ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ

ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

   ಶ್ರಮಿಕ    
           - ಲಕ್ಷ್ಮೀಕಾಂತ ಇಟ್ನಾಳ
ಎತ್ತರದ ಗಗನಚುಂಬಿ  ಕಟ್ಟಡಗಳಲ್ಲಿ
ಬೆಳಕಿನ ಚುಕ್ಕೆಗಳಂತೆ ಕಾಣುವನೀತ,
ಹೊಲಗಳಲ್ಲಿ ಹಸಿರೊಂದಿಗೆ ಉಸಿರುವ
ಬದುಕಿನ ನೇಪಥ್ಯದ ಜೊತೆಗಾರನೀತ

ದಿನವೂ ರಟ್ಟೆಗಳು ಮಸೆಯುತ್ತವೆ, ತನ್ನದಲ್ಲದ ಮನೆಯ ಮುಂದೆ
ಮರಳುವವು ಹೆಜ್ಜೆ, ಬೆವರು ಸುರಿಸಿದ, ದಾರಿಯಲ್ಲಿ  ಸಂಜೆ
ಅದೋ ದೂರ ಚುಕ್ಕೆಗಳಲ್ಲೀ ಅರಬೆತ್ತಲೆ ಫಕೀರನ ವಾಸ,
ಒಂದೊಮ್ಮೆ  ಚಂದ್ರನ ಧಾಬಾದಲ್ಲಿ ಕಳೆಯುವುದು ದಣಿವಾರುವ ಸಂಜೆ

ಗೋಡೆ ಬಾಗಿಲುಗಳಿಲ್ಲ, ಕಿಟಕಿ ಚೌಕಟ್ಟುಗಳಿಲ್ಲ, ಗೂಡಿಗೆ
ಬಯಲು ಆಲಯವೊ, ಆಲಯವೇ ಇಲ್ಲಿ ಕನಸೋ
ಬಿಸಿಲು ಬೆಳಗುವುದು ಅಡಿಗಡಿಗೆ, ಗಾಳಿ ಮಳೆಗಿಲ್ಲ ಬಾಡಿಗೆ
ಚುಕ್ಕೆ ಚಂದ್ರಮರ ಚಿಲಕದ ಸದ್ದಿಲ್ಲದ ಭೇಟಿ ಸಲೀಸೊ

ಭೂದಾಯಿ  ಸಂಕೇಸರದ ಹೂ ಗೊಂಚಲುಗಳಲ್ಲಿ ನಗುತ
ಮಾವು, ನೇರಳೆಗಳ ಕೋಗಿಲೆಗಳೊಂದಿಗೆ  ಕಳುಹುವಳು
ಧ್ರತಿಗೆಡದೆ ಬದುಕೆಂದು, ಬಂದೇ ಬರುವುದು ಕಾಲ ನಿನದೊಂದು
ಹರಸಿಹಳು ನೆಲಮಣ್ಣ ಮಕ್ಕಳನು, ಇಂದಿನ ಈ ದಿನದಂದು

 

Rating
No votes yet

Comments