ಶ್!...
ಮನೆಯಲ್ಲಿ ಯಾವುದೋ ಹಾರರ್ ಸಿನೆಮಾ ನೋಡುತ್ತಾ ಕೂತಿದ್ದ ಮಹೇಶ ಸಿನೆಮಾ ನೋಡುವುದರಲ್ಲಿ ತಲ್ಲೀನನಾಗಿ ಹೋಗಿದ್ದ. ಹಾರರ್ ಸಿನಿಮಾಗಳನ್ನು ನೋಡುವುದು ಅಭ್ಯಾಸ ಮಾಡಿಕೊಂಡಿದ್ದ ಮಹೇಶ ಯಾರಾದರೂ ಯಾಕೆ ನೀನು ಹಾರರ್ ಸಿನೆಮಾ ಇಷ್ಟ ಪಡುತ್ತೀಯ ಎಂದು ಕೇಳಿದರೆ... ಬೇರೆ ಸಿನೆಮಾಗಳಲ್ಲಿ ಅದೇ ಲವ್ವು, ಅದೇ ಫೈಟು, ಅದೇ ಹಾಡು, ಅದೇ ಫ್ಯಾಮಿಲಿ ಡ್ರಾಮ, ಅದೇ ಹುಚ್ಚು ಹುಚ್ಚು ಕಾಮಿಡಿ ಸಿನೆಮಾಗಳು ಥೂ ಅಸಹ್ಯ ಆಗು
ಆದರೆ ಹಾರರ್ ಸಿನೆಮಾಗಳು ಕೊಡುವ ಆ ಥ್ರಿಲ್, ಆ ಫೀಲ್, ಅಬ್ಬಾ ಆ ಮಜಾನೆ ಬೇರೆ ಎಂದು ಉತ್ತರ
ಸಿನೆಮಾದಲ್ಲಿ ಒಂದು ಕುತೂಹಲ ಘಟ್ಟದ
ಏನಿರಬಹುದೆಂದು ಎದ್ದು ಹೋಗಿ ನೋಡಿ
ಮರುಕ್ಷಣದಲ್ಲೇ ಆ ತಣ್ಣನೆ ಗಾಳಿ ಮಾ
ಛೇ...ತಾನು ಬಾಗಿಲ ಬಳಿ ಹೋಗಿ ಬರು
ಅಂದರೆ...ನನ್ನ ದೇಹದಲ್ಲಿ ಹೊಕ್ಕಿರುವುದು ಪ್ರೇತಾತ್ಮವೇ..?
ಛೇ..ಹಾಗಾಗಿರಲು ಸಾಧ್ಯವಿಲ್ಲ. ಅದೊಂದು ಕಾಕತಾಳೀಯ ಅಷ್ಟೇ ಎಂದುಕೊಂಡು ಮತ್ತೆ ಸಿನೆಮಾ ನೋಡಲು ಮುಂದುವರೆಸಿದ. ಆದರೆ ಯಾಕೋ ಸಿನೆಮಾ ಮುಂದಕ್ಕೆ ಹೋಗುತ್ತಿಲ್ಲ. ಸ್ಟಾಪ್, ಫಾರ್ವರ್ಡ್, ಪಾಸ್, ಪ್ಲೇ ಏನು ಮಾಡಿದರೂ ಖಾಲಿ ಸ್ಕ್ರೀನ್ ಮಾತ್ರ ಕಾಣುತ್ತಿತ್ತು. ಅಷ್ಟರಲ್ಲಿ ಯಾಕೋ ಮೈಯೆಲ್ಲಾ ಬಿಸಿ ಆಗಲು ಶುರುವಾಗಿತ್ತು. ಮೆಲ್ಲಮೆಲ್ಲನೆ ಬಿಸಿ ಏರಿ ಏರಿ ಮೈ ಕೆಂಡದಂತೆ ಕೆಂಪಾಗಿ ಹೋಯಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲಿ ಮತ್ತೆ ಸಿನೆಮಾ ಮುಂದುವರಿಯಿತು.
ತಾನು ಒಳಗೆ ಬಂದು ಕೂತಾಗಿನಿಂದ ಮೈ ಬಿಸಿ ಆಗುವವರೆಗೂ ಏನಾಯಿತೋ ಅದೇ ಸನ್ನಿವೇಶಗಳು ಸಿನೆಮಾದಲ್ಲೂ ಬರುತ್ತಿದ್ದನ್ನು ನೋಡಿ ಮಹೇಶನಿಗೆ ನಖಶಿಖಾಂತ ಬೆವರು ಕಿತ್ತುಕೊಂಡಿತ್ತು...ಛೇ ಇದೇನಿದು ಎಂದೂ ಇಲ್ಲದ್ದು ಇಂದೇಕೆ ಹೀಗೆಂದು...ಬಹುಶಃ ನಿದ್ದೆಗೆ ಹೀಗಾಗುತ್ತಿದೆಯೆಂದು ಬಚ್ಚಲು ಮನೆಗೆ ಹೋಗಿ ಮುಖ ತೊಳೆದುಕೊಂಡು ಬಂದ. ಆಚೆ ಬಂದು ನೋಡುತ್ತಾನೆ ಇಡೀ ರೂಮಿನಲ್ಲಿ ಹೊಗೆ ತುಂಬಿಕೊಂಡಿತ್ತು. ಎಲ್ಲವೂ ಮಸುಕು ಮಸುಕಾಗಿ ಕಾಣುತ್ತಿತ್ತು. ಹಾಗೆ ಮುಂದೆ ಬಂದು ಮಂಚದ ಬಳಿ ಕೂಡಲು ಹೋದರೆ ಅಲ್ಲಿ ಲ್ಯಾಪ್ ಟಾಪ್ ಕಾಣಲಿಲ್ಲ.
ತಾನು ಇಟ್ಟಿದ್ದ ಜಾಗದಿಂದ ಬೇರೊಂದು ಜಾಗದಲ್ಲಿ ಲ್ಯಾಪ್ ಟಾಪ್ ಇತ್ತು. ಛೇ ಇಂದೇಕೋ...ಒಂದು ಸರಿಹೋಗುತ್ತಿಲ್ಲ...ಈ ಸಿನೆಮಾನು ಬೇಡ ಏನೂ ಬೇಡ ಆರಾಮಾಗಿ ಮಲಗೋಣ ಎಂದು ಲ್ಯಾಪ್ ಟಾಪ್ ಆಫ್ ಮಾಡಲು ಹೋದರೆ ಸ್ಕ್ರೀನಿನ ಮೇಲೆ ಯಾರೋ ಕೆಂಪು ಅಕ್ಷರದಲ್ಲಿ ಬರೆದಿದ್ದರು. ನೀನು ಈ ಸಿನೆಮಾವನ್ನು ಪೂರ್ತಿ ನೋಡದಿದ್ದರೆ ಇಂದು ನೀನು ಉಳಿಯುವುದಿಲ್ಲ!
ಮಹೇಶನಿಗೆ ಏನಾಗುತ್ತಿದೆ ಎಂದು ಒಂದೂ ಗೊತ್ತಾಗಲಿಲ್ಲ...ಸರಿ ಆಗಿದ್ದಾಗಲಿ ಎಂದು ಮತ್ತೆ ತಾನು ಬಚ್ಚಲು ಮನೆಗೆ ಹೋಗುವ ಸಮಯದಿಂದ ಮತ್ತೆ ಮುಂದುವರೆಸಿದ. ಆದರೆ ಈ ಬಾರಿ ಅಲ್ಲಿ ಬೇರೊಂದು ದೃಶ್ಯ ಬರುತ್ತಿತ್ತು. ಅಬ್ಬಾ ಸಧ್ಯ ಏನೂ ಆಗಿಲ್ಲ ಏನೋ ಒಂದೆರೆಡು ದೃಶ್ಯಗಳು ಹಾಗಾದರೆ ಎಲ್ಲ ನನಗೆ ಆಗುತ್ತಿರುವ ಹಾಗೆಯೇ ಎಂದುಕೊಳ್ಳುತ್ತಿರುವ ಹಾಗೆಯೇ ಅವನು ಬಚ್ಚಲು ಮನೆಗೆ ಹೋಗಿ ಬಂದಾಗಿನಿಂದ ಅಲ್ಲಿಯವರೆಗೂ ಆದದ್ದೇ ಬರುತ್ತಿತ್ತು.
ಮುಂದಿನ ದೃಶ್ಯ ನೋಡಿ ಅವನು ಕಂಗಾಲಾಗಿ ಹೋದ. ಇದ್ದಕ್ಕಿದ್ದಂತೆ ರೂಮಿನ ಒಂದು ಗೋಡೆಯಿಂದ ವಿಚಿತ್ರ ಆಕೃತಿಯೊಂದು ಬಂದು ಲ್ಯಾಪ್ ಟಾಪ್ ಪಕ್ಕದಲ್ಲಿ ಕುಳಿತು ಏನೋ...ನಾನು ಸತ್ತು ನರಕ ಅನುಭವಿಸುತ್ತಿದ್ದರೆ ನೀನು ನನ್ನ ಪ್ರೇತಾತ್ಮದ ಸಿನೆಮಾ ನೋಡಿ ಮಜಾ ಮಾಡುತ್ತೀಯ...ನಿನಗೆ ದೆವ್ವಗಳ ಸಿನೆಮಾ ಎಂದರೆ ಅಷ್ಟು ಖುಷಿನಾ? ಈಗ ನೀನು ದೆವ್ವ ಆಗು ಅದರ ಮಜಾ ಏನೆಂದು ಸ್ವತಃ ಅನುಭವಿಸು ಎಂದು ತನ್ನ ಬಳಿಯಿದ್ದ ಕೊಡಲಿಯಂಥಹ ಆಯುಧವನ್ನು ತೆಗೆದುಕೊಂಡು ಮೊದಲು ಅವನ ಕೈ ಕತ್ತರಿಸಿ ಆ ರಕ್ತವನ್ನು ಒಂದು ಡಬ್ಬಿಯಲ್ಲಿ ಹಿಡಿಯಲು ಶುರು ಮಾಡಿತು.
ಮಹೇಶ ಜೋರಾಗಿ ಅಮ್ಮ....ಅಪ್ಪ..ಕಾಪಾಡಿ ಎಂದು ಕಿರುಚಿಕೊಳ್ಳುತ್ತಿದ್ದ ಈಗ ಲ್ಯಾಪ್ ಟಾಪ್ ನಲ್ಲಿ ಬರುತ್ತಿದ್ದ ದೃಶ್ಯಕ್ಕೂ ಅಲ್ಲಿ ನೋಡುತ್ತಿರುವ ದೃಶ್ಯಕ್ಕೂ ವ್ಯತ್ಯಾಸ ಇರಲಿಲ್ಲ. ಎರಡೂ ಸಮಾನಾಂತರವಾಗಿ ನಡೆಯುತ್ತಿತ್ತು. ಕೈ ಕತ್ತರಿಸಿ ಅದರ ರಕ್ತದ ರುಚಿ ನೋಡಿದ ಆ ಆಕೃತಿ ಮಹೇಶನ ಮೈಯೆಲ್ಲಾ ಗಾಯಮಾಡಿ ಕೈಯಲ್ಲಿ ಹಿಡಿದ ರಕ್ತವನ್ನು ಅವನ ಮುಖಕ್ಕೆ ಎರಚಿತು..
ಮಹೇಶನ ರಕ್ತ ಬಿಸಿಯಾಗಿರದೆ ತಣ್ಣಗೆ ಕೊರೆಯುತ್ತಿತ್ತು...ಇದೇನಿದು ನನ್ನ ರಕ್ತ ಇಷ್ಟು ತಣ್ಣಗಿದೆ ಎಂದು ಮುಖದ ಮೇಲೆ ಕೈ ಹಾಕುತ್ತಾನೆ...ಅರೆ ಆಶ್ಚರ್ಯ...ಕತ್ತರಿಸಿ ಹೋಗಿದ್ದ ಕೈ ಮತ್ತೆ ಬಂದಂತಾಗಿ ಕಣ್ಣು ಬಿಟ್ಟು ನೋಡಿದರೆ ಎದುರುಗಡೆ ಮಹೇಶನ ಅಮ್ಮ ಕೈಯಲ್ಲಿ ನೀರಿನ ತಂಬಿಗೆ ಹಿಡಿದು ನಿಂತಿದ್ದರು.
ಲೋ...ನಿನಗೆಷ್ಟು ಸಲ ಹೇಳಿದ್ದೇನೆ...ರಾತ್ರಿ ಹೊತ್ತು ದೆವ್ವದ ಸಿನೆಮಾಗಳನ್ನು ನೋಡಬೇಡ ಎಂದು..ಪ್ರತಿಬಾರಿ ನೀನು ಸಿನೆಮಾ ನೋಡುವುದು...ರಾತ್ರಿಯೆಲ್ಲ ಕನಸು ಕಾಣುವುದು...ಬೆಳಿಗ್ಗೆ ಎದ್ದು ಚೀರುವುದು...ನಾನು ಬಂದು ನಿನ್ನನ್ನು ಎಬ್ಬಿಸುವುದು..ಸಾಕಾಗಿದೆ...
Comments
:) ರಾತ್ರಿ ಹೊತ್ತು ದೆವ್ವದ
:) ರಾತ್ರಿ ಹೊತ್ತು ದೆವ್ವದ ಸಿನೆಮಾಗಳನ್ನು ನೋಡಬೇಡ ಎಂದು..ಪ್ರತಿಬಾರಿ ನೀನು ಸಿನೆಮಾ ನೋಡುವುದು...ರಾತ್ರಿಯೆಲ್ಲ ಕನಸು ಕಾಣುವುದು...ಬೆಳಿಗ್ಗೆ ಎದ್ದು ಚೀರುವುದು..- ಕೊನೆಯ ಸಾಲಿನಲ್ಲಿ ಕಥೆಯ ಸಾರವಡಗಿಸಿದ್ದೀರಿ. ಚೆನ್ನಾಗಿದೆ, ಜಯಂತರೇ.
ಥೆ
ನಿಮ್ಮ ಮೆಚ್ಛುಗೆಗೆ ಅನ೦ತ
ನಿಮ್ಮ ಮೆಚ್ಛುಗೆಗೆ ಅನ೦ತ ಧನ್ಯವಾದಗಳು ಕವಿಗಳೆ :)