ಸಂಗೀತ - ಸಾಹಿತ್ಯ

ಸಂಗೀತ - ಸಾಹಿತ್ಯ

 ಒಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಕೇಳುವುದು ಹೆಸರು, ವಿಧ್ಯಾಭ್ಯಾಸ, ಉದ್ಯೋಗ ಇತ್ಯಾದಿ..  ಮತ್ತು ಕೇಳಲು ಮರೆಯದೆ ಇರುವುದು ಅವರ ಹವ್ಯಾಸಗಳು. ಹವ್ಯಾಸಗಳಿಗೆ ಉತ್ತರಗಳು ಶೇಕಡಾ ೮೦% ಸಂಗೀತ - ಸಾಹಿತ್ಯದ ಗುಂಪಿಗೆ ಬರುತ್ತದೆ ಎಂದು ನನ್ನ ಅನಿಸಿಕೆ. ಸಂಗೀತ ಕಲಿಯೋದು, ಕೇಳೋದು, ಸಂಗೀತ ವಾದ್ಯಗಳ ನುಡಿಸೋದು; ಪುಸ್ತಕಗಳ ಓದೋದು, ಕವನ ಕಥೆ ಲೇಖನ ಬರೆಯೋದು. ಹೀಗೆ ಮನುಷ್ಯರಲ್ಲಿ ಸಂಗೀತ - ಸಾಹಿತ್ಯದೊಂದಿಗೆ ಬೆರತಿದ್ದರೆ.

ಅನ್ಯರ ಅವಲಂಬಿಸದೆ ನಮ್ಮ ಪಾಡಿಗೆ ನಾವು ಸಂತಸಹೊಂದಲು ಇದುವೇ ಸುಲಭ ಮಾರ್ಗ.  ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಅನೇಕ ವಿಷಯಗಳನ್ನು ಅರಿಯಬಹುದು.  ಉತ್ತಮ  ಸಂಗೀತ ನಮ್ಮ ನೋವು ನಲಿವೊಂದಿಗೆ ಇರುತ್ತದೆ.
 
ಹುಟ್ಟು ಸಾವು ಬದುಕಿನ ನಾಣ್ಯದ ೨ ಮುಖಗಳು! ಈ ದಿನ ೨೯ ಡಿಸೆಂಬರ್ ನಮ್ಮೆಲ್ಲರನ್ನೂ  ನೆನಪಿಸೋದು ಕನ್ನಡ ಸಂಗೀತ - ಸಾಹಿತ್ಯಲೋಕದ ದಿಗ್ಗಜರು ಕುವೆಂಪು ಮತ್ತು ಸಿ.ಅಶ್ವಥ್.
ಇಂದು ರಾಷ್ಟ್ರ ಕವಿ ಕುವೆಂಪುರವರ ೧೦೭ನೇ ಜನ್ಮ ಮಹೋತ್ಸವ  ಹಾಗು ಡಾ. ಸಿ .ಅಶ್ವಥ್ ರವರ ೭೨ನೇ ಜನ್ಮ ಮಹೋತ್ಸವ ಮತ್ತು ೨ನೇ ಪುಣ್ಯ ತಿಥಿ. ಈ ದಿಗ್ಗಜರಿಗೆ ರಾಗ - ನುಡಿಯೊಂದಿಗೆ ನಮಿಸೋಣ.
 
ಸಂಗೀತವೇ ನಿತ್ಯ,
ಸಾಹಿತ್ಯವೇ ಸತ್ಯ .
 
ಎಂದೆಂದಿಗೂ ನೀ ಕನ್ನಡವಾಗಿರು............
Rating
No votes yet

Comments