ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ಕಥನ)-ಭಾಗ-೧

ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ಕಥನ)-ಭಾಗ-೧


೨೦೦೯-೧೦ರಲ್ಲಿ ಡಿಪ್ಲೊಮಾ ಕೊನೆಯ ವರ್ಷದ ಕೊನೆಯ ಸೆಮೆಸ್ಟರ್ ಪರೀಕ್ಷೆಗೆ ಒಂದು ತಿಂಗಳು ಮೊದಲು  ಯಾವುದಾದರೂ ಒಳ್ಳೆಯ ಪ್ರವಾಸಿ ಸ್ಥಳಕ್ಕೆ  ಹೋಗುವುದು ಎಂದು ತೀರ್ಮಾನಿಸಿದ ನಾವ್ ಸಮಾನಮನಸ್ಕ ಗೆಳೆಯರು ಅಂತಹ ಸ್ಥಳ ಹುಡುಕುವ ಆ ಬಗ್ಗೆ ವಿವರ ಕಲೆ ಹಾಕುವ ಜವಾಬ್ಧಾರಿಯನ್ನು ಒಬ್ಬನಿಗೆ ಒಪ್ಪಿಸಿದೆವು... ಅವನು ಅವರಿವರನ್ನು ಕೇಳಿ, ನೆಟ್ ನಲ್ಲಿ ಹುಡುಕಾಡಿ, ಯೂ ಟೂಬ್ ಸರ್ಚ್ ಮಾಡಿ  ನಮ್ಮೆಲ್ಲರಿಗೂ ಇಸ್ಟ ಆಗುವಂತಹ ಸ್ಥಳ ಹುಡುಕಿದ... ಆ ಬಗ್ಗೆ ನಮಗೆಲ್ಲ ವಿವರಣೆ ನೀಡಿದ...
ಆ ಸ್ಥಳ.......??
 
ಸಕಲೇಶಪುರದಿಂದ ರೇಲ್‌ವೇ ಟ್ರಾಕ್ ಮೇಲೆ ನಡೆಯುತ್ತಾ 'ಕುಕ್ಕೆ ಸುಬ್ರಮಣ್ಯ'ವರೆಗೆ ನಡೆಯುವುದು,(ಅದು 'ಗ್ರೀನ್ ರೂಟ್ ಟ್ರೆಕಿಂಗ್ ಸ್ಪಾಟ್' ಅಂತ ಫೇಮಸ್ ಅಂತ ಈ ಬರಹ ಬರೆವಾಗ  ಗೊತ್ತಾಯ್ತು) ಅದು ಸುಮಾರು ೨೮ ಕಿಲೋ ಮೀಟರ್ ಅನ್ನುವುದು ನೆಟ್ ನಲ್ಲಿನ ವಿವರಣೆ...
 
ಅದಕ್ಕಾಗಿ ದಿನ್ವೊಂದನ್ನು ಗೊತ್ತುಮಾಡಿಕೊಂಡು ರೈಲು ಬಸ್ಸು ಹೊರಡುವ ಸಮಯ-ದರ ಇತ್ಯಾದಿ ವಿವರ ಸಂಗ್ರಹಿಸಿ , ಗೊತ್ತಾದ ದಿನ ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗಿ ಜನರಲ್ ಟಿಕೆಟ್ ಖರೀದಿಸಿ (ಒಬ್ಬರಿಗೆ ೧೨೦  ರೂಪಾಯೀ- ಕುಕ್ಕೆ ಸುಬ್ರಮಣ್ಯ ರೋಡ್ವರೆಗೂ ತೆಗೆಸಿದ್ದೆವು ಆದರೆ ಸಕಲೇಶಪುರದಲ್ಲಿ ಇಳಿದುಕೊಂಡು ಟ್ರಾಕ್ ಮೇಲೆ ನಡೆದೆವು..!!) ೭:೩೦ ರ ರಾತ್ರಿ ಟ್ರೇನ್- ಯಶವಂತಪುರ  -ಮಂಗಳೂರು ಹತ್ತಿದೆವು...
ನಮ್ಮ ಪ್ರಯಾಣ ಶುರು ಆಗುವ ಮೊದಲು, ಹೊರಟಿರುವ ಎಲ್ಲರೂ ಹುಡುಗರು-ವಯಸ್ಕರು, ಮೋಜು ಮಸ್ತಿ- ಎಲ್ಲವೂ ಸಾಧ್ಯವಿರುವುದರಿಂದ ಆ ಬಗ್ಗೆ ನಮಗೆ ಘಂಟೆಗಟ್ಟಲೇ ನಮ್ಮ ಸ್ನೇಹಿತರ ಮನೆಯ ಕುಟುಂಬ ಸದಸ್ಯರು ಕ್ಲಾಸ್ ತೆಗೆದುಕೊಂಡದ್ದೂ ಆಯ್ತು, ಏನು ಮಾಡಬೇಕು, ಬಾರದು, ಜಾಗರೂಕತೆ-ಮುಜಾಗ್ರತೆ-ಇತ್ಯಾದಿ ಬಗ್ಗೆ ಹೇಳಿದರು..
 
ನಾವಂತೂ ಯಾರೊಬ್ಬರ ಮನೆಯಲ್ಲೂ ರೈಲ್ ಟ್ರಾಕ್ ಮೇಲೆ ನಡೆಯುತ್ತಾ ಕುಕ್ಕೆಗೆ ಹೊರಟಿರುವೆವೆವು ಅಂತ ಹೇಳಿರಲಿಲ್ಲ..!!ಹಾಗೆ ಹೇಳಿದ್ದರೆ ಯಾರೂ ಕಳಿಸುತ್ತಿರಲಿಲ್ಲ..!! ಹೀಗಾಗಿ ನಾವು ರೈಲು ಹತ್ತಿ ಕುಕ್ಕೆ ಸುಬ್ರಮಣ್ಯ ರೋಡ್ ತಲುಪಿ ಅಲ್ಲಿಂದ ಕುಕ್ಕೆ ಸುಬ್ರಮಣ್ಯ ದೇವರ ದರ್ಶನ ಮಾಡಿಕೊಂಡು  ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟು ಅಲ್ಲಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಅಥವಾ ರೈಲಿನಲ್ಲಿ  ಬರುವೆವು ಅಂತ ಹೇಳಿ ಒಪ್ಪಿಸಿದ್ದೆವು...!!
ಮೊದಲನೆಯದಾಗಿ ಪ್ರವಾಸ ಮತ್ತು ಅದೂ ಟ್ರೆಕ್ಕಿಂಗ್ ಆಗಿದ್ದರಿಂದ(ನಾ ಊಹಿಸಿದ್ದು ಯಾವುದೋ ಬೆಟ್ಟ ಹತ್ತುವುದೇ ಟ್ರೆಕ್ಕಿಂಗ್ ಇರಬಹುದು...!!) ೨ ಜೊತೆ ಬಟ್ಟೆ -ಟವೆಲ್- ಮೊಬೈಲು ಇಸ್ಟೇ ನಾವ್ ಒಯ್ದದ್ದು -ಇಬ್ಬರು ಮಾತ್ರ ತಿನ್ನಲು ಮನೆಯಿಂದಲೇ ಚಪಾತಿ ಮಾಡಿಸಿ ಅದರ ಜೊತೆ ಕಡಲೆ ಕಾಯಿ ಚಟ್ನಿ ತಂದಿದ್ದರು..!! ಒಬ್ಬ ಕೈಗವಸು ತೆಗೆದುಕೊಂಡು ಬಂದಿದ್ದ  ಮತ್ತ್ತೊಬ್ಬ ಟಾರ್ಚ್- ಲೈಟರ್ .....
ಸುಮಾರು ೨-೩ ಘಂಟೆಯಲ್ಲ್ಲಿ  ಬೆಳಗ್ಗೆ ಹೊತ್ತು ಸಕಲೇಶಪುರ  ತಲುಪಿದೆವು.. ಆಗಲೂ ನಾ ಅಂದುಕೊಂಡಿದ್ದು ನಾವ್ ಸೀದಾ ಸುಬ್ರಮಣ್ಯವರೆಗೆ  ಹೋಗುವೆವು ಅಂತ... ಆದರೆ ನಮ್ಮ ಸ್ನೇಹಿತರಲ್ಲಿ ಕೆಲವರು -ಮಗಾ ಇಲ್ಲಿಂದಲೇ ಟ್ರೆಕ್ಕಿಂಗ್ ಶುರು ಮಾಡುವ ಸಖತ್ ಸ್ಸೀನ್ಸ್  ಇದೆ.... ಇಲ್ಲಿ ಯೋಗರಾಜ್ ಭಟ್ ಅವರು ಹಲವು ಸಿನೆಮಾ ಚಿತ್ರೀಕರಣ ಮಾಡಿರುವರು ಪ್ಲೀಜ್ ಎಂದಾಗ  ಅವರಿಗೆ ಹೆಂಗೂ ನಾಲೆಜ್ ಇದೆಯಲ್ಲ  ಹೋಗಲು ಏನು ಅಡ್ಡಿ ಅಂತ ನಾವೆಲ್ಲಾ ಟ್ರೇನ್ ಇಳಿದು ಕೆಳಗೆ ನಿಂತು  ಸುತ್ತ ಮುತ್ತ ನೋಡಿದರೆ ನಮ್ಮ ಮುಂದೆ ಇರುವವರೇ ನಮಗೆ ಕಾಣಿಸುತ್ತಿಲ್ಲ, ನಾವ್ ಇಳಿದ ಟ್ರೇನ್ ನ ಶಬ್ದ ಮಾತ್ರ ಕೇಳಿಸುತ್ತಿದೆ ...!! ಆ ಪರಿ ಮಂಜು ಮುಸುಕಿದೆ..
 
ಈಗಲೇ ಹೊರಡುವ ಅಂತ ಮುಂದಕ್ಕೆ ಹೋಗುತ್ತಿರಲು ಎದುರಿನಿಂದ ಬಂದ ಒಬ್ಬ ರೈಲು ಉದ್ಯೋಗಿ ನಾವ್ ಅಲ್ಲಿ ಇಳಿದದ್ದು ಯಾಕೆ? ಎಂದು ಕೇಳಿ  ನಮ್ಮ ವಿವರಣೆ ಕೇಳಿ, ಬೆಳಗ್ಗೆ ಹೋಗಿ, ಈಗ ಇಲ್ಲಿಯೇ ಇರಿ, ಇಲ್ಲಿ ಬೆಳಗ್ಗೆ ೧೦-೧೧ ಘಂಟೆಗಂಟ  ಇಲ್ಲಿ  . ಬಿಸಿಲು ಬೆಳಕು ಬೀಳೋದು  ಸಂಶಯ ಅಂದ...:(( ಯಾಕೆ ರಿಸ್ಕು ಅಂತ ನಾವ್  ಅಲ್ಲಿಯೇ ಇದ್ದ ರೈಲು ಶೆಡ್  ಒಂದರಲ್ಲಿ ಚಳಿಗೆ ಗಡ ಗಡ ನಡುಗುತ್ತ ಕುಳಿತೆವು...
ಅಲ್ಲಿ ಮಲಗಿಕೊಳ್ಳಲು ಸ್ಥಳ ಸರಿಯಿರಲಿಲ್ಲ, ಸುಮ್ಮನೆ ಕೂರಲು ನಮಗೆ ಆಗುತ್ತಿಲ್ಲ, ಅದು ಇದು ಮಾತಾಡುತ್ತ ಹಾಗೂ ಹೀಗೂ ೫ ಘಂಟೆವರೆಗೆ ಕಾದಿದ್ದು ಆಯ್ತು, ಇನ್ನು ಕಾಯಲಾರೆವು -ತಾಳಲಾರೆವು ಎನ್ನುತ್ತಾ  ಎದ್ದು ಟ್ರಾಕ್ ಮೇಲೆ ನಡೆಯುತ್ತಾ ಹೊರಟೆವು.... ಕತ್ತಲಲ್ಲಿ(ಆಗಲೂ ಅಲ್ಲಿ ಕತ್ತಲೆಯೇ- ಮಂಜು ಬೇರೆ) ರೈಲು ಟ್ರಾಕ್ ಮೇಲಿನ ಮರದ ಕಬ್ಬಿಣದ ಪಟ್ಟಿಗಳ ಮೇಲೆ ಕಾಲು ಇಕ್ಕುತ್ತ  ಹೊರಟೆವು, ಮಧ್ಯದಲ್ಲಿ  ಟಾರ್ಚ್ ಹಿಡಿದ್ದಿದ್ದವ  ಹಿಂದೆ ಮುಂದೆ ಬೆಳಕು ಹಾಕುತ್ತಿದ್ದ.., ಆ ಕತ್ತಲಲ್ಲಿಯೇ ೨-೩ ಕಬ್ಬಿಣದ ಬ್ರಿಜ್ ದಾಟಿದ್ದೆವು.. ದಾಟುವಾಗ ಆಳದಲ್ಲಿ ನೀರಿನ ಶಬ್ದ ಕೇಳಿಸುತ್ತಿತ್ತು... ಅಲ್ಲಿ ಟ್ರೇನುಗಳ ಓಡಾಟ ಕಡಿಮೆ, ನಮ್ಮ  ಪ್ರವಾಸದ ಅವಧಿಯಲ್ಲಿ ನಾವ್ ನೋಡಿದ್ದು  ೨ ಗೂಡ್ಸ್ ಟ್ರೇನ್ ಮಾತ್ರ...
 
ಕಬ್ಬಿಣದ  ಬ್ರಿಜ್ಗಳ ಮೊದಲಿಗೆ ಕೊನೆಯಲ್ಲಿ ಅಂತರದಲ್ಲಿ ಒಂದು ವೇಳೆ ಟ್ರೇನ್ ಬಂದರೆ  ಜೀವ ರಕ್ಷಿಸಿಕೊಳ್ಳುವುದಕ್ಕೆ ಕಬ್ಬಿಣದ  ನಿಲುಗಡೆ ಸ್ಥಳ ಮಾಡಿರುವರು..!! ಆದರೆ ಅದು ಕಬ್ಬಿಣದ್ದು  -ಹಳೆಯದು ಅಲ್ಲಲ್ಲಿ ತುಕ್ಕು ಹಿಡಿದಿದ್ದು -ಅಲ್ಲಿ ನಿಲ್ಲಲು ೨-೩ ಕಲ್ಲಿನ ಮಣೆ ಹಾಕಿರುವರು-ಅಪ್ಪಿ ತಪ್ಪಿಯೂ ಕೆಳಗಡೆ ನೋಡುವ ಸಾಹಸ ಮಾಡಬಾರದು- ಅಲ್ಲಿ ನಿಂತು ನಾವ್ ಕೆಲವು ಚಿತ್ರ ತೆಗೆದೆವು.. ಕೆಳಗೆ ನೋಡಿದೆವು..ಆಳ ಭಯ ಪಡೋಕೆ ಸಾಕು ಆಗುವಸ್ಟೂ  ಇತ್ತು..!!!
ಸಕಲೇಶಪುರದಿಂದ ನಮ್ಮ ಟ್ರಾಕ್ ಮೇಲಿನ ನಡಿಗೆ ಶುರು ಆಯ್ತು, ಬ್ಯಾಗ್‌ನಲ್ಲಿದ್ದ ಜರ್ಕಿನ್-ಜಾಕೆಟ್ ಗ್ಲೌಸೆ ಆಚೆ ಬಂದವು.. ೫-೬ ಕಿಲೋ ಮೀಟರ್ ಹೋಗಿದ್ದೆವೇನೋ, ನಮಗಿಂತ ಸ್ವಲ್ಪ ಹಿಂದೆ ಬರುತ್ತಿದ್ದ  ನಮ್ಮ  ಗುಂಪಿನ ಮೂವರು ಅಲ್ಲಿಂದ ಓಡುತ್ತಾ  ಏದುಸಿರು ಬಿಡುತ್ತಾ  ಬಂದು ನಮ್ಮನ್ನು ತಡೆದು ನಿಲ್ಲಿಸಿದರು.... ನಾವ್  ಏನು? ಎಂಬಂತೆ ನೋಡಲು, ನಮ್ಮ ಹಿಂದೆ ಏನೋ ಓಡಿ ಬರುತ್ತಿರುವ ಹಾಗೆ ಅನ್ನಿಸುತ್ತಿದೆ ಎನ್ನಬೇಕೆ...!!
ಕಾಳ  ರಾತ್ರಿ ಕತ್ತಲೇ ಮಂಜು ಮುಸುಕಿ ಏನೂ ಕಾಣಿಸುತ್ತಿಲ್ಲ ಈಗ ಇವರಿಗೆ ಏನೋ? ಓಡಿ ಬರುತ್ತಿರುವ ಹಾಗೆ ಅನ್ನಿಸೀತೇ? ಏನಿರಬಹುದು? ಹುಲಿ-ಕರಡಿ-ಆನೆ...!!  ಯೋಚನೆ ಮಾತ್ರಕ್ಕೆ ಆ ಚಾಳಿಯಲ್ಲೂ ಮೈ ಬೆವರಿ ಬೆನ್ನ ಹುರಿಯಲ್ಲಿ ಚಳಕು...!!
ಛೇ- ಛೇ ಹಾಗೇನೂ ಇರಲಿಕಿಲ್ಲ, ನಾವ್ ಟ್ರಾಕ್ ಮೇಲೆ ಹೋಗುವಾಗ  ಕಬ್ಬಿಣದ ಪಟ್ಟಿಗಳ ಮೇಲೆ ಕಾಲು ಇಕ್ಕುವಾಗ ಆ ಶಬ್ಧ ನಿಮಗೆ ಬಂದಿರಬೇಕು ಎಂದು ಹೇಳಿದೆವು...!! ಹಾಗೆ ಹೇಳಿದುದನ್ನು ನಮ್ಮ ಮನವೇ ಒಪ್ಪಲು ತಯಾರು ಇರಲಿಲ್ಲ.. ಏನೋ ಮನ ಶಾಂತಿಗ್ ಹಾಗ್ ಹೇಳಿದೆವು ಅಸ್ಟೆ..!!  ಆದರೂ ಅವರ ಸಂಶಯ ದೂರಾಗದ ಕಾರಣ ನಾವ್ ಅರ್ಧ ಕಿಲೋ ಮೀಟರ್ ಹಿಂದೆ ಹೋಗಿ ನೋಡಿದರೂ ಏನೂ ಕಾಣಿಸದೇ-ಕೇಳಿಸದೇ ಮತ್ತೆ ಅವರಿದ್ದಲ್ಲಿಗೆ ಬಂದು ಅದನ್ನೇ  ಹೇಳಿದೆವು . ಮತ್ತೆ  ನಮ್ಮ ಪ್ರಯಾಣ ಸ್ವಲ್ಪ ದೂರ ಸಾಗಿತು, ಚಳಿ ಗಾಳಿ  ಆರ್ಭಟಕ್ಕೆ ಮೈ ಗಡ ಗಡ ನಡುಗುತ್ತಿತ್ತು  ಕಣ್ಣು ಎಲ್ಲಿಯಾದರೂ ರೈಲು ಟ್ರಾಕ್ ಅಕ್ಕ ಪಕ್ಕ  ಕಾಣಿಸಬಹುದಾದ  ಒಣಗಿದ ಮರ ಕೊಂಬೆ ರೆಂಬೆ ಹುಡುಕುತ್ತಿತ್ತು..!!
 
ಒಂದೂ ಕಾಣಿಸದೇ ಮನ ನಿರಾಶೆಯಾಗಿತ್ತು, ಸ್ವಲ್ಪ ದೂರ ಹೋದ ಮೇಲೆ  ನಮ್ಮ  ಸ್ನೇಹಿತನೊಬ್ಬ ಕೂಗಿದ,,, ಅಲ್ಲಿ,,ಅಲ್ಲಿ,,, ಅವನು ಕೂಗಿದ  ರೀತಿಗೆ ನಾವ್ ಬೆಚ್ಚಿ ಏನೋ? ಬಂತು ಅಂತ ಬೆದರಿ ಹೆದರಿ ಮಾರು ದೂರ ಹಾರಿದೆವು, ಏನೂ ಕಾಣಿಸದೇ ಇದ್ದಾಗ, ಏನೋ? ಅಂದ್ರೆ ಅವನು ಬಗ್ಗಿ ಅದನ್ನು ಎತ್ತ್ತಿ ತೋರಿಸಿದ....???
ಅದು ಒಂದು 'ಬಿದಿರು ಪುಟ್ಟಿ'...!!
ಬಹುಶ ರೈಲು ಟ್ರಾಕ್ ಅಕ್ಕ ಪಕ್ಕಾ ಜಲ್ಲಿ ಕಲ್ಲು ಹರಡಲು ತಂದದ್ದು ಯಾರೋ ಬಿಟ್ಟು/ಮರೆತು ಹೋಗಿರಬೇಕು..
ಅದರಿಂದ ನಾವ್ ಏನು ಮಾಡಲು ಸಾಧ್ಯ?
ಅದು ನಮಗ್ ಹೇಗೆ ಉಪಯೋಗವಾಗಬಹುದು? ಅವ್ಣನ್ನು ಕೆಕ್ಕರಿಸಿಕೊಂಡು ನೋಡಲು ಅವನು ಹೇಳಿದ- ಲೊ ಮಕ್ಕಳ ಇದಕ್ಕೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ- ಒಮ್ಮೆ ಹಚ್ಛ್ಚಿದರೆ ಬಹು ಹೊತ್ತು ಅದು ಸುಡುತ್ತಾ ಇರುವುದು ಮತ್ತು ಬೆಳಕೂ ಸಹಾ ಆಗುವುದು ಇಲ್ಲಿಯೇ ಕುಳಿತು ಏನಾರಾ ತಿನ್ನುವ....!! ಭಲೇ..ಭಲೇ...!!  ನಿಂಗೂ ಮೆದುಳು ಇದೆ ಕಣ್ಲಾ... ಪರ್ವಾಗೀಲ್ವೇ... :())
ಅವನು 'ಹೈದರಾಬಾದು ಹಪ್ಪಳ' ಮೀರಿಸುವ ಹಾಗೆ 'ಉಬ್ಬಿದ್ದು' ನಮಗೆ ಕಾಣಿಸ್ತು...:()))
 
 
ಅಲ್ಲಿಯೇ ಕುಳಿತು ಆ ಬಿದಿರು ಪುಟ್ಟಿಗೆ ಕಾಗದ ತೂರಿಸಿ ಬೆಂಕಿಯನ್ನು ಲೈಟ್ರ್ ಮುಖಾಂತರ ಹಚ್ಚಿದೆವು.. ತುಸು ಹೊತ್ತಿನ ನಂತರ ಅದು ಸಣ್ಣಗೆ ಉರಿಯ ತೊಡಗಿತು, ಅದಕ್ಕೆ ಕೈ ಮೈ ಒಡ್ಡಿಕೊಂಡು -ಬೆಂಕಿ ಕಾಯಿಸಲು ಸ್ಥಳಕ್ಕೆ ನಮ್ಮ ನಮ್ಮಲ್ಲಿಯೇ ಗುದ್ದಾಡಿಕೊಂಡು ಬೆಂಕಿ ಕಾಯಿಸುತ್ತಾ  ಕುಳಿತೆವು..  ನಮ್ಮ ಸ್ನೇಹಿತ ತಮ್ಮ ಮನೆಯಿಂದ ತಂದಿದ್ದ ದೊಡ್ಡ ಪೊಟ್ಟಣ ಬಿಚ್ಚಿದ ನೋಡಿದರೆ ಅದರಲ್ಲಿ ಸುಮಾರು ೧೫೦ ಚಪಾತಿ ಮತ್ತು ನೆಂಚಿಕೊಳ್ಳಲು ಕಡಲೆ ಕಾಯಿ ಚಟ್ನಿ...!! ಇನ್ನೊಬ್ಬನ ಹತ್ತಿರ ೨ ಲೀಟರ್ ನ ನೀರಿನ ಬಾಟಲ್.. ಬೆಂಕಿ ಮುಂದೆ ಕುಳಿತು ಚಳಿ  ಕಾಯಿಸಿಕೊಳ್ಳುತ್ತ ಚಪಾತಿ ಚಟ್ನಿ ತಿನ್ನುತ್ತಾ ಇರುವಾಗ....................
 
ನಮ್ಮ ಸ್ನೇಃಹಿತನೊಬ್ಬ ಒಂದು ಕಡೆ ಕೈ ತೋರಿಸಿ ಅಲ್ಲಿ  'ಯಾರೋ' ನಿಂತಿರುವರು ಎಂದ... ಮತ್ತು ನಾ ಅದನ್ನು ನೋಡಿದ್ದೆ ಆದರೂ ಅವರಿಗೆ ಹೇಳಿದರೆ ಎಲ್ಲಿ ಭಯ ಪಡುವರೋ ಅಂತ ಸುಮ್ಮನೇ 'ಗುಮ್ಮನ ಗುಸುಗನ' ತರಹ ಇದ್ದೇ..!! ಎಲ್ರೂ ಭಯ ಪಡುತ್ತಾ ಆ ಕಡೆ ನೋಡಿದರೆ ಅಲ್ಲಿ ಮರದ  ಪಕ್ಕ ಯಾರೋ ನಿಂತು ನಮ್ಮನ್ನೇ ನೋಡುತ್ತಿರುವರು  ಕಪ್ಪು ಬಟ್ಟೆ ಮೈ ಮುಚ್ಚಿದ ಹಾಗಿದೆ.. ಮೈ ಗಾಡ್, ದೆವ್ವ ಇರಬಹುದೇ?
ದೆವ್ವ ಬೆಳ್ಳಗೆ ಬಟ್ಟೆ ಹಾಕುವುದಲ್ಲ ಇದೇನು ಕಪ್ಪು ಬಟ್ಟೆ?
 ಯಾರಾದರೂ ಕಳ್ಳರೋ?
ನಕ್ಸಲೈಟು?
 
ಯಪ್ಪ ಸತ್ತೆವು ನಾವ್...!! 
ಅದಕ್ಕೂ ಮುಂಚೆ ಚಳಿಗೆ ಬೆಂಕಿ ಕಾಯಿಸುತ್ತಾ- ಅದನ್ನು ಫೋಟೋ ತೆಗೆಯಲು ನಾ ಆ ಕಡೆ ಈ ಕಡೆ ಓಡಾಡುವಾಗಲೇ ಅಲ್ಲಿ ಯಾರೋ ನಿಂತಂತೆ ಕಂಡಿತ್ತು, ಆದರೂ ಧೈರ್ಯ ತೆಗೆದುಕೊಂಡು ಯಾರಿಗೂ ಹೇಳದೇ ಸುಮ್ಮನೇ ಇದ್ದೇ, ಮತ್ತು ಆ ಕಡೆಯೇ ಗಮನ ಇಕ್ಕಿದ್ದೆ, ಮುಂದೆ ಬಂದರೆ ಹೇಳುವ ಅಂತ, ಎಸ್ಟು ಹೊತ್ತಾದರೂ ಅವರು ಮುಂದೆ ಬಾರದೇ ಇದ್ದುದು ಕಂಡು ಬಹುಶ ನಮ್ಮನ್ನು 'ವಾಚ್' ಮಾಡುತ್ತಿರಬೇಕು ಅಂದುಕೊಂಡೆ, ಅದಕ್ಕೆ ಮೊದಲು ಮಲೆನಾಡು ಕಡೆ ನಕ್ಸಲೈಟು ಇರುವರು ಧುತ್ತನೆ ಎಲ್ಲೆಲ್ಲಿಯೋ  ಕಣ್ಣಿಗೆ ಕಾಣಿಸುವರು ಎಂದೆಲ್ಲ ಓದಿದ್ದೆ ಅದು ನೆನೆದುಕೊಂಡು ಭಯವೂ ಆಗಿತ್ತು...!!
 
ನಮ್ಮೆಲ್ಲರಲ್ಲಿ ಕೆಲವು ಧೈರ್ಯವಂತರು ಧೈರ್ಯವಹಿಸಿ  ಆ ಕಡೆ ನೋಡುತ್ತಾ ಕೆಳಗೆ  ಬಗ್ಗಿ ಜಲ್ಲಿ  ಕಲ್ಲು ಎತ್ತಿಕೊಂಡು ಆ ಕಡೆ ಬೀಸಿದರು, ೧೦-೧೫  ಕಲ್ಲು ಬಂದು  ಬಿದ್ದರೂ ಅಲುಗಾಡದೆ ಇರುವುದು ಕಂಡು ಈಗ ಇನ್ನೊಂದು ಭಯ ಶುರು ಆಯ್ತು, ಯಾರನ್ನಾದರೂ ಯಾರೋ ಸಾಯಿಸಿ ಅಲ್ಲಿ ನಿಲ್ಲಿಸಿ ಹೋಗಿರಬಹುದೇ?...
 ಎಂಬ  ಸಂದೇಹ ನಮ್ಮೆಲ್ಲರ ಮನದಲ್ಲಿ...!!
 
ನಮ್ಮಲ್ಲಿ ಕೆಲವರು ಧೈರ್ಯವಹಿಸಿ  ಮುಂದಕ್ಕೆ ಹೋಗಿ ನೋಡಿದರೆ ಅದು: ರೈಲು ಇಲಾಖೆಯವರು  ನೆಲದಲ್ಲಿ ನೆಟ್ಟ ಒಂದು ಕಬ್ಬಿಣದ ತುಂಡು...ಅಗಲವಾಗಿದ್ದ ಅದು ಒಂದು ಮನುಷ್ಯನ ಎತ್ತರ ಇದ್ದು ನಮಗೆ ಆ ರೀತಿ ಅನ್ನಿಸಿತ್ತು...:((
ಎಲ್ರೂ ಬಿದ್ದು ಬಿದ್ದು ನಕ್ಕೆವು- ಎಲ್ಲರಿಗೂ ಇಂಗು ತಿಂದ ...ಗ... ಭಾವ...!!
 
ಅಲ್ಲಿಂದ ಹೊರಟು ಮುಂದಕ್ಕೆ ಹೋಗುತ್ತಿದ್ದ ಹಾಗೆ ಸ್ವಲ್ಪ ಸ್ವಲ್ಪ  ಹಚ್ಚ ಹಸುರಿನ ಪ್ರಕೃತಿಯ ರಮ್ಯ ಅವರ್ಣನೀಯ ದೃಶ್ಯಗಳು ಕಾಣಿಸುತ್ತಿದ್ದವು...ಯತೆಚ್ಚ ಮಂಜು ಬೀಳುತ್ತಿತ್ತು, ನಡುಗುತ್ತಾ  ಹೋಗುತ್ತಿದ್ದೆವು.. ಬೆಳಗ್ಗೆ ೧೧ ರ ಸುಮಾರಿಗೆ ಬಹುತೇಕ ಎಲ್ಲವೂ ನಿಚ್ಚಳವಾಗಿ ಕಾಣಿಸಿತು, ಎಲ್ಲೆಲ್ಲೂ ಹಸಿರು, ನೀರು ಒಂದು ಕಡೆ ಪ್ರಪಾತ ಅಲ್ಲಿ ಹರಿಯುವ ನೀರು, ಮತ್ತೊಂದು ಕಡೆ ಎತ್ತರದ ಗುಡ್ಡ ಪ್ರದೇಶ, ಅದನ್ನು ಕೊರೆದೆ ರೈಲು ಹಾದು ಹೋಗಲು ಸುರಂಗ ಮಾಡಿರುವರು...
 
ಅಕ್ಕ ಪಕ್ಕದ ಗುಡ್ಡ ಪ್ರದೇಶದಿಂದ ಗುಂಡು ಕಲ್ಲು ಇತ್ಯಾದಿ ಬಂದು ಬೀಳಬಾರದು ಅಂತ ಆ ಗುಡ್ಡಕ್ಕೆ ಅಲ್ಲಲ್ಲಿ ಕಬ್ಬಿಣದ ತಂತಿ ಹೊದಿಕೆ ಕಾಣಿಸುತ್ತಿತ್ತು... ದೊಡ್ಡ ದೊಡ್ಡ ಕಲ್ಲು ಬೆಟ್ಟವನ್ನು ಕೊರೆದು ಸುರಂಗ ನಿರ್ಮಿಸಿದ ಇಂಜಿನಿಯರುಗಳ ಕಾರ್ಯಕ್ಕೆ  ಹ್ಯಾಟ್ಸ್ ಆಫ್..
ಆ ಸ್ಥಳದಲ್ಲಿ ಸುರಂಗ ಮಾರ್ಗ ಕೊರೆಯಲು ಕೆಲ್ಸಾ ಮಾಡುವಾಗ ಅಲ್ಲಿ ಹಲವು ಆನೆಗಳು ಧಾಳಿ ಮಾಡಿ ಕೆಲಸಗಾರರನ್ನು ಸಾಮಾಗ್ರಿ ಸಲಕರಣೆಗಳನ್ನು ಪಕ್ಕದ ಆಳವಾದ ಪ್ರಪಾತಕ್ಕೆ ಎಸೆಯುತ್ತಿದ್ದವಂತೆ... ಅದೆಲ್ಲ ಆಡೆ  ತಡೆ ದಾಟಿ ಅದನ್ನು ನಿರ್ಮಿಸಿದ್ದು ಮೆಚ್ಚಲೇಬೇಕು, ಅದು ನೋಡಿದವರಿಗೆ ಅಸ್ಟೆ -ಅದು ಎಸ್ಟು ಕಸ್ಟ ಸಾಧ್ಯ ಕೆಲಸ ಅನ್ನಿಸುವುದು...
 
ಆ ತರಹ್ದ ಟನೆಲ್  ಸ್ಸುಮಾರು ೩-೪ ನೋಡಿದೆವು-ಅದರ ಮೂಲಕವೇ ಹಾದು ಹೋದೆವು, ಅವುಗಳಲ್ಲಿ ಒಂದು ತುಂಬಾ ದೀರ್ಘವಾಗಿತ್ತು ಮತ್ತು ಆ ಸುರಂಗಗಳಲ್ಲಿ ಬೆಳಕು ಏನೂ ಕಾಣಿಸುತ್ತಿರಲಿಲ್ಲ, ಆದ್ಕಾಗಿ ನಾವ್ ಬಟ್ಟೆಯನ್ನು ಕಟ್ಟಿಗೆಗೆ ಸುತ್ತಿ ಅದಕ್ಕೆ ಬೆಂಕಿ ಹಚ್ಚಿ ಪಂಜು ಹಿಡಿಯುತ್ತಾ ಹೊರಟೆವು... ಈ ಪಂಜು ನಮಗೆ ಎರಡು ಕಾರಣಕ್ಕೆ ಬೇಕಿತ್ತು, ಬೆಳಕಿಗಾಗಿ ಮತ್ತು ಯಾವುದಾರ ಕಾಡು ಕ್ರೂರ  ಪ್ರಾಣಿಗಳನ್ನು ದೂರ ಓಡಿಸಲು...!! ಅದರಲ್ಲೂ ನಂಗೆ ಅತಿ ಹೆಚ್ಚಿನ ಭಯ ಆಗಿದ್ದು- ಆನೆ ಮತ್ತು ಕರಡಿ ಬಗ್ಗೆ ಅದ್ಕೆ ಕಾರಣ ಎಲ್ಲೆಲ್ಲೂ ಕಾಣಿಸುತ್ತಿದ್ದ್ಡ ಬಾಳೆ ಗಿಡಗಳು -ಯತೆಚ್ಚ ಬೆಳೆದಿದ್ದು ಮತ್ತು ಕರಡಿ- ಆನೆಗೆ ಅದು ಬಹಳ  ಇಸ್ಟವಾದ  ಆಹಾರ...!!
 
ಆ ಸುರಂಗ ಮಾರ್ಗಗಳು ಅಗಲವಾಗಿದ್ದು ಒಂದೊಮ್ಮೆ ಟ್ರೇನ್ ಬಂದರೂ ಅದರ ಶಬ್ಧ ಕೇಳಿಸಿ ಹಳಿ ಅಕ್ಕ ಪಕ್ಕ ಇರುವ ವಿಶಾಲ ಜಾಗದಲ್ಲಿ ನಾವ್ ನಿಲ್ಲಬಹುದು..
 ದಾರಿ ಮಧ್ಯೆ ಒಂದು ಕಡೆ ನಿಲ್ದಾಣ ಸಿಕ್ಕಿ ಅಲ್ಲಿ ರಸ್ತೆ ಸಂಪರ್ಕವೂ ಇದ್ದ ಕಡೆ ಹೋಗಿ ಟೀ ಕುಡಿದು ಅಲ್ಲಿಂದ ಕುಕ್ಕೆಗೆ ಹೋಗಲು ತಗಲುವ ಸಮಯ ಕೇಳಿ ವಾಪಾಸ್ಸು ಬಂದು ಮತ್ತೆ ಟ್ರಾಕ್ ಮೇಲಿನ ನಡಿಗೆ ಮುಂದುವರೆಸಿದೆವು.. ನಾ ಮೊದಲೇ ಯೋಚಿಸಿ ಶೂ ಹಾಕಿಕೊಂಡು ಹೋಗಿದ್ದೆ, ನಮ್ಮ ಇನ್ನಿತರ ಹುಡುಗರು ಬರೀ ಚಪ್ಪಲಿಯಲ್ಲಿ ಬಂದಿದ್ದರು, ಮೊದಲೇ ಟ್ರಾಕ್ ಮೇಲೆ ನಡಿಗೆ ಅಲ್ಲಿ ವಿಪರೀತ ಜಲ್ಲಿ ಕಲ್ಲುಗಳು ಹೀಗಾಗಿ ಅವರ ಚಪ್ಪಲಿ ಕಿತ್ತುಕೊಂಡು ಕಾಲಿಗೆ ಗಾಯ ಆದವು...
ಮೊದಲಿಗೆ ಅಸಾಧ್ಯ ಚಳಿ ಇದ್ದುದು ಈಗ ಸೂರ್ಯ ನೆತ್ತಿಗೆ ಬಂದ ಮೇಲೆ ವಿಪರೀತ ಧಗೆ ಶುರು ಆಯ್ತು, ನಮ್ಮ  ಪುಣ್ಯಕ್ಕೆ ಎಲ್ಲೆಡೆ ನೀರು ತೊಟ್ಟಿಕ್ಕುವುದು ಧುಮ್ಮಿಕ್ಕುವುದು ಕಾಣಿಸುತ್ತಿತ್ತು ಅಲ್ಲೆಲ್ಲ ನಾವ್ ಸ್ನಾನ ಮಾಡುತ ಮುಂದಕ್ಕೆ ಹೋಗುತ್ತಿದೆವು..  ನೀರು ತಾಜಾ ಮತ್ತು ಶುದ್ಧವಾಗಿ ಕಾಣಿಸುತ್ತಿತ್ತು ಮಾರ್ಗ ಮದ್ಯೆ ಏನೊಂದೂ ಯೋಚಿಸದೇ ಮತ್ತು ಬೇರೆ ವಿಧಿ ಇಲ್ಲದೇ ಆ ನೀರನ್ನೇ ಕುಡಿದು ದಾಹ ತೀರಿಸಿಕೊಂಡೆವು.. ಸಧ್ಯ ಎಂಥದ್ದು ಆಗಲಿಲ್ಲ..!!
ಹೀಗೆಯೇ  ಮುಂದಕ್ಕೆ ಹೋಗುತ್ತಾ ಒಂದು ಸುರಂಗದ ಮುಂದೆ ಹೋದಾಗ  ಅಲ್ಲಿ ಒಳಗಡೆ  ಒಂದು ದ್ವಾರ ಕಾಣಿಸಿ ಅಲ್ಲಿಂದ  ಆಚೆ ಕಡೆ ಹೊರಗೆ ಬರಲು ಬೆಳಕು ಕಾಣಿಸಿತು ಮುಂದೆ ಅಗಲವಾದ ಪ್ರಪಾತ ಆ ಕಡೆ ಎತ್ತರದ ಗುಡ್ಡ ಪ್ರದೇಶ ಅಲ್ಲಿ ಎಲ್ಲೆಡೆ ಹಸಿರೋ ಹಸಿರು- ಬಯಲು ಪ್ರದೇಶದಿಂದ ಬಂದ ನನಗಂತೂ ಈ ಹಸಿರು ಕಂಡು ಭಲೇ ಖುಷಿ ಆಯ್ತು... ನಮ್ಮ ಟ್ರೆಕಿಂಗ್ ಮಧ್ಯೆ ಸುಮಾರು ಸಾರಿ ನಾವೆಲ್ಲ ಅನ್ನುತ್ತಿದ್ದೆವು -ತಿನ್ನಲು ಕುಡಿಯಲು ಮಲಗಲು ಜಾಗ ಇದೆ, ಇಲ್ಲೇ ಇರುವುದು ಚೆನ್ನ- ಆ ಬೆಂಗಳೂರು ಟ್ರಾಫಿಕ್ಕು-ಗದ್ದಲ ಗೋಜು ಧೂಳು ಎಲ್ಲವೂ ಸಹಿಸಲಾಸಾಧ್ಯ ಅನ್ನಿಸ್ತ್ತು...!! 
 
ಆ ಕಡೆಯ ಗುಡ್ಡದಂತ ಪ್ರದೇಶದ ಕಡೆ ನೋಡುತ್ತಾ ನಮ್ಮ  ಒಬ್ಬ ಸ್ನೇಹಿತ ಮಗಾ- ಅಲ್ಲಿ ನೋಡು ಅಲ್ಲಿ ಕರಡಿ ಇದೆ ಅಂದ....
ಕರಡಿ??
ಓ!! ಅಂತೂ ಒಂದು ಪ್ರಾಣಿ ನಮಗೆ ನೋಡಲು ಸಿಕ್ಕಿತು ಅಂತ ನಾವೆಲ್ಲ ಸುಮಾರು ಹೊತ್ತು ಅದನ್ನು ದಿಟ್ಟಿಸಿ ನೋಡಿದೆವು... ಅದು ದೂರ ಇದ್ದುದರಿಂದ ಕಣ್ಣು ಕಿರಿದಾಗಿಸಿ ನೋಡಿದೆವು, ಸುಮಾರು ಹೊತ್ತು ನೋಡಿದರೂ ಅದು ಕದಲದೆ ಇದ್ದುದು   ಕಂಡು ಅದು ಕರಡಿ ಅಲ್ಲವೇನೋ? ಎಂಬ ಭಾವ ಬಂತು, ಕೊನೆಗೆ ಅದು  ಯಾವತ್ತೋ ಸುಟ್ಟ ಮರದ ಒಂದು ಬೊಡ್ಡೆ ಮತ್ತು ಸುಟ್ಟ ಕಾರಣ ಅದು ಕಪ್ಪು ಬಣ್ಣವಾಗಿ ....ಅಂತ ಗೊತ್ತಾಯ್ತು...!! ಮತ್ತೆ ವಾಪಾಸ್ಸು ಬಂದು ಟ್ರಾಕ್ ಮೇಲೆ ನಡೆಯುತ್ತಾ  ಅಲ್ಲಲ್ಲಿ ಫೋಟೋ ತೆಗೆದುಕೊಳ್ಳುತ್ತ  ಸಾಗಿದ್ದೆವು....
ನಾವ್ ಕುಕ್ಕೆಗೆ ಇನ್ನೇನು ೪-೫ ಕಿಲೋ ಮೀಟರ್ ಸಮೀಪ ಇರುವಾಗ  ನಮಗೆ ಅಲ್ಲಿ ಟ್ರಾಕ್  ರಿಪೇರಿ ಮಾಡು ರೈಲು ಕೆಲಸಗಾರರು  ಕಾಣಿಸಿದರು. ನಾವ್ ಎಲ್ಲಿಗೆ ಹೊರಟಿರುವೆವು? ಅಂತ ಕೇಳಿ ತಿಳಿದುಕೊಂಡು, ಈಗಾಗಲೆ ಸಮಯ ೪ ಆಆಗುತ್ತಿದೆ  ನೀವ್ ಕುಕ್ಕೆ ತಲುಪುವ ಮೊದಲೇ ಕತ್ತಲು ಆಗಬಹುದು  ಇಲ್ಲಿ ಆನೆಗಳ ಹಾವಳಿ ಹೆಚ್ಚು ನೀವ್ ಮುಂದಕ್ಕೆ ಹೋಗುವುದು ಸುರಕ್ಷಿತ ಅಲ್ಲ, ನಮ್ಮ ಜೀಪ್ ಇದೆ ಅದರಲ್ಲಿಯೇ ಹೋಗೋಣ ನಿಮ್ಮನ್ನು ಮುಖ್ಯ ರಸ್ತೆಗೆ ಬಿಡುವೆವು ಒಬ್ಬರು ೩೫೦- ರೂಪಾಯೀ ಕೊಡಬೇಕು ಅಂದರು...:((( ನಾವ್  ಮೊದಲೇ ಟ್ರೆಕಿಂಗ್ ಮಾಡಲು ಬಂದವರು- ಕಾಸು ಇದ್ದುದ್ದು ಆಸ್ಟಕ್ಕಸ್ಟೆ ಹೀಗಿರುವಾಗ ಅವರಿಗೆ ಕಾಸು ಕೊಟ್ಟು ....!! ನಮಗೆ ಅವರು ನಮ್ಮ ಹತ್ತಿರ ಹಣ ಕೀಳಲು ಹಾಗೆ ಹೇಳುತ್ಟ್ತಿರುವರು ಅನ್ನಿಸಿ- ನಮ್ಮಲ್ಲಿಯೇ ಮಾತಾಡಿಕೊಂಡು ಒಬ್ಬರು ೫೦ ರೂಪಾಯೀ ಕೊಡುವೆವು ಅಂದ್ರೆ ಒಪ್ಪಲಿಲ್ಲ,  ಹಾಗೆಯೇ ನಮಗೆ ಮುಂದೆ ಹೋಗಲು ಆಗೋಲ್ಲ-ಬಿಡೊಲ್ಲ- ಟ್ರಾಕ್ ಮೇಲೆ ನಡೆಯುವುದು ಅಪರಾಧ-ಅಪಾಯಕಾರಿ ಎಂದೆಲ್ಲ ಹೇಳಿದರು.... .ಹಾಗೆಯೇ ಈ ಹಿಂದೆ ಆಗಿದ್ದವು ಅಂತ ಕೆಲವು  ದುರ್ಘಟನೆಗಳನ್ನು ರಂಜನೀಯವಾಗಿ ಹೇಳಿದರು,
 
ಅವುಗಳಲ್ಲಿ ಸ್ಯಾಂಪಲ್
ಹಿಂದೊಮ್ಮೆ ಇಬ್ಬರು ಟ್ರೆಕಿಂಗ್ ಗೆ ಬಂದು ರಾತ್ರಿ ಇಲ್ಲಿಯೇ ಡೇರೆ  ಹಾಕಿ ಮಲಗಿದ್ದಾಗ ಆನೆಗಳು ಬಂದು ಸಾಯಿಸಿದ್ದವು..(
ಇದು ನಿಜವೋ?
ಸುಳ್ಳೋ? 
ಕಾರಣ ಅಲ್ಲಿನ ಪ್ರಕೃತಿ ಎಸ್ಟು ಚೆನ್ನ ಅನ್ನಿಸುವುದೋ ಅಸ್ಟೆ ಭೀಕರ ರಾತ್ರಿಯಲ್ಲಿ ಅನ್ನಿಸುವುದು ಆ ಕಾಡು ಮದ್ಯೆ  ಕ್ಯಾಂಪ್ ಹಾಕಿ... ಯಾರು ತಾನೇ ರಿಸ್ಕ್ ತೆಗ್ದುಕೊಳ್ಳುವರು?)..
ಮತ್ತೊಂದು ಘಟನೆ-
 
ಟ್ರಾಕ್ ಮೇಲಿಂದ ಜಾರಿ ಕೆಳಗೆ ಪ್ರಪಾತಕ್ಕೆ ಬಿದ್ದು ಕೈ ಕಾಲು ಮುರಿದುಕೊಂಡವರು ಹಲವರು- ಇದು ನಿಜವೂ ಇರಬಹ್ದು.. ಕಾರಣ ಟ್ರಾಕ್ ಮಾತು ಪ್ರಪಾತಕ್ಕೆ ಕೆಲವೇ ಇಂಚು ದೂರ-!!
ಜೀವನ- ಮರಣದ ನಡುವಿನ ಅಂತರ ಕೆಲವೇ ಸೆಕೆಂದು ಅನ್ನುವುದು ಅಲ್ಲಿ ನಿಜ-
ಅದು ನಾ ಆ ಟ್ರಾಕ್ ಮತ್ತು ಪ್ರಪಾತ ನೋಡುತ್ತಾ ಕಣ್ಣಾರೆ ಕಂಡೆ...!!
ನಮ್ಮಲ್ಲಿಯೇ ಡಿಸ್ಕಸ್ ಮಾಡಿದ ಮೇಲೆ ನಮ್ಮಲ್ಲಿಯೇ ಅಭಿಪ್ರಾಯ 'ಬೇಧ' ಉಂಟಾಯಿತು...:((
ಕೆಲವರು ವಾಪಾಸ್ಸು ಹೋಗಲು ತಯಾರಾದರೆ  -
ಹಲವರು ಮುಂದಕ್ಕೆ ಹೋಗೋಣ ಏನಾರಾ ಆಗಲಿ ಎಂದರು...!!
ಆದರೂ ಕೆಲವರ ಹಿತವೂ ಅವರ ಮನೆಯವರ 'ಎಚ್ಚರಿಕೆಯೂ' ನಮ್ಮ  ಮನದಲ್ಲಿ ಮತ್ತೊಮ್ಮೆ ಮೂಡಿ ರಿಸ್ಕ್ ಬೇಡ ಅಂತ ಮತ್ತೆ ಹಿಂದಕ್ಕೆ ಹೊರಟೆವು....
 
ಭರ್ತಿ  ೭ ಕಿಲೋ ಮೀಟರ್ ಹಿಂದಕ್ಕೆ ಬಂದು  ಹಲವರು  ನಡೆದು -ನಡೆದು ಸುಸ್ತಾಗಿ  ಒಂದು ಕಡೆ 'ಕುಕ್ಕರು' ಬಡಿದರು, ಇನ್ನೂ ಆಗೋಲ್ಲ, ನೀವ್ ಹೋಗಿ ನಾವ್ ಆಮೇಲೆ ಬರುವೆವು ಅಂದರು... ಸಂಜೆ ಆಗುತ್ತಿದೆ ಕತ್ತಲಾಗಿ...ಮುಂದಕ್ಕೆ ಯೋಚಿಸಲೇ ಭಯ ಆಯ್ತು..
ಸ್ವಲ್ಪ ಹೊತ್ತು ಕಾದು ,ಚಪಾತಿ ತಿಂದು ನೀರು ಕುಡಿದು ಶಕ್ತಿ ಬಂದ ಹಾಗೆ ಅನ್ನಿಸಿ ಎದ್ದೆವು, ಇನ್ನೂ ಬಿದ್ದಿದ್ದ ಕೆಲವರನ್ನು  ಹೆಗಲಲ್ಲಿ ಕೈ ಹಾಕಿ  'ಒತ್ತಾಯಪೂರ್ವಕವಾಗಿ' ಎಬ್ಬಿಸಿ ನಿಲ್ಲಿಸಿದೆವು...!!
 ಅವರಂತು  ಮುಂದಕ್ಕೆ ನಡೆಯಲು ಆಗದವರಂತೆ  'ನಿಶ್ಯಕ್ತಿಗೆ ' ಒಳಗಾದವರಂತೆ  ತೋರುತ್ತಿದ್ದರು..!!,
ಅದಕ್ಕೆ ಮೊದಲು ರಮ್ಯ ಪ್ರಕೃತಿ ನೋಡುತ್ತಾ  ಅದನ್ನು ಹುಡುಕಿದ ನಮ್ಮನ್ನು ಕರೆ ತಂದ  ಈ ಟ್ರಿಪ್ ಆರೇಂಜ್ ಮಾಡಿರುವವನನ್ನು ಮನಸಾರೇ ವಿಪರೀತ 'ಹೊಗಳಿದ್ದ' ನಮ್ಮಲ್ಲಿನ್ಮ ಹಲವರು ,ಈಗ ಈ ಟ್ರಿಪ್ ಮತ್ತು ತಮ್ಮ ಈಗಿನ ಅವಸ್ಥೆಗೆ ಅವನನ್ನೇ 'ದೂಷಿಸುತ್ತಾ' ಸಿಟ್ಟಿನಿಂದ ನೋಡುತ್ತಿದ್ದರು...
ಈ ಮನೋ ಸ್ಥಿತಿ ಗುಂಪಲ್ಳಿ ಕೆಟ್ಟ  ಸ್ಥಿತಿ  ಬಂದಾಗ ಸಾಮಾನ್ಯ- ಎಂದು ಸಮಾಧಾನ ಮಾಡಿದೆವು..
 
ಕೊಂಚ ಹೊತ್ತಿನ ನಂತರ ನಮ್ಮ  'ಪುಣ್ಯಕ್ಕೆ 'ಅಲ್ಲಿಗೆ ಕಟ್ಟಿಗೆ ಹೊಯ್ಯುವ ಒಂದು ಲಾರಿ ಬಂದು ಅವರನ್ನು ಕೇಳಿದಾಗ ಹೀಗೆಯೇ ಸ್ವಲ್ಪ ದೂರ ನಡೆದುಕೊಂಡು ಹೋದರೆ ಒಂದು ಹಳ್ಳಿ ಸಿಗುವುದು ಅಲ್ಲಿ ಹೆದ್ದಾರಿ ಇದೆ ಎಂದು ಹೇಳಿದರು..
ಈಗ ಹಲವರಿಗೆ  ನವ ಚೈತನ್ಯ ಬಂದಂತೆ ಅವರ ಮುಖಭಾವದ  'ಪ್ರಸನ್ನ'ತೆಯಿಂದ ಅರಿವಾಯ್ತು...:()))
ಅಲ್ಲಿಗೆ ನಡೆಯುವವರೆಗೆ ಮೈನಲ್ಲಿ ತ್ರಾಣ -ಶಕ್ತಿ ಬೇಕಲ್ಲ-
ಅದಕ್ಕೆ ಚಪಾತಿ + ಚಟ್ನಿ ಕಲೆಸಿಕೊಂಡು ಮನಸಾರೇ ತಿಂದು ಅಲ್ಲಿಯೇ ಹರಿಯುತ್ತಿದ್ದ ನೀರನ್ನು ಕುಡಿದು ಆ ಸ್ಥಳದ ಕಡೆಗೆ ಹೋಗುವ ದಾರಿ ಹಿಡಿದು ಹೋಗುವಾಗ.............???
'ಏಳಲೇ' ಆಗದವರು ಈಗ  ನವೋತ್ಸಾಹದಿಂದ-   ನಮನ್ನು ಹಿಂದೆ ಹಾಕಿ ಮುಂದಕ್ಕೆ  ದಾಪು ಗಾಲು ಇಟ್ಟರು...:()))
.....................
ಮುಂದಿನ ಭಾಗದಲ್ಲಿ (ಕೊನೆಯ ಭಾಗ )
 
ಪ್ರವಾಸ-ಸಂತೋಷ-ಸಂಭ್ರಮ-ದೇವರ ದರ್ಶನ-ಕೊನೆಯಲ್ಲಿ
ಒಂದು ದುರಂತ...
ಚಿತ್ರ ಮೂಲಗಳು :
 
www.tripnaksha.com/index.php
 
www.karnataka.com/sakleshapur/
 
thinkingparticle.com/blog/green-route-trek-railway-track-sakleshpur-kukke-subramanya
 
amusinglysimple.wordpress.com/2010/03/10/sakleshpur-green-route-trek/
 

 

 

Rating
No votes yet

Comments