ಸ(ತ್ತ)ಮಾಧಾನ
ಹೊಸದಾಗಿ ಓಪನ್ ಆದ ಮಾಲ್ನಲ್ಲಿ, ಹೊಸದಾದ ಬ್ರ್ಯಾಂಡೆಡ್ ಶರ್ಟ್ ಖರೀದಿಸಿ, ಒಮ್ಮೆ ಆಫೀಸ್ಗೆ ಹಾಕಿಕೊಂಡು, ಬೀಗುತ್ತಾ ಮನೆಗೆ ಬಂದು ಬಿಚ್ಚಿಟ್ಟ ನನಗೆ , ಮರುದಿನ ಅದನ್ನು ಒಗೆದ ನನ್ನ ಪತ್ನಿ, ಅದನ್ನು ಮಿಕ್ಸರ್ / ಗ್ರೈಂಡರ್ ಒರೆಸುವ ವಸ್ತ್ರವನ್ನಾಗಿ ಬದಲಾಯಿಸಿದ ಚಾಣಾಕ್ಷ್ಯತನವನ್ನು ಕಂಡು, ನೆಲವೇಕೆ ಇನ್ನೂ ಬಾಯಿ ತೆರೆದಿಲ್ಲ ಅನ್ನಿಸಿತು. ಅದರಿಂದ ಪ್ರೇರಣೆಗೊಂಡ ನನ್ನ ಕುವರ , ಅದೇ ಮಾಲ್ನಿಂದ ತಂದ ಮೊಬೈಲ್ ಅನ್ನು "ನಿಮ್ಮ ಹಳೆ ಮೊಬೈಲ್ಗೆ ಹೀಗೂ ಗುಡ್ ಬೈ ಹೇಳಬಹುದು" ಎಂಬ ಗಾದೆ ಮಾತಿನಂತೆ ಅದಕ್ಕೆ ಗುಡ್ ಬೈ ಹೇಳಿದ್ದ. ಇವರಿಬ್ಬರ ಕೆಲಸದಿಂದ ಪ್ರೇರಿತವಾದ ನಮ್ಮ ಮನೆಯ ಮುದ್ದಿನ ನಾಯಿ, ಅದೇ ಮಾಲ್ನಿಂದ ತಂದ ನನ್ನ ಶೂ ಒಯ್ದು ಅದರ ತಲೆದಿಂಬಾಗಿಸಿದ ಪರಿ ನೋಡಿ, ಬಹುಶಃ ಮಾಲ್ನ ವಾಸ್ತು ಸರಿಯಾಗಿ ಇಲ್ಲವೆಂದು ನಂಗೆ ನಾನೇ ಸಮಾಧಾನ ಪಡಬೇಕಾಯ್ತು:))))
Rating
Comments
ಉ: ಸ(ತ್ತ)ಮಾಧಾನ:ಒಮ್ಮೊಮ್ಮೆ ಹೀಗೂ...??