ಸಂಪದ ಸಮ್ಮಿಲನ ನಾ ಕಂಡಂತೆ

ಸಂಪದ ಸಮ್ಮಿಲನ ನಾ ಕಂಡಂತೆ

"ಎಲ್ಲಿದೀರಾ ರೂಪಾ " ಫೋನ್ ಎತ್ತಿದ ಕೂಡಲೆ ಸುರೇಶ್(ನಮ್ಮ ಅಸು ಹೆಗಡೆ)  ದನಿ. ಈಗ ತಾನೆ ಹೊರಡ್ತಾ ಇದ್ದೀನಿ ಸುರೇಶ್(ಆಗಾಗಲೇ ಹತ್ತು ಘಂಟೇ ಆಗಿತ್ತು) ಒಟ್ಟಿಗೆ ಊಟದ ಸಮಯಕ್ಕೆ ಬಂದು ಬಿಡಿ ರೇಗಿಸಿದರು.ಜೊತೆಯಲ್ಲಿದ್ದ ಯಾರೋ  ಹಾಗೆ ಪಾರ್ಸೆಲ್ ತಂದು ಬಿಡಿ ಎಂದರು. ಇಲ್ಲಾ ಇಲ್ಲಾ ಇನ್ನೊಂದು ಘಂಟೇಯಲ್ಲಿ ಅಲ್ಲಿರ್ತೀನಿ ಎಂದು  ಫೋನಿಟ್ಟೆ . ಹೌದು ಸಂಪದದ ಸದಸ್ಯರ ಜೊತೆಯಲ್ಲಿನ ಮುಖಾ ಮುಖಿಯ ಸಮಯ ಹತ್ತಿರ ಬಂದಿತ್ತು. ಮೊದಲ ಸಲದ ಸ್ನೇಹ ಸಮ್ಮಿಲನ ನೋಡಿದವರ ಜೊತಯಲ್ಲಿ  ಹೊಸಬರನ್ನೂ ಭೇಟಿ ಮಾಡಬಹುದೆಂಬ ಸಂತೋಷ ಕುತೂಹಲ ಮನೆಯವರ ಸಂಡೇ ಆದರೂ ಮನೇಲಿರಬಾರದೇ ಎಂಬ ಗೊಣಗಾಟದ ಜೊತೆಯಲ್ಲೇ ನನ್ನ ಯಾತ್ರೆ ನಡೆದಿತ್ತು ದೊಮ್ಮಲೂರಿನ ಸಿ ಎಸ್ ಸಿ ಕಡೆಗೆ ಜೊತೆಗೆ ನನ್ನ ಪುಟ್ಟ ಯಶಿತಾ.


ಲೇಟಾಗಿ  ಬಂದುದಕ್ಕೆ ಸೇರಿದವರೆಲ್ಲಾ ಏನಂದುಕೊಳ್ಳುರೋ ಎಂಬ ಯೋಚನೆಯೊಡನೆಯೇ  ೧೯೬ ಹತ್ತಿರ ಆಟೋ ನಿಂತಿತು . ಆ ಮನೆಯೋ ನಿಶ್ಯಬ್ದವಾಗಿತ್ತು ಅರೇ ಇಲ್ಲಿ ಯಾರೂ ಇಲ್ಲ ಮತ್ತೆ ಎಲ್ಲಿ ನಡೆಯುತ್ತಿದೆ ಸಂಪದ ಸಮ್ಮಿಲನ ಎಂದುಕೊಂಡೆ ಮತ್ತೆ ಸುರೇಶ್‌ಗೆ ಫೋನ್ ಮಾಡಿದೆ ಅಲ್ಲಲ್ಲಾ ತೊಂದರೆ ಕೊಟ್ಟೆ ( ಹಿಂದಿನ ದಿನ ಎರೆಡೆರೆಡು ಬಾರಿ ಕರೆ ಮಾಡಿ ತಲೆ ತಿಂದಿದ್ದೆ ವಿಳಾಸಕ್ಕಾಗಿ :))


ಸುರೇಶ್  ಹೊರಗೆ ಬಂದು ಸ್ವಾಗತಿಸಿದರು ಇನ್ನೊಂದು ಬಿಲ್ಡಿಂಗ್ ಇಂದ. ತಪ್ಪಾಗಿದ್ದು ನನ್ನಿಂದಲೇ ೧೯೪ ಗೆ ೧೯೬  ಎಂದಕೊಂಡಿದ್ದೆ.


ಸಿ ಎಸ್ ಸಿ ಬಿಲ್ಡಿಂಗ್ ನಿಜಕ್ಕೂ  ಚೆನ್ನಾಗಿತ್ತು. ಜೊತೆಗೆ ನಿರೀಕ್ಷೆಗೆ ತಕ್ಕಂತೆ ಸಂಪದಿಗರು ಬಂದಿದ್ದರು.


ಹೋದಾಗಲಾಗಲೆ   ನಾಗರಾಜ್ ಸಂಪದದ ಬಗ್ಗೆ ವಿವರಿಸುತ್ತಿದ್ದರು ಜೊತೆಗೆ  ಅಂತರ್ಜಲದ  ಬಗ್ಗೆ ನೀಡುತ್ತಿದ್ದರು. ಯಾವುದೋ ಕೆಲಸವಿದ್ದುದ್ದರಿಂದ ಹೋಗಬೇಕಾಗಿದೆ ಎಂದು ವಿದಾಯ  ಹೇಳಿ  ಹೊರಟೇ ಬಿಟ್ಟರು


ಕಣ್ಣು ಹಾಗೆಯೇ ಸುತ್ತಲಿದ್ದವರನ್ನು ಯಾರು ಎಂದು ಊಹಿಸುವ  ಸಾಹಸ ಮಾಡುತ್ತಿತ್ತು. ಶಾಮಲರವರನ್ನು ಗುರುತಿಸಿದೆ.ತೇಜಸ್ವಿ ಯೂ ತಿಳಿಯಿತು. ಇನ್ನು ಮಿಕ್ಕ್ದವರೆಲ್ಲಾ ಅವರ  ಪರಿಚಯ ಹೇಳಿಕೊಂಡ ಮೇಲೆ ತಿಳಿಯಿತು.


ಕಾರ್ಯಕ್ರಮದ ರೂವಾರಿ ಹರೀಶ್ ಆತ್ರೇಯನನ್ನು  ಆಶ್ಚರ್ಯದ ಜೊತೆಗೆಸಂತೋಷವಾಯ್ತು. ಹರೀಶರ ಲೇಖನ ಓದುತಿದ್ದಾಗ ಕಣ್ಮುಂದೆ ಬರುತ್ತಿದ್ದುದು ಪ್ರೌಢ ವಯೋಮಾನದ ಚಿತ್ರಣ. ಇಲ್ಲಿ ನೋಡಿದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅನ್ನಿಸಿತು. ತೇಜಸ್ವಿಯವರ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡೆ. ಶಾಮಲಾ ರವರು ವಾಚಿಸಿದ ಕಥೆಗಿಂತ ಅವರ ವಿಮರ್ಶೆ ಅತ್ಯದ್ಭುತವಾಗಿತ್ತು. ಇನ್ನು  ಮಂಜುನಾಥ್ ಅವರ ಅನುಭವ ಜೊತೆಗೆ ಕಥೆ ಒಮ್ಮೆ ಮನಸನ್ನು ಕಲುಕಿತು.  ಗೋಪಿನಾಥರ ಸುಂದರ ಸಂಸಾರ ಅವರ ಪತ್ನಿಯ ಸುಮಧುರ ಕಂಠ  ವಾವ್ . ಗೋಪಿನಾಥರ ಸೈನಿಕ ಹಾಗು ರೈತ ರೀರ್ವರ ಕೊನೆಘಳಿಗೆಯ ಹಲುಬುವಿಕೆ , ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದಾಗ ಇದ್ದಂತ ಮನಸ್ಥಿತಿ  ಇವುಗಳನ್ನೆಲ್ಲಾ ಕವನದ ರೂಪದಲ್ಲಿ ಸಾರುವ  ಅವರ ಶೈಲಿಗೆ ಅವರೇ ಸಾಟಿ.


ಇನ್ನು  ಸುರೇಶ  ಬಗ್ಗೆ ಏನು ಹೇಳಿದರೂ ಕಡಿಮೆಯೇ.  ಎಂದಿನಂತೆ ಅವರ ಕವನಗಳು ಮನಸಿಗೆ ಮುದ ನೀಡಿದವು ಕೊಂಚ ಹೆಚ್ಚಾಗಿಯೇ . ಹಾಗೆಯೇ ಜಾಣ ಇರುವೆ ಅಂಜನ್ ಕುಮಾರ್ ರವರ ಬ್ಯಾಂಕಿನ ಅನುಭವಗಳು, ಹರೀಶನ ನಿರೂಪಣೆ ,ಕವನಗಳು  ಚಿಕ್ಕೂ ಚೇತನ್ ಚುರುಮುರಿ  , ಕವಿ ನಾಗರಾಜರವರ ಹಿತವಚನ ಎಲ್ಲವೂ ಏಕತಾನತೆಯಿಂದ ಜಡ್ಡು ಹಿಡಿದಿದ್ದ  ಮನಸನ್ನು ಚೇತನಗೊಳಿಸಿದವು


ಬರಲಾಗದೇ  ಇದ್ದ ಸದಸ್ಯರು ಮುಂದಿನ ಬಾರಿ ಸಮಯ ಮಾಡಿಕೊಂಡು ಬನ್ನಿ,


ಹಾಗೆಯೇ ಬರಲಿಕ್ಕೆ ಆದರೂ ಮುನಿಸಿಕೊಂಡು ದೂರ ಉಳಿದವರಲ್ಲಿ ಒಂದು ವಿನಂತಿ. ಕೋಪ ತಾಪ ಏನಿದ್ದರೂ ಸಂಪದದ ಬರಹದ  ವೇದಿಕೆಯಲ್ಲಿ ವೈಯುಕ್ತಿಕವಾಗಿ ಯಾರೂ ಯಾರಿಗೂ ವೈರಿಯಲ್ಲ. ಇಂತಹ ವೇದಿಕೆ  ನಮ್ಮ ನಿಮ್ಮಲ್ಲೆರನ್ನು ಹತ್ತಿರಕ್ಕೆ ತರಲು ಅಗತ್ಯ ಎಂದನಿಸುತ್ತದೆ

Rating
No votes yet

Comments