ಸಂಪದಿಗರೇ, ಹಸಿ ಹಸಿ ಹಳಸಲು ಅಂದರೆ ಏನು?

ಸಂಪದಿಗರೇ, ಹಸಿ ಹಸಿ ಹಳಸಲು ಅಂದರೆ ಏನು?

ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ ಇತ್ತು.


>>>Submitted by BRS on December 2, 2009 - 3:22pm.


ಶಾಸ್ತ್ರಿಯವರು ಹಿರಿಯರು ಹಾಗೂ ಒಬ್ಬ ಪ್ರಬುದ್ಧ ಬರಹಗಾರರು. ಅವರಿಂದ ಇಂತಹ ಹಸಿ ಹಸಿ ಹಳಸಲು ಬರಹ ಬಂದಿದೆ ಎಂದರೆ ನನಗೆ ನಂಬಲೇ ಆಗುತ್ತಿಲ್ಲ!>>>


ನಿಘಂಟಿನಲ್ಲಿ ( http://baraha.com/kannada/index.php)


 "ಹಸಿ" ಪದಕ್ಕೆ ಸಿಕ್ಕ ಅರ್ಥಗಳು ಇಲ್ಲಿವೆ.


ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು


ಹಸಿ ಕ್ರಿಯಾಪದ


(<ದೇ. ಪಸಿ) ೧ ಆಹಾರವನ್ನು ಬಯಸು, ಹಸಿವಾಗು ೨ ತೀವ್ರ ಆಕಾಂಕ್ಷೆಯನ್ನು ಹೊಂದು, ಅತಿಯಾಗಿ ಬಯಸು


ಹಸಿ ನಾಮಪದ


(<ದೇ. ಪಸಿ) ೧ ಹೊಸದು, ತಾಜಾ ೨ ತೇವ, ಆರ್ದ್ರತೆ ೩ ಒಣಗಿಸುವುದು, ಕಾಯಿಸುವುದು, ಬೇಯಿಸುವುದು ಮುಂ. ಸಂಸ್ಕಾರ ಹೊಂದಿರುವಂತಹದು


ನಿಘಂಟಿನಲ್ಲಿ "ಹಳಸಲು" ಪದಕ್ಕೆ ಸಿಕ್ಕ ಅರ್ಥಗಳು ಇಲ್ಲಿವೆ.


ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು


ಹಳಸಲು ನಾಮಪದ


(<ದೇ. ಪೞಸಲು) ಹಳಸಿಹೋದುದು, ಕೆಟ್ಟುಹೋದುದು


ಹಳಸಲು ಗುಣವಾಚಕ


(<ದೇ. ಪೞಸಲು) ೧ ಮಾಸಿದ, ಮಲಿನವಾದ ೨ ಹಳಸಿಹೋದ, ಕೆಟ್ಟು ಹೋದ


 


ಈಗ ಹಸಿ ಹಸಿ ಹಳಸಲು ಎನ್ನುವ ಪದಪುಂಜವನ್ನು ನಾನು ಅರ್ಥೈಸಿಕೊಂಡ ಬಗೆ ಹೀಗಿದೆ:


೧. ಹೊಸದು ಹಳಸಿಹೋದುದು


೨. ಹೊಸದು ಕೆಟ್ಟು ಹೋದುದು


೩. ತಾಜಾ ಹಳಸಿಹೋದುದು


೪. ತಾಜಾ ಕೆಟ್ಟುಹೋದುದು.


೫. ಹೊಸದು ಮಲಿನವಾದ


೬. ತಾಜಾ ಮಲಿನವಾದ.


ಸಂಪದಿಗರೇ, ಇದಕ್ಕೇ ಏನನ್ನಬೇಕು? ನೀವೆನಂತೀರಿ?


- ಆತ್ರಾಡಿ ಸುರೇಶ ಹೆಗ್ಡೆ.

Rating
No votes yet

Comments