ಶೈವಮತದ ಹಲವು ಮುಖಗಳು: ಭಾಗ ೪ - (ತಮಿಳು)ಶೈವಸಿದ್ಧಾಂತ
'ಶೈವ ಸಿದ್ಧಾಂತ' ಎನ್ನುವ ಪದವು 'ಶೈವ ತತ್ವ' ಎನ್ನುವ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ ಅದು ತಮಿಳು ದೇಶದಲ್ಲಿ ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳಿಂದ ಪ್ರಚಲಿತವಿರುವ ಶೈವಮತದೊಂದಿಗೆ ತಳುಕು ಹಾಕಿಕೊಂಡಿದೆ. ಈ ಧರ್ಮವು ಕ್ರಮಬದ್ಧ ಅಥವಾ ಜಿಜ್ಞಾಸಾಯುತವಾದ ತತ್ವಗಳಿಗಿಂತ ಅಧಿಕವಾಗಿ ಏಳನೇ ಮತ್ತು ೧೨ನೇ ಶತಮಾನಗಳ ಮಧ್ಯಭಾಗದಲ್ಲಿ ಜೀವಿಸುತ್ತಿದ್ದ, ೬೩ ಸಂಖ್ಯೆಯಲ್ಲಿದ್ದ ನಾಯನ್ಮಾರರು ಅಥವಾ ನಾಯನಾರರು ಎಂದು ಕರೆಯಲ್ಪಡುತ್ತಿದ್ದ ಅನುಭಾವಿಗಳು ಭಕ್ತಿರಸದಿಂದ ರಚಿಸಿದ ಕೃತಿಗಳ ಮೇಲೆ ಆಧಾರಿತವಾಗಿದೆ.
ತಮಿಳು ಶೈವಸಿದ್ಧಾಂತದ ಸಾಹಿತ್ಯವನ್ನು ಸಂಪಾದಿಸಿದ ನಂಬಿ ಆಂಡಾರ್ ನಂಬಿಯ(ಕ್ರಿ.ಶ. ೧೦೦೦) ಪ್ರಕಾರ ಅದರ ಕ್ರಮಬದ್ಧ ವ್ಯಾಖ್ಯಾನ ಗ್ರಂಥಗಳು ಈ ಕೆಳಕಂಡಂತಿವೆ:
ಪುಸ್ತಕದ ಕ್ರಮ ಕೃತಿಕಾರರು ಕಾಲ
ಸಂಖ್ಯೆ
೧,೨, ಮತ್ತು ೩ ತಿರುಜ್ಞಾನ ಸಂಭಂದರ್ ೭ನೇ ಶತಮಾನ ಕ್ರಿ.ಶ.
೪,೫, ಮತ್ತು ೬ ತಿರುನಾವಕ್ಕರಸು ೭ನೇ ಶತಮಾನ ಕ್ರಿ.ಶ.
೭* ಸುಂದರಾರ್ ೯ನೇ ಶತಮಾನ ಕ್ರಿ.ಶ.
೮ ಮಾಣಿಕ್ಕವಾಚಗರ್ ೮ನೇ ಶತಮಾನ ಅಥವಾ
(ಕೃತಿಗಳು - ತಿರುವಾಚಕಮ್ ಮತ್ತು ತಿರುಕ್ಕೋವೈ ) ೯ನೇ ಶತಮಾನ ಕ್ರಿ.ಶ.
೯ ಒಂಭತ್ತು ವಿವಿಧ ಸಂತರು೯ನೇ ಶತಮಾನದಿಂದ
(ಕೃತಿಗಳು - ತಿರುವಿಶೈಪ್ಪಾ ಮತ್ತು ತಿರುಪಲ್ಲಾಂಡು) ೧೧ನೇ ಶತಮಾನ ಕ್ರಿ.ಶ.
೧೦ ತಿರುಮೂಲಾರ್ ೬ನೇ ಶತಮಾನ ಕ್ರಿ.ಶ.
(ಕೃತಿ - ತಿರುಮಂದಿರಮ್)
೧೧ ಸಂತ ಪಟ್ಟಿನಾರ್, ಕಾರೈಕ್ಕಲ್ ಅಮ್ಮೈಯಾರ್
ಮೊದಲಾದವರ ವಿವಿಧ ಪದ್ಯಗಳು
೧೨ ಸೆಕ್ಕಿಲರ್ (ಕೃತಿ - ಪೆರಿಯಪುರಾಣಮ್) ೧೨ನೇ ಶತಮಾನ ಕ್ರಿ.ಶ.
______________________________________________________________________________________________________
*ಸಾಮಾನ್ಯವಾಗಿ ಈ ಏಳು ಗ್ರಂಥಗಳನ್ನು ಸಂಗ್ರಾಹ್ಯವಾಗಿ 'ತೆವಾರಮ್' ಅಥವಾ 'ದೆವಾರಮ್' ಎಂದು ಕರೆದಿದ್ದಾರೆ.
ತಮಿಳು ಶೈವಸಿದ್ಧಾಂತದ ಕ್ರಮಬದ್ಧ ವ್ಯಾಖ್ಯಾನವನ್ನು ಮೆಯ್ಕಂಡಾರ್ (ಕ್ರಿ.ಶ. ೧೩ನೇ ಶತಮಾನ), ಪ್ರಸಿದ್ಧವಾದ 'ಶಿವಜ್ಞಾನಬೋಧಮ್' ಎನ್ನುವ ಬಹಳ ಕಿರಿದಾದ ೧೨ ಸೂತ್ರಗಳಿರುವ ಕೃತಿಯ ಮೂಲಕ ಪ್ರಪಥಮವಾಗಿ ಮಾಡಿದನು. ಈ ಕೃತಿಯು ಮೂಲ ಸಂಸ್ಕೃತದ ರಚನೆಯಾಗಿದ್ದು ಕಾಲಾಂತರದಲ್ಲಿ ತಮಿಳಿಗೆ ಅನುವಾದಗೊಂಡಂತೆ ಕಾಣುತ್ತದೆ.
ಇದರ ನಂತರ ಮಹತ್ವವೆನಿಸುವ ಕೃತಿಯೆಂದರೆ ಮೆಯ್ಕಂಡಾರ್ನ ಶಿಷ್ಯನಾದ ಅರುಣಾಂಡಿಯ 'ಶಿವಜ್ಞಾನಶಿತ್ತಿಯಾರ್'. ಈ ಕೃತಿಯು ತನ್ನ ಅನೇಕ ಭಾಷ್ಯಗಳೊಂದಿಗೆ ಈಗಲೂ ಬಹು ಜನಪ್ರಿಯವಾಗಿ ಪಾರಾಯಣ ಮಾಡಲ್ಪಡುತ್ತಿದೆ. 'ಶಿವಜ್ಞಾನಬೋಧಮ್' ಕೃತಿಯು ಮೂರು ವಿಧವಾದ ಮೂಲಭೂತ ತತ್ವಗಳನ್ನು ವಿವರಿಸುತ್ತದೆ - ಪತಿ, ಪಶು ಮತ್ತು ಪಾಶ. ಒಟ್ಟಾರೆಯಾಗಿ ಈ ಕೃತಿಯಲ್ಲಿ ಪಶುವು ಸಾಧನೆಯ ಮೂಲಕ ಪತಿಯನ್ನು ಅರಿತುಕೊಳ್ಳಬೇಕು ಮತ್ತು ಅದರಿಂದ ಅವನಿಗೆ ಫಲ (ಆಧ್ಯಾತ್ಮಿಕ ಫಲ) ದೊರೆಯುವುದು.
'ಶೈವಸಿದ್ಧಾಂತ'ದ ತತ್ವವು 'ಪಾಶುಪತ ಮತ'ದ ತತ್ವಗಳೊಂದಿಗೆ ಬಹಳಷ್ಟು ಸಾಮತ್ಯೆಯನ್ನು ಹೊಂದಿದೆ; ಇವೆರಡರಲ್ಲಿ ಇರುವ ಮೂಲಭೂತ ವ್ಯತ್ಯಾಸವೇನೆಂದರೆ ಮೊದಲನೆಯದಾದ ಶೈವಸಿದ್ಧಾಂತವು, 'ಕಾಶ್ಮೀರ ಶೈವಮತ'ದಂತೆ ೩೬ ಮೂಲತತ್ವಗಳನ್ನು ಒಪ್ಪಿಕೊಂಡರೆ; ಎರಡನೆಯದಾದ ಪಾಶುಪತ ಮತವು ಕೇವಲ ೨೫ನ್ನು ಮಾತ್ರ ಒಪ್ಪಿಕೊಳ್ಳುತ್ತದೆ.
---------------------------------------------------------------------------------------------
ಈ ಸರಣಿಯ ಹಿಂದಿನ ಲೇಖನ ಶೈವಮತದ ಹಲವು ಮುಖಗಳು: ಭಾಗ ೩ - ಪಾಶುಪತಮತ ಕೊಂಡಿಗಾಗಿ ಇಲ್ಲಿ ಚಿಟುಕಿಸಿ:
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A9-%E0%B2%AA%E0%B2%BE%E0%B2%B6%E0%B3%81%E0%B2%AA%E0%B2%A4-%E0%B2%AE%E0%B2%A4/08/08/2012/37856
--------------------------------------------------------------------------------------------
ವಿ.ಸೂ. ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೪೦ ರಿಂದ ೪೩)
--------------------------------------------------------------------------------------------
Rating
Comments
ಉ: ಶೈವಮತದ ಹಲವು ಮುಖಗಳು: ಭಾಗ ೪ - (ತಮಿಳು)ಶೈವಸಿದ್ಧಾಂತ
In reply to ಉ: ಶೈವಮತದ ಹಲವು ಮುಖಗಳು: ಭಾಗ ೪ - (ತಮಿಳು)ಶೈವಸಿದ್ಧಾಂತ by ksraghavendranavada
ಉ: ಶೈವಮತದ ಹಲವು ಮುಖಗಳು: ಭಾಗ ೪ - (ತಮಿಳು)ಶೈವಸಿದ್ಧಾಂತ