ಸತ್ಯ

ಸತ್ಯ

ಸತ್ಯ, ಶಾಂತಿ, ತ್ಯಾಗ,ನ್ಯಾಯ,
ಪರೋಪಕಾರ, ದಯೆ, ಕರುಣೆ,
ದಾನ, ದರ್ಮ, ಪ್ರೀತಿ,ಪ್ರೇಮ,
ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದ
ವ್ಯವಸ್ಥಿತವಾಗಿ ನಡೆಯೋದಕ್ಕೆ.
ಮಾತ್ರ.
ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿ
ಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.
ಮುಗ್ದರ ಸವಾರೀ ಮಾಡೋಕಲ್ಲ

ಚಿಕ್ಕ ಮೀನನು ,ದೊಡ್ಡ ಮೀನು ನುಂಗುವ
ಈ ಜಗತ್ತಲ್ಲಿ
ಇಂದು ಕಾಣುತ್ತಿರೋದು
ಈ ಎಲ್ಲದರ ಹೆಸರಲ್ಲಿ
ನಡೆಯೋ ಶೋಷಣೆ

ಅರೆ! ಬಿಚ್ಚಿಬಿಡಿ
ಮನಸ್ಸು ಹೊರಡಲಿ,ಹಾರಾಡಲಿ,
ಕಲಾ ಕಲ್ಪನೆಯ ಕುದುರೆಯನ್ನೇರಿ .
ವಿಹರಿಸಲಿ ಮುಕ್ತ ಬಾನಂಗಳದಲಿ .

ಚಿಂತೆ!

ಚಿಂತೆಯಾದರೆ ನಿಮಗೆ,
ಮತ್ತೆ ಸಿಲುಕುವಿರಿ
ಒಳಗೊಂದು,ಹೊರಗೊಂದು,ನಟನಾಚತುರ ವಿಶಾರದರ,
"ಗಾಳವಿಕ್ಕುವ,ಲೋಕಕ್ಕೆ ಉಚಿತ ಬುದ್ದಿ ಹೇಳುವ"
ಅತಿ ಬುದ್ದಿವಂತರ ಚತುರ ಚಾದರದೊಳಗೆ .
ಮೆಟ್ಟಿ ಮುರಿದಿಕ್ಕಿ ಬಾವನೆಗಳ
ಅತಿಯನ್ನ
ಅತಿಯಾದರೆ ಅಮೃತವೂ ವಿಷ.

Rating
No votes yet