'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ', ಡೊಂಬಿವಲಿಯಲ್ಲಿ !
'ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ)' ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ 'ಗಾಂಧಿನಗರದ ಧರ್ಮವೀರ ಆನಂದ ಡಿಘೆ ಸಭಾಗೃಹ’ದಲ್ಲಿ ೨೦೧೨ ರ ಫೆಬ್ರವರಿ, ೫ ನೆಯ ತಾರೀಖು, ಭಾನುವಾರ ಮುಂಜಾನೆ ೧೦ ಗಂಟೆಗೆ ಆರಂಭಗೊಂಡು ಸಾಯಂಕಾಲ ೬-೪೫ ಕ್ಕೆ ಕೊನೆಗೊಂಡಿತು. ಬೆಂಗಳೂರಿನ, ಗಾನಕಲಾಭೂಷಣ ಆರ್. ಕೆ. ಪದ್ಮನಾಭ ರವರಿಂದ ಗಾಯನ, ಮುಂಬೈನ ವಿದ್ವಾನ್ ಎಸ್.ವಿ.ರಾಮಚಂದ್ರನ್ ಪಿಟೀಲು, ಬೆಂಗಳೂರಿನ, ವಿದ್ವಾನ್ ಸಿ.ಚೆಲುವರಾಜು ರವರಿಂದ ಮೃದಂಗ.
-ಮೊದಲ ಬ್ಯಾಚ್ :
ಗೌರವಾನ್ವಿತ ಅತಿಥಿ, ಶ್ರೀ ಸತೀಶ್ ಎನ್. ನಾಯಕ್, ರವರು, ಮೊದಲೇ ಪ್ರಕಟಿಸಿದಂತೆ, ಶ್ರೀ. ಎಚ್. ಬಿ. ಎಲ್. ರಾವ್ ರವರು, ಬರಲಾಗದ್ದಕ್ಕಾಗಿ, ಅವರ ಅನುಪಸ್ಥಿತಿಯಲ್ಲಿ ಕಾರ್ಯವನ್ನು ಸಂಭಾಳಿಸಿದರು.
(Chief/Gen Manager, Head, Finance & Banking Onida Group of Companies)
ಕಾರ್ಯಕ್ರಮಗಳು :
* ಪೂಜೆ,
* ಅಭಿಷೇಕ,
* ಅಷ್ಟೋತ್ತರ,
* ಆರತಿ
ಸಂಗೀತ ವಿದ್ಯಾಲಯದ ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ; ಹಿರಿಯ ವಿದ್ಯಾರ್ಥಿ, ಪುಣೆಯಿಂದ ಬಂದಿರುವ ರವಿ ಕಿರಣ್ ರಾವ್ ವೇದಿಕೆಯ ಮೇಲೆ ಹಾಡುತ್ತಿರುವುದು.
ಶ್ರೀ. ಸತೀಶ್ ಏನ್. ನಾಯಕ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ವೈಸ್ ಚೇರಮನ, ಶ್ರೀ. ಆರ್ ಬಿ. ಹೆಬ್ಬಳ್ಳಿಯವರೂ ಭಾಷಣ ಮಾಡುತ್ತಿದ್ದಾರೆ. ಅವರ ಬದಿಯಲ್ಲಿ ವೈಸ್ ಚೇರ್ಮನ್, ಎಚ್. ಎಸ್. ಭವಾನಿ ಶಂಕರ್ ಕುಳಿತಿದ್ದಾರೆ.
ಮಂಚದ ಮೇಲೆ, ವಿದ್ವಾನ್. ಆರ್. ಕೆ. ಪದ್ಮನಾಭ, ಶ್ರೀ. ಸತೀಶ್. ಏನ್. ನಾಯಕ, ಮತ್ತು ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ಶ್ರೀಮತಿ. ಉಮಾನಾಗಭೂಷಣ್, ಹಾಗೂ ಶ್ರೀ. ನಾಗಭೂಷಣ್ ನಿಂತು ವೀಕ್ಷಿಸುತ್ತಿದ್ದಾರೆ.
ಮಹಾಮಂಗಳಾರತಿ, ಮಹಾಪ್ರಸಾದ :
ಯುವ ಸಂಗೀತೋತ್ಸವ :
* ಎಸ್. ಜಿ. ನಾಗೇಶ
* ಅಂಬಿಕಾ ಪ್ರಸಾದ್,
* ರವಿ ಕಿರಣರಾವ್
* ಅನಿತಾ ಭಾಸ್ಕರ್,
* ಅಭಿಜಿತ್, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಮಕೂರಿನಿಂದ ಬಂದಿದ್ದಾರೆ.
ಪಕ್ಕವಾದ್ಯದಲ್ಲಿ ಕೃಷ್ಣನ್ ಪಿಟೀಲು, ರಾಮಮೋಹನ್, ಮೃದಂಗ
ಸಂಗೀತ ಸೇವಾ- ವಿದ್ಯಾಲಯದ ದೇವರನಾಮ ವೃಂದದವರಿಂದ
ಪದಾಧಿಕಾರಿಗಳು :
ಚೇರ್ಮನ್ : ಡಾ. ವಿಜಯ್ ನೆಗಲೂರ್,
ಉಪ-ಚೇರ್ಮನ್, ಆರ್. ಬಿ. ಹೆಬ್ಬಳ್ಳಿ
ಪ್ರಾಂಶುಪಾಲರು, ವಿದುಷಿ, ಉಮಾ ನಾಗಭೂಷಣ