ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?
ಕಳೆದ ವಾರದಲ್ಲಿ ಸಂಪದ ಕ್ಕೆ ಲಾಗ್ -ಇನ್ ಆಗುವುದು ಸಾಧ್ಯವಾಗದೆ, ೩-೪ ದಿನಗಳವರೆಗೆ ಸಂಪದ ನೋಡದೆ-ಓದದೆ ಏನೋ'ಕಳೆದುಕೊಂಡಂತೆ ' ಆಗಿದೆ (ಆಗಿತ್ತು) ಅಲ್ಲವೇ ?
ಈಗೀಗ ಸಂಪದಕ್ಕೆ ದಿನಂಪ್ರತಿ ಹಲ 'ಹೊಸ' ಒದುಗರೂ ಲೇಖಕರೂ-ಬರಹಗಾರರೂ ಬರುತ್ತಿದ್ದು , ಹಲ 'ಹೊಸ ' ಬರಹಗಳು ದಿನ ನಿತ್ಯ ಸಂಪದ ಸೇರುತ್ತಿವೆ..
ಹೆಚ್ಚಿದ ಈ ಬರಹಗಳ 'ಲೋಡು' ಸಂಪದಕ್ಕೆ 'ಹೊರೆ ' ಯಾಗಿ ಎರಡನೆ ಬಾರಿ (ಹಿಂದೊಮ್ಮೆ ಸಂಪದ ಕೆಲ ದಿನಗಳವರೆಗೆ ಆಫ್ ಲಾಯಿನ್ ಆಗಿತು) ಸಂಪದ ಆಫ್ ಲಾಯಿನ್ ಆಯ್ತು..
ಈ ೩-೪ ದಿನ ಸಂಪದ ನೋಡದೆ -ಓದದೆ ನಮಗೆಲ್ಲ ಏನೋ 'ಕಳೆದುಕೊಂಡಂತೆ' ಆಗಿದ್ದು ಸುಳ್ಳಲ್ಲ..!!
ದಿನಂಪ್ರತಿ ಹಲ ಬಾರಿ, ಆಫೀಸಿನಲ್ಲಿ, ದಾರಿ ಮಧ್ಯೆ ಮೊಬೈಲಿನಲ್ಲಿ , ಕೊನೆಗೆ ರೂಮಿನಲ್ಲೂ ಇರ್ವಗಲೂ ಸಂಪದ ಸರಿ ಹೊಯ್ತ? ಅಂತ ನೋಡ್ತಲೇ ಇದ್ದೆ, ಈ ೩-೪ ದಿನ ಒಮ್ಮೆಯೂ ಸಂಪದ ಪ್ರವೇಶಿಸಲು ಆಗಲಿಲ್ಲ, ಮಾಹಿತಿಯಲ್ಲಿ- ಸೋಮವಾರ ಸರಿ ಹೋಗಬಹುದು ಎಂದಿತ್ತು, ಇವತ್ತು (ಸೋಮವಾರ) ೧೨ ಘಂಟೆ ಸುಮಾರಿಗೆ ಅದೊಮ್ಮೆ ಸಂಪದ ಓಪನ್ ಆಯ್ತು. ಹಲ ಬರಹಗಳನ್ನ ಓದುವಾಗಲೇ ಮತ್ತೆ ಆಫ್ ಲಾಯಿನ್ ಆಯ್ತು..
ಸಂಪದವನ್ನ ಮತ್ತೆ ಆನ್ ಲಾಯಿನ್ ಮಾಡಲು ಹರಿ-ಬಳಗ ಸತತ ಶ್ರಮ ಪಡುತ್ತಿದೆ, ದಿನಂಪ್ರತಿ ಸಂಪದ ಸೇರುವ ಲೇಖನ ಬರಹಗಳಿಗೆ ಸ್ಥಳ ಹೊಂದಿಸಿ ಶೇಖರಿಸಿಡುವುದು 'ಸಾಮಾನ್ಯ ' ಸಂಗತಿಯಲ್ಲ, ಅದೂ ಯಾವುದೇ ಜಾಹೀರಾತಿನ 'ಹಂಗೂ' ಇಲ್ಲದೆ ಒಂದು ವೆಬ್ ಸೈಟ್ ನಡೆಸುವುದು ಅಂದ್ರೆ...
ಕನ್ನಡ ಸಾಹಿತ್ಯ-ಸಂಸ್ಕೃತಿ , ಬಗೆಗಿನ ಕಾಳಜಿ, ಹೊಸ ಲೇಖಕರನ್ನ-ಬರಹಗರರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ , 'ಹರಿ' ಅವರ ಈ ಕಾರ್ಯ 'ಸ್ತುತ್ಯಾರ್ಹ' ....
ಸಂಪದ ಸೇರಿ,ಹಲ ಹಿರಿಯರ -ಕಿರಿಯರ ಸಂಗಮದಲ್ಲಿ-
ಒಡನಾಟದಲ್ಲಿ ನಾ ಕಲೆತದ್ದು ಬಹು ಹೆಚ್ಚು ...
ನಮ್ಮ ದೈನಂದಿನ ಜೀವನ ಶೈಲಿಯಲ್ಲಿ ಸಂಪದ ಇಲ್ಲದ ದಿನ 'ಹೇಗಿರುತ್ತೆ' ಅನ್ನುವ ಅನುಭವವೂ ಈ ದಿನಗಳಲ್ಲಿ ಆಯ್ತು:))
ಆದಷ್ಟು ಶೀಘ್ರ ಸಂಪದ ಸರಿ ಹೋಗಲಿ ಎಂಬ ಹಾರೈಕೆ , ಮುಂದೆ ಸಂಪದ ಅಡೆ -ತಡೆ ಇಲ್ಲದೆ 'ಸದಾ' ಸಿಗಲಿ ಎಂಬ ಆಶಯದೊಡನೆ...
ಈ ಸಂಪದ ಇಲ್ಲದ ದಿನಗಳಲ್ಲಿ ನಾವ್ಯಾರು 'ಒಡನಾಟದಲ್ಲಿ' ಇರದೇ 'ಒಂಥರಾ' ಆಗಿತ್ತಲ್ಲವೆ? ಅದ್ಕೆ ಮುಂದೆ ಈ ತರಹದ್ದು ಆದರೆ(ಆಗಬಾರದು ಎಂಬ ಆಶಯ) ಎಂಬ ಮುಂದಾಲೋಚನೆಯಲಿ, ನಾವೆಲ್ಲಾ ನಮ್ಮ ನಮ್ಮ ಈ ಮೇಲು ಆಯ್- ಡಿ ಮತ್ತು ಬೇರೆ ಇನ್ನಿತರ ವೆಬ್ ಸೈಟ್ ಗಳಲ್ಲಿ(ವಿಸ್ಮಯನಗರಿ ಇತ್ಯಾದಿ) ನೊಂದಾಯಿಸಿದ್ದರೆ ಅದರದೂ ಇಲ್ಲಿ ಸೇರಿಸಿದರೆ ಅದನು ನಾವು ಪರಸ್ಪರ 'ಸೇವ್ 'ಮಾಡಿ ,ಮುಂದೊಮ್ಮೆ ಈ ಮೇಲು ಮೂಲಕ ಸಂಪರ್ಕದಲಿ ಇರಬಹುದು ಅಲ್ಲವೇ?
ಅದಕಾಗಿ ಈ ವಿಧಾನವನ್ನ 'ಇಷ್ಟ' ಪಡುವವರು ಕೆಳಗೆ ನಿಮ್ಮ ಈ ಮೇಲು ಆಯ್ ಡಿ -ಬೇರೆ ವೆಬ್ ಸೈಟ್ ಗಳ (ವಿಸ್ಮಯ ನಗರಿ ಇತ್ಯಾದಿ) ಯೂಸರ್ ನೇಮ್ ಹಾಕಬಹುದು..
Comments
ಉ: ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?
In reply to ಉ: ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ? by abdul
ಉ: ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?
In reply to ಉ: ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ? by venkatb83
ಉ: ಸಂಪದ ಇಲ್ಲದ(ದೆ) 'ಹೊತ್ತು'-----------------ಕಳೆಯುವ್ದುದಾದರೂ ಹೇಗೆ?