಿಣೀ ಎಂಬ ವೃತ್ತದಲ್ಲಿದೆ. ಇದರ ಪ್ರತಿ ಸಾಲುಗಳೂ,  "ನನಾನಾನಾನಾನಾ   ನನನನನನಾ ನಾನನನನಾ"  ಎಂಬಂತೆ ಕೇಳುತ್ತೆ.   ನನ್ನ ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಆದರೆ ಸಾಮಾನ್ಯವಾಗಿ ಈ ಛಂದಸ್ಸಿನಲ್ಲಿ ಇರುವಂತೆ ಎರಡನೇ ಮತ್ತೆ ನಾಲ್ಕನೆ ಸಾಲುಗಳಲ್ಲಿ ಕೊನೆಯಲ್ಲಿ ಕಡಿಮೆ ಅಕ್ಷರವಿಲ್ಲದೆ, ಎಲ್ಲ ಸಾಲುಗಳೂ ಒಂದೇ ಸಮನಾಗಿದೆ.

 

ಕೊ.ಕೊ.ಕೊ. ಚಿತ್ರ - ಉಮಾ ಮಹೇಶ್ವರ , ೧೦ ನೆಯ ಶತಮಾನದ ಶಿಲ್ಪಿ, ಈಗ ರಾಯಪುರ ವಸ್ತು ಸಂಗ್ರಹಾಲಯದಲ್ಲಿದೆ. (Image source: https://anushankarn.blogspot.in/ )

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.