ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಈದಿನ ಬಾನುವಾರ ಸಂಜೆ ಸುಮ್ಮನೆ ಕುಳಿತಿದ್ದೆ, ಪಕ್ಕದ ಮನೆಯ ಸೋಮಶೇಖರ್ ಎಂಬುವರು ಒಳಬಂದರು. ಅವರು ಸುಮ್ಮನೆ ಬಂದವರಲ್ಲ. ಕೈಯಲ್ಲಿ ಎರಡು ಪಾಸ್ ಹಿಡಿದಿದ್ದರು. ಸಂಜೆ ಐದುವರೆಗೆ ಸಂಗೀತ ಕಾರ್ಯಕ್ರಮವಿದೆ ತೆಲುಗು ಸ್ಮಾರ್ತ ಸಂಘದಿಂದ ಏರ್ಪಾಡಾಗಿದೆ, ವೃದ್ದಾಶ್ರಮಕ್ಕೆ ಸಹಾಯ ಅಂತ ಮಾಡುತ್ತಿದ್ದಾರೆ, ನಾನು ಐದು ಟಿಕೆಟ್ ತೆಗೆದುಕೊಂಡೆ ನಿಮಗೆ ಎರಡು ಕೊಡೋಣ ಅಂತ ಬಂದೆ, ಇಬ್ಬರು ಹೋಗಿಬನ್ನಿ ಅಂದರು. ನಾನು ಸರಿ ಅಂತ ಟಿಕೆಟ್ ಪಡೆದು ಹಣ ಎಷ್ಟು ಎಂದು ನೂರು ರೂ ಕೊಡಲು ಹೋದೆ. ಆದರೆ ಅವರು ಇಲ್ಲ ಹಣದೇನಲ್ಲ , ಅದಕ್ಕಾಗಿಯಲ್ಲ, ನಮ್ಮ ಮನೆಯಲ್ಲಿ ಮೂವರೆ ಇದ್ದೆವೆ ಹಾಗಾಗಿ ಎರಡು ಟೆಕೆಟ್ ನಿಮಗೆ ಕೊಟ್ಟೆ ಅಷ್ಟೆ. ಬನ್ನಿ ಅಂದರು.
ನಾನು ಈಗ ನೋಡಿದೆ ಐದುವರೆಗೆ ಹೋಗಬೇಕಲ್ಲ ಏನು ಮಾಡಿದರೆ ತಪ್ಪಿಸಿಕೊಳ್ಳಬಹುದು ಅನ್ನಿಸಿ
"ನೋಡಿ ಇದು ತೆಲಗು ಸಂಘದ್ದು, ನನಗೆ ಒಂದಕ್ಷರವು ತೆಲುಗು ಬರಲ್ಲ ಅಲ್ಲಿ ಬಂದರು ಏನು ಆರ್ಥವಾಗಲ್ಲ " ಎಂದೆ.
ಅದಕ್ಕವರು ' ಸಂಗೀತ ಕಾರ್ಯಕ್ರಮ ತಾನೆ , ಬಾಷೆಯದೇನು ಬನ್ನಿ " ಎಂದರು (ಅವರಿಗೆ ಸರಿಯಾಗಿ ತಿಳಿಯದು ! )
ನಾನು 'ನನಗೆ ಸಂಗೀತವೇನು ಅಷ್ಟು ಗೊತ್ತಾಗಲ್ಲ" ಎಂದೆ
ಅದಕ್ಕವರು ಇರಲಿ ಬನ್ನಿ ಅಂತ ಬಲವಂತ ಮಾಡಿದರು
ಸರಿ ಹೇಗು ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದು ಒಪ್ಪಿಬಿಟ್ಟೆ.
...
ವಿವೇಕಾನಂದ ಶಾಲೆಯ ಆಡಿಟೋರಿಯಂ ಪ್ರವೇಶೀಸಿದಾಗ ಆಗಿನ್ನು ಕಾರ್ಯಕ್ರಮ ಪ್ರಾರಂಬವಾಗುವದಿತ್ತು. ಜೋಬಿನಲ್ಲಿದ ಪಾಸ್ ತೆಗೆದು ನೋಡಿದೆ. 'ತೆಲುಗು ಸ್ಮಾರ್ಥ ವೇದಿಕ' ಯ ಅಡಿಯಲ್ಲಿ ನಡೆಯುತ್ತಿರುವ, 'A GALA MUSICAL EVENING' ಎಂದಿದ್ದು ನಡೆಸುವವರು, ಶ್ರೀ ಲಕ್ಶ್ಮಣ ಶ್ರ್ರೀರಾಮ್ ( USA) ಮತ್ತು ರೋಹಿಣಿ ಪ್ರಭುನಂದನ ಎಂದಿತ್ತು. ಸರಿ ಎಂದು ತೆಲುಗು ಕಾರ್ಯಕ್ರಮಕ್ಕೆ ಸಿದ್ದನಾಗಿ ಕುಳಿತೆ
ಗಣಪತಿ ಹಾಗು ಶಿವಸ್ತುತಿಯೊಂದಿಗೆ ಅಚ್ಚಕನ್ನಡದಲ್ಲಿ ಕಾರ್ಯಕ್ರಮ ಪ್ರಾರಂಬವಾಯಿತು. ಕಾರ್ಯಕ್ರಮದ ಕಾರ್ಯಸೂಚಿ ಹೀಗಿತ್ತು, ''RAMU REMEMBERS SHIVARANJINI' ,
ಗಾಯಕರನ್ನು ಇತರರನ್ನು ಪರಿಚಯ ಮಾಡಿಸುವದರ ಜೊತೆಗೆ ಪ್ರಾರಂಬಾದ ಸಂಗೀತ ಸಂಜೆಯಲ್ಲಿ ವಿವಿದ ಬಾಷೆಗಳಲ್ಲಿ ಅಂದರೆ ಕನ್ನಡ ಹಿಂದಿ ತೆಲುಗು ತಮಿಳು ಹಾಗು ಸಂಸ್ಕೃತ ಐದು ಬಾಷೆಯಲ್ಲಿನ್ನ ಜನಪ್ರಿಯ ಚಿತ್ರಗೀತೆಗಳ ಗಾಯನ. ಆದರೆ ಎಲ್ಲ ಗೀತೆಗಳನ್ನು ಬಂದಿಸಿರುವ ಸೂತ್ರ ಒಂದೆ ಅದು 'ಶಿವರಂಜಿನಿ ರಾಗ' . ಅವರು ಹಾಡುವ ಎಲ್ಲ ಗೀತೆಗಳು ಅದೆ ರಾಗದ್ದು ಅನ್ನುವ ಘೋಷಣೆ.
ಹಿಂದಿಯ ಏಕ್ ದುಜೆಕಿಲಿಯೆ- ಕನ್ನಡದ ವಿಷ್ಣುವರ್ದನ್ ಭವ್ಯ ನಟನೆಯ - ನೀ ಬರೆದ ಕಾದಂಬರಿ ಚಿತ್ರದ ಹಾಡು ಹಾಗು ತೆಲುಗು ತಮಿಳು ಮತ್ತೆ ಹಿಂದಿ ಚಿತ್ರದ ಹಲವು ಹಾಡುಗಳನ್ನು ಕೇಳುತ್ತ ಹೋದಂತೆ , ಹಳೆಯ ನೆನಪುಗಳೆಲ್ಲ ಮತ್ತೆ ಬಂದು ಮನವನ್ನು ತುಂಬಿದವು. ಇಂಪಾದ ಹಾಡುಗಳನ್ನು ಕೇಳುವಾಗ ಬರದಿದ್ದರೆ ಒಂದು ಸುಂದರ ಸಂಜೆ ತಪ್ಪುತ್ತಿತ್ತು ಅನ್ನಿಸಿತು.
... ಮತ್ತೆ ಮರೆತೆ ಈ ಬ್ಲಾಗ್ ಬರೆಯಲು ಮುಖ್ಯವಾದದೊಂದು ಕಾರಣವಿದೆ
ತೆಲುಗು ಸಂಘವಾದರು ಕಾರ್ಯಕ್ರಮ ಅಚ್ಚ ಕನ್ನಡದಲ್ಲಿ ಪ್ರಾರಂಬವಾಯಿತು. ಅಲ್ಲದೆ ಕಾರ್ಯಕ್ರಮ ನಿರೂಪಿಸಿ , ಗಾಯಕರನ್ನು ಪರಿಚಯಿಸುತ್ತಿದ್ದ ಸಂಘದ ಸಂಚಾಲಕರು ಹೇಳಿದರು
"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ"
ಕನ್ನಡವನ್ನು ಎಲ್ಲಡೆ ಅಲಕ್ಷವಾಗಿ ಕಾಣುವ ಕೇಳುವ ಈ ದಿನದಲ್ಲಿ ಅಂತದೊಂದು ಮಾತು ಕೇಳಿ ಸಂತೋಷವಾಯಿತು.
ಹಾಡುಗಾರ ಮತ್ತು ಇತರರು ಸಹಿತ ಸುಶ್ರಾವ್ಯ ಕನ್ನಡದಲ್ಲಿಯೆ ಮಾತನಾಡಿದರು.
"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ"
ಸಂಪದಿಗರೆ... ಈ ಒಂದು ಮಾತಿಗೆ ನೀವೆಲ್ಲ ಚಪ್ಪಾಳೆ ಹೊಡೆಯಲಿ ಎಂದು ಈ ಬರಹ....
Rating
Comments
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
In reply to ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ.. by venkatb83
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
In reply to ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ.. by ಶ್ರೀನಿವಾಸ ವೀ. ಬ೦ಗೋಡಿ
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..
ಉ: ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..