ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ ತುಂಬಿತು. ಓಹ್, ಕಾಲವೇ, ನಿನ್ನ ಓಟದ ಪರಿ ! ವರ್ಷಗಳು ವಾರಗಳಂತೆ ಉರುಳುತ್ತಿವೆ. ದಿನಗಳು, ಕ್ಷಣಗಳಂತೆ. ಕ್ಷಣಗಳಿಗಂತೂ ಚಿಕ್ಕಾಸಿನ ಬೆಲೆಯಿಲ್ಲ. ಸಂಪದಕ್ಕೆ ಮೊನ್ನೆ ಮೊನ್ನೆ ಸೇರಿದಂತೆ ನೆನಪು. ಎಂಥ ಸುಂದರ ದಿನಗಳು ಅವು, ಸಂಪದದೊಂದಿಗೆ ಕಳೆದ ದಿನಗಳು, ಎಂಥ ಅದ್ಭುತ ಗೆಳೆಯರು. ಪ್ರಶಂಸೆ, ಪ್ರತಿರೋಧ ಎರಡೂ ಭೋರ್ಗರೆಯುತ್ತವೆ ಸಂಪದದಲ್ಲಿ. ಇಲ್ಲಿ ಮನಸ್ತಾಪಕ್ಕೆ ಎಡೆಯಿಲ್ಲ, ಎಲ್ಲವನ್ನೂ ಅರಗಿಸಿಕೊಳ್ಳುವ, ತಾಳಿಕೊಳ್ಳುವ ಎಂಟೆದೆ ಇರಬೇಕು ಅಷ್ಟೇ. ಯಾರೂ ಉದ್ದೇಶಪೂರ್ವಕ ಕಟುಕುವುದಿಲ್ಲ. ಎಲ್ಲಾ ಗುದ್ದಾಟಗಳೂ ಸುಖಾಂತದಲ್ಲಿ ಪರ್ಯಾಪ್ತ, ಇಲ್ಲಿ ಸಂಪದದಲ್ಲಿ. ಚರ್ಚೆಗಳು ಕೆಲವೊಮ್ಮೆ ಮೀನು ಮಾರುಕಟ್ಟೆಯ ರೂಪ ತಾಳಿದರೂ, ಚರ್ಚೆ ಮುಗಿದ ನಂತರ ಮೀನಿನ ಘಾಟು ಇರುವುದಿಲ್ಲ, ಬರೀ ಕಂಪು, ಸ್ನೇಹದ, ಒಡನಾಟದ, ಅರಿವಿನ ಕಂಪು. ಸಂಪದಿಗರೆಲ್ಲರನ್ನೂ ಬಂಧಿಸಿಟ್ಟಿರುವುದು ಒಂದೇ, ಅದುವೇ ಕನ್ನಡದ ಪ್ರೀತಿ, ಮಮಕಾರ. ಮುಕ್ತ ವಿಶ್ವ ಎಂದು ಎಲ್ಲಾ  ಕಡೆಯಿಂದ ಕನ್ನಡದ ಬಗ್ಗೆ ಅಸಡ್ಡೆ ತೋರಿ ಬಂದರೂ ಕೂಡಲೇ ಸೌಮ್ಯವಾಗಿ ಮುನ್ನುಗ್ಗಿ ಅವರದೇ ಭಾಷೆಯಲ್ಲಿ ನಮ್ಮ ಭಾಷೆಗೆ ನೀಡು ಗೌರವವ, ಹೊರಗೆಲ್ಲೂ ಅಲ್ಲದಿದ್ದರೂ ನೀನು ದುಡಿಯುತ್ತಿರುವ ಕನ್ನಡ ನಾಡಿನಲ್ಲಾದರೂ ಎಂದು ನೈಜ ಕನ್ನಡಿಗನ ನಿಶಸ್ತ್ರರನ್ನಾಗಿಸುವ ಮುಗುಳ್ನಗೆಯೊಂದಿಗೆ, ನಮ್ಮ ಭಾಷೆಯಷ್ಟೇ ಸೊಗಸಾದ ರೀತಿಯಲ್ಲಿ ತಾಕೀತು. ಇಂಥ ಕನ್ನಡಿಗರ ಸಹಕಾರದಿಂದ ಸಂಪದ ಬೆಳಗಲಿ, ಎಲ್ಲೆಡೆ ಹರಡಲಿ.

ಸಂಪದ ಆರಂಭಿಸಿದ ಸನ್ಮನಸ್ಸಿನ ಹರಿ ಮತ್ತು ಗೆಳೆಯ ವೃಂದ ಪ್ರಶಂಸಾರ್ಹರು. ಇವರ ಶ್ರಮದಿಂದ ನನ್ನಂಥ ಸರಿಯಾಗಿ ಇನ್ನೂ ಲೇಖನಿ ಹಿಡಿಯಲು ಬಾರದ ಕನ್ನಡಿಗರಿಗೆ ಸ್ಫೂರ್ತಿ, ಸಾಹಿತ್ಯ ರಂಗದಲ್ಲಿ ಹೊಸ ಅನುಭವ.

                 
Rating
No votes yet

Comments