ಸತ್ಯ-ಮಿಥ್ಯ (ಶ್ರೀ ನರಸಿಂಹ 77)

ಸತ್ಯ-ಮಿಥ್ಯ (ಶ್ರೀ ನರಸಿಂಹ 77)

ಕಣ್ಣೆಗೆ  ಕಾಣುತಿಹ ನೋಟವದು ಸತ್ಯವೆಂದೆನಿಸುವುದು

ಒಳಹೊಕ್ಕು ನೋಡಲದೊಮ್ಮೊಮ್ಮೆ ಮಿಥ್ಯವಾಗಿಹುದು

ದೂರದಲಿ ನಿಂತು ನೋಡಲು ಸುಂದರವು ನದಿ ಹರಿವು

ಕಾಣಿಸದು ಕಣ್ಣಿಗೆ ನದಿಯೊಳಗಿರುವ ಸುಳಿಯ ಇರುವು

 

ಹೊರ ನಡೆ, ನುಡಿ ನೋಡುತಲಿ ಯಾರನು ನಂಬದಿರು

ಕೆಡುಕು ತುಂಬಿರಬಹುದವರ ಮನದಲಿ ಎಚ್ಚರವಾಗಿರು

ಕಪಟತೆಯೆ ತುಂಬಿಹುದು ಅಧಿಕವಾಗಿಂದು ಈ ಜಗದಿ

ಪರಿಕಿಪದೆ ನಂಬದಿರಾರನು,ಯಾವುದನು ನೀನು ಭರದಿ

 

ಮರಳುಗಾಡಿನಲಿ ಬಿಸಿಲ್ಗುದರೆಯ ತೆರದಿ ಜಗದಲೆಲ್ಲವು ಮಿಥ್ಯ

ಇದನರಿಯೇ ಅನವರತ ಜಪಿಸು ಶ್ರೀನರಸಿಂಹ ನಾಮವ ನಿತ್ಯ

Rating
No votes yet

Comments

Submitted by lpitnal Sat, 01/11/2014 - 21:06

ಸತೀಶ ರವರೇ, ಕವನ,' ಸತ್ಯ ಮಿಥ್ಯ' ಗಳು ಮನಸ್ಸಿಗೆ ಮುದನೀಡುವ, ಮೆಸೇಜ್ ಹೊಂದಿರುವ ಉತ್ತಮ ಸಾಲುಗಳನ್ನು ಒಳಗೊಂಡು, ಚನ್ನಾಗಿವೆ. ಧನ್ಯವಾದಗಳು

Submitted by nageshamysore Sun, 01/12/2014 - 06:55

ಸತೀಶರೆ, ತಟ್ಟನೆ ನಾಣ್ಣುಡಿ / ಗಾದೆ ಮಾತುಗಳನ್ನು ನೆನಪಿಸಿತು ಕವನದ ಪಾದಗಳು (ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು, ಹೊರಗೊಂದು ಒಳಗೊಂದು, ಮೃಗತೃಷ್ಣಾ). ಚೆನ್ನಾಗಿದೆ. ಇಷ್ಟರಲ್ಲೆ ಶ್ರೀ ನರಸಿಂಹ ಶತಕವಾಗುವಂತೆ ಕಾಣಿಸುತ್ತಿದೆ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by sathishnasa Sun, 01/12/2014 - 21:07

In reply to by nageshamysore

ಧನ್ಯವಾದಗಳು ನಾಗೇಶ್ ರವರೇ >> ಇಷ್ಟರಲ್ಲೆ ಶ್ರೀ ನರಸಿಂಹ ಶತಕವಾಗುವಂತೆ ಕಾಣಿಸುತ್ತಿದೆ :-)<< ಶ್ರೀ ನರಸಿಂಹನ ಇಚ್ಚೆ, ಪ್ರೇರಣೆ ಮತ್ತೆ ನಿಮ್ಮಂತವರ ಹಾರೈಕೆ ಇದ್ದಲ್ಲಿ ಶತಕ ವಾಗಬಹುದೇನೋ ಮತ್ತೊಮ್ಮೆ ಧನ್ಯವಾದಗಳೊಂದಿಗೆ.........ಸತೀಶ್