ಸಂಪದ ಓದುಗರಿಗೆ ದೀಪಾವಳಿ ಶುಭಹಾರೈಕಗಳೊಂದಿಗೆ ನಗೆಹನಿ ( ಹೊಸವು ?) - 32ನೇ ಕಂತು
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
-೧೨೫ -
ಬಾಸ್ ಹೊಸ ಉದ್ಯೋಗಿಗೆ - ಈಗ ಹನ್ನೊಂದು ಗಂಟೆಯಾಗಿದೆ , ನೀನು ಹತ್ತೂವರೆಗೆ ಇಲ್ಲಿರಬೇಕಿತ್ತು.
ಉದ್ಯೋಗಿ ಆತಂಕಪಟ್ಟು ಕೇಳಿದ - ಯಾಕ್ಸಾರ್ , ಏನಾಯ್ತು ?
- ೧೨೬ -
ಆಗಂತುಕ ಜವಾನನನ್ನು ವಿಚಾರಿಸಿದ - ಬಾಸ್, ಇದ್ದಾರೆಯೇ ?
ಜವಾನ - ನೀವು ಸೇಲ್ಸ್ ಮನ್ ನೋ , ಬಾಕಿ ವಸೂಲಿಗರೋ , ಇಲ್ಲ ಅವರ ಗೆಳೆಯರೋ ?
ಆಗಂತುಕ - ಮೂರೂ ಕಣಯ್ಯ !
ಜವಾನ - ಹಾಗಾದರೆ ಅವರು ಒಂದು ಮೀಟಿಂಗ್ ನಲ್ಲಿ ಇದ್ದಾರೆ, ಊರಲ್ಲಿ ಇಲ್ಲ , ನೇರ ಒಳಗೆ ಹೋಗಿ ಮಾತಾಡಿ.
- ೧೨೭ -
ಬಾಸ್ ತನ್ನ ಸ್ನೇಹಿತನೊಂದಿಗೆ
- ನಮ್ಮಲ್ಲಿ ಕೆಲಸ ಮಾಡೋರನ್ನ motivate ಮಾಡೋಣ ಅಂತ ನಿನ್ನೆ ತಾನೇ "ನಾಳೆ ಮಾಡುವ ಕೆಲಸ ಇಂದೇ ಮಾಡಿ " ಅಂತ ಬೋರ್ಡ್ ಬರೆಸಿ ಹಾಕಿಸಿದ್ದೆ.
- ಅದು ಅವರ ಮೇಲೆ ಇಷ್ಟು ಬೇಗ ಪರಿಣಾಮ ಬೀರಿತೇ?
- ಹೌದು. ನನ್ನ ಕ್ಯಾಶಿಯರ್ ಆಫೀಸು ಹಣದೊಂದಿಗೆ ನಾಪತ್ತೆ ಯಾಗಿದ್ದಾನೆ. ನನ್ನ ಸೆಕ್ರೆಟರಿ ಹೆಡ್-ಕ್ಲರ್ಕ್ ಜತೆ ಓಡಿ ಹೋಗಿದ್ದಾಳೆ , ಮತ್ತೆ ನನ್ನ ಒಳ್ಳೆಯ ಉದ್ಯೋಗಿಗಳು ಇದಿರಿನ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
- ೧೨೮ -
- ಬಾಸ್ ಜೋಕ್ ಹೇಳಿದ್ರೆ ನೀನ್ಯಾಕೋ ನಗಲಿಲ್ಲ?
- ನಾನು ಈ ಆಫೀಸಲ್ಲಿ ಕೆಲಸ ಮಾಡೋನಲ್ಲ, ಸರ್