ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬಾಹ್ಯ ಇಂದ್ರಿಯಗಳಿಗೆ ಗ್ರಹ್ಯವಾಗುವ ವಿಷಯಗಳು (ಆಚಾರಗಳು).

ವಿಚಾರಗಳೇ ಪ್ರಮುಖವಾಗಿರುವ ಸಂಸ್ಕೃತಿಗೆ ಕೇವಲ ಆಚಾರಗಳ ರೂಪ ಕೊಟ್ಟಿರುವುದು ಒಂದು ದೊಡ್ಡ ದುರಂತ. ಇದಕ್ಕೆ ಕಾರಣ ನಮ್ಮ ಪಠ್ಯಪುಸ್ತಕಗಳು, ಮಾಧ್ಯಮಗಳು ಹಾಗು ನಮ್ಮಲ್ಲಿ ಅಳಿದು ಹೋಗುತ್ತಿರುವ ಇತಿಹಾಸ ಪ್ರಜ್ಞೆ.

ಸಂಸ್ಕೃತಿಯೆಂದರೇನು?

-----------------

ಸರಳವಾಗಿ ಹೇಳುವುದಾದರೆ, ನಮ್ಮಲ್ಲಿರುವ ಉನ್ನತ ವಿಚಾರಗಳು ಹಾಗು ಅದಕ್ಕೆ ಪೂರಕವಾಗುವಂತೆ ನಮ್ಮ ವೈಯಕ್ತಿಕ /ಸಾಮಾಜಿಕ ಜೀವನಗಳಲ್ಲಿ ನಾವು ಮಾಡುವ ಆಚಾರಗಳು(ಕೃತಿಗಳು); ಇವೇ ಸಂಸ್ಕೃತಿಯ ತಿರುಳು. ವಿಚಾರವಿಲ್ಲದ ಆಚಾರ rituals ಆಗಿಬಿಡುತ್ತವೆ; ಆಚಾರವಿಲ್ಲದ ವಿಚಾರ fruitless ಆಗಿಬಿಡುತ್ತದೆ.

ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದು ಹೇಗೆ?

----------------------------------

ಚಿಕ್ಕವರಾಗಿರುವಾಗ ಮನೆಯಲ್ಲಿ ಹಿರಿಯರನ್ನು ಗಮನಿಸುತ್ತಾ ನಾವು ಆಚಾರಗಳನ್ನು ಮಾತ್ರ ರೂಢಿ ಮಾಡಿಕೊಳ್ಳುತ್ತೇವೆ. ಪ್ರೌಢರಾದ ಮೇಲೆ ವಿಚಾರ-ಆಚಾರಗಳನ್ನು ಒಂದಕ್ಕೊಂದು ಪೂರಕವೆಂಬಂತೆ ಬೆಳೆಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಈ ವಿಚಾರಗಳನ್ನು ಎಲ್ಲಿಂದ ಹುದುಕಿ ತೆಗೆಯಬೇಕು? ಇದಕ್ಕೆ ಉತ್ತರ ನಮ್ಮ ಇತಿಹಾಸ. 

ಒಂದು ನಾಗರಿಕತೆಯ ವೈಯಕ್ತಿಕ ಹಾಗು ಸಾಮಾಜಿಕ ಜೀವನವು ಬೆಳೆದು ಬಂದ ದಾರಿಯನ್ನು ತಿಳಿದುಕೊಂಡರೆ ನಮಗೆ ಹಿಂದೆ ನಡೆದ ತಪ್ಪು-ಒಪ್ಪುಗಳ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. History contains in itself a lot of examples for us, both good and bad. ಹಿಂದಿನ ಪೀಳಿಗೆಯವರು ನೀಡಿದ ಸಂಸ್ಕೃತಿಯನ್ನು ಅರಿತು ಅದನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದು ಮುಂದಿನ ಪೀಳಿಗೆಯ ನೊಗಬಾರ.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ’ಪ್ರತಿಯೊಂದು ಸಮಾಜಕ್ಕೂ ತನ್ನದೇ ಆದ ಆತ್ಮವಿರುತ್ತದೆ. ಇಂಗ್ಲೆಂಡಿನದ್ದು ವ್ಯವಹಾರಿಕಾತ್ಮವಾದರೆ ಭಾರತದ್ದು ಆಧ್ಯಾತ್ಮಿಕಾತ್ಮ.’ ಅಂದರೆ ಉನ್ನತ ವಿಚಾರಗಳಿಗೆ ನಮ್ಮ ಸಂಸ್ಕೃತಿ ಎಷ್ಟು ಪ್ರಾಮುಖ್ಯತೆ ಕೊಡುತ್ತದೆಂಬುದನ್ನು ಇಲ್ಲಿ ತಿಳಿಯಬೇಕಾಗಿದೆ ಹಾಗು ಅವುಗಳಿಗೆ ಸದಾಚಾರದ ರೂಪು ಕೊಡಬೇಕೆಂಬುದು ಇದರ ಅರ್ಥ.

Rating
No votes yet

Comments