ಸಖೀ ಗೀತ
ಎನ್ನ ಸುತ್ತ
ಸುಳಿಯುವ ಗಾಳಿಯೂ
ಎನ್ನ ಸಖಿಯ
ಮುಂಗುರುಳ ನೇವರಿಸಿ
ಅವಳು ಮುಡಿದ
ಮಲ್ಲಿಗೆಯ ಕಂಪನು
ಹೊತ್ತು ತಂದು
ಮೈಸೋಕಿ ಬಂದಿರುವ
ಸಂಗತಿಯ ಪಿಸುಮಾತಿನಲಿ
ಉಲಿಯುತಿದೆ...
ಅವಳ
ಸವಿ ನೆನಪಿನಲ್ಲಿಯೇ
ಪುಳಕಗೊಂಡಿರುವ
ಮೈ-ಮನಗಳು
ದೂರದಿಂದಲೇ ಕೇಳುವ
ಅವಳ ಸವಿಗಾನದ
ಭಾವತರಂಗಗಳಿಗೆ
ಅಕ್ಷರಗಳ ರೂಪವಿಟ್ಟು
ಕವಿತೆಯಾಗಿಸಿವೆ.....
Rating