ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ಕಥನ)-ಮತ್ತು ಒಂದು ದುರಂತ.. ಕೊನೆಯ ಭಾಗ
ಇಲ್ಲಿವರೆಗೆ-
ಯಶವಂತಪುರದಿಂದ ಶುರು ಆದ ನಮ್ ರೈಲು ಪ್ರವಾಸ-ಪ್ರಯಾಣ ಕುಕ್ಕೆ ಸುಬ್ರಮಣ್ಯವರೆಗೆ ಸಾಗಬೇಕಿತ್ತು, ಅಲ್ಲಿವರೆಗೆ ಟಿಕೆಟ್ ತೆಗೆಸಿಯೂ ನಾವ್ ಸಕಲೇಶಪುರದಲ್ಲಿ ಇಳಿದು ಆ ಕತ್ತಲಲ್ಲಿ ಮುಂದಕ್ಕೆ ಹೋಗುವಾಗ ಎದುರು ಬಂದ ರೈಲು ಕೆಲಸಗಾರ ಒಬ್ಬ ಈಗ ಕತ್ತಲು ರೈಲು ಟ್ರಾಕ್ ಅಲ್ಲಲ್ಲಿ ಅಪಾಯಕಾರಿಯಾಗಿದ್ದು, ಆಗಾಗ ಗೂಡ್ಸ್ ಟ್ರೇನ್ ಬರುವ ಸಂಭವ ಇರುವುದು ಅಂತ ಹೇಳಿ ನಮಗೆ ಬೆಳಗ್ಗೆ ಪ್ರವಾಸ ಮುಂದುವರೆಸಲು ಹೇಳಿ ಇಲ್ಲಿಯೇ ಬೆಂಚು ಮೇಲೆ ಮಲಗಿ ಎಂದ. ಆದ್ರೆ ನಾವು ಸ್ವಲ್ಪ ಮುಂದೆ ಹೋಗಿ ಶೆಡ್ ಒಂದನ್ನು ಕಂಡು ಅಲ್ಲಿಯೇ ಮಾತಾಡುತ್ತ ಕುಳಿತು, ಬೇಸರ ಆಗಿ, ಪ್ರಯಾಣ ಶುರು ಮಾಡಿ ರೈಲು ಟ್ರಾಕ್ ಮೇಲೆ ನಡೆಯುತ್ತಾ ಹಲವು ಕಬ್ಬಿಣದ ಬ್ರಿಜ್ ದಾಟಿ , ಆಮೇಲೆ ಊಟ ಮಾಡುವಾಗ ಕಪ್ಪು ಮನುಷ್ಯ ಅಂತ ಯಾವುದೋ ರೈಲು ಕಂಬಿ ನೋಡಿ ಭಯ ಪಟ್ಟಿದ್ದು, ಮುಂದಕ್ಕೆ ಹೋಗಿ ಬಿಸಿಲು ಶುರು ಆಗಿ ಅಲ್ಲಲ್ಲಿ ಹರಿವ ನೀರಿನ ಜಲಪಾತಗಳ ನೀರಿಗೆ ಮೈ ಒಡ್ಡಿ ನಿಂತದ್ದು , ಹಲವು ಕಡುಗತ್ತಲೇ ಸುರಂಗ-ಟನೆಲ್ ದಾಟಿದ್ದು- ಆ ಕಡೆ ಗುಡ್ಡ ಒಂದರ ಮೇಲೆ ಎಂದೋ ಸುಟ್ಟ ಮರದ ಕಪ್ಪು ಬಣ್ಣದ ಬೊಡ್ಡೆ ಒಂದನ್ನು ನೋಡಿ ಕರಡಿ ಅಂತ ಖುಷಿ ಆಗಿದ್ದು ಭಯ ಪಟ್ಟದ್ದು, ಸುರಂಗ / ಟನೆಲ್ ಗಳಲ್ಲಿ ಕರಡಿ- ಆನೆ-ಚಿರತೆ ಇರಬಹುದು ಅಂತ ಊಹಿಸಿದ್ದು..
ಮುಂದಕ್ಕೆ ಹೋಗಿ ರೈಲು ಕೆಲಸಗಾರರು ಸಿಕ್ಕಿದ್ದು, ನಮ್ಮನ್ನು ನೋಡಿ ನಮ್ ವಿವರ ಕೇಳಿ ಮುಂದಕ್ಕೆ ಹೋಗುವುದು ಅಪಾಯಕಾರಿ ಅಂತ ಹೇಳಿ ನಮ್ಮನ್ನು ಬಿಡಲು ತಲಾ ೩೫೦ ರುಪಯೀ ಕೇಳಿದ್ದು , ನಾವ್ ಅಷ್ಟಕ್ಕೆ ಚೌಕಾಶಿ ಮಾಡಿದಾಗ ಒಪ್ಪದೇ ನಮ್ಮನ್ನು ಮುಂದಕ್ಕೆ ಹೋಗಲು ಬಿಡದೆ ಭಯ ಬೀಳಿಸಿ ಆ ಬಗ್ಗೆಯೇ ನಮ್ಮ ನಮ್ಮಲ್ಲಿ ಚರ್ಚಿಸಲು , ಕೆಲವರು ಮುಂದಕ್ಕೆ ಹೋಗುವುದು ಬೇಡ ಅಂತ- ಇನು ಕೆಲವರು ಮುಂದಕ್ಕೆ ಹೋಗೋಣ ಅಂತ ಅಭಿಪ್ರಾಯ ಬೇಧ ಬಂದದ್ದು, ಕೆಲವರ ಹಿತ ರಕ್ಷಣೆ- ಅವರ ಮನೆಯವರ ಎಚ್ಚರಿಕೆ ಮನದಲ್ಲಿ ಹಾದು ಹೋಗಿ ಅವರಿಗಾಗಿ ಮತ್ತೆ ವಾಪಾಸ್ಸು ಸುಮಾರು ೭ ಕಿಲೋ ಮೀಟರ್ ನಡಿಗೆ ಮಾಡಿದ್ದು, ಆ ಕಾರಣವಾಗಿ ಹಲವರಿಗೆ ಆಯಾಸ-ಸುಸ್ತು ಆಗಿ ನೆಲದಲ್ಲಿ ಕುಕ್ಕರು ಬಡಿದದ್ದು ಆಯ್ತು...
ಅಲ್ಲಿಯೇ ಚಪಾತಿ ಚಟ್ನಿ ತಿಂದು, ಅಲ್ಲಿಗೆ ನಮ್ಮ ಪುಣ್ಯಕ್ಕೆ ಕಟ್ಟಿಗೆ ಒಯ್ಯಲು ಬಂದ ಲಾರಿ ಒಂದರ ಡ್ರೈವರ್ ಗೆ ಕೇಳಿದಾಗ, ಇಲ್ಲಿಗೆ ಹತ್ತಿರದಲ್ಲಿ ಒಂದು ಚಿಕ್ಕ ಊರು ಇದೆ ,ಅಲ್ಲಿ ಹೆದ್ಧಾರಿ ಹಾದು ಹೋಗುತ್ತೆ-ಧರ್ಮಸ್ಥಳಕ್ಕೆ ಅಥವಾ ಬೆಂಗಳೂರಿಗೆ ಹೋಗಬಹುದು ಎಂದ... ನಾವ್ ಎಲ್ಲ ಖುಷಿ ಆಗಿ ಸುಸ್ತು ಆಯಾಸ ಮರೆತು ದಾರಿ ಕ್ರಮಿಸಿ ಆ ಊರು ತಲುಪಿ -ಅಲ್ಲಿನ ಹೋಟೆಲ್ ಒಂದರಲ್ಲಿ ಟೀ+ ಬನ್ನು ಹೊಟ್ಟೆಗೆ ಹಾಕಿ, ಅಲ್ಲಿ ಆಗ ಬಂದ ಗ್ಯಾಸ್ ಟ್ಯಾಂಕರ್ ಅವುಗಳ ಡ್ರೈವರ್ ನೋಡಿ ಆ ಬಗ್ಗೆ ಮಾತಾಡುತ್ತ ನಕ್ಕು, ಕೊಂಚ ಹೊತ್ತಿನ ನಂತರ ಬಂದ ಕೆ ಎಸ ಆರ್ ಟೀ ಸಿ ಬಸ್ಸು ಹತ್ತಿ ಧರ್ಮಸ್ಥಳಕ್ಕೆ ಹೊರಟೆವು...
ಮುಂದೇನಾಯ್ತು.....???
ಓದಿ...
ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..
. sampada.net/blog/%E0%B2%B8%E0%B2%95%E0%B2%B2%E0%B3%87%E0%B2%B6%E0%B2%AA%E0%B3%81%E0%B2%B0-%E0%B2%95%E0%B3%81%E0%B2%95%E0%B3%8D%E0%B2%95%E0%B3%86-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8-%E0%B2%B0%E0%B3%88%E0%B2%B2%E0%B3%81-%E0%B2%9F%E0%B3%8D%E0%B2%B0%E0%B2%BE%E0%B2%95%E0%B3%8D-%E0%B2%AE%E0%B3%87%E0%B2%B2%E0%B3%86%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B2%BF-%E0%B2%95%E0%B2%A5%E0%B2%A8-%E0%B2%AD%E0%B2%BE%E0%B2%97-%E0%B3%A7/11/06/2012/37021
ಸುಮಾರು ೩-೪ ಕಿಲೋ ಮೀಟರ್ ಆ ಕಾಡು ಪ್ರದೇಶದಲ್ಲಿ ನಡೆದು ನಡುವೆ ಎದುರಾಗುತ್ತಿದ್ದ ಬೋಳು ಪ್ರದೇಶ ಕಂಡು ಅಚ್ಚರಿ ಆಗುತ್ತಿದ್ದೆವು ಕೊನೆಗೆ ಗೊತ್ತಾಯ್ತು ಅದು ನಾವ್-ಮನುಷ್ಯರು ಅಲ್ಲಿ ಮರ ಕಡಿದು ನೆಲ ಸಮ ಮಾಡಿ ಯಾವುದೋ ಅಭಿವೃದ್ಧಿ ಕೆಲಸಕ್ಕೆ ಆ ಪ್ರದೇಶ ಬಳಸಲು ತಯಾರೀ ಅಂತ...(( ಆ ಕಾಡಿನ ಮದ್ಯೆ ಆಲ್ಲಲ್ಲಿ ನಾವ್ ಕೆಲವು ಮೊಬೈಲು ಟವರ್ ಕಂಡೆವು.... ಅಲ್ಲಿ ಟವರ್ ಹಾಕಲು ಅವರಿಗೆ ಅನುಮತಿ ಸಿಕ್ಕದ್ದಕ್ಕೆ ನಮಗೆ ಅಚ್ಚರಿ ಆಗಲಿಲ್ಲ... ಎಲ್ಲವೂ ಕಾಸಿನ ಮಹಿಮೆ.... ಆ ಹಳ್ಳಿ ತಲುಪಿ ಅಲ್ಲಿನ ಹೊಟೆಲ್ ಒಂದರಲ್ಲಿ ಟೀ ಕುಡಿದು ಬನ್ನು ತಿನ್ನುತ್ತಾ ಕುಳಿತಾಗ ನಮಗೆ ಅಲ್ಲಿ ಬೃಹತ್ ಗ್ಯಾಸ್ ಟ್ಯಾಂಕರ್ಗಳು ತೇಕುತ್ತ-ಏದುಸಿರು ಬಿಡುತ್ತ ಏರು-ದಿಣ್ಣೆಯಂತ ರಸ್ತೆ ಹತ್ತಲು ಶ್ರಮ ಪಡುತ್ತಿರುವುದು ಕಾಣಿಸಿತು... ಆಮೆ ಮತ್ತು ಮೊಲ ಕಥೆ ನೆನಪಿಗೆ ಬಂತು...!!
ಯಾಕೆ ಅಂದ್ರೆ ಆ ಲಾರಿ ಮಂಗಳೂರಿಂದ ಬೆಂಗಳೂರು ತಲುಪಲು ಎಸ್ಟು ದಿನ ಆಗಬಹುದು? ಎನ್ನುವ ಊಹೆಯೇ ನಂಗೆ ನಗೆ ತರಿಸಿತು... ಆ ಲಾರಿ ಜೊತೆ ಆಮೆ ಬಿಟ್ಟರೆ ನಿಜವಾಗಿಯೂ ಅದು ಬೆಂಗಳೂರನ್ನು ಮೊದಲು ತಲುಪುವುದು ಇದು ನಾವ್ ನಮ್ಮಲ್ಲಿಯೇ ಹೇಳಿಕೊಂಡು ನಕ್ಕೆವು....
ಗ್ಯಾಸ್ ಸಿಗಲು ಒಂದು ತಿಂಗಳು ಕಾಯಿರಿ ಎಂದಾಗ ಪೆಚ್ಚಾಗುವ ನಮಗೆ ಒಮ್ಮೆ ಆ ಲಾರಿಗಳು ಅಲ್ಲಿ ರಸ್ತೆ ಕ್ರಮಿಸಲು ಪಡುವ ಶ್ರಮ ನೋಡಿದರೆ , ಅವುಗಳನ್ನು ಓಡಿಸುವ ಡ್ರೈವರ್ ಆರಾಮಾಗಿ ಕುಳಿತು ಓಡಿಸುವುದು ಕಂಡಾಗ ಅಬ್ಬಾ...!! ಎಸ್ಟು ತಾಳ್ಮೆ ಇವರಿಗೆ ಅನ್ನಿಸಿತು..... ಅವರನ್ನು ಬೀ ಎಂ ಟೀ ಸೀ ಗೆ ಸೇರಿಸಿದರೆ ಎಂಬ ಊಹೆಯೇ ವಿಪರೀತ ನಗೆಗೆ ಈಡು ಮಾಡಿತು...:())) ಸ್ವಲ್ಪ ಹೊತ್ತು ಕಾದು ಕೆ ಎಸ್ ಆರ್ ಟೀ ಸಿ ಬಸ್ಸು ಒಂದನ್ನು ಹಿಡ್ದು ಸೀದಾ ಧರ್ಮಸ್ಥಳಕ್ಕೆ ಹೊರಟೆವು .
ಒಂದು ತಾಸು ಪ್ರಯಾಣ -ಆ ಪ್ರಯಾಣ ನನಗೆ 'ವಿಶೇಷ ' ಅಂತ ಅವತ್ತೇ ಅನ್ನಿಸ್ತ್ತು(ಮತ್ತೆ ವಿಶೇಷ ಅನ್ನಿಸಿದ್ದು ತಿರುಪತಿಗೆ ಹೋದಾಗ- ಆಲಿಪಿರಿಯಿಂದ ಬಸ್ಸಲ್ಲಿ ಮೇಲಕ್ಕೆ(ತಿರುಮಲ) ಕೆಳಕ್ಕೆ ತಿರುಪತಿ ಬರುವಾಗ ಅನ್ನಿಸಿತ್ತು ) ಅದ್ಕೆ ಕಾರಣ ಹೆಜ್ಜೆ ಹೆಜ್ಜೆಗೂ ತಿರುವುಗಳು ಒಂದು ಕಡೆ ಗಿಡ ಮಾತ್ರಗಳು ಇನ್ನೊಂದು ಕಡೆ ನೀರಿಂದ ಆವೃತ ಆಳ ಪ್ರದೇಶ.. ಮನುಷ್ಯ ಪ್ರಯತ್ನ ಪಟ್ಟು ಅಲ್ಲಲ್ಲಿ ನೀರಿಗೆ ತಡೆ ಗೋಡೆ ಹಾಕಿದ್ದರೂ ಅದನ್ನು ತನ್ನ ತೆಕ್ಕೆಗೆ ಸ್ವಾಹ ಮಾಡಿಕೊಂಡು ಗಿಡ ಮರ ಬೀಳ್ಸೀ ರಸ್ತೆ ವರೆಗೆ ಬಂದಿದ್ದ ನೀರು ಕಂಡೆವು ಭಯ ಪಟ್ತೆವು..
ಧರ್ಮಸ್ಥಳಕ್ಕೆ ಹೋಗುವಾಗ ಬಸ್ಸು ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಹೋದಂತೆ ಅನ್ನಿಸಿತು, ತಿರುಪತಿಯಲ್ಲಿ ಇದು ಉಲ್ಟಾ(ತಗ್ಗಿನಿಂದ ಎತ್ತರಕ್ಕೆ ಮತ್ತು ಅಲ್ಲಿನ ಡ್ರೈವರು ಬಸ್ಸನ್ನು ಫಾಸ್ಟ್ ಆಗಿ ಓಡಿಸುತ್ತಲೇ ಅದನ್ನು ಚಾಕಚಕ್ಯತೆಯಿಂದ ತಿರುಗಿಸುವ ರೀತಿ-ಜನ ಏಡು ಕೊಂಡಲವಾಡ ಅಂತ ಕೂಗುತ್ತಿದ್ದರು-ಭಯಕ್ಕೋ? ಭಕ್ತಿಯಿಂದಲೋ?!! ).... ಸುಮಾರು ಒಂದು ವರೆ ಘಂಟೆ ನಂತರ ಅಲ್ಲಲಿ ಕೆಟ್ಟ ರಸ್ತೆ- ವಿಪರೀತ ಧೂಳು ಕಣ್ಣಿಗೆ ಮೈ ಕೈಗೆ ಮೆತ್ತಿತ್ತು.. ನಾವ್ ಧರ್ಮಸ್ಥಳ ತಲುಪಿದಾಗ ಆ ಸ್ಥಳ ವಿಶೇಷ ಅನ್ನಿಸಿತು....
ಕಾರಣ ಎಲ್ಲಿಯೂ ಸಿಗರೇಟ್ ಸೇದುವವ್ರು ಗುಟ್ಕಾ ಜಗಿಯುವವ್ರು ಕಾಣಿಸಲಿಲ್ಲ. ಆಗ ಅವರಿವರನ್ನು ವಿಚಾರಿಸಿದಾಗ ಗೊತ್ತಾಯ್ತು ,ಅಲ್ಲಿ ಧೂಮಪಾನ ಮಧ್ಯಪಾನ-ಗುಟ್ಕಾ ನಿಷಿದ್ಧ ಮತ್ತು ಜನ ಅದನು ಪಾಲಿಸುವರು ಅಂತ... ಆದರೂ ನಾವ್ ನೋಡಿದ ಹಾಗೆ ಅಂಗಡಿಗಳಲ್ಲಿ ಗುಟ್ಕಾ ಪಾಕೇಟ್ ಕಾಣಿಸಿದವು.. ಸಿಗರೇಟ್ ಮಾತ್ರ ಎಲ್ಲಿಯೂ ಸಿಗಲಿಲ್ಲ(ನಮ್ಮ ಗುಂಪಲ್ಳಿ ಹಲವರು ಧೂಮಪಾನಿಗಳು ಇದ್ದರು..!!) ಹಾಗಿದ್ದೂ ಕೆಲವರು ಅಲ್ಲಲ್ಲಿ ಕಾರು- ಬಸ್ಸು ಇತ್ಯಾದಿಗಳಲ್ಲಿ ಕುಳಿತು ದಮ್ ಹೊಡೆಯುವುದು ಕಂಡಾಗ -ಅಚ್ಚರಿಯಾಗಿ ವಿಚಾರಿಸಿದಾಗ ಗೊತ್ತಾಗಿದ್ದು, ಅವರು ಮೊದಲೇ ತಲೆ ಓಡಿಸಿ ಧರ್ಮಸ್ಥಳಕ್ಕೆ ಬರುವಾಗಲೇ ಪಾಕೇಟ್ ಸಿಗರೇಟ್ ತಂದಿದ್ದರು...!! ನಮ್ಮ ಹುಡುಗರು ಅವರನ್ನು ಅಸೂಯೆಯಿಂದ ನೋಡುತ್ತಾ ಸಿಗರೇಟ್ ಕೇಳಿದರೆ ಹೋಗೋಗ್ ಅಂತ ಸಾಗ ಹಾಕಿದರು//:(((
ಅಲ್ಲಿ ವಿಶ್ರಾಂತಿ ಕೊಠಡಿಯಲ್ಲಿ ರೂಮ್ ಕೇಳಿದಾಗ ರೂಮ್ ಖಾಲಿ ಇಲ್ಲ ಅಂತ ಹೇಳಿ ನಾವ್ ೩-೪ ರೂಪಾಯೀ ಕೊಟ್ಟು ಚಾಪೆ ತಂದು ಅಲ್ಲಿಯೇ ವಿಶಾಲ ಹಾಲಿನಲ್ಲಿ ಮಲಗಲು ಆಣಿ ಆದೆವು .. ವಿಪರೀತ ಜನ ಅಲ್ಲಲ್ಲಿ ಚಾಪೆ ಹಾಸಿಕೊಂಡು ಮಲಗಿದ್ದರು.. ನಾವ್ ಮೊದಲೇ ನಡೆದು ದಣಿದಿದ್ದೆವು ನಿದ್ರೆ ಸಖತ್ ಬಂತು...!! ಬೆಳ್ಲಂಬೆಳಗ್ಗೆ ಎದ್ದು ಹತ್ತಿರದ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ ಅನ್ನಪೂರ್ಣ ಹಾಲಿನಲ್ಲಿ ಊಟ ಮಾಡುವಾಗ ಮತ್ತೊಂದು ವಿಶೇಷ ಅನ್ನಿಸಿತು-
ಅದು -ಅಸ್ಟು ವಿಶಾಲ ಹಾಲಿನಲ್ಲಿ ಹಲವು ಜನರಿಗೆ ಊಟ ಬಡಿಸುವ ರೀತಿ - ಅದನ್ನು ಕೆಲವೇ ಕ್ಷಣಗಳಲ್ಲಿ ತಿಂದು ಎದ್ದೇಳುವ ಜನ -ಆ ಕಡೆ ಬಡಿಸಿಕೊಂಡು ಈ ಕೊನೆಗೆ ಬಡಿಸುವವ್ರು ಹೋಗುವ ಹೊತ್ತಿಗೆ ಆ ಕಡೆಯ ಜನ ಏಳುತ್ತಿದ್ದರು ಮತ್ತಷ್ಟು ಜನ ಆ ಸಾಲಿಗೆ... ನಾ ಊಟ ಮಾಡುವುದು ನಿದಾನ, ನನ್ನ ಈ ಸ್ತಿತಿ ಕಂಡು ನನನ ಸ್ನೇಹಿತರು -, ಮಗಾ ಇಲ್ಲಿ ಬೇಗ ಬೇಗ ಊಟ ಮಾಡಬೇಕು -ಏಳಬೇಕು ಅಂದರು... ಹೀಗಾಗಿ ನಾ .......................... ೩ ಸಾರಿ ಹೋಗಿ ಕುಳಿತು ಊಟ ಮಾಡಿ ಬಂದೆ...!! ತಿರುಪತಿಗೆ ಹೋದಾಗ ಅಲ್ಲಿನ ಊಟದ ವ್ಯವಸ್ತೆ ನನಗೆ ಅಸ್ಟು ಸರಿ ಅನ್ನಿಸಲಿಲ್ಲ, ಅದ್ಕೆ ಕಾರಣ ಅಲ್ಲಿ ಸೀಮಿತ ಅವಧಿಯಲ್ಲಿ ಊಟ ಸಿಗುವುದು ಮತ್ತು ಅದು ಧರ್ಮಸ್ಥಳ- ಕುಕ್ಕೆಗೆ ಹೋಲಿಸಿದರೆ ಆಸ್ಟಕ್ಕಸ್ಟೆ...
ಧರ್ಮ ಕ್ಷೇತ್ರಗಳಿಗೆ ಹೋಗುವುದು ದರ್ಶನಕ್ಕೋ? ತಿನ್ನಲಿಕ್ಕೋ? ಎಂದು ನಮಗೆ ಪ್ರಶ್ನೆ ಹಾಕಿಕೊಂಡು ಸುಮ್ಮನಾದೆವು..!! ಊಟ ಮುಗಿಸಿ ಆದ ಮೇಲೆ ಬಸ್ಸು ಹತ್ತಿ ಕುಕ್ಕೆಗೆ ಹೋದೆವು...
ಅಲ್ಲಿ ಇಳಿದು ಮೊದಲು ಸೀದಾ ನದಿಗೆ ತೆರಳಿ ಸ್ನಾನ ಮಾಡಿ(ಆ ಚಳಿಗೆ ಹೆದರಿ ಯಾರೊಬ್ಬರೂ ನೀರಿಗೆ ಇಳಿಯಲಿಲ್ಲ..!! ನಾ ಒಬ್ಬನೇ ಸ್ನಾನ ಮಾಡಿದೆ) ಅಲ್ಲ್ಲಿಂದ ಸೀದಾ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸರತಿಯಲ್ಲಿ ನಿಂತು ದರ್ಶನ ಸಿಕ್ಕು , ಊಟದ ಸ್ಥಳಕ್ಕೆ ತೆರಳಿ ಊಟ ಮುಗಿಸಿ ಹೊರಗೆ ಬಂದು ಹುಲ್ಲು ಹಾಸಿನ ಮೇಲೆ ಕುಳಿತೆವು.... ಹಲವರು ಸರ್ಪ ದೋಷಾ ಪೂಜೆ ಮಾಡುತ್ತಿರುವುದು ಕಂಡೆವು... ಅಂದ್ ಹಾಗೆ ಧರ್ಮಸ್ಥಳ ಮತ್ತು ಕುಕ್ಕೆಗೆ ದರ್ಶನಕ್ಕೆ ಹೋದಾಗ- ದರ್ಶನಕ್ಕಾಗಿ ಅಲ್ಲಿ ವಸ್ತ್ರ ಸಂಹಿತೆ ಇರುವುದು- ನಾವ್ ಪ್ಯಾಂಟ್- ಶರ್ಟ್ ಹಾಕಿಕೊಂಡು ಹೋಗಿದ್ದೆವು... ಶರ್ಟ್ ಕಳಚಲು ಹೇಳಿದಾಗ ಅಚ್ಚರಿ ಆಯ್ತು,ಮತ್ತು ಅಲ್ಲಿನ ಹಲವರನ್ನು ಗಮನಿಸಿದಾಗ ಎಲ್ಲರೂ ಪಂಚೆ ಉಟ್ಟು ಹೆಗಲ ಮೇಲೆ ಒಂದು ಶಲ್ಯ ಹೊದ್ದಿರುವುದು ಕಾಣಿಸಿತು...
ಈ ವಿಷ್ಯವನ್ನು ನನಗೆ ನಮ್ಮ ಸ್ನೇಹಿತರು ತಿಳಿಸಿರಲಿಲ್ಲ..
ಊಟ ಮುಗಿಸಿ ಮತ್ತೆ ನದಿಗೆ ಸ್ನಾನಕ್ಕೆ ತೆರಳಿದೆವು ... ಆ ನೀರಲ್ಲಿ ಹಲವರು ಮೆಕ್ಕೆ ಜೋಳದ ಪಾಕೇಟ್ ಹರಿದು ಹಾಕುತ್ತಿದ್ದರು ಅದೇಕೆ? ಅಂತ ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬೇಜಾನ್ ಮೀನುಗಳು ಗ,ಾತ್ರದಲ್ಲಿ ಬಹು ದೊಡ್ಡವೆ ಕಾಣಿಸಿದವು... ಅವುಗಳು ಮನುಷ್ಯರ ಚಲನವಲನಕ್ಕೆ ಒಗ್ಗಿದಂತೆ ಕಂಡವು, ನೋಡುವ ಅಂತ ನಾವ್ ಒಂದು ಮೆಕ್ಕೆ ಜೋಳದ ಪಾಕೇಟ್ ಖರೀದಿಸಿ ಹರಿದು ನೀರಿಗೆ ಸುರಿಯಲು ಮೀನುಗಳ ಹಿಂಡೇ ಬಂತು, ಹಲವು ಮೀನುಗಳನ್ನು ಕೈನಲ್ಲಿ ಹಿಡಿದು ಮತ್ತೆ ನೀರಿಗೆ ಬಿಟ್ಟೆವು.. ಆ ಮಧ್ಯೆ ಒಬ್ಬರು ಒಂದು ಶಲ್ಯವನ್ನು ನೀರಲ್ಲಿ ಬಿಟ್ಟು ಕೆಲವು ಮೀನುಗಳನ್ನು ಆ ಶಲ್ಯದಲ್ಲಿ ಹಿಡಿದು ಎತ್ತಿದರು, ಆಗ ಕೆಲವರು ಬಂದು ಮೀನುಗಳಿಗೆ ತೊಂದರೆ ಕೊಡಬೇಡಿ ಅವನ್ನು ನೀರಿಗೆ ಬಿಡಿ ಎಂದರು......
ನಾವ್ ಸುಮಾರು ೩ ಘಂಟೆಗಳ ಕಾಲ ನೀರಲ್ಲಿ ಈಜು ಹೊಡೆದೆವು, ನೀರಲ್ಲಿ ಬಾಲ್ ಒಂದನ್ನು ಎಸೆಯುತ್ತಾ ಕ್ಯಾಚ್ ಹಿಡಿಯುವ ಆಟ ಆಡಿದೆವು...ಅಲ್ಲಿನ ನೀರೋ ಬಹು ಸ್ಪುಷ್ಟವಾಗಿದ್ದು ನೀರಲ್ಲಿ ಬಿದ್ದ ,ಬಟ್ಟೆ- ಬರೆ ಇತ್ಯಾದಿ ಕಾಣಿಸುತ್ತಿದ್ದವು... ಮರಳು ಸಹಾ..
ಒಮ್ಮೆ ನಾ ಒಬ್ಬನೇ ನಮ್ಮವರಿಂದ ದೂರ ಹೋಗಿ ಆ ಕಡೆ ಮರಗಳು ಇರುವ ಕಡೆ ಹೋಗುವ ಅಂತ ಹೋಗುತ್ತಿದ್ದೆ, ಅಲ್ಲಿ ಮದ್ಯೆ ಒಂದು ಕಲ್ಲಿನ ಗುಂಡು ಇತ್ತು ಅದರ ಮೇಲೆ ಕಾಲು ಇಟ್ಟು ಹತ್ತಲು ಹೋದರೆ ನೀರಿನ ಪ್ರಭಾವದಿಂದ ಅದಕ್ಕೆ ಪಾಚಿ ಕಟ್ಟಿ ಕಾಲು ಜಾರುತ್ತಿತ್ತು.... ಅದನ್ನು ದಾಟಿ ಮುಂದಕ್ಕೆ ಹೋಗ ಹೋದರೆ ಅಲ್ಲಿ ನೀರಿನ ಸೆಳವು ವಿಪರೀತ ಅನ್ನಿಸಿತು, ಕಾಲ ಕೆಳಗಿನ ಮರಳು ಮುಂದಕ್ಕೆ ಹರಿದು ಹೋಗುತ್ತಿತ್ತು, ಅಸ್ಟು ಅಗಲದ ನೀರಿನ ಮದ್ಯೆ ಒಂದು ಕಡೆ ಮಾತ್ರ ಸೆಳವು ಇರುವುದು ಅಚ್ಚರಿ ಆಯ್ತು... ಭಯವೂ ಆಯ್ತು, ಆಗಲೇ ನಮ್ ಹುಡುಗರು ಎಸೆದ ಚೆಂಡು ಆ ಸೆಳವು ಕಡೆ ಬಿತ್ತು, ಅದನ್ನು ಹಿಡಿಯಲು ಹೋದ ನಮ್ಮ ಸ್ನೇಹಿತನನು ತಡೆದೆ, ಬೇಡ ಅಲ್ಲಿ ಸೆಳವು ಇದೆ, ಬಾಲ್ ಹೋದರೆ ಹೋಗಲಿ, ಆಗಲೇ ಅವನು ಸೆಳವು ಹತ್ತಿರ ಹೋಗಿ ಖುದ್ದು ಅವನಿಗೆ ಆ ಅನುಭವ ಆಯ್ತು, ಅವನು -ನಾನು ಕಾಲು ಭದ್ರವಾಗಿ ಮರಳಿನಲ್ಲಿ ಇಡುತ್ತ ವಾಪಾಸ್ಸು ಬಂದೆವು, ನಮ್ಮಿಬ್ಬರ ಭಯ ಕಂಡು ಇನ್ನಿತರ ಸ್ನೇಹಿತರಿಗೆ ಅಚ್ಚರಿ.... ಅವರಿಗೆ ಆ ಬಗ್ಗೆ ಹೇಳಿ ಆ ಕಡೆ ಹೋಗಬೇಡಿ ಅಂದೆವು...
ದಡಕ್ಕೆ ಬಂದು ಕುಳಿತು ಸುಧಾರಿಸಿಕೊಂಡು ಮತ್ತೆ ವಾಪಸು ದೇವಸ್ಥಾನಕ್ಕೆ ಹೋಗುವುದು ಅಂತ ನಿರ್ಧರಿಸಿದೆವು ,,,
ಅಬ್ಬ ಏನು ಭಕ್ತಿ... ಅಂದಿರಾ?
ನಾವ್ ಹೊರಟಿದ್ದು ಮತ್ತ್ತೊಮ್ಮೆ ದರ್ಶನಕ್ಕೆ ಅಲ್ಲ....???
ಊಟಕ್ಕಾಗಿ...!!
ನಾವ್ ಹೋಗುವಾಗ ನದಿಯಲ್ಲಿ ಕೆಲವು ಜನ ಹುಡುಗರು ಆ ದಡ ಮುಟ್ಟಿ ಮರದ ಬೀಳಲುಗಳಲ್ಲಿ ತೇಲಾಡುತ್ತಾ ಆಟ ಆಡುತಿರುವುದು ಕಂಡೆವು.... ನದಿಯಿಂದ ಸಮೀಪದ ದೇವಸ್ಥಾನಕ್ಕೆ ನಡೆದೇ ಹೊರಟೆವು... ಊಟ ಮುಗಿಸಿ ಮತ್ತೆ ಬಿಸಿಲು ಕಾರಣವಾಗಿ ಮತ್ತು ,ಹೀಗೆ ಮುಕ್ತವಾಗಿ ಈಜಾಡಲು ಬೆಂಗಳೂರಲ್ಲಿ ಸ್ಥಳ ಸಿಕ್ಕೋದು ಕಸ್ಟ ಅಂತ ನದಿಗೆ ಈಜಲು ಮರಳಿ ಬಂದೆವು.... ನೀರಲ್ಲಿ ಒಬ್ಬನ ಮೇಲೆ ಒಬ್ಬನು ಹತ್ತಿ ಪಲ್ಟಿ ಹೊಡೆಯುವುದು ಇತ್ಯಾದಿ ಮಾಡಿದೆವು... ಬಹು ಹೊತ್ತು ಆಟ ಆಡುತ್ತಿರಲು ದಡದ ಮೇಲೆ ವಿಪರೀತ ಗದ್ದಲ ಗೌಜು ಆಗಿ ಅದ್ಯಾಕೆ ಅಂತ ನಾವ್ ನೋಡುವಾಗಲೇ ಹಲವು ಜನ ಪೊಲೀಸರು- ಈಜುಗಾರರು ಬಂದು ನಮ್ಮನ್ನೆಲ್ಲ ಆಚೆ ಬರಲು ತಿಳಿಸಿದರು....
ಯಾಕೆ?
ಏನಾಯ್ತು?
ಅಂತ ಯೋಚಿಸುತ್ತಾ ನಾವೆಲ್ಲ ಆಚೆ ಬಂದು ನಿಂತೆವು, ೨-೩ ಜನ ಈಜುಗಾರರು ನೀರಿಗೆ ದುಮುಕಿದರು, ಅವರು ನುರಿತ ಈಜುಗಾರರು ಅಂತ ಅವರು ಕ್ಷಣ ಮಾತ್ರದಲ್ಲಿ ಈಜುತ್ತಾ ಆ ದಡಕ್ಕೆ ಮುಟ್ಟಿದ್ದು ಮತ್ತೆ ವಾಪಸ್ಸು ಬರುತ್ತ ನೀರಲ್ಲಿ ಏನೋ ಹುಡುಕಾಡುತ್ತಿದ್ದುದು ಕಾಣಿಸಿತು.. ಅವರಿವರನ್ನು ಕೇಳಿದ ಮೇಲೆ ಗೊತ್ತಾಗಿದ್ದು, ನಾ ಮೊದಲು ಹೋಗಿದ್ದ ನೀರಿನ ಸೆಳವಿನ ಕಡೆ ಹೋದ ೪ ಜನ ಹುಡುಗರಲಿ ಇಬ್ಬರು ನೀರಲ್ಲಿ ಮುಳುಗಿ ಸತ್ತಿರುವರು ಅಂತ...... ನನಗೆ ಮತ್ತು ಇನ್ನೊಬ್ಬ ಸ್ನೇಹಿತನಿಗೆ ಬೆನ್ಣಲ್ಲಿ ಚಳಕು. ಕಾರಣ ಆ ನೀರಿನ ಸೆಳವು ಅರಿವು ಇಬ್ಬರಿಗೂ ಆಗಿತ್ತು...!!
ಪೊಲೀಸರು ಮತ್ತು ಈಜುಗಾರರ ಪ್ರಯತ್ನ ಸುಮಾರು ಹೊತ್ತು ವ್ಯರ್ಥ ಪ್ರಯತ್ನ ಆಯ್ತು, ಏನೂ ಸಿಗಲಿಲ್ಲ, ನೀರಿನ ಸೆಳವು ನುರಿತ ಈಜುಗಾರರಿಗೂ ಸವಾಲಾಗಿತ್ತು... ಆಗ ಒಂದು ಗಾಳಿ ತುಂಬಿದ ಟೂಬ್ ತರಿಸಿ ಅದಕ್ಕೆ ಹಗ್ಗ ಕಟ್ಟಿ ಒಂದು ತುದಿಯನ್ನ ಒಂದು ಕಡೆ ಭಧ್ರವಾಗಿ ಕಟ್ಟಿ ಟ್ಯೂಬ್ ಸೊಂಟಕ್ಕೆ ಸಿಕ್ಕಿಸಿಕೊಂಡು ಈಜುಗಾರರು ನೀರಿಗೆ ಇಳಿದರು... ನೀರಲ್ಲಿ ಎಲ್ಲ ಕಡೆ ಇಣುಕಿ ನೋಡಿದ ಅವರಿಗೆ ಒಂದು ಕಡೆ ಒಂದು ದೇಹ ಕಾಣಿಸಿ ಮೇಲೆ ಬಂದು ಆ ಬಗ್ಗೆ ಹೇಳಿದರು, ಆದರೆ ಆ ಶವವನ್ನು ಎತ್ತಿ ತರಲು ನೀರಿನ ಸೆಳವು ಕಾರಣ ಆಗಲಿಲ್ಲ ಮತ್ತು ಸೆಳವು ಕಾರಣವಾಗಿ ಶವ ಮುಂದಕ್ಕೆ ಹೋಗುತ್ತಿತ್ತು.. ಒಂದು ಉದ್ಧ ಕೋಲು ತರಿಸಿ ಅದನ್ನು ಈಜುಗಾರನೊಬ್ಬ ಆ ಶವದ ಬನೀನಿನ ಒಳಗೆ ತೂರಿಸಿ ಆ ದೇಹವನ್ನು ಎತ್ತಿಕೊಂಡು ಬಂದ... ಆದುವರೆಗೂ ನಮಗೆ ಅದೊಂದು ಅಣುಕು ಪ್ರದರ್ಶನ ಅನ್ನಿಸಿತ್ತು(ಅಪಘಾತ ಅವಘಡ ಬಗ್ಗೆ ಹೀಗೆ ಅಣುಕು ಪ್ರದರ್ಶನ ಇರುವುದಲ್ಲ) ಆದ್ರೆ ಆ ಶವವನು ನೋಡಿ ಮೈ ಅದುರಿತು...... ಬರೀ ಒಂದು ಕೋಲಿನಲ್ಲಿ ಆ ಶವವನ್ನು ಎತ್ತಿಕೊಂಡು ಬಂದಿದ್ದು ಅಚ್ಚರಿ ಆಯ್ತು, ಭಾರದ ದೇಹವನ್ನು ಹೇಗೆ ತರಲು ಸಾಧ್ಯ ಅನ್ನಿಸಿತು, ಆದರೆ ಸತ್ತ ಮೇಲೆ ದೇಹ ಹಗುರಾಗುವುದು ಅಂತ ಯಾರೋ ಹೇಳಿದರು.
ಶವವನ್ನು ದಡ್ದಲ್ಲಿ ಮಲಗಿಸಿದಾಗ ನೋಡಿದೆವು, ಅಲ್ಲಲ್ಲಿ ಮೀನುಗಳು ತಿಂದಿದ್ದ ಚರ್ಮ, ತೆರೆದ ಕಣ್ಣುಗಳಲ್ಲಿ . ಯಾವುದೋ ಭಯಾನಕ ದೃಶ್ಯ ನೋಡಿದಂತೆ ಭಾವ, ಒಂದು ಕೈಯನ್ನು ಎದೆಗೆ ಹಿಡಿದು ಇನ್ನೊಂದು ಕೈಯನ್ನು ಎತ್ತಿ ಹಿಡಿಡಿದ್ದ ಸುಮಾರು ೨೫-೨೬ ವರ್ಷದ ಯುವಕ... ಅಂತ ತಿಳಿಯಿತು.. ಭಯ ಮತ್ತು ನೀರು ಕುಡಿದು ಸತ್ತಿರುವನು ಅಂತಲೂ ತಿಳಿಯಿತು..(ಪೊಲೀಸರ ಜೊತೆ ಬಂದಿದ್ದ ಡಾಕ್ಟರ್ ಶವ ನೋಡುತ್ತಲೇ ಹೇಳಿದರು).. ಇನ್ನೊಂದು ಶವಕ್ಕಾಗಿ ಹುಡುಕಾಟ ನಡೆದಿತ್ತು ಕತ್ತಲಾಯ್ತು , ನಾಳೆಗೆ ಹುಡುಕೋಣ ಅಂತ ಆ ಶವವನ್ನು ಮರಣೋತ್ತರ ಪರೀಕ್ಷೆಗೆ ಒಯ್ದರು.. ಅವನ ಮುಖ ನಂಗೆ ಜ್ಞಾಪಕಕ್ಕೆ ಬಂತು, ನಾವ್ ದೇವಸ್ಥಾನಕ್ಕೆ ಹೋಗುವಾಗ ನೋಡಿದ ಕೆಲವು ಹುಡುಗರು ಇವರೇ, ಇವರೇ ಆ ದಡವನ್ನು ಮುಟ್ಟಿ ಮರದ ಬೀಳಲುಗಳಲ್ಲಿ ಆಟ ಆಡುತ್ತಿದ್ದವರು.. ಅವರಲ್ಲಿನ ಇಬ್ಬರೇ ಆ ನೀರಲ್ಲಿ ಮುಳುಗಿದವರು.... ಆದರೆ ಈಜು ಬರುತ್ತಿದ್ದ ಆ ಇಬ್ಬ್ರು ನೀರಲ್ಲಿ ಮುಳುಗಿ ಸತ್ತದ್ದು ನಂಬಲು ಕಸ್ಟ ಆಯ್ತು...
ನನಗೆ ಅನ್ನಿಸಿದ್ದು.
ಮತ್ತೆ ವಾಪಸ್ಸು ಮರಳಿ ಈ ಕಡೆ ಬರುವಾಗ ನೀರಿನ ಸೆಳವಿಗೆ ಭಯ ಬಿದ್ದು ಈಜು ಮರೆತೋ ಅಥವಾ ನೀರು ತಮ್ಮನ್ನು ಎಳೆದು ಹೊಯ್ಯುವಾಗ ಭಯ ಪಟ್ಟು ಹೃದಯ ಸ್ತಬ್ಧ ಆಗಿರಬೇಕು... ಇಲ್ಲವೇ ಇನ್ನಿತರ ಹುಡುಗರು, ಹುಡುಗಾಟ ಆಡುತ್ತಾ ಇಬ್ಬರನ್ನು ಮುಳುಗಿಸಿ ಹಿಡಿದರೆ? ಅಂತ......
ಹೀಗೆ ಕುಕ್ಕೆ -ಧರ್ಮಸ್ಥಳಕ್ಕೆ ರೈಲು ಟ್ರಾಕ್ ಮೇಲೆ ನಡೆಯುತ್ತಾ ವಿಶಿಷ್ಟ ಅನುಭವ ಪಡೆದು ಸಂತೋಷಗೊಂಡ ನಾವು ಕೊನೆಯಲ್ಲಿ ಈ ದುರಂತಕ್ಕೆ 'ಸಾಕ್ಷಿ' ಆಗಿ ಭಾರದ ಮನಸ್ಸಿನಿಂದ ವಾಪಸ್ಸು ಕುಕ್ಕೆ ಸುಬ್ರಮಣ್ಯ ರೋಡ್ ಗೆ ಬಂದು ಅಲ್ಲಿ ರೈಲು ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡು ಮರಳಿ ಟ್ರೇನ್ನಲ್ಲಿ ಬೆಂಗಳೂರಿಗೆ ಬಂದೆವು.....
ಈ ದುರಂತ ವಿಚಾರವನ್ಣ ಯಾರಿಗೂ ಮನೆಯಲ್ಲಿ ಹೇಳಬೇಡಿ ಅಂತ ಹೇಳಿ ಎಲ್ಲರೂ ವಾಗ್ಧಾನ ಮಾಡಿದ್ದರೂ ,ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಈ ವಿಷ್ಯವನ್ನು ಹೇಳಿದ್ದರು...
ಹಾಗೆ ನಾ ಸಹ....!!
ಮಾರನೆ ದಿನ ಪತ್ರಿಕೆಯಲ್ಲಿ ಸುದ್ಧಿ ಬಂದಿತ್ತು-
ಬೆಂಗಳೂರಿನ ನೀರಲ್ಲಿ ಮುಳುಗಿ ಶ್ರೀನಗರದ ಇಬ್ಬರು ಯುವಕರ ಮರಣ ಅಂತ, ಹಾಗೆಯೇ ನೀರಲ್ಲಿ ಇಬ್ಬರು ಮುಳುಗಿ ಸತ್ತದ್ದು ಗೊತ್ತಾಗಿ ಆ ವಿಷ್ಯವನ್ನ್ನು ಯಾರಿಗೂ ಹೇಳದೇ ಹೆಚ್ಚು- ಕಡಿಮೆ ಬೆಂಗಳೂರು ಸಮೀಪ ಬಂದಿದ್ದ ಸತ್ತವರ ಸ್ನೇಹಿತರು, ಸತ್ತವರ ಮನೆಯಿಂದ ಫೋನು ಬಂದು ಏನೇನೋ ಹೇಳಿ ,ಅವರು ಸಂದೇಹ ಪಟ್ಟು ಕೆದಕಿದಾಗ ಈ ವಿಷ್ಯ ಬಾಯೀ ಬಿಟ್ಟಿದ್ದರು...
ಸತ್ತವರ ಸಂಬಂಧಿಗಳು ಕುಕ್ಕೆಗೆ ದೌಡಾಯಿಸಿದ್ದರು........
ಧರ್ಮಸ್ಥಳದಲ್ಲಿ ಸ್ನಾನ ಮಾಡುವಾಗ ಅಲ್ಲಿ ಅಪಾಯಕಾರಿ ಸೆಳವು- ಸ್ಥಳ ಯಾವುದೂ ಇರಲಿಲ್ಲ ಅಲ್ಲಿಯೂ ಯತೇಚ್ಹ ನೀರಿನ ಆಟ ಆಡಿದ್ದೆವು, ಅಲ್ಲಿ ಕಲ್ಲುಗಳು ಜಾಸ್ತಿ ಇದ್ದವು... ಆದರೆ ಕುಕ್ಕೆಯಲ್ಲಿ ಕಣ್ಣಿಗೆ ಸುಮಾರಾಗಿ ಕಾಣಿಸುವ ಆ ನೀರು ಹರಿಯುವ ಪ್ರದೇಶದಲ್ಲಿ ಆ ಕಡೆ ಮರ ಗಿಡ ಬೆಳೆದಿರುವ ಕಡೆ ಸೆಳವು ಇದೆ.. ಆ ದುರ್ಘಟನೆ ಮೊದಲನೆಯದು ಅಲ್ಲ, ಅಲ್ಲಿ ಅದಾಗಲೇ ಸುಮಾರು ಜನ ಅಲ್ಲಿನವರ ಮಾತು ಕೇಳದೆ ಎಚ್ಚರಿಕೆ ಕಿವಿಗೆ ಹಾಕಿಕೊಳ್ಳದೆ ನೀರಲ್ಲಿ ಮುಳುಗಿ ಸತ್ತಿರುವರು ಅಂತ ಗೊತ್ತಾಯ್ತು..... ಹಾಗೆ ಅಕಸ್ಮಾತ್ತಾಗಿ ನೀರಲ್ಲಿ ಮುಳುಗುವವರನ್ನು ರಕ್ಷಿಸಲೆಂದು ಅಲ್ಲಿ ಸದಾ ೨-೩ ಜನ ಈಜುಗಾರರರು -ಕಾವಲು ಕಾಯುವವರು, ದಡದಲ್ಲಿ ಕುಳಿತು ಗಮನ ಹರಿಸುವರು.. ಅವತ್ತು ಆ ಘಟನೆ ಆದಾಗ ಅವರು ಬಹುಶ ಊಟಕ್ಕೆ ಹೋಗಿದ್ದರು ಅನ್ನಿಸುತ್ತೆ... ಈಗ ಸುಮಾರು ೩-೪ ತಿಂಗಳ ಹಿಂದೆ ಕುಕ್ಕೆಗೆ ಹೋಗಿದ್ದ ನಮ್ಮ ಸಂಬಂಧಿ ಹೇಳಿದ ಪ್ರಕಾರ ಈಗ ಅಲ್ಲಿ ಒಂದು ಹಂತದವರೆಗೆ ಮಾತ್ರ ಸ್ನಾನ ಮಾಡಲು(ಈಜು ಹೊಡೆಯಲು ಅಲ್ಲ..!!) ಜಾಗ ಬಿಟ್ಟು ಸೆಳವು ಶುರು ಆಗುವ ಸ್ಥಳಕ್ಕೆ ಮುಂಚೆಯೇ ಜಾಲರಿ ಹಾಕಿ ತಡೆ ನಿರ್ಮಿಸಿರುವರು ಅಂತ......
ಈಗಲೂ ದಿನ ನಿತ್ಯ ನಾವೆಲ್ಲಾ ಓದುತ್ತಿರುತ್ತೇವೆ- ನೀರಲಿ ಮುಳುಗಿ ಸಾವು ಅಂತ-
ಮೊನ್ನೆ ಮೊನ್ನೆ ಆ ಬಗ್ಗೆ ಸುದ್ಧಿ ಬಂದಿತ್ತು- ಇಬ್ಬರು ವಿದೇಶೀಯರು ,ಕಾವೇರಿ ನೀರಲ್ಲಿ ಮುಳುಗಿದ್ದರು ಅಂತ...
ನೀರಲ್ಲಿಯ ಮರಣಕ್ಕೆ ಕುಖ್ಯಾತವಾದ- ಕುಖ್ಯಾತಿ ಗಳಿಸಿದ ಸ್ಥಳಗಳಲ್ಲಿ ಮೊದಲ ಸ್ಥಾನ- ನಿಮ್ಮ ಊಹೆ ನಿಜ.......
ಅದು ಮುತ್ತತ್ತಿ ...:(((
ನೀರಿಗೆ ಇಳಿಯುವವರನ್ನು ಎಚ್ಚರಿಸಲು ಅಲ್ಲಲ್ಲಿ ಬೋರ್ಡ್ ಹಾಕಿ ಜಾಹೀರಾತು ಕೊಟ್ಟು ಎಚ್ಚರಿಸಿದರೂ, ಮೋಜು ಮಸ್ತಿ ಅಂತ ನೀರಿಗೆ ಬೀಳುವವರು- ಕುಡಿದು ನೀರಿಗೆ ಇಳಿಯುವವರು ತಮಗಾಗಿ ದೂರದಲ್ಲಿ ಬಂಧು ಮಿತ್ರರು ಕಾಯ್ತಿರುವರು ಎನ್ನುವುದನ್ನು ಮರೆಯಬಾರದು...
ನಮ್ಮ ಜೀವ ನಮ್ಮ ಕೈನಲ್ಲಿ-ಸತ್ಯ-ಇಂಥ ಸ್ಥಳಗಳಲ್ಲಿ...!!
ಆ ದುರ್ಘಟನೆಗೆ ಸಾಕ್ಷಿ ಆದ ನಾವ್ ಆಮೇಲೆ ಯಾವ ಟ್ರಿಪ್ ಸಹಾ ಹೋಗಿಲ್ಲ...
ಈಗಲೂ ಹೋಗುವ ಅಂದರೆ ಹಲವರಿಗೆ ಅದೇ ನೆನಪು ಬರುವ್ದು ಮನ ಹಿಂಜರಿಯುವುದು...!!
..............ಮುಗಿಯಿತು.................
ಚಿತ್ರ ಮೂಲಗಳು....
www.holidayiq.com/uploadimages/Dharamshala-9129_6.JPG
2.bp.blogspot.com/_zxhBUOj1uOw/RoPiE7LFrZI/AAAAAAAAADw/m0pRtqrfVZ8/s320/Image(027).jpg
t0.gstatic.com/images
farm8.staticflickr.com/7027/6503891551_0be657f27c_z.jpg
ಕುಕ್ಕೆ ಸುಬ್ರಮಣ್ಯ ದೇವಸ್ಥಾನಾದ ವೆಬ್ಸೈಟ್ : www.kukketemple.com/
ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದ ವೆಬ್ಸೈಟ್ : www.shridharmasthala.org/
Comments
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by kamath_kumble
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!@ವೆಂಕಟೇಶ್ ಅವ್ರೆ
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by sathishnasa
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ಸತೀಶ್ ಅವ್ರೆ .
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by Chikku123
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ಚೇತನ್ ಅವ್ರೆ
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by Jayanth Ramachar
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ಜಯನ್ಥ್ ಅವ್ರೆ
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by pkumar
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ಪ್ರಭು ಅವ್ರೆ
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by veena wadki
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ವೀಣಾ ಅವ್ರೆ-
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ವೀಣಾ ಅವ್ರೆ- by venkatb83
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ವೀಣಾ ಅವ್ರೆ-
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ವೀಣಾ ಅವ್ರೆ- by veena wadki
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ.@ವೀಣಾ ಅವ್ರೆ-
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by H A Patil
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ..@ಹಿರಿಯರೇ-
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by makara
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ..@ಶ್ರೀಧರ್ ಜೀ-
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ...
In reply to ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ... by partha1059
ಉ: ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!@ಗುರುಗಳೆ..