ಸಂಪದ
ಅಡಿಕ್ಟಾಗಿದ್ದೆ ಫೇಸ್ ಬುಕ್ಕಿಗೆ,
ಸೆಳೆದೆ ನಿನ್ನತ್ತ ಅದು ಹೇಗೆ?
ಅದಾವ ಮಾಯದಲಿ ಕಂಡೆ ನೀ ನನ್ನ ಕಣ್ಣಿಗೆ?
ಹಗಲು ರಾತ್ರಿಗಿಲ್ಲ ಭೇದ, ನಿನ್ನದೇ ಧ್ಯಾನ ಮನಸಿಗೆ!
ಗೆಳತಿ ನೆಟ್ಟರೆ ದೃಷ್ಟಿ ನಿನ್ನಲ್ಲಿ,
ಮೂಡುವುದು ನಸು ನಗು ಮೊಗದಲ್ಲಿ!
ಮರೆಯುವೆ ರೆಪ್ಪೆ ಮಿಟುಕಿಸುವುದನ್ನೆ,
ಸಿಡುಕುವಳು ಮಡದಿ ಮನದನ್ನೆ!
ನಿಮಗಿಲ್ಲ ನನ್ನತ್ತ ಧ್ಯಾನ, ಅವಳದೇ ಗುಂಗು ಮನದಲ್ಲಿ,
ಮೂದಲಿಸುತಿಹಳು ಮಡದಿ ಅಸೂಯೆಯಲಿ!
ಹೇಳೇ ಗೆಳತಿ ತಡಮಾಡದೆ,
ಸೆಳೆದೆ ನಿನ್ನತ್ತ ಅದು ಹೇಗೆ “ಸಂಪದೆ!”
Rating
Comments
ಚಿತ್ರ ಕೃಪೆ : ಸಂಪದ
ಚಿತ್ರ ಕೃಪೆ : ಸಂಪದ
ಸಂಪದವೆನೆ ಕುಣಿದಾಡುವುದನ್ನೆದೆ,
ಸಂಪದವೆನೆ ಕುಣಿದಾಡುವುದನ್ನೆದೆ, ಸಂಪದವೆನು ಮನ ಅರಳುವುದು!
ಅಂದದ ಪುಟವಿದೆ, ಚಂದದ ಸೊಬಗಿದೆ, ಒಳಗಿನ ಹೂರಣ ಸವಿರುಚಿ ಜೇನು!
ಇಂದಿನ ಬರಹವ ಓದಲು ತೊಡಗಿರೆ, ಅಂದಿನ ಕತೆಗಳು ಮನಸೆಳೆದು!
ಒಂದೊಂದಾಗಿ ಪುಟಗಳ ನೋಡುತಾ, ಎಂದೂ ಮರೆಯದ ಅನುಭವವು!
ಓದುತ ಓದುತ ಮನ ಗರಿಗೆದರಿ, ಬರೆಯುವ ಬರೆಸುವ ಈ ಸಂಪದವು!
"ನೀವೂ ಬರೆಯಿರಿ"ಎನ್ನುವ ಸಂಪದ, ನನಗೂ ಬರೆಯಲು ದಾರಿ ತೋರಿತು!
ನಾನೂ, ಬರೆದೆ, ನೀವೂ ಬರೆದಿರಿ, ನಾನೂ ನೀವೂ ಸಂಪದಿಗರು!
ಸಂಪದ ನೀಡಿದ ಈ ಅನುಭವವು, ಮನದಲಿ ಮೂಡಿದೆ ಮಧುರ ಭಾವ!
ಹಗಲಲಿ ಸಂಪದ ನೋಡಿದ ನೆನಪು, ಇರುಳಲಿ ಕನಸಲೂ ಕಾಡಿತ ಒನಪು,
ನೀನೇ ಮಾಡಿದ ಮೋಡಿ ಅದೇನೋ, ನನ್ನಲ್ಲೂ ಮೂಡಿದ ಕವನವಿದೇನೋ,
ಸಂಪದವೆನೆ ಮನ ನಲಿಯುವುದು, ಸಂಪದವೆನೆ ಮನ ಕುಣಿಯುವುದು.
In reply to ಸಂಪದವೆನೆ ಕುಣಿದಾಡುವುದನ್ನೆದೆ, by sasi.hebbar
ಸಂಪದದ ಸೊಬಗಿಗೆ-ಅದರಕರ್ಷಣೆಗೆ
ಸಂಪದದ ಸೊಬಗಿಗೆ-ಅದರಕರ್ಷಣೆಗೆ ಸೋಲದವರಿಲ್ಲ ...!
ನನಗೋ ಮೊದಲು ಸಿಕ್ಕಿದ್ದೇ ಸಂಪದ ಮತ್ತು ವಿಸ್ಮಯನಗರಿ .ಆಗಿಂದ ಎರಡರಲ್ಲೂ ದಿನ ನಿತ್ಯ ಹಲವು ಬಾರಿ ಭೇಟಿ ಇತ್ತು-ಪ್ರತಿಕ್ರಿಯಿಸಿ ಏನಾದರೂ ಬರೆದು ಸೇರಿಸದಿದ್ದರೆ ಏನೋ ಕಳೆದುಕೊಂಡ ಭಾವ..ಒಂದೊಮ್ಮೆ ಸಂಪದದಿಂದ ಕೆಲ ದಿನಗಳು ದೂರ ಇದ್ದರೂ ನಾ ತಪ್ಪಿಸಿಕೊಂಡ ಎಲ್ಲಾ ಬರಹಗಳನ್ನು-ಪ್ರತಿಕ್ರಿಯೆಗಳನ್ನು ಓದಿ ಅವುಗಳಿಗೆ ಪ್ರತಿಕ್ರಿಯಿಸಿದರೇನೆ ಸಮಾಧಾನ...
ಸಂಪದ ಕುರಿತು ನಿಮ್ಮ ಬರಹ ಮತ್ತು ಪ್ರತಿಕ್ರಿಯೆಯಾಗಿ ಸಸಿ (ಶಶಿ???)ಹೆಬ್ಬಾರ್ ಅವರ ಬರಹ ಇಷ್ಟ ಆಯ್ತು...
ಶುಭವಾಗಲಿ..
\।
In reply to ಸಂಪದವೆನೆ ಕುಣಿದಾಡುವುದನ್ನೆದೆ, by sasi.hebbar
ಇದು ಪದ್ಯ ರೂಪದಲ್ಲಿ ನಾ ಬರೆದದ್ದು
ಇದು ಪದ್ಯ ರೂಪದಲ್ಲಿ ನಾ ಬರೆದದ್ದು, ಇಲ್ಲಿ ಕಾಣುವಾಗ ಗದ್ಯದ ರೀತಿ ಕಂಡಿದೆ.
ಇಬ್ಬರಿಗೂ ಧನ್ಯವಾದಗಳು
ಇಬ್ಬರಿಗೂ ಧನ್ಯವಾದಗಳು
ವೆಂಕಟ್ ರವರೆ ಅದ್ಯಾವುದು ‘ವಿಸ್ಮಯ ನಗರಿ’ ತಿಳಿಸುವಿರಾ?
http://vismayanagari...
http://vismayanagari.com/
In reply to http://vismayanagari... by venkatb83
ವಿಸ್ಮಯ ನಗರಿಗೊಂದು visit ಕೊಟ್ಟು
ವಿಸ್ಮಯ ನಗರಿಗೊಂದು visit ಕೊಟ್ಟು ಚೆಂದ ನೋಡಿ ಬಂದೆ!... ಚೆನ್ನಾಗಿದೆ ವೆಂಕಟ್ ಅವರೇ ಧನ್ಯವಾದಗಳು