ಸಂಪದ ಏಕೆ ಹೀಗಾಗುತ್ತಿದೆ.

ಸಂಪದ ಏಕೆ ಹೀಗಾಗುತ್ತಿದೆ.

ಸಂಪದದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಹೀಗನಿಸಿತು. ನಾನು ಸಂಪದದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು. ಸಂಪದಕ್ಕೆ ಬಂದು ಬರೀ ತಿಂಗಳುಗಳು ಕಳೆದಿರಬಹುದು. ಆದರೆ ಮೊದಮೊದಲು ಹೀಗನಿಸಿರಲಿಲ್ಲ. ಸಂಪದ ಬರಹಗಾರರಿಗೆ ಹಾಗೂ ಓದುಗರಿಗೆ ಒಳ್ಳೆಯ ವೇದಿಕೆ ಅನಿಸಿತ್ತು. ಹಲವಷ್ಟು ಉತ್ತಮ ಲೇಖನಗಳು, ಹಾಸ್ಯ ಬರಹಗಳು, ಕವಿತೆಗಳು, ಕವನಗಳು, ಹಲವಾರು ಸಂಪದಿಗರ ಪರಿಚಯವೂ ಆಯಿತು. ಆದರೆ ಎಲ್ಲೋ ಒಂದೆಡೆ ಈ ಚರ್ಚೆಗಳ ವಿಷಯ ಬಂದಾಗ ಸ್ವಲ್ಪ ಕಸಿವಿಸಿಯಾಗುತ್ತಿತ್ತು. ಚರ್ಚೆಗಳು ಆರೋಗ್ಯಕರವಾಗಿ ಇದ್ದಷ್ಟು ಹೊತ್ತು ಚೆನ್ನಾಗಿರುವುದು. ಆದರೆ ಅದು ಎಲ್ಲೆ ಮೀರಿದರೆ ಆಭಾಸ ಖಂಡಿತ. ಮೂಲ ಲೇಖನ/ ವಿಷಯ ಬಿಟ್ಟು ಚರ್ಚೆ ಬೇರೆಡೆಗೆ ಅಥವಾ ವೈಯಕ್ತಿಕವಾಗಿ ಹೋದಾಗ ಸರಿ ಎನಿಸುವುದಿಲ್ಲ.  ಸಂಪದ ಶುರುವಾಗಿ ಐದು ವಸಂತಗಳು ಸಂದಿವೆ, ಮೇಲಿನ ವಿಷಯದ ಕುರಿತಾಗಿ ಮುಂಚೆಯೂ ಚರ್ಚಿತವಾಗಿರಬಹುದು.
ಸಂಪದ ಸದಭಿರುಚಿಯ ಬರಹಗಳಿಗೆ ತಾಣವಾಗಿದ್ದಲ್ಲಿ ಬರಹಗಾರರಿಗೆ ಹೆಚ್ಚು ಸ್ಪೂರ್ತಿ ಆಗುತ್ತದೆ. ಪ್ರತಿಕ್ರಿಯೆಯಲ್ಲಿ ಚೆನ್ನಾಗಿದೆ ಎಂದು ಹಾಕದೆ ಇದ್ದರು ಪರವಾಗಿಲ್ಲ. ಆದರೆ ಚೆನ್ನಾಗಿಲ್ಲ ಅಥವಾ ತಪ್ಪು ಎನಿಸಿದರೆ ಯಾವ ಕಾರಣಕ್ಕೆ ತಪ್ಪಾಗಿದೆ ಎಂದು ಪ್ರತಿಕ್ರಿಯೆಯಲ್ಲಿ ತಿಳಿ ಹೇಳಿದರೆ ತಿದ್ದಿಕೊಳ್ಳಲು ಅನುಕೂಲವಾಗುವುದು. ಒಂದು ಬರಹ ಒಬ್ಬರಿಗೆ ಇಷ್ಟವಾದರೆ ಎಲ್ಲರಿಗೂ ಇಷ್ಟವಾಗಬೇಕು ಎಂದಿಲ್ಲ. ತಮ್ಮ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವೈಯಕ್ತಿಕವಾಗಿ ಒಬ್ಬರ ಮನಸನ್ನು ಘಾಸಿ ಮಾಡದೆ ಹಂಚಿಕೊಂಡರೆ ಉತ್ತಮ ಎಂದು ನನ್ನ ಅನಿಸಿಕೆ.
 
 ವಿ.ಸೂ: ನನ್ನ ಅನಿಸಿಕೆಗಳು ಯಾರ ಮನಸಿಗಾದರೂ ಘಾಸಿ ಉಂಟು ಮಾಡಿದ್ದರೆ ದಯವಿಟ್ಟು ಕ್ಷಮೆ ಇರಲಿ

 

Rating
No votes yet

Comments