ಸತ್ಯದ ಹಾದಿ (ಶ್ರೀ ನರಸಿಂಹ 64)
ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು
ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು
ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು
ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು
ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ
ಬಾಳ ಬೇಕಿಹುದಿಂದು ಸಜ್ಜನರು ಕಪಟತೆಯ ಜಗದಿ
ಅಡೆ ತಡೆಗಳೇನಾದರಿರಲಿ ಜೇವನದ ಹಾದಿಯಲಿ
ಸತ್ಯದ ಹಾದಿ ಬಿಡೆನೆಂಬ ಛಲವಿರಬೇಕು ಮನಸಲಿ
ಸತ್ಯದ ಹಾದಿಯಲಿರುವವರ ಜಗವು ಜರಿದು ನಿಂದಿಸಿದರು
ಕೈಬಿಡದೆ ನಿನ್ನ ಸಲಹುವ ಶ್ರೀನರಸಿಂಹ ನೀ ಮರೆಯದಿರು
Rating
Comments
1. ಪುರಂದರದಾಸರ 'ಸತ್ಯವಂತರಿಗಿದು
1. ಪುರಂದರದಾಸರ 'ಸತ್ಯವಂತರಿಗಿದು ಕಾಲವಲ್ಲ' ನೆನಪಿಸುತ್ತಿದೆ.
2. ಹಲ್ಲುಗಳ ನಡುವೆ ನಾಲಿಗೆ ಇದ್ದರೂ ನಾಲಿಗೆಯಿಂದ ಹೊರಬರುವ ಮಾತುಗಳು ಹಲ್ಲುಗಳನ್ನೇ ಉದುರಿಸಬಲ್ಲ ಶಕ್ತಿ ಹೊಂದಿವೆ. ಸುಂದರ ಸಾಲುಗಳಿಗೆ ಧನ್ಯವಾದಗಳು, ಸತೀಶರೇ.
In reply to 1. ಪುರಂದರದಾಸರ 'ಸತ್ಯವಂತರಿಗಿದು by kavinagaraj
"ಹಲ್ಲುಗಳ ನಡುವೆ ನಾಲಿಗೆ ಇದ್ದರೂ
"ಹಲ್ಲುಗಳ ನಡುವೆ ನಾಲಿಗೆ ಇದ್ದರೂ ನಾಲಿಗೆಯಿಂದ ಹೊರಬರುವ ಮಾತುಗಳು ಹಲ್ಲುಗಳನ್ನೇ ಉದುರಿಸಬಲ್ಲ ಶಕ್ತಿ ಹೊಂದಿವೆ." ಸತ್ಯವಾದ ಮಾತು ನಾಗರಾಜ್ ರವರೇ ಧನ್ಯವಾದಗಳೊಂದಿಗೆ......ಸತೀಶ್
In reply to "ಹಲ್ಲುಗಳ ನಡುವೆ ನಾಲಿಗೆ ಇದ್ದರೂ by sathishnasa
ಬಹು ಹಿಂದೆ ಈ ರೀತಿ ಓದಿದ ನೆನಪು
ಬಹು ಹಿಂದೆ ಈ ರೀತಿ ಓದಿದ ನೆನಪು
ಜೀವನದಲ್ಲಿ ಯಶಸ್ಸು ಗಳಿಸಲು-ಸನ್ಮಾರ್ಗದಲ್ಲಿ ನಡೆಯಲು ಎರಡು ದಾರಿ ಎಂದು
೧.ಸತ್ಯದ ದಾರಿ -ಕಷ್ಟ ಕಾರ್ಪಣ್ಯ -ಅಡಿಗಡಿಗೆ ಹಲವು ವಿಘ್ನಗಳು ಆತಂಕಗಳು-ಆದರೆ ಅಂತ್ಯದಲ್ಲಿ ಜಯ-ಯಶಸ್ಸು..
೨.ಸುಳ್ಳು ಪೊಳ್ಳು ಮೋಸದ ದಾರಿ....ಭಲೇ ಸರಳ ಆದರೆ ಅನೈತಿಕ ಆಕ್ರಮದ್ದು....ಜಯ ಗಳಿಸಿದರೂ ಅಂಥಕರಣದಲ್ಲಿ ಒಂಥರಾ ಕೀಳರಿಮೆ-ಭಯ-ಅಪರಾಧ ಭಾವ ಮೂಡಿಸುವಂತದ್ದು ...!!
ಇದನ್ನು ನಿಮ್ಮೀ ಬರಹದಲಿ ಸರಳವಾಗಿ ಸೊಗಸಾಗಿ ಹೇಳಿರುವಿರಿ...
ಈ ನಡುವೆ ಈ ತರಹದ ಬರಹಗಳು ನಿಮ್ಮಿಂದ ಬಹಳ ದಿನಗಳ ಅಂತರದಲ್ಲಿ ಬರುತ್ತಿವೆ...!!
ಶುಭವಾಗಲಿ...
\।
In reply to ಬಹು ಹಿಂದೆ ಈ ರೀತಿ ಓದಿದ ನೆನಪು by venkatb83
ಧನ್ಯವಾದಗಳು ವೆಂಕಟೇಶ್ ರವರೆ
ಧನ್ಯವಾದಗಳು ವೆಂಕಟೇಶ್ ರವರೆ
.....ಸತೀಶ್
ಸತೀಶ್ ಅವರೆ,
ಸತೀಶ್ ಅವರೆ,
ನಮ್ಮ ಮಿತ್ರನೊಬ್ಬ ವಿಡಂಬನಾತ್ಮಕವಾಗಿ ಹೇಳುತ್ತಿದ್ದದ್ದು ಹೀಗೆ: ಬದುಕಿದರೆ ವಿಲನ್ ತರಹ ಬದುಕಬೇಕು. ಏಕೆಂದರೆ ಹೀರೋ ಪ್ರಾರಂಭದಲ್ಲಿ ಮತ್ತು ಕೊನೆಯ ಸೀನಿನಲ್ಲಿ ಮಾತ್ರ ಸಂತೋಷದಿಂದಿರುತ್ತಾನೆ. ಅದೇ ವಿಲನ್ ಕಡಯವರೆಗೂ ಸಂತೋಷದಿಂದ ಇರುತ್ತಾನೆ ಕಡೆಯ ಸೀನ್‌ನಲ್ಲಿ ಸಾಯುತ್ತಾನೆ ಇಲ್ಲಾ ತಪ್ಪಾಯಿತೆಂದು ಒಪ್ಪಿಕೊಂಡರೆ ಅವನಿಗೆ ಯಾವುದೇ ವಿಧವಾದ ಕಷ್ಟವಿಲ್ಲ. ಆದ್ದರಿಂದ ವಿಲನ್ ರೀತಿ ಬದುಕಬೇಕೆನ್ನುವುದೇ ಒಳ್ಳೆಯದು. ಈ ಮಾತನ್ನು ಯಾವುದೋ ಒಂದು ಲೇಖನದ ಪ್ರತಿಕ್ರಿಯೆಗೆ ಬರೆದಿದ್ದೆ ಆದರೂ ಇದನ್ನು ಸಪ್ತಗಿರಿಯವರ ಪ್ರತಿಕ್ರಿಯೆ ಪುನಃ ನೆನಪಿಸಿತು. ಅದು ಏನೇ ಇರಲಿ, ಒಳ್ಳೆಯರಾಗಿ ಬಾಳಿದರೆ ಫಸ್ಟ್ ಹಾಫಿನಲ್ಲಿ ಕಷ್ಟವಾದರೂ ಸಹ ಸೆಕೆಂಡ್ ಹಾಫಿನಲ್ಲಿ ಸುಖವಿರುತ್ತದೆ ಎನ್ನುವುದು ದಿಟ (ಉಪ್ಪಿಯ ಮಾತುಗಳಲ್ಲಿ).
In reply to ಸತೀಶ್ ಅವರೆ, by makara
"ನಮ್ಮ ಮಿತ್ರನೊಬ್ಬ
"ನಮ್ಮ ಮಿತ್ರನೊಬ್ಬ ವಿಡಂಬನಾತ್ಮಕವಾಗಿ ಹೇಳುತ್ತಿದ್ದದ್ದು ಹೀಗೆ: ಬದುಕಿದರೆ ವಿಲನ್ ತರಹ ಬದುಕಬೇಕು. ಏಕೆಂದರೆ ಹೀರೋ ಪ್ರಾರಂಭದಲ್ಲಿ ಮತ್ತು ಕೊನೆಯ ಸೀನಿನಲ್ಲಿ ಮಾತ್ರ ಸಂತೋಷದಿಂದಿರುತ್ತಾನೆ. ಅದೇ ವಿಲನ್ ಕಡಯವರೆಗೂ ಸಂತೋಷದಿಂದ ಇರುತ್ತಾನೆ ಕಡೆಯ ಸೀನ್‌ನಲ್ಲಿ ಸಾಯುತ್ತಾನೆ ಇಲ್ಲಾ ತಪ್ಪಾಯಿತೆಂದು ಒಪ್ಪಿಕೊಂಡರೆ ಅವನಿಗೆ ಯಾವುದೇ ವಿಧವಾದ ಕಷ್ಟವಿಲ್ಲ. ಆದ್ದರಿಂದ ವಿಲನ್ ರೀತಿ ಬದುಕಬೇಕೆನ್ನುವುದೇ ಒಳ್ಳೆಯದು." ಇದನ್ನೆ ಈಗ ಹೆಚ್ಚು ಜನ ಅಳವಡಿಸಿಕೊಂಡಿದ್ದಾರೆ ಅನಿಸುತ್ತದೆ ಶ್ರೀಧರ್ ರವರೇ. ಧನ್ಯವಾದಗಳೊಂದಿಗೆ
..........ಸತೀಶ್