ಶ್ರೀ. ಪಾರ್ಥಸಾರಥಿ ದೇವಾಲಯ, ಚೆನ್ನೈನ ಟ್ರಿಪ್ಲಿಕೇನ್ ನಲ್ಲಿದೆ !

ಶ್ರೀ. ಪಾರ್ಥಸಾರಥಿ ದೇವಾಲಯ, ಚೆನ್ನೈನ ಟ್ರಿಪ್ಲಿಕೇನ್ ನಲ್ಲಿದೆ !

 

 
 
'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ)  ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇನ್ ನಲ್ಲಿರುವ ಈ ಮಂದಿರ,ಚೆನ್ನೈನ ಅತಿ ಪುರಾತನ ದೇವಾಲಯವೆಂದು ಭಾವಿಸಲಾಗಿದೆ.ಈ ದೇವಾಲಯದಲ್ಲಿ ಕೃಷ್ಣನಿಗೆ ಹಾಗೂ ನರಸಿಂಹದೇವರಿಗೆ ಎರಡು ದ್ವಾರಗಳಿವೆ. 'ಮಂಡಪಂ' ಮತ್ತು ಗೋಪುರಗಳನ್ನು ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿದೆ. ದಕ್ಷಿಣಭಾರತದ ವಶಿಷ್ಟ್ಯಗಳಾದ ದೇವಿದೇವತೆಗಳು, ಹಲವಾರು ಭಂಗಿಗಳಲ್ಲಿ ಗೋಪುರದ ಉದ್ದಗಲಗಳಲ್ಲಿ  ತುಂಬಿವೆ   ೮ ನೆಯ ಶತಮಾನದ ವೈಶ್ಣವ ಸಂಪ್ರದಾಯದ ದೇವಾಲಯ ಶ್ರೀ ಕೃಷ್ಣನಿಗಾಗಿ ನಿರ್ಮಿಸಲಾಗಿದೆ. ಮಧ್ಯಕಾಲದ ೬- ೯ ನೆಯ ಶತಮಾನದಲ್ಲಿ ಜೀವಿಸಿದ್ದ ತಮಿಳು ಸಾಹಿತ್ಯ, ದಿವ್ಯಪ್ರಬಂಧದಲ್ಲಿ  ಆಳ್ವಾರ್ ಸಂತರು ವಿಷ್ಣುವಿಗಾಗಿ ಮುಡಿಪಾಗಿಟ್ಟ ೧೦೮ ದಿವ್ಯ ದೇಶಮ್ ನಲ್ಲಿ ಹಲವಾರು ಸಂಗತಿಗಳನ್ನು ದಾಖಲಿಸಿದ್ದಾರೆ. “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .“ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ. ದೇವಾಲಯದಲ್ಲಿ ವಿಷ್ಣುವಿನ ೧೦ ಅವತಾರಗಳು ವಿಷ್ಣು: ನರಸಿಂಹ, ರಾಮ, ವರಾಹ ಮತ್ತು  ಕೃಷ್ಣ. ದೇವಸ್ಥಾನಗಳಲ್ಲೊಂದು. ತಾಯರ್, ರಂಗನಾಥ,ರಾಮ, ಗಜೇಂದ್ರ ವರದರಾಜ ಸ್ವಾಮಿ, ನರಸಿಂಹ, ಆಂಡಾಳ್, ಆಂಜನೇಯ, ಆಳ್ವಾರಗಳು , ರಾಮಾನುಜ, ಸ್ವಾಮಿ ಮನವಾಲ ಮಾಮುನಿಗಳ್ ಮತ್ತು ವೇದಾಂತ ಚಾರಿಯರ್.ದೇವಸ್ಥಾನದಲ್ಲಿ ವೈಖನಾಸ ಆಗಮಕ್ಕೆ ಪ್ರಾಶಸ್ತ್ಯ ಅನುಸರಿಸುವುದು 'ಥೆನ್ಕಾಲಿ ಸಂಪ್ರದಾಯ'.
 
 
೧  ಮೇಲಿನ ಚಿತ್ರ ಶ್ರೀ. ಪಾರ್ಥಸಾರಥಿ ದೇವಾಲಯ.
 
೨.  ನನರಾತ್ರಿಯ ದಿನ ನಾವು ಅಲ್ಲಿಗೆ ಹೋದಾಗ ಉತ್ಸವ ಇತ್ತು.
 
-ಚಿತ್ರ ಮತ್ತು ವಿವರಣೆ :
 
-ಹೊರಂಲವೆಂ 
 
Rating
No votes yet

Comments

Submitted by partha1059 Thu, 11/08/2012 - 20:54

ಮತ್ತೆ ನಿಮ್ಮ ಬರಹದಲ್ಲಿರುವ‌ ಚಿತ್ರವೇಕೊ ಕಾಣುತ್ತಿಲ್ಲ. ಆದರೆ ಹಿ0ದೊಮ್ಮೆ ಆ ದೇವಾಲಯಕ್ಕೆ ಹೋಗಿದ್ದೆ,
ಬಹುಷ: ನಡುಮಧ್ಯಾನದ‌ ಬಿಸಿಲು, ದೇವಾಲಯದ‌ ಆವರಣದ‌ ಕಲ್ಲು ಹೇಗೆ ಕಾದಿತ್ತು ಎ0ದರೆ, ಒ0ದು ಕ್ಷಣ‌ ಸಹ‌ ನಿಲ್ಲಲಾರದೆ
ಓಡಿದ್ದೆವು, ಹಾಗಿದ್ದರು ಪಾದಗಳಲ್ಲಿ ಬೊಬ್ಬೆ ಎದ್ದಿತ್ತು :))))
ಅದೊ0ದೆ ನೆನಪಿನಲ್ಲಿ ಉಳಿದಿರುವುದು

Submitted by venkatesh Fri, 11/09/2012 - 06:38

In reply to by partha1059

ಪಾರ್ಥರವರಿಗೆ,

ತಮ್ಮ ಹೆಸರಿನ ಅಧ್ಬುತ ದೇವಾಲಯ ಕಾಣಿಸಲಿಲ್ಲ ಎಂದು ತಿಳಿಸಿರುವಿರಿ. ನನ್ನ ತಪ್ಪು ಹೇಗೆ ಸರಿಪಡಿಸಲಿ ; ನನಗೆ ಅದರ ಮರ್ಮ ಇನ್ನು ತಿಳಿದಿಲ್ಲ. ನಾನು ಚಿತ್ರದ ಯು.ಆರ್. ಎಲ್. ಲಗತ್ತಿಸಿದ್ದೇ. ಎಲ್ಲ ನನ್ನ ಲೇಖನಗಳಲ್ಲೂ ಚಿತ್ರ ಇದ್ದೆ ಇರುತ್ತೆ. ಚಿತ್ರಕ್ಕಾಗಿಯೇ ನಾನು ಕಾದು ಒಂದೆರಡು ಸಾಲು ಬರೆಯುತ್ತೇನೆ. ಏಕೆಂದರೆ ಈಗ ಇಂಟರ್ನೆಟ್ ನಲ್ಲಿ ಎಲ್ಲ ಮಾಹಿತಿಗಳು ಲಭ್ಯ ಅದಕ್ಕೆ.

Submitted by venkatesh Fri, 11/09/2012 - 14:52

In reply to by venkatesh

ಇಲ್ಲಿ ನಾನು ಬರೆದ ಲೇಖನದಲ್ಲಿ ಶ್ರೀ. ಪಾರ್ಥಸಾರಥಿ ಮಂದಿರ, ಮತ್ತು ಉತ್ಸವ ಮೂರ್ತಿಯೂ ಕಾಣಿಸುತ್ತದೆ. ದಯಮಾಡಿ ಬರೆಯಿರಿ.

ಲಿಂಕ್ : http://rivr.sulekha.com/parthasarathy-temple-at-triplicane-chennai_595440_blog#

Submitted by hamsanandi Fri, 11/09/2012 - 01:48

ಟ್ರಿಪ್ಲಿಕೇನ್ ಅನ್ನುವುದು ತಮಿಳಿನ ತಿರುವಲ್ಲಿಕ್ಕೇಣಿಯ ರೂಪಾಂತರ ( ತಿರು= ಪವಿತ್ರ, ಅಲ್ಲಿ= ಕಮಲ) - ಅಲ್ಲಿನ ಪುಷ್ಕರಿಣಿಯಿಂದ ಬಂದಿರುವ ಹೆಸರಾಗಿರಬಹುದು.

ಇಲ್ಲಿರುವಂತೆ ಮೀಸೆ ಹೊತ್ತ ಕೃಷ್ಣನ ರೂಪ ಬಹುಶಃ ಇನ್ಯಾವ ದೇವಾಲಯದಲ್ಲೂ ಕಂಡುಬರದು! - ಇಲ್ಲೊಂದು ಚಿತ್ರವಿದೆ , ನೋಡಿ:

http://108divyadesadarshan.blogspot.com/2011_11_01_archive.html

Submitted by venkatesh Fri, 11/09/2012 - 06:34

In reply to by hamsanandi

ಹಂಸಾನಂದಿಯವರಿಗೆ ನಮಸ್ಕಾರಗಳು. ತಮ್ಮ ಎಲ್ಲ ಲೇಖನ ಚಿತ್ರಗಳನ್ನೂ ತಪ್ಪದೆ ನೋಡುತ್ತೇನೆ. ಫೆಸ್ ಬುಕ್ ನಲ್ಲಿಯೂ ಸಹಿತ !

ತಿರುವಲ್ಲಿಕ್ಕೇಣಿಯನ್ನು ಉಚ್ಚರಿಸಲಾಗದೆ ಬ್ರಿಟಿಷ್ ಜನ ತಮಗೆ ತೋಚಿದಂತೆ ಟ್ರಿಪ್ಲಿಕೇನ್ ಎಂದು ಹೇಳತೊಡಗಿದಾಗ ಅದೇ ಬಳಕೆಗೆ ಬಂತು. ನಾವು ಅಕ್ಟೋಬರ್ ನ ಕೊನೆಗೆ ಹೋಗಿದ್ದದ್ದು. ಮಳೆ ಹೆಚ್ಚು. ಕಪ್ಪು ಕಲ್ಲಿನ ದೇವಾಲಯ ಅಧ್ಬುತವಾಗಿತ್ತು. ಒಳಗಿನ ದೇವಾಲಯದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿತ್ತು.
ಹಾ. ನಿಮ್ಮ ಬ್ಲಾಗ್ ಸೊಗಸಾಗಿದೆ. ಎಲ್ಲ ಮಾಹಿತಿಗಳು ಸ್ಪಷ್ಟವಾಗಿವೆ. ಧನ್ಯವಾದಗಳು. ಪುಷ್ಕರಣಿಯ ಚಿತ್ರ ತೆಗೆದಿದಿನಿ. ಆದರೆ ಅದನ್ನು ಹಾಕಲು ಆಗಲಿಲ್ಲ. ಕ್ಷಮಿಸಿ.