ಶುಂಠಿ ತೊಕ್ಕು

ಶುಂಠಿ ತೊಕ್ಕು

ಬೇಕಾದ ಸಾಮಗ್ರಿಗಳು

1 ಬಟ್ಟಲು ಶುಂಠಿ
2 ರಿಂದ 3 ಚಮಚ ಎಣ್ಣೆ
ಸಾಸಿವೆ
2 ಹಸಿಮೆಣಸಿನಕಾಯಿ
1 ಚಮಚ ಮೆಂತ್ಯದ ಪುಡಿ
2 ಚಮಚ ಖಾರದ ಪುಡಿ
ಅರ್ಧ ಚಮಚ ಅರಿಶಿನ ಪುಡಿ
ಅರ್ಧ ಚಮಚ ಇಂಗು
1 ಬಟ್ಟಲು ಹುಣಸೆರಸ
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ
ಕರಬೇವು

ಮಾಡುವ ವಿಧಾನ

ಬಾಣಲೆಗೆ 2-3 ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಚಟಪಟ ಅಂದ ಮೇಲೆ ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ 2 ರಿಂದ 3 ನಿಮಿಷ ಬೇಯಿಸಿ ನಂತರ ಇದಕ್ಕೆ ಹಿಚ್ಚಿದ 2 ಹಸಿಮೆಣಸಿನಕಾಯಿ, ಕರಬೇವು ಹಾಕಿ ಇದಕ್ಕೆ 1 ಚಮಚ ಮೆಂತ್ಯದ ಪುಡಿ, ಅರ್ಧ ಚಮಚ ಇಂಗು, ರುಚಿಗೆ ತಕ್ಕಷ್ಟು ಬೆಲ್ಲ, 1 ಬಟ್ಟಲು ಹುಣಸೆರಸ, 2 ಚಮಚ ಖಾರದ ಪುಡಿ, ಅರ್ಧ ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು ಕೊನೆಗೆ ಉಪ್ಪು ಹಾಕಿ ಕಲಸಿ ಅದು ತಳ ಬಿಡುವವರೆಗೆ ಕೈಯಾಡಿಸುತ್ತಿರಬೇಕು. ಅದು ತಳ ಬಿಟ್ಟ ಮೇಲೆ ಎಣ್ಣೆ ಮೇಲೆ ತೆಲುತ್ತದೆ ಅಂದಾಗ ಇದು ಆಗಿದೆ ಅಂತ. ಇದನ್ನು ದೋಸೆ, ಇಡ್ಲಿ, ಅನ್ನ, ಚಪಾತಿ ಎಲ್ಲದಕ್ಕೂ ಉಪಯೋಗಿಸಬಹುದು.

Rating
No votes yet