ಶ್ರುತಿ ಅಳೋದು ಬಿಟ್ಟಿದ್ದಾರೆ

ಶ್ರುತಿ ಅಳೋದು ಬಿಟ್ಟಿದ್ದಾರೆ

ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ್ದು...ಗೆದ್ದ ನಟಿಯಿಕೆ. ಆದ್ರೆ, ನಿಜಜೀವನದಲ್ಲೂ ಕಣ್ಣಿರ ಕಥೆಗಳು ಸೃಷ್ಟಿಯಾಗಿದ್ದು ಗೊತ್ತೆಯಿದೆ. ಆದ್ರೂ, ಸದ್ಯಕ್ಕೆ ಶ್ರುತಿ ಅಳುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದರರ್ಥ ಶ್ರುತಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಇನ್ಮುಂದೆ ಕಣ್ಣುಗಳು ತೇವಗೊಳ್ಳುವುದಿಲ್ಲ.ಕಣ್ಣೀರಧಾರೆ ಹರೆಯೋದೇಯಿಲ್ಲ..


 ಇಂತಹ ಒಂದು ಸ್ಟ್ರಾಂಗ್ ಡಿಸಿಜೆನ್ ತೆಗೆದುಕೊಂಡಂತಿದೆ. `ನಮ್ಮ ಕಲ್ಯಾಣಿ' ಅನ್ನೊ ಚಿತ್ರದಲ್ಲಿ ಶ್ರುತಿ ಅಳೋದೇಯಿಲ್ಲ. ಚಿತ್ರವಿಡಿ ಈಕೆಯ ಅಭಿನಯ  ಇತರರು ಅಳುವಂತೆ ಮಾಡ್ತವೆ. ಹೊರತು  ಥೀಯಟರ್ ನಲ್ಲಿ ಕುಳಿತ ಯಾವುದೇ ಒಬ್ಬ ಮಹಿಳಾ ಪ್ರೇಕ್ಷಕಿಯ ಕಣ್ಣು ಒದ್ದೆಯಾಗುವುದಿಲ್ಲ. ಜೊತೆಗೆ ತಂದ ಕರ್ಚಿಫೂ ಸೇಫ್ ಅಂಡ್ ಸೇಫ್...


 ನಾಗಮ್ಮ  ಅನ್ನೋ ಕ್ಯಾರೆಕ್ಟರ್ ನಲ್ಲಿ ಶ್ರುತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ಪುಟ್ಟಣ್ಣ ಶೂಟಿಂಗ್ ಮನೆ'ಯಲ್ಲಿ ಚಿತ್ರದ  ಶೂಟಿಂಗ್ ನಡೀತಾಯಿತ್ತು. ಕ್ಲೈಮ್ಯಾಕ್ಸ್ ಸೀನ್ ನ ಚಿತ್ರೀಕರಣದಲ್ಲಿ ಇಡೀ  ಟೀಮ್  ಬ್ಯುಜಿಯಾಗಿತ್ತು. ಕೋರ್ಟ್ ಸೀನ್  ಈ ದೃಶ್ಯದಲ್ಲಿ ಶ್ರುತಿ ನಿಭಾಯಿಸಿದ ನಾಗಮ್ಮ ಕ್ಯಾರೆಕ್ಟರ್ ಎಂತದ್ದು ಅನ್ನೋ ಸಂಗತಿನೂ ಗೊತ್ತಾಯಿತು. ಅಂದ್ರೆ,  ಶ್ರುತಿಯ  ಈ ಪಾತ್ರ ಕಟೋರ ಹೃದಯದ...ಸೋಮಾರಿ ಅಮ್ಮನ ಲೇಪನ ಇರೋ ಮಹಾನ್ ಬಡವಿ ಪಾತ್ರವಿದು. ಮಗಳನ್ನ ಮಾರೀಯಾದ್ರೂ  ಹೊಟ್ಟೆ ತುಂಬಿಸಿಕೊಳ್ಳುವ  ಜಾಯಮಾನದ ನಾಗಮ್ಮ ಈಕೆ...


 ತೆರೆ ಮೇಲಿನ ನಾಗಮ್ಮ ಹೀಗೆನೋ ಇದ್ದಾಳೆ. ಹಾಗಾಗಿ ಇಲ್ಲಿ ಕಣ್ನೀರು ಸುರಿಸೋ ಪ್ರಮೇಯವೇ ಇಲ್ಲ. ಆದ್ರೂ, ಎಂದಿನಂತೆ ಶ್ರುತಿ ಈ ಚಿತ್ರದಲ್ಲಿ ಒಂದಷ್ಟು ಕಣ್ಣು ತೇವಗೊಳಿಸಿಕೊಳ್ತಾರಂತೆ.ಹೀಗೆ ಅತ್ತಾಗಲೇ ಚಿತ್ರ ಶುಭಂ...


ಚಿತ್ರದ ಶೂಟಿಂಗ್ ನಲ್ಲಿ ಶ್ರುತಿ ನಕ್ಕಿದ್ದೆ ಜಾಸ್ತಿ..ನಗಿಸುದು ಕೂಡ ಸಿಕ್ಕಾಪಟ್ಟೆ. ಕೋರ್ಟ್ ದೃಶ್ಯ ಶೂಟ್ ಮಾಡುವಾಗ  ಅಲ್ಲಿ ಸಿಕ್ಕಾಪಟ್ಟೆ ಲೈಟ್ಸ್ ಗಳಿದ್ದವು. ಇದರಿಂದ ವಕೀಲ್  ಪಾತ್ರ ನಿರ್ವಹಿಸಿದ್ದ ಇಬ್ಬರೂ ಕಲಾವಿದರು ಆಗ ಬೆರವಿನಿಂದ ತತ್ತರಿಸಿ ಹೋಗಿದ್ದರು. ಇದನ್ನ ನೋಡಿದ ಶ್ರುತಿ ಸ್ಪಾಟ್ ನಲ್ಲಿ ನಗೆ ಚಟಾಕೆ ಹಾರಿಸಿದರು. ಕಟ್ಕಟೆಯಲ್ಲಿ ನಿಂತ ನಾನು ಅಪರಾಧಿ. ಆದ್ರೆ, ಪ್ರಶ್ನೆ ಕೇಳುವ ವಕೀಲರೇ ಬೆವರುತ್ತಿದ್ದಾರಲ್ಲ ಅಂತ ಹೇಳಿ ಗರಂ ಆಗಿದ್ದ ಶೂಟಿಂಗ್ ತಂಡವನ್ನ  ಒಂಚೂರು  ಕೂಲ್ ಮಾಡಿದ್ರು...


 ತೆರೆ ಮೇಲೆ  ಅತ್ತರೂ  ತೆರೆಯ ಹಿಂದೆ ಕಲಾವಿದರು ನಗು..ನಗುತ್ತಲೇ ಕೆಲಸ ನಿರ್ವಹಿಸುತ್ತಾರೆ. ಅದು ಅಳುವುದಿರಲಿ...ಬಿದ್ದು...ಬಿದ್ದು ನಗಿಸೋದಿರಲಿ. ಎಲ್ಲವನ್ನೂ ಒಂದೇ ಸಮನೇ ತೆಗೆದುಕೊಳ್ಳುತ್ತಾರೆ...ತಮ್ಮ ಮನರಂಜನಾ ಕೆಲಸವನ್ನ ಚಾಚು ತಪ್ಪದೇ ನಿರ್ವಹಿಸುತ್ತಿದಾರೆ...ಇದುವೇ ಕಲಾವಿದರ ಬದುಕಾ..ಗೊತ್ತಿಲ್ಲ..ತೆರೆ ಮೇಲೆ ಇವರ ನೈಜ ಬುದಕು ಕಾಣೊದಿಲ್ಲ  ಅಲ್ಲವೇ...


 -ರೇವನ್ ಪಿ.ಜೇವೂರ್


 

Rating
No votes yet

Comments