ಸಂಪದ ಕ್ಕೆ ...ಜೈ!

ಸಂಪದ ಕ್ಕೆ ...ಜೈ!

ಈವತ್ತಿಂದ ನಾನು ಬರೀಬೇಕು ಅಂದುಕೊಡಿದೀನಿ. ಅದೂ ಕನ್ನಡದಲ್ಲಿ. ಅದೂ.......ಸಂಪದದಲ್ಲಿ.

ಕನ್ನಡದ ಬಗ್ಗೆ ನನ್ನ ಓದು ತುಂಬಾ ಮುಂಚೆನೇ ನಿಂತು ಹೋಗಿತ್ತು. ಈಗ ಮತ್ತೆ ಆಸಕ್ತಿ ಬಂದಿದೆ.. ಸಂಪದದ ಕಾರಣ! ಸಂಪದ ಕ್ಕೆ ಒಂದು ದೊಡ್ಡ ಜೈ!
ಇಷ್ಟೊಂದು ಒಳ್ಳಯ ಅಭಿರುಚಿ ಇರುವ ಇಷ್ಟೊಂದು ಜನರನ್ನು ಒಂದು ಕಡೆ ಸೇರಿಸಿ , ನಮಗೆಲ್ಲ ಅವರ ತಿಳಿವನ್ನು ತಿಳಿದುಕೊಳ್ಳುವಂತೆ ಮಾಡ್ತಾ ಇರೋದಕ್ಕೆ ಸಂಪದ ಕ್ಕೆ ಮತ್ತೊಮ್ಮೆ ಜೈ!

ಸ್ವದೇಶಿ ಚಿಂತನೆಗಳು ನನ್ನ ಗಮನವನ್ನು ತನ್ನೆಡೆಗೆ ಸೆಳೆಯುತ್ತವೆ.

Modern Physics ಮತ್ತೆ metaphysics ಬಗ್ಗೆ ಮಾತಾಡ್ಬೇಕು ಅಂದ್ರೆ ನಂಗೆ ಇಷ್ಟ. ನಾನೇನೂ ಆದ್ಯಾತ್ಮ ಜೀವಿಯಾಗಿ ಉಳಿದಿಲ್ಲ. ಆದರೂ ಆದ್ಯಾತ್ಮದ ಬಗ್ಗೆ ಮಾತಾಡೊಕ್ಕೆ , ಓದೋಕ್ಕೆ , ಕೇಳೊಕ್ಕೆ ತುಂಬಾ ಇಷ್ಟ!.

ವಚನಗಳು ಅದರಲ್ಲೂ ಅಲ್ಲಮಪ್ರಭುವಿನ ವಚನಗಳ್ನ ಎಷ್ಟು ಓದಿದರೂ ನಂಗೆ ಬೇಜಾರು ಆಗಲ್ಲ. (ಹಂಗೇನೆ ಅವು ಅರ್ಥವೂ ಆಗಲ್ಲ!). ವಚನಗಳಲ್ಲಿ ಎಲ್ಲರಿಗೂ ಸಾಮಾಜಿಕ ಕಳಕಳಿ ಕಂಡ್ರೆ ನಂಗೆ ಅಲ್ಲಿ ಕಾಣೋದು ಜಗತ್ತಿನ ಬೇರಾವ ಮತ / ಪಂತ / ಸಿಧಾಂತ ಗಳಿಗೂ ಕಡಿಮೆ ಇಲ್ಲದ ತತ್ವ, ಅನುಭಾವ..

ನಾನು ನಿಮ್ಮೆಲ್ಲರ ತರಹ software Engineer ಅಲ್ಲ. ಹಾಗಾಗಿ ಸಂಪದ ದಂತಹ ವೆಬ್ ತಾಣಗಳ ಬೆಳವಣಿಗೆಗೆ ನನ್ನ ಕೊಡುಗೆ ಸೊನ್ನೆ ಯಾಗಿರುತ್ತೆ. ಆದರೆ ನನ್ನ ಕ್ಷೇತ್ರ (Semiconductors/VLSI ) ದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಾದ್ಯವಾದರೆ ನಿಮ್ಮೊಂದಿಗೆ ಹಂಚಿಕೊಳ್ತೀನಿ. .

ದಯವಿಟ್ಟು ಸಹಿಸಿಕೊಳ್ಳಿ!

Rating
No votes yet

Comments