ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ? ಬ್ಲೂಟೂಥ್‌ನ ಹಿನ್ನೆಲೆಯಲ್ಲಿ ಒಂದು ಲೇಖನ...

ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ? ಬ್ಲೂಟೂಥ್‌ನ ಹಿನ್ನೆಲೆಯಲ್ಲಿ ಒಂದು ಲೇಖನ...

ಬ್ಲೂಟೂಥ್ ಅನ್ನುವ ಪದವನ್ನು ಮೊಬೈಲ್ ಫೋನುಗಳ ಕಾಂಟೆಕ್ಸ್ಟ್‌ನಲ್ಲಿ ಈಗೀಗ ಎಲ್ಲರೂ ಕೇಳಿರುತ್ತಾರೆ. ಇದು 1999 ರಲ್ಲಿ ಮೊದಲು ದೊಡ್ಡಮಟ್ಟದಲ್ಲಿ ಚಾಲ್ತಿಗೆ ಬಂದದ್ದು. ಇದನ್ನು ಶುರುವಿನಲ್ಲಿ ಅಭಿವೃದ್ಧಿ ಪಡಿಸಿದ್ದು ಸ್ವೀಡನ್‌ನ ಎರಿಕ್‍ಸನ್ ಕಂಪನಿ. ನಂತರ ಇತರ ಮೊಬೈಲ್ ಫೋನ್ ಕಂಪನಿಗಳು ಬಂಡಿ ಹತ್ತಿಕೊಂಡರು. 2000 ದ ಸುಮಾರಿನಲ್ಲಿ, ಬ್ಲೂಟೂಥ್‌ನಿಂದಾಗಿ ಇನ್ನುಮೇಲೆ ಟಿಕೆಟ್‍ಗಳಿಗೆ ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲಬೇಕಿಲ್ಲ, ನಿಮ್ಮ ಸೆಲ್‌ಫೋನ್‍ನಲ್ಲಿರುವ ಬ್ಲೂಟೂಥ್ ಸಂಪರ್ಕದಿಂದ ಆಟೊಮೆಟಿಕ್ ಆಗಿ ಟಿಕೆಟ್ ಕೊಳ್ಳಬಹುದು, ಅದು ಮಾಡಬಹುದು, ಇದು ಸಾಧ್ಯ, ಎಂತೆಲ್ಲ ಮಾರ್ಕೆಟಿಂಗ್ ಪಿಚ್‌ಗಳಿದ್ದವು. ಆದರೆ, ಕಾಲಾಂತರದಲ್ಲಿ ಬ್ಲೂಟೂಥ್ ತೆಗೆದುಕೊಂಡ ತಿರುವೇ ಬೇರೆ ಇತ್ತು.

ಇತ್ತೀಚಿಗೆ ಬ್ಲೂಟೂಥ್ ಕೃತಕ ಕಾಲುಗಳ ಅಭಿವೃದ್ಧಿಯಲ್ಲೂ ಬಳಸುತ್ತಿದ್ದಾರೆ. ಇದಕ್ಕೆ ಬಲ ಬಂದಿದ್ದು ಮಾತ್ರ ಇರಾಕಿನಲ್ಲಿ ಗಾಯಗೊಳ್ಳುತ್ತಿರುವ ತನ್ನ ಸೈನಿಕರಿಗೆ ಉತ್ಕೃಷ್ಠ ಮೆಡಿಕಲ್ ಸೇವೆ ಮತ್ತು ಆಧುನಿಕ ಸೌಲಭ್ಯಗಳನ್ನು ಕೊಟ್ಟು ಅವರ ಗಾಯವನ್ನು ಮಾಗಿಸಬೇಕು ಎಂದುಕೊಂಡ ಅಮೆರಿಕದ ವ್ಯವಹಾರದಿಂದಾಗಿ. ಕೆಲವೊಮ್ಮೆ ಯುದ್ಧ inevitable. ಹಿಂಸಾವಾದಿಗಳು ಮೇಲ್ಗೈ ಸಾಧಿಸಿದಾಗ ಅವರನ್ನು ಎದುರುಗೊಳ್ಳಲು ಜವಾಬ್ದಾರಿಯುತ ಸರಕಾರಗಳು ಯುದ್ಧ ಮಾಡಲೇಬೇಕು. ಯಾರು ಯಾಕಾಗಿಯಾದರೂ ಯುದ್ಧ ಆರಂಭಿಸಲಿ, ಗುರಿ ಮಾತ್ರ ಆದಷ್ಟೂ ಶತ್ರು ಗುಂಪಿಗೆ (ಸೈನಿಕರಿಗೆ ಮತ್ತು ನಾಗರಿಕರಿಗೆ) ಜೀವಹಾನಿ ಮಾಡುವುದು. ಈಗಿನ ಎಷ್ಟೋ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದು ಹಾಗೆ ಹೆಚ್ಚಿಗೆ ಹಿಂಸೆ ಮಾಡುವ ಬಲವನ್ನು ಶೋಧಿಸುತ್ತ. ಇದು ವಿಪರ್ಯಾಸ.

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಯುದ್ಧ, ಸಂಶೋಧನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬ್ಲೂಟೂಥ್ ಎಂಬ ವಿಚಿತ್ರ ಹೆಸರು ಸಮೀಪಗಾಮಿ ರೇಡಿಯೊ ತರಂಗಕ್ಕೆ ಅಂಟಿಕೊಂಡದ್ದು, ಮುಂತಾದುವನ್ನು ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/02/blog-post.html

ಲೇಖನದ ವಿಡಿಯೊ ಪ್ರಸ್ತುತಿಗೆ ಇಲ್ಲಿ ಕ್ಲಿಕ್ಕಿಸಿ
Rating
No votes yet