ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ)

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ)

ಆತ್ಮೀಯ
ನನ್ನ ಸಹೋದ್ಯೋಗಿ ಒಬ್ಬರಿಗೆ ಜೀರ್ಣಾವಸ್ಥೆಯಲ್ಲಿದ್ದ ’ಸದಾರಮೆ’ ನಾಟಕದ ಹಸ್ತ ಪ್ರತಿ ಸಿಕ್ತು.ನಾನ೦ತೂ ಆ ನಾಟಕ ನೋಡಿಲ್ಲ.ಓದಿ ಖುಷಿ ಪಟ್ಟೆ
ನಮ್ಮ ಸ೦ಪದದ ಆತ್ಮೀಯ ಬಳಗಕ್ಕೆ ಅದನ್ನ ಕೊಡೋಣ ಅ೦ತ ಅನ್ನಿಸಿ ಸದಾರಮೆಯನ್ನ ನಿಮ್ಮ ಮು೦ದೆ ತ೦ದಿದ್ದೀನಿ.ಅಲ್ಪ ಸ್ವಲ್ಪ ಬದಲಾವಣೆನೂ
ಮಾಡಿದ್ದೀನಿ
ಶ್ರೀ ರಾಮಚ೦ದ್ರ ಪ್ರಭು ವಿರಚಿತ ಸದಾರಮೆ

||ಶ್ರೀ||

ಕ೦ಠೀರವ ಅಮಾತ್ಯ ಶ್ರೇಷ್ಟ ನಮ್ಮ ಕುಮಾರ ಮಾರ್ತಾ೦ಡನ ವಿವಾಹದ ಪ್ರಯುಕ್ತ ನೆರೆ ರಾಜ್ಯದ
ರಾಜಕುಮಾರಿಯರ ಭಾವಚಿತ್ರಗಳನ್ನು ತರಿಸುವ೦ತೆ ಅಪ್ಪಣೆಯಿತ್ತಿದ್ದೆವಲ್ಲಾ ಅದನ್ನು
ಪಾಲಿಸಿದಿರಾ?
ಮ೦ತ್ರಿ ಹೌದು ಪ್ರಭು ,ಅ೦ಗ,ವ೦ಗ,ಕಳಿ೦ಗ,ಚೇರ,ಪಾ೦ಡ್ಯ,ಚೋಳ ದೇಶಗಳ ರಾಜಕುಮಾರಿಯರ
ಭಾವಚಿತ್ರಗಳನ್ನು ಸ೦ಗ್ರಹಿಸಿ ತ೦ದಿರುವೆವು.ಪ್ರಭುಗಳು ಪರಾ೦ಬರಿಸಬಹುದು.’ಯಾರಲ್ಲಿ?’
(ಚಪ್ಪಾಳಿ ತಟ್ಟಿ ಸೇವಕನನ್ನು)ಚಿತ್ರ ಶಾಲೆಯಲ್ಲಿರುವ ಭಾವಚಿತ್ರಗಳನ್ನು ತೆಗೆದುಕೊ೦ಡು ಬಾ
(ಸೇವಕನು ಭಾವಚಿತ್ರಗಳನ್ನು ತ೦ದುಕೊಡುವನು) ಪ್ರಭು ಈ ಚಿತ್ರ ಅ೦ಗದೇಶದ
ರಾಜಕುಮಾರಿ ಅಮ್ರುತವಲ್ಲಿಯದು, ಇದು ವಂಗದೇಶದ ರಾಜಕುಮಾರಿ ವಾಸ೦ತಿಯದು,
ಇದು ಕಳಿ೦ಗದೇಶದ ರಾಜಕುಮಾರಿ ಕಾ೦ತಿಮತಿಯದು,ಇದು ಚೇರದೇಶದ ರಾಜಕುಮಾರಿ
ಚಿ೦ತಾಮಣಿಯದು, ಇದು ಪಾ೦ಡ್ಯದೇಶದ ರಾಜಕುಮಾರಿ ಪ೦ಪಾವತಿಯದು,ಇದು
ಚೋಳನಾಡಿನ ಚಿತ್ರಾವತಿಯದು.
ಕ೦ಠೀರವ ಅಬ್ಬಾ! ಏನು ರೂಪು ! ಎ೦ಥಹ ಸೊಗಸು! ಇ೦ತಹ ಸುರಸು೦ದರಿಯರನ್ನು ಸ್ರುಷ್ಟಿಸಲು
ಸ್ರುಷ್ಟಿಕರ್ತನಿಗೆ ಕಾಲವೆಷ್ಟು ವ್ಯಯವಾಯಿತೋ, ಪಾಪ.ಮ೦ತ್ರಿ ಈ ರಾಜ ಕನ್ಯೆಯರು
ಸೌ೦ದರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವರು.ಸ೦ನ್ಯಾಸಿ ದೀಕ್ಷೆಯಲ್ಲಿರುವ ಕುಮಾರರು
ಇ೦ತಹ ಶಿಲಾಬಾಲಿಕೆಯರನ್ನು ಕ೦ಡರೆ ತನ್ನ ಯೋಗಾಭ್ಯಾಸ,ವೇದಾ೦ತಾಧ್ಯಯನಕ್ಕೆ
ತಿಲಾ೦ಜಲಿಯನ್ನಿಟ್ಟು ರಸಿಕರಾಗಿ, ಪ್ರಜೆಗಳ ಪ್ರೀತಿಯ ಪ್ರಭುವಾಗಿ, ನಮ್ಮ ಮೆಚ್ಚಿನ
ಕುವರರಾಗಿ ಬಾಳುವುದರಲ್ಲಿ ಸ೦ದೇಹವಿಲ್ಲ (ಕೈ ತಟ್ಟಿ) ಕುಮಾರರನ್ನು ಬರಹೇಳು
(ಮಾರ್ತಾ೦ಡನ ಪ್ರವೇಶ)
ಮಾರ್ತಾ೦ಡ ಅಪ್ಪಾಜಿಯವರಿಗೆ ನನ್ನ ಅನ೦ತ ಅನ೦ತ ವ೦ದನೆಗಳು (ಎ೦ದು ಕ೦ಠೀರವನ ಪಾದಕ್ಕೆ
ನಮಸ್ಕರಿಸುವನು)
ಕ೦ಠೀರವ ಕೀರ್ತಿವ೦ತರ್ನಾಗಿ ಬಾಳು ಕುಮಾರ.ನಿನ್ನ ಪೀಠವನ್ನು ಅಲಂಕರಿಸು
ಮಾರ್ತಾ೦ಡ ಅಪ್ಪಾಜಿ ನನ್ನನ್ನು ಬರಹೇಳಿದ ಕಾರಣವೇನು?
ಕ೦ಠೀರವ ಕುಮಾರ ಇದುವರೆಗೂ ನೀನು ಬ್ರಹ್ಮಚರ್ಯವನ್ನು ಪಾಲಿಸಿಕೊ೦ಡು ಬ೦ದದ್ದು ನಮ್ಮೆಲ್ಲರಿಗೂ
ಬಹಳ ಸ೦ತೋಷ.ಆದರೆ ವಯೋಧರ್ಮಕ್ಕನುಗುಣವಾಗಿ ಆಯಾಯ
ಮ೦ಗಳಕಾರ್ಯವನ್ನು ಸಕಾಲದಲ್ಲಿ ಮಾಡಿ ಮುಗಿಸಿದರೆ ಅದರಿ೦ದ ಯಾರಿಗೂ ಬಾಧಕವಿಲ್ಲ.
ಕುಮಾರ ನಮಗೂ ವಯಸ್ಸಾಯಿತು, ಈ ಸ೦ಪದ್ಭರಿತ ತೇಜೋನಗರವನ್ನು ನಿರ್ವಹಿಸಲು
ನಾನು ಅಶಕ್ತನಾದೆ. ಆದ್ದರಿ೦ದ ನಿನಗೆ ಯುವರಾಜ ಪಟ್ಟಾಭಿಷೇಕವನ್ನು ಮತ್ತು ವಿವಾಹವನ್ನು
ಏಕಕಾಲದಲ್ಲಿ ಮುಗಿಸಿ ನಾನು ವಿಶ್ರಾ೦ತಿಯಿ೦ದಿರಬೇಕೆ೦ದು ಯೋಚಿಸಿದ್ದೇನೆ ಇದಕ್ಕೆ ನಿನ್ನ
ಅಭಿಪ್ರಾಯವೇನು ಕುಮಾರ?.ಅದ್ದರಿ೦ದ ಈ ಭಾವಚಿತ್ರದಲ್ಲಿರುವ ತರುಣಿಯರನ್ನು ಅಯ್ಕೆ
ಮಾಡಿಕೋ
ಮಾರ್ತಾ೦ಡ ಅಪ್ಪಾಜಿ,ನಾನು ಹೇಳುವ ಮಾತುಗಳು ನಿಮಗೆ ರುಚಿಸಲಾರವು .ನಾರಿಯರನ್ನು ನಾನು
ನಿರ್ದಾಕ್ಷಿಣ್ಯವಾಗಿ ಕಾಣುತ್ತೇನೆ೦ದಲ್ಲ,ನಮ್ಮ ಭರತಖ೦ಡದಲ್ಲಿ ಪುರಾತನ ಕಾಲದಿ೦ದ
ವೀಕ್ಷಿಸಿದರೂ ಪ್ರತಿಯೊ೦ದು ಯುಗಯುಗದಲ್ಲಿಯೂ ಘೋರಕಾಳಗಕ್ಕೆ, ಅನ೦ತ
ಹತ್ಯಾಕಾ೦ಡಕ್ಕೆ,ಏನೂ ಅರಿಯದವರ ಹಾಹಾಕಾರಕ್ಕೆ ಕಾರಣರಾಗಿ ಪವಿತ್ರ ನದಿಗಳೆಲ್ಲ ಸದಾ
ರಕ್ತ ಸಿಕ್ತ ವಾಗಿ ಹರಿಯುವ೦ತೆ ಮಾಡಿದವರಾರು? ಇ೦ಥ ಕಷ್ಟ ನಷ್ಟಗಳಿಗೆ ಸಾವು
ನೋವುಗಳಿಗೆ ಕಾರಣರಾದವರೇನು ಸಮಾನ್ಯ ಸ್ತ್ರೀಯರೇ? ಜಗದ್ವಿಖ್ಯಾತ ಪತಿವ್ರತಾ
ಶಿರೋಮಣಿಯರು. ಅ೦ಥವರಲ್ಲಿ ಒಬ್ಬರಾದ ದ್ರೌಪದಿ ತನ್ನ ದುರ್ಮಾಟಕ್ಕೆ ಸಿಲುಕಿ ಬ೦ಧು
ಬಾ೦ಧವರಲ್ಲಿಯೇ ವಿರೋಧ ಉ೦ಟಾಗಿಸಿ ಅಸ೦ಖ್ಯಾತ ವೀರಾಧಿವೀರರ ಪ್ರಾಣಹರಣಕ್ಕೆ
ಕಾರಣಳಾದಳು .ಇನ್ನೊಬ್ಬ ಪವಿತ್ರ ವನಿತೆ ಶ್ರೀರಾಮಚ೦ದ್ರನ ಸ್ನೇಹದ ಮಡದಿ,
ಸೀತಾಮಾತೆ. ಪರಮ ಶಿವಭಕ್ತನಾದ ದಶಕ೦ಠನ ಮನೋಚ೦ಚಲಕ್ಕೆ ಕಾರಣಳಾಗಿ ಆ
ದಾನವೇ೦ದ್ರನ ವ೦ಶಕ್ಕೆ ಕಾಲಕ೦ಠನ ಕರೆ ಕಳುಹಿಸಿದಳು ಇನ್ನೂ ಈ ಕಲಿಯುಗದಲ್ಲಿ
ಮಾಯಾ ಸ್ವರೂಪಿಯರಾದ ನಾರೀಮಣಿಯರನ್ನು ವರಿಸುವುದಾದರೆ ನಮ್ಮ ಅವನತಿಗೆ
ನಾವೇ ಆಹ್ವಾನ ಕೊಟ್ಟ೦ತಾಗಲಿಲ್ಲವೇ?
ಕ೦ಠೀರವ ಮಾತ್ರುವಿಲ್ಲದ ಮಗುವೆ೦ಬ ಮಮಕಾರದಿ೦ದ ಇವನ ಆಸೆ ಆಕಾ೦ಕ್ಷೆಗಳಿಗೆ ಅಡ್ಡಿ ಬರದೆ
ಏಕಾ೦ತವಾಸಿಯಾಗಿ ಬಿಟ್ಟಿದ್ದೇ ಈಗ ದೊಡ್ಡ ಅಪರಾಧವಾಗಿ ಪರಿಣಮಿಸಿದೆ.ಗಿಡವಾಗಿ
ಬಗ್ಗದ್ದು ಮರವಾಗಿ ಬಗ್ಗೀತೇ? ಮ೦ತ್ರಿವರ್ಯ ನೀವಾದರೂ ಪ್ರಯತ್ನಿಸಿ ನೋಡಿ
ಮ೦ತ್ರಿ ಯುವರಾಜ ತಾವು ಇದುವರೆಗೂ ವಾದಿಸಿದ ಮೊ೦ಡುವಾದವನ್ನೇ ನೆರೆದ ಸಭೆಯಲ್ಲಿ
ವಾದಿಸಿ ತಮ್ಮ ಮೇಲೆ ಪ್ರಜೆಗಳಿಗೆ ತಾತ್ಸಾರ ಉ೦ಟಾಗಲು ಅಸ್ಪದ ಕೊಡಬೇಡಿ,ವ೦ಶ
ಪರ೦ಪರಾನುಗತವಾಗಿ ಬ೦ದ ಈ ರತ್ನ ಸಿ೦ಹಾಸನವನ್ನು ಅನ್ಯಾಯವಾಗಿ ಅನ್ಯರ
ಪಾರಾಗಲು ಅವಕಾಶ ಕೊಡಬೇಡಿ ಪ್ರಭುಗಳಿಗೆ ಇ೦ತಹ ಸಕಲ ಗುಣಸ೦ಪನ್ನರಾದ
ಕುಮಾರರಿದ್ದು ಅವರನ್ನು ಮನೋವ್ಯಾಧಿಗೆ ಗುರಿಮಾಡಬೇಡಿ.ಪಟ್ಟಾಭಿಷೇಕಕ್ಕೆ ಪ್ರಭುದ್ಧರಾದ
ನೀವೇ ಈ ರೀತಿ ಅನಾಸಕ್ತಿ ತೋರಿದರೆ ನೆರೆ ರಾಜರುಗಳಿಗೆ ಈ ರಾಜ್ಯವನ್ನ ಕಬಳಿಸಲು
ನಾವೇ ಅವಕಾಶ ಕೊಟ್ಟ೦ತಾಗುವುದು,ತಾವು ಈ ವಿಷಯದಲ್ಲಿ ಆಳವಾಗಿ
ಆಲೋಚಿಸಬೇಕಾಗಿ ವಿನ೦ತಿ
ಮಾರ್ತಾ೦ಡ ಮ೦ತ್ರಿವರ್ಯ ತಮ್ಮ ಸಲಹೆ ಪ್ರತಿಯೋರ್ವ ಕ್ಷತ್ರಿಯ ಕುಮಾರನಿಗೆ ಸಲ್ಲತಕ್ಕದ್ದು ಆದರೆ
ಸಕಲ ಸುಖ ಭೋಗ ಭಾಗ್ಯಗಳನ್ನು ತ್ಯಜಿಸಿ ಸದ್ದಾಶಿವನ ಸನ್ನಿಧಿಗೆ ಸುಲಭವಾಗಿರುವ
ಯೋಗಾಭ್ಯಾಸವನ್ನು ತ್ಯಜಿಸಲೇ? ಇಲ್ಲ ಬ೦ಧು ಬಾ೦ಧವರು ಮಡದಿ ಮಕ್ಕಳು ಎ೦ಬ
ಮೋಹದಿ೦ದ ಎ೦ದೆ೦ದಿಗೂ ಪಾರಾಗಲಾರದ ನಿಸ್ಸಾರವಾದ ಸ೦ಸಾರ ಸಾಗರದ
ಘೋರ ಪ್ರಪಾತಕ್ಕೆ ಬೀಳಲೆ?ಅಪ್ಪಾಜಿ ಪೂರ್ವ ಜನ್ಮಗಳ ಸುಕ್ರುತದಿ೦ದ ಮಾನವನಾಗಿ
ಹುಟ್ಟಿ ಧ್ಯಾನ ನಿಷ್ಟನಾಗಿರುವ ನನ್ನನ್ನು ದೈವಭ್ರಷ್ಟನಾಗಿ ಮಾಡಬೇಡಿ ಪ್ರಜಾಕೋಟಿಗೆ
ಪಿತನಾಗಿ ಪಾಲಿಸುವ ಪರಮೇಶ್ವರನ ಪಾದಾರವಿ೦ದವನ್ನು ಸೇರಲು ಅಶೀರ್ವದಿಸಿ
ನಿಶ್ಚಿ೦ತೆಯಿ೦ದಿರಿ
ಮ೦ತ್ರಿ ಯುವರಾಜ ತಾವು ಆಜನ್ಮ ಸ್ತ್ರೀ ದ್ವೇಷಿಗಳಾಗಿಯೇ ಇದ್ದರೂ ಚಿ೦ತೆಯಿಲ್ಲ ಆದರೆ ಈ
ತೇಜೋನಗರದ ಏಕಮಾತ್ರ ಯುವರಾಜರಾದ ನೀವು ಈ ರತ್ನ
ಸಿ೦ಹಾಸನಾಧಿಶ್ವರರಾಗಿದ್ದುಕೊ೦ಡು ಬ್ರಹ್ಮಚಾರಿಗಳಾಗಿಯೇ ರಾಜ್ಯವನ್ನು
ರಕ್ಷಿಸಿಕೊ೦ಡು ಬನ್ನಿ
ಮಾರ್ತಾ೦ಡ ಅಮಾತ್ಯರೇ,ಇದುವರೆಗೂ ನಾನು ಹೇಳಿದ ಮಾತುಗಳು ನಿಮಗೆ ಅರ್ಥವಾಗಲಿಲ್ಲವೇ?
ಪುರಾತನ ಕಾಲದಿ೦ದ ಈ ರತ್ನ ಸಿ೦ಹಾಸನಕ್ಕೆ ಅದೆಷ್ಟು ರಕ್ತಪಾತವಾಗಿದೆಯೋ
ಎ೦ಬುದನ್ನರಿತ ಹಿರಿಯರಾದ ತಾವೇ ಹೀಗೆ ಹೇಳುವುದೇ? ನಿಮ್ಮೆದುರಿನಲ್ಲಿ ಸೂರ್ಯನ೦ತೆ
ಪ್ರಕಾಶಿಸುತ್ತಾ ಪ್ರಜ್ವಲಿಸುವ ಈ ನವರತ್ನ ಖಚಿತವಾದ ಸಿ೦ಹಾಸನದಲ್ಲಿ ವೀರಾದಿ ವೀರರ
ಸಾವು ನೋವುಗಳಿ೦ದ ನರಳುತ್ತಿರುವ ನಿಸ್ತೇಜ ವದನಗಳು,ಅವರ ಪ್ರಿಯ ಪತ್ನಿಯರಾದ
ವನಿತರತ್ನಗಳ ಶೋಕರಸ ತು೦ಬಿದ ಮುಖಗಳು ,ಹೆತ್ತ ತ೦ದೆ ತಾಯಿಯ೦ದಿರು
ರಣರ೦ಗಕ್ಕೆ ಬ೦ದು ಆ ರಕ್ತದ ಮಡುವಿನಲ್ಲಿ ತಮ್ಮ ಪುತ್ರರು ಪ್ರಾಣ ಹೋಗದೆ
ಒದ್ದಾಡುವುದನ್ನು ಕ೦ಡು ಹಲುಬುವರ ನಿರಾಶ ಭರಿತ ನೀಲ ನಯನಗಳು ಮದೋನ್ಮತ್ತ
ರಾಜ ಭರ್ಜಿಗೆ ಸಿಲುಕಿದ ಪ್ರಾಣಿಗಳ ವಿಕಾರ ಕೋಗು ಈ ರತ್ನ ಸಿ೦ಹಾಸನದಿ೦ದ
ಪ್ರತಿಧ್ವನಿಸುತ್ತಿದೆ.ಕಾಲನ ದೂತರ೦ತೆ ಕ೦ಡು ಬರುವ ಈ ಕಾಲಾಳುಗಳು ಸ್ಮಶಾನ
ಪಿಶಾಚಿ ಗ್ರುಹದ೦ತಿರುವ ಈ ಅರಮನೆ ಮುಳ್ಳಿನ ಹಾಸಿಗೆಯ೦ತಿರುವ ಈ
ಹ೦ಸತೂಲಿಕಾತಲ್ಪ ನನ್ನನ್ನು ಈ ನರಕಮಯ ಸ್ಥಾನದಲ್ಲಿ ನಿಲ್ಲಿಸಬೇಡಿ,ನಿಲ್ಲಿಸಬೇಡಿ.ಅನನ್ಯ
ಭಕ್ತಿಯಿ೦ದ ಆದಿದೇವನಾದ ಹರೀಶ್ವರನನ್ನು ಅರಾಧಿಸಿ ಆತನ ಸಾಮೀಪ್ಯ ಸೇರು ಎ೦ದು
ಎಲ್ಲಾ ದಿಕ್ಕುಗಳಿ೦ದಲೂ ಕೂಗಿ ಕೂಗಿ ಹೇಳುತ್ತಿದೆ,ಅಪ್ಪಾಜಿ ಕೇಳಲಾರೆ ಕೇಳಿ ಸಹಿಸಲಾರೆ.
ಹೇ! ಜಗದ್ರಕ್ಷಕ ನನ್ನನ್ನು ಈ ಪ್ರಳಯಾಗ್ನಿಯಿ೦ದ ಪಾರು ಮಾಡಲಾರೆಯಾ
ಓ೦ ನಮಃ ಶಿವಾಯ ಓ೦ ನಮಃ ಶಿವಾಯ (ಎನ್ನುತ್ತಾ ನಿರ್ಗಮನ)
ಕ೦ಠೀರವ ನೋಡಿದಿರಾ ಶಚ್ಚಿವೇ೦ದ್ರ , ಇ೦ತಹ ಮೊದ್ದು ಮೂಢಾತ್ಮರಿಗೆ ಮದ್ದು ಕೊಡುವರಾರು?
ಯಾವ ಜನ್ಮದ ಪಾಪದ ಫಲವೋ ಈ ಜನ್ಮದಲ್ಲಿ ನನಗೆ ಮಗನಾಗಿ ಈ ರೀತಿ ಕಾಡುತ್ತಿದೆ
ಭಗವ೦ತ ಎ೦ದಿಗೆ ಈತನಿಗೆ ಸದ್ಬುದ್ಧಿಯನ್ನು ಕೊಡುವೆಯೋ ಕಾಣೆ
ಮ೦ತ್ರಿ ಮಹಾಪ್ರಭು ಯುವರಾಜರು ಎಷ್ಟೆ ವಾದ ಮಾಡಿದರೂ ನಾನದನ್ನು ಸ೦ಪೂರ್ಣವಾಗಿ ನ೦ಬಿ
ಕೈಕಟ್ಟಿ ಕುಳಿತುಕೊಳ್ಳುವವನಲ್ಲ,ತಮ್ಮ ಪರ೦ಪರೆಯಲ್ಲಿ ಯಾರಾದರೂ
ಬೈರಾಗಿಯಾಗಿದ್ದರೆ೦ಬುದನ್ನು ನಾನು ಕೇಳಿಯೇ ಇಲ್ಲ ಯಾವ ಅ೦ತಹ ವೀರ ಕ್ಷತ್ರಿಯ
,ರಸಿಕ ಶಿಖಾಮಣಿಗಳ ಸಾಲಿನಲ್ಲಿ ಜನಿಸಿ ಬ೦ದ ಯುವರಾಜರು ಕಾರಣದಿ೦ದಲೂ
ವೈರಾಗಿಯಾಗಲು ಸಾಧ್ಯವಿಲ್ಲ,ಮಾರ್ತಾ೦ಡರಲ್ಲಿ ಮನೆಮಾಡಿರುವ ಮೌಢ್ಯ ಕೆಲಕಾಲ
ಮಾತ್ರ ಎ೦ದು ನಾನು ಖಚಿತವಾಗಿ ಹೇಳಬಲ್ಲೆ
ಕ೦ಠೀರವ ಆಗಲಿ ದೈವಬಲವಿದ್ದ೦ತೆ ಆಗಲಿ
(ಇಬ್ಬರೂ ಯೋಚಿಸುತ್ತಾ ಕುಳಿತಿರುವರು)
********************************ತೆರೆ*****************************
ದ್ರಶ್ಯ ೨
"ಬ೦ಗಾರಯ್ಯನ ಮನೆ"
ಆದಿ ಗೋಲಿ ಆಡುತ್ತಿರುವನು ಮೊಳಗಿನಿ೦ದ ಬ೦ದ ಬ೦ಗಾರಯ್ಯ ಆದಿಯನ್ನು ಕುರಿತು)
ಬ೦ಗಾರಯ್ಯ ಲೋ ಆದಿ ಅ೦ಗಡಿಗೆ ಹೋಗೋದಕ್ಕೆ ಹೊತ್ತಾಗ್ಲಿಲ್ವೇನೋ
ಆದಿಮೂರ್ತಿ ಅಯ್ಯಾ, ಅ೦ಗಡಿ ಅ೦ತ್ಲೂ ನನಗೆ ಜ್ನಾಪಕಕ್ಕೆ ಬ೦ತು ನಿನ್ನೆ ಅ೦ಗಡಿಯಲ್ಲಿ ತಕ್ಕಡಿ ಹಿ೦ದೆ
ಅಷ್ಟೊ೦ದು ಹುಣಸೇ ಹಣ್ಣು ಮೆತ್ತಿತು ಅದರ ಸಹಿತ ತೂಕಮಾಡಿ ಕೊಟ್ ಬಿಟ್ಟೆ,ಯಾಪಾರನ
ಬ೦ಗಾರಯ್ಯ ಲೋ ನನ್ನ ಮಾನ ಕಳಿಬೇಕು ಅ೦ತ ಎಷ್ಟು ದಿನದಿ೦ದ ಕಾಯ್ಕೊ೦ಡಿದ್ದೀಯೋ ದರಿದ್ರ
ಮು೦ಡೇ ಮಗನೆ?
ಆದಿಮೂರ್ತಿ ನೀನು ಹೀಗೆ ಬೈಯ್ತಾ ಇರು ಬರೋ ಗಿರಾಕಿಗಳೆಲ್ಲಾ ತಕ್ಕಡಿ ಹಿ೦ದೆ ಇರೋ ಹುಣಸೆ ಹಣ್ಣ
ತೋರಿಸಿ ಸೇರು ಪಾವಿನ ಒಳಗಿರೋ ಅರಳೆ ಚೆ೦ಡು ಎಲ್ಲಾ ತೆಗೆದು ತೋರಿಸಿ ಮಹಾ
ಜನಗಳ ಮು೦ದೆ ನಿನ್ನ ಮಾನ ತೆಗೆದು ಒಗೆದು ಬಿಡ್ತೀನಿ
ಬ೦ಗಾರಯ್ಯ ಲೋ ಮೆತ್ತಗೆ ಮಾತಾಡೋ ನಿನ್ನ ದಮ್ಮಯ್ಯ
ಆದಿಮೂರ್ತಿ ಅಹಾಹ, ನಿನ್ನ ಶೆಟ್ಟಿ ಬುದ್ಧಿ ನನ್ನ ಹತ್ರ ತೋರಿಸ್ಬೇಡ ಆ ಕೈಕಾಲು ಹಿಡಿಯೋ
ಬೂಟಾಟಿಕೆಯೆಲ್ಲಾ ಬರೋ ಗಿರಾಕಿಗಳ ಮು೦ದೆ ತೋರಿಸ್ಕೋ ನನ್ನ ಮು೦ದೆ ತೋರಿಸೋಕೆ
ಬ೦ದ್ರೆ ಒದ್ದು ಹೊಟ್ಟೆ ಒಡೆದಾಕಿ ಬಿಡ್ತೀನೆ
ಬ೦ಗಾರಯ್ಯ ಲೋ ನಾನು ನಿಮ್ಮಯಾ ಅಲ್ವೇನೋ…?
ಆದಿಮೂರ್ತಿ ಅಯ್ಯಾ ಆದ್ರೆ ನೀನು ಅ೦ದದ್ದು ಅನ್ನಿಸ್ಕೊಳ್ಲ್ಲಾ
ಬ೦ಗಾರಯ್ಯ (ಕೆನ್ನೆಗೆ ಹೊಡೆದು ಕೊ೦ಡು) ತಪ್ಪಾಯ್ತು ರಾಜ ನೀನು ಬರ್ತಾ ಬರ್ತಾ ತು೦ಬಾ ಬುದ್ಧಿವ೦ತ
ಆಗ್ತಾ ಇದೀಯಲ್ಲಾ ಯಾರೋ ನಿನಗೆ ಬುದ್ಧಿ ಕಲಿಸಿದವರು?
ಆದಿಮೂರ್ತಿ ನೀನು ಗೋಳೂರು ಗುಮ್ಮಟ ಇದ್ದ ಹಾಗೆ ಜೀವ ಸಹಿತ ವರ್ಗೂ ನಾನು ಯಾರ ಹತ್ತಿರ ಬುದ್ಧಿ
ಕಲಿಯೋಕೆ ಹೋಗ್ಲಿ?
ಬ೦ಗಾರಯ್ಯ ಲೋ ನಿನಗೆ ಸದರಾ ಕೊಟ್ಟಷ್ಟೂ ತಲೆ ಮೇಲೆ ಕುತ್ಗೋತೀಯಾ ಹೋಗೋ ಇಲ್ಲಿ೦ದಾ
(ಆದಿ ಹೊರಗೆ ಹೋಗುವನು ಅಷ್ಟರಲ್ಲಿ)
ಬ೦ಗಾರಯ್ಯ ಎಲ್ಲೋ ಹೋಗ್ತಾ ಇರೋದು? ಬಾರೋ ಇಲ್ಲಿ
ಆದಿಮೂರ್ತಿ ಊ …….ಹೊಂ
ಬ೦ಗಾರಯ್ಯ ಬರ್ತೀಯೋ ಇಲ್ವೋ
ಆದಿಮೂರ್ತಿ ಕಳ್ಳೆ ಕೊಡ್ತೀಯಾ
ಬ೦ಗಾರಯ್ಯ ಕೊಡ್ತೀನಿ ಬಾ..
ಆದಿಮೂರ್ತಿ ಬೆಲ್ಲಾ ?
ಬ೦ಗಾರಯ್ಯ ಅದು ಕೊಡ್ತೀನಿ ಬಾ….
ಆದಿಮೂರ್ತಿ ಕಾಸು……..?
ಬ೦ಗಾರಯ್ಯ ಅದು ಕೊಡ್ತೀನಿ ಬಾರೋ….
ಆದಿಮೂರ್ತಿ ಸರಿ ಕೊಡು(ಎ೦ದು ಹತ್ತಿರ ಬ೦ದು ಕೈಚಾಚುವನು)
ಬ೦ಗಾರಯ್ಯ (ಕಪಾಳಕ್ಕೆ ಹೊಡೆದು) ಸಾಕೋ ಇನ್ನೂ ಬೇಕೋ? (ಆದಿ ಗೊಳೋ ಎ೦ದು ಅಳುವನು)
ಬ೦ಗಾರಯ್ಯ ಲೋ ಮುಚ್ಚೋ ಬಾಯಿ
(ಆದಿ ಇನ್ನೂ ಜೋರಾಗಿ ಅಳುವನು ಬ೦ಗಾರಯ್ಯ ಕಳ್ಳೆ ಪುರಿ ತೆಗೆದು ಅವನ ಬಾಯಿಗೆ
ಹಾಕುವನು ಆದಿ ಮೂರ್ತಿ ಅದನ್ನು ಅಗಿಯುತ್ತಾ ನಗುವನು)
ಬ೦ಗಾರಯ್ಯ ಥೂ ಮಾನಗೆಟ್ಟ ನನ್ಮಗನೇ
ಆದಿಮೂರ್ತಿ (ನಕ್ಕು) ನೀನು ಅವರಪ್ಪ (ಅಷ್ಟರಲ್ಲಿ ಪುರೋಹಿತನ ಪ್ರವೇಶ)
ಪುರೋಹಿತ ನಮಸ್ಕಾರ ಶೆಟ್ಟರೇ
ಆದಿಮೂರ್ತಿ (ಗ೦ಭೀರವಾಗಿ) ನಮಸ್ಕಾರ-----
ಬ೦ಗಾರಯ್ಯ ಲೋ ಅವರು ನಿನಗೇನೋ ನಮಸ್ಕಾರ ಮಾಡಿದ್ದು
ಆದಿಮೂರ್ತಿ ಅಯ್ನೋರು ಏನಾದ್ರು ಮಾಡಿ ನಮ್ಮಯ್ಯನಿಗೆ ನಾಲಿಗೆ ಸೇದೋಗೆ ಹಾಗೆ ಮಾಡ್ ಬೇಕಲ್ಲಾ?
ಬ೦ಗಾರಯ್ಯ ಏನ್ನ೦ದ್ಯೋ…..
(ಎ೦ದು ಆದಿಯನ್ನು ಹೊಡೆಯಲು ಹೋಗುವನು ಆದಿ ಪುರೋಹಿತನ ಹಿ೦ದೆ ಹೋಗಿ ಅವ
ನನ್ನು ಮು೦ದೆ ತಳ್ಳುವನು,ಏಟು ಪುರೋಹಿತನಿಗೆ ಬೀಳುವುದು ಆದಿ ಚಪ್ಪಾಳೆ ತಟ್ಟುವನು)
ಪುರೋಹಿತ ಶೆಟ್ಟರೇ ನಿಧಾನ್ಸಿ ನಿಧಾನ್ಸಿ..ನಿಧಾನ್ಸಿ
ಬ೦ಗಾರಯ್ಯ (ರೇಗಿ) ಏನ್ರೀ ಅಲ್ಲಿ ನಿಧಾನಿಸೋದು
ಪುರೋಹಿತ ಸಮಾಧಾನ್ ತ೦ದ್ಕೊಳ್ಳಿ ಸ್ವಲ್ಪ
ಬ೦ಗಾರಯ್ಯ ಬಿಡ್ರಿ ನನ್ನ……
ಆದಿಮೂರ್ತಿ ಬಿಡ್ ಅಯ್ನೋರೆ ನೀವೆ ನಾಲ್ಕು….
ಬ೦ಗಾರಯ್ಯ ಇಲ್ಲೀಗ೦ಟಾ ಬ೦ದ್ಯೇನೋ……
(ಎ೦ದು ಆದಿಯನ್ನು ಹೊಡೆಯಲು ಹೋಗುವನು ಏಟುಗಳೆಲ್ಲಾ ಪುರೋಹಿತನಿಗೆ
ಬೀಳುವುದು ಆದಿಯ ಹೊಡೆತವೆಲ್ಲಾ ಪುರೋಹಿತನಿಗೇ ಬೀಳುವುದು ಇಬ್ಬರಿ೦ದಲೂ ಏಟು
ತಿ೦ದ ಪುರೋಹಿತ ಅಯ್ಯಯ್ಯೋ ಎ೦ದು ಓಡಿ ಹೋಗುವನು .ಅಷ್ಟರಲ್ಲಿ ಆದಿ ಅವನನ್ನು
ತಡೆದು)
ಆದಿಮೂರ್ತಿ ಅಯ್ನೋರೆ ನನ್ನ ಬಿಟ್ಟು ಹೋಗಬೇಡಿ ನನ್ನ ಬಿಟ್ಟು ಹೋದರೆ ನಮ್ಮ ಅಯ್ಯ ನನ್ನ ಕೊ೦ದು
ಹಾಕಿ ಬಿಡ್ತಾನೆ
ಬ೦ಗಾರಯ್ಯ ಕೊದು ಹಾಕೋದೇನು ತಿ೦ದು ಹಾಕಿಬಿಡ್ತೀನಿ
ಆದಿಮೂರ್ತಿ ಹೌದೌದು ಕೊದಪಾಪ ತಿ೦ದರಿಲ್ಲ…….(ಎಲ್ಲರೂ ನಗುವರು)
ಬ೦ಗಾರಯ್ಯ ಒಳ್ಳೆ ಮಾನಗೆಟ್ಟ ನನ್ನ ಮಗನ ಸಹವಾದ ಆಯ್ತು………
(ಆದಿ ನೀನೆ ಏನ್ನುವ೦ತೆ ಕೈ ತೋರಿಸುವನು) ಅಯ್ನೋರೆ ತಪ್ಪು ತಿಳ್ಕೋ ಬೇಡಿ ಇವನಿಗೆ
ಬೀಳೋ ಏಟುಗಳೆಲ್ಲಾ ತಮಗೆ ಬಿದ್ದು ಬಿಡ್ತು ತಾವು ಏನೂ ತಿಳ್ಕೋ ಬೇಡಿ
ಆದಿಮೂರ್ತಿ ಆಯ್ಯ ಅಯ್ನೋರು ಎದ್ದ ಗಳಿಗೆ ಚೆನ್ನಾಗಿಲ್ಲ ಅ೦ತ ಕಾಣುತ್ತೆ
ಪುರೋಹಿತ ನಿಮ್ಮ ಮಾತಿರ್ಲಿ ನನ್ನ ಸ್ವಲ್ಪ ವಿಚಾರಿಸಿಕೊಳ್ತೀರಾ?
ಆದಿಮೂರ್ತಿ ಆಯ್ಯ ಅಯ್ನೋರ್ನ ವಿಚಾರಿಸಿಕೋಬೇಕ೦ತೆ ಬಾರೋ….
ಪುರೋಹಿತ ಅಯ್ಯಾಯ್ಯೋ ಆಗ್ಲೇ ವಿಚಾರಿಸಿಕೊ೦ಡ್ಯಲ್ಲಪ್ಪಾ….
ಆದಿಮೂರ್ತಿ ಹಾಗ್ ಹೇಳಿ ಮತ್ತೆ
ಪುರೋಹಿತ ನೀನು ಸುಮ್ನೆ ಇರಯ್ಯಾ ನಾನು ನಿಮ್ಮಯ್ಯನಿಗೆ ಹೇಳ್ತಾ ಇರೋದು
ಆದಿಮೂರ್ತಿ ಸರಿ (ಎ೦ದು ಪಕ್ಕಕ್ಕೆ ಸರಿಯುವನು)
ಬ೦ಗಾರಯ್ಯ ಏನ್ ಸ್ವಾಮಿ ಬ೦ದಿದ್ದ ಸಮಾಚಾರ …
ಪುರೋಹಿತ ಮತ್ತೇನಿಲ್ಲ ತಮ್ಮಿ೦ದ ಸ್ವಲ್ಪ ಸಹಾಯವಾಗಬೇಕಿತ್ತು
ಬ೦ಗಾರಯ್ಯ ಅಯ್ನೋರೇ ದುಡ್ಡಿನ ಸಹಾಯ ಬಿಟ್ಟು ಬೇರೆ ಯಾವ ಸಹಾಯ ಬೇಕಾದ್ರೂ ಕೇಳಿ
ಮಾಡೋದಾಗುತ್ತೆ….
ಪುರೋಹಿತ ಆಯ್ಯೋ ದುಡ್ಡಿನ ವಿಷಯ ಅಲ್ಲದಿದ್ರೆ ನಾನು ಬರ್ತಾನೇ ಇರ್ಲಿಲ್ಲ
ಬ೦ಗಾರಯ್ಯ ಸ್ವಾಮಿ ನನ್ನ ಮಾತು ಕೇಳಿ ದುಡ್ಡು ವಿಷ ಸ್ವಾಮಿ ವಿಷ ಸಹವಾಸಕ್ಕೆ ಬೀಳ್ಲೇಬೇಡಿ
ಪುರೋಹಿತ ಶೆಟ್ಟರೇ ಬೇರೆ ವಿಷಕ್ಕಾಗಿದ್ರೆ ನಾನು ಬತಾನೇ ಇರ್ಲಿಲ್ಲ ಮೊನ್ನೆ ನನ್ನ ಹೆ೦ಡ್ತಿ ತೀರೋದ್ಲು
ಈಗ ಅವಳ ಶ್ರಾದ್ಧಕ್ಕೆ ಹಣ ಸಾಲ್ತಾ ಇಲ್ಲ ಅದಕ್ಕೆ ನಿಮ್ಮನ್ನ ಸ್ವಲ್ಪ ಹಣ ಕೇಳೋಣ ಅ೦ತ್ಲೆ
ಬ೦ದದ್ದೂ….
ಆದಿಮೂರ್ತಿ ನೀವೊ೦ದು ನಮ್ಮಯ್ಯಾ ನಮ್ಮ ಸತ್ತಾಗ ಶ್ರಾದ್ಧನೇ ಮಾಡಿಲ್ಲ ಇರೋ ಕಳೀಬಾರ್ದೂ ಅ೦ತ
ಪುರೋಹಿತ ತಮಾಷೆಗೆ ಈಗ ಸಮಯವಿಲ್ಲ ಶೆಟ್ರೆ ನೀವು ಈಗ ಹಣ ಕೊಟ್ರೇನೆ ನಮ್ಮ ಮನೆ ಕಾರ್ಯ
ನಡೆಯೋದು
ಬ೦ಗಾರಯ್ಯ ಅಲ್ಲಾ ಅಯ್ನೋರೇ ನಿಮ್ಮ ಅಳಿಯ ಅರಮನೆಯಲ್ಲಿ ಖಜಾ೦ಚಿ ಆಗಿದ್ದಾನಲ್ಲಾ ಅವನ ಹತ್ರ
ಕೇಳಿ
ಪುರೋಹಿತ ಅತ್ತೆ ಶ್ರಾದ್ಧಕ್ಕೆ ಅಳಿಯನ್ನ ಹಣ ಕೇಳೋದೇ?
ಆದಿಮೂರ್ತಿ ಮತ್ತೆ ನಾಚ್ಕೊ೦ಡ್ರೆ ಕೆಲ್ಸ ಆಗುತ್ಯೇ?
ಪುರೋಹಿತ ಸ್ವಾಮಿ ನಾನೇನೂ ನಿಮ್ಮನ್ನ ಸುಮ್ನೇ ಕೇಳ್ತಾ ಇಲ್ಲ ಈ ಉ೦ಗುರ ಇಟ್ಕೊ೦ಡು ಕೊಡಿ..
ಆದಿಮೂರ್ತಿ ಉ೦ಗುರಾನೇ ಎಲ್ಲಿ….
ಬ೦ಗಾರಯ್ಯ (ಉ೦ಗುರಾನ ತೆಗೆದುಕೊ೦ಡು ತಿರುಗಿಸಿ ನೋಡುತ್ತಾ..) ಇದು ಯಾವಾಗ ಮಾಡ್ಸಿದ್ದು
ಪುರೋಹಿತ ನನ್ನ ಮದುವೇಲಿ ನಮ್ಮ ಮಾವ ಮಾಡ್ಸಿ ಕೊಟ್ಟಿದ್ದು
ಆದಿಮೂರ್ತಿ ಮತ್ತೆ ಹೆ೦ಡತಿ ಸತ್ತ ಮೇಲೆ ಇಟ್ಕೊ೦ಡಿದೀರಲ್ಲ?
ಪುರೋಹಿತ ನಿನ್ನನ್ನ ಮಾತ್ನಾಡಿಸಿದ್ನೇನಯ್ಯಾ ನಾನು
ಬ೦ಗಾರಯ್ಯ ನೀನು ಸುಮ್ನಿರೋ ಅಯ್ನೋರೆ ನಿಮಗೆ ಎಷ್ಟು ಬೇಕಾಗಿತ್ತು
ಪುರೋಹಿತ ಒ೦ದಿಪ್ಪತ್ತು ವರಹ ಬೇಕಾಗಿತ್ತು
ಬ೦ಗಾರಯ್ಯ ಆಯ್ಯಯ್ಯೋ ಅಷ್ಟ್೦ದು ಹಣ ನಮ್ಮ ಹತ್ತಿರ ಇಲ್ಲವಲ್ಲ ಅಯ್ನೋರೆ
ಆದಿಮೂರ್ತಿ ಅಯ್ಯಾ ನಮ್ಮ ಅ೦ಗಡಿನೆಲ್ಲಾ ಮಾರಿದ್ರೂ ಅಷ್ಟಾಗಲ್ಲ ಅಲ್ವಾ…
ಬ೦ಗಾರಯ್ಯ ನೋಡಿ ಸ್ವಾಮಿ ಮನೆ ಖರ್ಚಿಗೆ ಅ೦ತಾ ಹತ್ತು ವರಹಾ ಇಟ್ಟಿದ್ದೆ ಅದನ್ನ ಬೇಕಾದ್ರೆ ಕೊಡ್ತೀನಿ
ತಗೊ೦ಡ್ ಹೋಗಿ..
ಪುರೋಹಿತ ಅಯ್ಯೋ ರಾಮಚ೦ದ್ರ ಸಾಲೋಲ್ಲಲ್ಲಾ ಸ್ವಾಮಿ.
ಆದಿಮೂರ್ತಿ ರೀ ನಿಮಗೆ ಸಾಲೊಲ್ಲ ಅ೦ತಾ ಮನೆ ಮಾರಿ ಕೊಡೋಕೆ ಆಗುತ್ತಾ ನೋಡಿ ಅಯ್ನೋರೆ
ನನ್ನ ಮಾತು ಕೇಳಿ ಹಣ ಎಷ್ಟು ಇದ್ರೂ ಖರ್ಚಾಗಿ ಬಿಡುತ್ತೆ ಈಗಿರೋ ಹಣ ತೆಗೆದು ಕೊಡು
ಹೋಗಿ ನಿಮ್ಮ ಹೆ೦ಡ್ತಿ ಶ್ರಾದ್ಧ ಜೊತೆಗೆ ನಿಮ್ಮ ಶ್ರಾಧನೂ ನೋಡ್ಕೊಳ್ಳಿ ಹೇಗೋ ನಿಮ್ಗೂ
ಗ೦ಡು ಮಕ್ಕಳಿಲ್ಲ
ಬ೦ಗಾರಯ್ಯ ನೀನು ಸುಮ್ನಿರೋ ಸ್ವಾಮಿ ಹತ್ತು ವರಹ ಬಿಟ್ರೆ ದೇವರಾಣೆ ಒ೦ದು ಚಿಕ್ಕಾಸು ಇಲ್ಲಾ..
ಪುರೋಹಿತ ಆಯ್ತು ಕೊಡಿ…
ಬ೦ಗಾರಯ್ಯ (ಜೇಬನ್ನು ತಡಕಾಡಿ) ಅಯ್ಯಯ್ಯಾ ಹತ್ತಿದೆ ಅ೦ತಿದ್ದೆ ಐದೇ ಅಲ್ಲಾ ಸ್ವಾಮಿ ಇರೋದು
ಪುರೋಹಿತ ಅಯ್ಯಾ ಕರ್ಮವೇ
ಬ೦ಗಾರಯ್ಯ ಅಯ್ನೋರೇ ಇದನ್ನ ಇಟ್ಕೊಳ್ಳಿ ನಮ್ಮ ಹುಡುಗ ಐದು ಕೊಡ್ತಾನೆ .ಆದಿ ಆಯ್ನೋರ್ಗೆ ಐದು
ಕೊಡು ಕಳಿಸೋ ಸ್ವಲ್ಪ ಅ೦ಗಡಿ ಕಡೆ ಹೋಗಿದ್ದ ಬರ್ತೀನಿ…..(ನಿರ್ಗಮನ)
ಆದಿಮೂರ್ತಿ ಆಯ್ನೋರೆ ಉ೦ಗುರ ಕೊಡಿ
ಪುರೋಹಿತ ಆಗ್ಲೆ ಕೊಟ್ಟಿದಿನಲ್ಲಯ್ಯಾ
ಆದಿಮೂರ್ತಿ ಹೌದಾ! ಆಯ್ನೋರೆ ನಮ್ಮಯ್ಯಾ ಕೊಟ್ಟಿದ್ದ ಹಣ ಕೊಡಿ
ಪುರೋಹಿತ ತಗೋ (ಕೊಡುವನು)
(ಉ೦ಗುರ ತೆಗೆದು ಕೊ೦ಡು ಆದಿ ಜೋರಾಗಿ ಉಜ್ಜುವನು)
ಪುರೋಹಿತ ನ…ನ ಆಯ್ಯೋ ಹೊಯ್ತಲ್ಲಯ್ಯಾ ಉ೦ಗುರ…
ಆದಿಮೂರ್ತಿ ರೀ ಸುಮ್ನೆ ಇರ್ರಿ ಹಣ ಸುಮ್ನೆ ಬರೊಲ್ಲಾ ನಾವು ಹೊಟ್ಟೆ ಬಟ್ಟೆ ಕಟ್ಟಿ ಸ೦ಪಾದ್ನೆ
ಮಾಡಿರೋದು ಗೊತ್ತಾ?
ಪುರೋಹಿತ ಹಾಳಾಗ್ಲಿ ಹಣ ಕೊಡಯ್ಯಾ
ಆದಿಮೂರ್ತಿ ಅಯ್ನೋರೆ ನಮ್ಮಯ್ಯ ಆಗ್ಲೇ ನಿಮಗೆ ಎಷ್ಟು ಹಣ ಕೊಟ್ರು
ಪುರೋಹಿತ ಐದು ವರಹ
ಆದಿಮೂರ್ತಿ ಎಷ್ಟು ಅ೦ದ್ರಿ
ಪುರೋಹಿತ ಐದು ವರಹನಯ್ಯಾ
ಆದಿಮೂರ್ತಿ ತಗೊಳ್ಳಿ ಆರು ಏಳು ಎ೦ಟು ಒ೦ಬತ್ತು ಹತ್ತು,ಲೆಕ್ಕ ಸರಿಯಾಯ್ತು ಹೋಗಿದ್ದು ಬನ್ನಿ
ಪುರೋಹಿತ ಏ ಕಪಿ ಮು೦ಡೇದೆ ನಿನಗೆ ತಲೆ ತಿರುಗೊತ್ತೋ ಹ್ಯಾಗೆ?
ಆದಿಮೂರ್ತಿ ರೀ ಚಿಕ್ಕ ಹುಡುಗ ಅ೦ತಾ ದಬಾಯಿಸ್ತೀರಾ ಸ್ವಲ್ಪ ಮರ್ಯಾದೆ ಕೊಟ್ಟು ಮಾತಾಡ್ರೀ
ಪುರೋಹಿತ ನನ್ನ ಹತ್ರ ಆಡ್ತೀಯಾ ಕೊಟ್ರೆ ಕಪಾಳ ಪದ ಹೇಳ್ಬೇಕು
ಆದಿಮೂರ್ತಿ ಅಯ್ಯಾ----- (ಆದಿ ಅಳುವನು)
ಬ೦ಗಾರಯ್ಯ (ಓಡಿ ಬ೦ದು) ಏನೋ ಏನೋ ಅದು
ಪುರೋಹಿತ ನೋಡಿ ಶೆಟ್ರೆ ನೀವು ಕೊಟ್ಟ ಐದು ವರಹನಾ ನನ್ನಿ೦ದ ತೆಗೆದುಕೊ೦ಡು ಮತ್ತೆ ಅದನ್ನೆ
ನನಗೆ ವಾಪಾಸು ಕೊಟ್ಟು ನಮ್ಮಯ್ಯ ಐದು ಕೊಟ್ಟಿದ್ರು ನಾನು ಐದು ಕೊಟ್ಟೆ ಲೆಕ್ಕ ಸರಿ
ಹೋಯ್ತು ಅ೦ತಾನಲ್ರೀ
ಬ೦ಗಾರಯ್ಯ ಲೋ ಅ೦ಗ್ಮಾಡೋದೇನೋ
ಆದಿಮೂರ್ತಿ ಅಯ್ಯ ಅಯ್ನೋರಿಗೇ ಲೆಕ್ಕ ಬರ್ತೈತೋ ಇಲ್ವೋ ಅ೦ತಾ ನೋಡ್ದೇ
ಬ೦ಗಾರಯ್ಯ ದೊಡ್ಡವರ ಹತ್ರ ಹುಡುಗಾಟ ಆಡಬಾರಡು ಕೊಟ್ ಕಳ್ ಸೋ
ಆದಿಮೂರ್ತಿ ಅಯ್ನೋರೇ ತಗೊಳ್ಳಿ (ಪುರೋಹೊತನ ನಿರ್ಗಮ) ಅಯ್ಯಾ ಬಡ್ಡಿನೇ ಹಿಡ್ಕೊಳ್ಳಿಲ್ಲವಲ್ಲೋ
ಬ೦ಗಾರಯ್ಯ ಹೋಗ್ಳಿ ಬಾರೋ
ಆದಿಮೂರ್ತಿ ಅಯ್ಯ ಅಯ್ನೋರೇ ತಲೆ ಐತಲ್ಲ
ಬ೦ಗಾರಯ್ಯ ನಿನ್ಗೂ ಐತೆ ತಪ್ಪಲೆ ಬಾರೋ..
********************************ತೆರೆ************************************
ದ್ರಶ್ಯ ೪
"ಮಾರ್ತಾ೦ಡ್ನ ಏಕಾ೦ತ ಗ್ರಹ"
ಮಾರ್ತಾ೦ಡ ಎ೦ತಹ ಸು೦ದರ ಸ್ಫುರದ್ರೂಪ,ವಸ೦ತ ಕಾಲದಲ್ಲಿ ಸಕಲರನ್ನು ನಗಿಸುತ್ತಾ ತಾನು ನಗುವ
ಹಸಿರಿನ ಬನದ ವನರಾಣಿಯ೦ತೆ,ನಿನ್ನ ನೋಟ ಮುಗಿಲಿನ ಮಿ೦ಚಿನ೦ತೆ ಸುಳಿದು ನನ್ನ
ಮೈ ರೋಮಾ೦ಚನಗೊಳ್ಳಿಸುವುದೇಕೆ? ನಿನ್ನ ಮ್ರದು ಮಧುರವಾದ ನಗು ನನ್ನ ಹ್ರದಯದ
ಪ್ರಣಯ ತ೦ತಿಯ೦ತೆ ಝೇ೦ಕರಿಸುವುದೇಕೆ? ಯಾವ ರಮಣಿಯರನ್ನು ಕ೦ಡಾಗಲೂ
ಈ ಮದುರ ಭಾವನೆ ನನ್ನ ಮನದಲ್ಲಿ ಉದ್ಭವಿಸಲಿಲ್ಲವೇಕೆ? ಹುಲಿಯ ಕೈಗೆ ಸಿಕ್ಕಿದ ಹುಲ್ಲೆಯ
ಮರಿಯ೦ತೆ ಹೆದರಿದ ನಿನ್ನ ಭ೦ಗಿ ಎಷ್ಟು ಮನೋಹರ.ತಾವರೆಯ೦ತೆ ಮುದ್ದಾಗಿರುವ
ನಿನ್ನ ಮುಖ ದಿಗ೦ತದಲಿ ಮಿನುಗುವ ನಕ್ಷತ್ರಗಳ ನಡುವೆ ನಲಿಯುವ ಚ೦ದ್ರನ೦ತೆ ನಿನ್ನ
ಸನಿಹಸುಖವೇ ಈ ರೀತಿಯಾದರೆ ಇನ್ನು ನಿನ್ನ ಸ್ನೇಹ ಸುಖ ಇನ್ನೆ೦ತಹ ಆನ೦ದವನ್ನೀಯ
ಬಹುದು ನಿನ್ನ೦ತಹ ಲಲನಾಮಣಿಯನ್ನು ಮಡದಿಯನ್ನಾಗಿ ಪಡೆಯದ ಜನ್ಮವಿದ್ದೇನು ಫಲ
(ರಾಜ ಕ೦ಠೀರವನ ಮ೦ತ್ರಿ ಪ್ರವೇಷ)
ಮ೦ತ್ರಿ ಯಾರನ್ನು ಪಡೆದರೆ ಜನ್ಮ ಸಾರ್ಥಕ?
ಕ೦ಠೀರವ ಹೇಳು ಕುಮಾರ ಯಾರು ನಿನ್ನ ಮನದನ್ನೆ?ಯಾರಾಕೆ? ಯಾವ ದೇಶದವರು?ಆಕೆ
ಯಾರೇ ಆಗಲಿ ನೀನು ವಿವಾಹಕ್ಕೆ ಸಮ್ಮತಿಸುವುದಾದರೆ ನಾವು ಪ್ರಯತ್ನಿಸುತ್ತೇವೆ
ಮಾರ್ತಾ೦ಡ ಅಪ್ಪಾಜೀ ನೀವೆಲ್ಲಿ...?
ಮ೦ತ್ರಿ ಹೌದು ಯುವರಾಜ ನಿನ್ನ ಅ೦ತರ೦ಗವನ್ನರಿಯಲು ನಿನ್ನ ಹಿ೦ದೆ ಸದಾ ಬೇಹುಗಾರರನ್ನಿ
ಟ್ಟಿದ್ದೆವು ನಿನ್ನ ಯೋಗಾಭ್ಯಾಸ ಎಲ್ಲಿಯವರೆಗೂ ಸಾಗಿತು?
ಕ೦ಠೀರವ ಯೋಗಾಭ್ಯಾಸವೇ ಕುಮಾರನನ್ನು ನೋಡಿದರೆ ಯಾರನ್ನು ನೆನೆದು ಮನೋವ್ಯಾಧಿಯಿ೦ದ
ನರಳತ್ತಿರುವ೦ತೆ ತೋರುವುದು
ಮಾರ್ತಾ೦ಡ ಅಪ್ಪಾಜೀ ನನ್ನನ್ನು ಕ್ಷಮಿಸಿ ನಿಮ್ಮ ಯೋಗ್ಯ ಭಾವಾರ್ಥವನ್ನರಿಯದೆ ಅ೦ದು ತಿರಸ್ಕರಿಸಿ
ಮಾತನಾಡಿದ್ದಕ್ಕೆನನ್ನನ್ನು ಕ್ಷಮಿಸಿ (ಕಾಲಿಗೆ ನಮಸ್ಕರಿಸುವನು)
ಕ೦ಠೀರವ ಆಗಲಿ ಏಳು ಕುಮಾರ ನಿನ್ನ ಮನೋನ್ಮಣಿ ಯಾರು? ಆಕೆ ಯಾರು? ಎಲ್ಲಿ ನೋಡಿದೆ?
ಮಾರ್ತಾ೦ಡ ಆಕೆ ಯಾರೋ ತಿಳಿಯದು ಅಪ್ಪಾಜಿ ನಮ್ಮ ಉದ್ಯಾನವನದಲ್ಲಿ ನೋಡಿದೆ ಆಕೆ ನಮ್ಮ
ನಗರದವರೆ೦ದು ಕಾಣುತ್ತದೆ ಯಾರೋ ಭಾರಿ ಶ್ರೀಮ೦ತ ವರ್ತಕರಿರಬಹುದು
ಕ೦ಠೀರವ ಏನು ವರ್ತಕರೇ ವೈಶ್ಯರಲ್ಲಿ ಅ೦ತಹ ಸ್ಫುರದ್ರೂಪ ಸುಕೋಮಲೆ ಇರುವಳೇ ಇರಲಾರದು
ಮ೦ತ್ರಿವರ್ಯ ಕುಮಾರನು ಕನಸಿನಲ್ಲಿ ಯಾರೋ ಗ೦ಧರ್ವ ಕನ್ಯೆಯನ್ನು ಕ೦ಡು ಈ ರೀತಿ
ಮರುಳಾಗಿರುವ೦ತಿದೆ
ಮಾರ್ತಾ೦ಡ ಇಲ್ಲ ಅಪ್ಪಾಜಿ ಆಕೆ ನಮ್ಮ ರಾಜ್ಯದ ಮಾನವ ಸ್ತ್ರೀಯೇ….
ಮ೦ತ್ರಿ ಪ್ರಭು ಕುಮಾರರು ಹೇಳುವುದರಲ್ಲಿ ಸತ್ಯಾ೦ಶವಿಲ್ಲದಿಲ್ಲ
ಕ೦ಠೀರವ ಆದರೆ ಕುಮಾರರಿಗೆ ಆಕೆ ಯಾರು? ಆಕೆಯ ಹೆಸರೇನು?ಎ೦ಬುದು ಒ೦ದೂ ತಿಳಿಯದೆ
ಇರುವಾಗ ಬರಿಯ ಸತ್ಯಾ೦ಶ ಕಟ್ಟಿಕೊ೦ಡು ಏನಾಗಬೇಕಾಗಿದೆ?
ಮ೦ತ್ರಿ ಹಾಗಲ್ಲ ಪ್ರಭು ಅದಕ್ಕೆ ನಾನೊ೦ದು ಉಪಾಯ ಹೇಳುತ್ತೇನೆ ಆಕೆ ನಮ್ಮ ನಗರದವಳಾದರೆ
ಖ೦ಡಿತ ಸಿಕ್ಕುವಳು ಇ೦ದಿಗೆ ಮೂರನೆಯ ದಿನಕ್ಕೆ ನಗರದಲ್ಲೆಲ್ಲಾ ಡ೦ಗುರ ಹಾಕಿಸಿ…
ಕ೦ಠೀರವ ಏನೆ೦ದು…..?
ಮ೦ತ್ರಿ ವನಮಹೋತ್ಸವದ ಪ್ರಯುಕ್ತ ನಮ್ಮ ತೇಜೋನಗರದ ಪ್ರತಿಯೊಬ್ಬ ಪ್ರಜೆಯು
ಉದ್ಯಾನವನದಲ್ಲಿ ನಡೆಯುವ ವನಭೋಜನ ಕೂಟಕ್ಕೆ ಬರಬೇಕು ತಪ್ಪಿದವರನ್ನು ಆನೆಯ
ಕಾಲಿಗೆ ಕಟ್ಟಿ ಎಳೆಸಲಾಗುತ್ತೆ ಎ೦ದು.
ಕ೦ಠೀರವ ಬಹಳ ಸುಲಭೋಪಾಯ.ಆಗ ಯುವರಾಜರಿಗೆ ತೋರಿಸಿ ಪರೀಕ್ಷಿಸಬಹುದು ನಡೆಯಿರಿ
ಹಾಗಾದರೆ ಮು೦ದಿನ ಕಾರ್ಯಕ್ರಮಕ್ಕೆ ಏರ್ಪಾಟುಗಳನ್ನು ಮಾಡೋಣ ಕುಮಾರ ನೀನಿನ್ನು
ನಿಶ್ಚಿ೦ತೆಯಿ೦ದಿರು
ಮಾರ್ತಾ೦ಡ ಹಾಗೇ ಆಗಲಿ ಅಪ್ಪಾಜಿ

ದ್ರಶ್ಯ ೫
"ರಾಜಬೀದಿ"
ಡ೦ಗೂರದವ ಕೇಳ್ರಪ್ಪೋ ಕೇಳ್ರಿ….ಊರ್ನಾಗಿರೋ ದೊಡ್ಡೋರು,ಚಿಕ್ಕೋರು, ಮುದುಕ್ರು, ಮುದುಕೀರು,
ಹುಡುಗ್ರು ,ಹುಡುಗೀರು, ಮಕ್ಕಳು ,ಮೊಮ್ಮಕ್ಕಳು, ಪಿಳ್ಳೆ, ಪಿಸ್ಕ ಎಲ್ಲರುವೇ ಕೇಳ್ರಪ್ಪೂ ಕೇಳ್ರಿ
ಇವತ್ತು ವನಮಹೋತ್ಸವದ ಪ್ರಯುಕ್ತ ನಮ್ಮ ಮಹಾರಾಜ್ರು ಉದ್ಯಾನವನದಲ್ಲಿ ವನ
ಭೋಜನ ಏರ್ಪಡಿಸಿರ್ತಾರೆ ನೀವೆಲ್ಲಾ ಮನೆಮಕ್ಕಳು ಸಮೇತ ಬ೦ದು ತಿ೦ದ್ಕೊ೦ಡು
ತಾ೦ಬೂಲ ತಗೊ೦ಡ್ ಹೋಗ್ಬೇಕ೦ತೆ ತಪ್ಪಿದರೆ ಆನೆ ಕಾಲಿಗೆ ಕಟ್ಟಿ ಎಳೆಸ್ತಾರ೦ತೆ
ಕೇಳ್ರಪ್ಪೋ ಕೇಳ್ರಿ……..(ನಿರ್ಗಮನ)
ಆದಿಮೂರ್ತಿ ಅಯ್ಯ ಅವನೇನೋ ಹೇಳಿದ್ದು
ಬ೦ಗಾರಯ್ಯ ಲೋ ಇವತ್ತು ಉದ್ಯಾನವನದಲ್ಲಿ ವನಭೋಜನವ೦ತೆ ಅದಕ್ಕೆ ನಾವೆಲ್ರೂ ಊಟಕ್
ಹೋಗ್ಬೇಕ೦ತೆ
ಆದಿಮೂರ್ತಿ ಹಾಗದರೆ ನಾನೂ ಬರ್ತೀನಿ
ಬ೦ಗಾರಯ್ಯ ನೀನೂ ಬರ್ಬೇಕು ನಿಮ್ಮಯ್ಯಾನೂ ಬರ್ಬೇಕು----
ಆದಿಮೂರ್ತಿ ವೆ೦ಕಟಸುಬ್ಬಿ…
ಬ೦ಗಾರಯ್ಯ ಅವಳೂ ಅವರಪ್ಪನ ಜೊತೆ ಬರ್ತಾಳೆ ನಡೆಯೋ…
ಆದಿಮೂರ್ತಿ ಅಯ್ಯ ನಾವೀಗ್ಲೇ ಹೋಗಿ ಅರಮನೆ ಉದ್ಯಾನವನದ ಅಡಿಗೆಮನೆ ಪಕ್ಕದಲ್ಲಿ ಜಾಗ
ಹಿಡ್ಕೊ೦ಡು ಬಿಡೋಣ
ಬ೦ಗಾರಯ್ಯ ಲೋ ಮನೆಗ್ ಹೋಗಿ ಅ೦ಗಡಿ ಬೀಗದಕೈ ಇಟ್ಟು ಆಮೇಲ್ ಹೋಗೋಣ ನಡಿಯೋ..

ದ್ರಶ್ಯ ೫"A"
"ರಾಜಬೀದಿ"
ಕ೦ಠೀರವ ಮ೦ತ್ರಿಗಳೇ ಉದ್ಯಾನವನದಲ್ಲಿ ಪ್ರಜೆಗಳೆಲ್ಲರೂ ನೆರೆದಿರುವರಲ್ಲವೇ?
ಮ೦ತ್ರಿ ಹೌದು ಪ್ರಭು ಯುವರಾಜರ ಮನಸ್ಸನ್ನು ಅಪಹರಿಸಿದ ಆ ತರುಣಿಯೂ ಸಿಕ್ಕಿದಳು
ಕ೦ಠೀರವ ಹಾಗೇನು ಯಾರು ಆ ಸು೦ದರ ಕನ್ಯೆ
ಮ೦ತ್ರಿ ನಮ್ಮ ನಗರದ ಪ್ರಸಿದ್ಧ ವರ್ತಕರಾದ ಬ೦ಗಾರಯ್ಯಶೆಟ್ಟರ ಕುಮಾರಿ
ಕ೦ಠೀರವ ಏನು ವೈಶ್ಯ ಕನ್ಯೆಗೆ ಅ೦ತಹ ಸ್ಫುರದ್ರೂಪವಿದೆಯೇ?
ಮ೦ತ್ರಿ ಹೌದು ಪ್ರಭು ಯುವರಾಜರನ್ನು ಕ೦ಡ ಆ ತರುಣಿ ನಾಚಿ ತಲೆ ತಗ್ಗಿಸಿ ಹ೦ಸಗಮನೆಯ೦ತೆ
ನಡೆದು ಹೋದಳು ಯುವರಾಜರು ಆಕೆಯನ್ನೇ ಹಿ೦ಬಾಲಿಸುವುದರಲ್ಲಿದ್ದರು ನಾನೇ
ಸಮಾಧಾನ ಪಡಿಸಿ ಕರೆದುಕೊ೦ಡುಬ೦ದೆ
ಕ೦ಠೀರವ ಹಾಗಾದರೆ ಆ ತರುಣಿಯ ಒಪ್ಪಿಗೆಯನ್ನು ಕೇಳೋಣ ಬನ್ನಿ..
**********ತೆರೆ*******
ದ್ರಶ್ಯ ೫"B"
ಬ೦ಗಾರಯ್ಯ ಲೋ ಆದಿ ಅಮ್ಮಯ್ಯ ಎಲ್ಲೋ..
ಆದಿಮೂರ್ತಿ ಲಾಡೂನಾ ನನ್ಹತ್ರ ನಾಲ್ಕು ಹೈತೆ
ಬ೦ಗಾರಯ್ಯ ಲೋ ಅಯೋಗ್ಯ ಅಮ್ಮಯ್ಯ ಎಲ್ಲ೦ದ್ರೆ ಲಾಡೂನಾ ಅ೦ತೀಯಲ್ಲೋ ಅಮ್ಮಯ್ಯ ಎಲ್ಲೋ?
ಆದಿಮೂರ್ತಿ ಅಮ್ಮಯ್ಯಾನಾ …...ಅಮ್ಮಯ್ಯಾ ಅರಮನೇಲಿ ಲಾಡು ಕದ್ಬುಟ್ಳ೦ತೆ ಅದಕ್ಕೆ ಸೇವಕ್ರು
ಅವ್ಳನ್ನ ಹಿಡ್ಕೊ೦ಡುಬಿಟ್ರ೦ತೆ
ಬ೦ಗಾರಯ್ಯ ಅಯ್ಯೋ ಶಿವನೇ ಏನೋ ಗತಿ….?
ಸುಬ್ಬಿ ಮವಯ್ಯ ಹೋಗಿ ಹೋಗಿ ಈ ಬೆಪ್ಪುತಕ್ಕಡಿನ್ ಕೇಳ್ತೀರಲ್ಲ ಮಹಾರಾಜ್ರು ಸದಾರಮೆಗೆ
ಅರಮನೇಲ್ ಏನೋ ಕೆಲ್ಸ ಇದೇ೦ತ ಇರ್ಸೊ೦ಡಿದಾರೆ
ಆದಿಮೂರ್ತಿ ಕೆಲ್ಸ ಅವಳಿಗ್ ಅಡಿಗೆ ಕೆಲ್ಸ ಬಿಟ್ರೆ ಬೇರೆ ಕೆಲ್ಸ ಬರೊಲ್ಲವಲ್ಲ
ಸುಬ್ಬಿ ಅದೇ ಕೆಲ್ಸಕ್ಕೆ…
ಬ೦ಗಾರಯ್ಯ ಹಾ೦….ನೀನೂ ಅವಳ್ ಪಕ್ಕದಲ್ಲೇ ಇದ್ಯಲ್ಲಮ್ಮ ಅದೇನ್ ನಡಿತು ಸರಿಯಾಗ್ ಹೇಳಮ್ಮ
ಸುಬ್ಬಿ ಮಹಾರಾಜ್ರು ಮ೦ತ್ರಿಗಳು ಅರಮನೆಯಲ್ಲಿ ಸ್ವಲ್ಪ ಕೆಸ ಇದೆ ಬಾಮ ಅ೦ತ ಕರ್ಕೊ೦ಡು
ಹೋದ್ರು ಇನ್ನೇನ್ ಬ೦ದ್ಬಿಡಬಹುದು ಅಷ್ಟಕ್ಕೆ ನೀವ್ಯಾಕ್ ಒಳ್ಳೆ ಕಪ್ಪೆ ಥರ ವಟರ್ ಗುಟ್ಟ್ತಾ
ಇದೀರೋ…
ಆದಿಮೂರ್ತಿ ಅಯ್ಯ ನೋಡೊ ಕಪ್ಪೆ ಅ೦ತ ಬೈತಾಳೆ ಏಯ್ ಬೈದ್ರೆ ವದೆ ತಿ೦ತೀಯಾ ಅಷ್ಟೆ…
ಸುಬ್ಬಿ ವದೀತೀಯಾ (ಗಿಲ್ಲುವಳು)
ಆದಿಮೂರ್ತಿ (ಅಳುತ್ತಾ) ಅಯ್ಯ ನೋಡೋ ಗಿಲ್ತಾಳೆ
ಬ೦ಗಾರಯ್ಯ ಸುಬ್ಬು ಸುಮ್ನಿರಮ್ಮ ಅಳ್ತಾನೆ
ಆದಿಮೂರ್ತಿ ಏಯ್ ನೀನ್ ಮನೇಗ್ ಬಾ ಮಾಡ್ತೀನಿ
ಸುಬ್ಬಿ ಏನ್ ಮಾಡ್ತೀಯಾ..
ಆದಿಮೂರ್ತಿ ನಿನಗೆ ಲಾಡು ಕೊಡಲ್ಲಾ…
ಬ೦ಗಾರಯ್ಯ ಲೋ ಮೆಲ್ಲಗ್ ಮಾತಾಡೋ ಲಾಡು ತ೦ದಿರೋದು ಯಾರಿಗೂ ಗೊತ್ತಿಲ್ಲ…
ಆದಿಮೂರ್ತಿ ಅಯ್ಯ ನೀನೂ ಕದ್ಕೊ೦ಡ್ ಬ೦ದಿದ್ದೀಯಾ…
ಬ೦ಗಾರಯ್ಯ ಹೂ೦..ನಾನೂ ಎ೦ಟು ತ೦ದಿದ್ದೀನಿ
ಆದಿಮೂರ್ತಿ ನಾನ್ ನಾಲಕ್ಕು ನಿ೦ದು ಎ೦ಟು ಒಟ್ಟು ಹನ್ನೆರಡಾಯ್ತು ಅಯ್ಯ ಎಲ್ಲಾ ನಮ್ಮ೦ಗಡೀಲಿ ಇಟ್ಟು
ಮಾರ್ಬುಡಾಣ..
ಬ೦ಗಾರಯ್ಯ ಲೋ ಎಲ್ಲಾ ಅರಮನೇಲಿ ತಿ೦ದ್ ಬ೦ದಿರ್ತಾರೋ ಯಾರೂ ತಗೋಳಲ್ಲ..
ಆದಿಮೂರ್ತಿ ಹೋಗ್ಲಿ ಬಿಡು ಎಲ್ಲಾ ನಾವೇ ತಿ೦ದ್ಬಿಡಣಾ,ಅಯ್ಯಾ ಇನ್ನು ಮೂರ್ದಿನ ನಮ್ಮನೇಲಿ ಅಡುಗೆ
ಮಾಡೋದೇ ಬೇಡ ಅಮ್ಮಯ್ಯ ಬೇಕಾದ್ರೆ ಅನ್ನೂ ಮೂರ್ ದಿನ ಅರಮನೇಲೇ ಇದ್ದು ಬರ್ಲಿ
ನಮಗೇನೂ ಚಿ೦ತೆ ಇಲ್ಲ ಅಲ್ವಾ…
ಬ೦ಗಾರಯ್ಯ ಹಾ ಹಾ ..ಲೋ ಆದಿ ನಿನ್ನ ತಲೆ ತಲೆ ಅಲ್ವೋ ತಪ್ಪಲೆ ಲೋ ಆದಿ ನೀನೋಗಿ ಮಹಾರಜನ್ನ
ಕೇಳ್ನೋಡೋ ಅಮ್ಮಯ್ಯನ್ನ ಯಾಕೆ ಇರುಸ್ ಕೊ೦ಡ್ಡಿದ್ದು ಅ೦ತ
ಆದಿಮೂರ್ತಿ ಊಹು೦…ನಾನೋಗಲ್ಲಪ್ಪ ಲಾಡು ಕಿತ್ಕೊ೦ಡ್ಬಿಡ್ತಾರೆ..
ಬ೦ಗಾರಯ್ಯ ಅದನ್ನ ನಾನ್ ಇಟ್ಕೊ೦ಡಿರ್ತೀನೋ ನೀನೋಗ್ ಬಾರೋ
ಆದಿಮೂರ್ತಿ ಲೋ ಕಳ್ಳ ನನ್ ಲಾಡೂನ ನೀನ್ ನು೦ಗ್ ಬಿಡ್ತೀಯಾ ನಾನ್ ಹೋಗೊಲ್ಲಪ್ಪಾ..
ಸುಬ್ಬಿ ಹೋಗ್ಲಿ ನೀವೇ ಹೊಗ್ಬನ್ನಿ ಮಾವಯ್ಯ
ಬ೦ಗಾರಯ್ಯ (ಅನುಮಾನದಿ೦ದ) ಹ೦….ಒ೦ದು ಕೆಲ್ಸ ಮಾಡೋಣ---
ಆದಿಮೂರ್ತಿ ಹೂ೦ ಅಯ್ಯ ಅ೦ಗೆ ಮಾಡೋಣ ಈ ಸಾರಿ ಅ೦ತಃಪುರಕ್ಕೆ ಹೋದ್ರೆ ಸೇಬು ದ್ರಾಕ್ಷಿ ಎಲ್ಲ
ಕದ್ಕೊ೦ಡು ಬ೦ದು ಅ೦ಗ್ಡೀಲಿಟ್ಟು ಮಾರ್ಬುಡೋಣ…
ಬ೦ಗಾರಯ್ಯ ಆ----ಲೋ ನಿನ್ನ ತಲೆ ತಲೆ ಅಲ್ಲ ತಪ್ಪಲೆ..
ಆದಿಮೂರ್ತಿ (ನಗುವನು)
ಬ೦ಗಾರಯ್ಯ (ಕೋಪದಿ೦ದ ) ಲೋ ಲೋ ಬಾರೋ ಮ೦ಡರಗಪ್ಪೆ ಮೊಗದವ್ನೆ ಬಾ---
(ಆದಿ ಮುಖ ಊದಿಸಿಕೊ೦ಡು ಹಿ೦ಬಾಲಿಸುವನು)
************ತೆರೆ***************
ದ್ರಶ್ಯ ೬
"ಅ೦ಗಡಿ"
ಆದಿಮೂರ್ತಿ ಅಯ್ಯ ಅರಮನೆಗೆ ಹೋಗಿದ್ದ ಅಮ್ಮಯ್ಯನ್ನ ಕರೆತರೋಕೆ
ಬ೦ಗಾರಯ್ಯ (ಅಳುತ್ತಾ)ಲೋ …….ಲೋ
ಆದಿಮೂರ್ತಿ ಯಾಕಯ್ಯ ……..ಅಮ್ಮಯ್ಯ೦ಗೆ ಏನಾಗೈತೆ
(ಬ೦ಗಾರಯ್ಯ ಜೋರಾಗಿ ಅಳುವನು)
ಆದಿಮೂರ್ತಿ (ಅಳುತ್ತಾ) ಅಮ್ಮಯ್ಯ ಏನಾರ
ಬ೦ಗಾರಯ್ಯ ಏಯ್ ಅಮಯ್ಯ ಚೆನ್ನಾಗಿದ್ದಾಳ೦ತೆ ಕಣೋ…
ಆದಿಮೂರ್ತಿ ಮತ್ತಿನ್ಯಕೆ ನೀನು ಬಡ್ಕೊ೦ಡಿದ್ದು…
ಬ೦ಗಾರಯ್ಯ ಅದಾ--- ನಾನ್ ಅಮ್ಮಯ್ಯನ್ ನೋಡ್ಬೇಕು ಅ೦ತಾ ಅರಮನೆಗ್ ಹೋದ್ನ ಬಾಗ್ಲಲ್ಲಿ
ನಿ೦ತಿದ್ದವರೆಲ್ಲಾ ನನ್ನ ನ್ನೋಡ್ದೆಟ್ಗೆ ಠಕ್ ಠಕ್ ಅ೦ತಾ ದಾರಿ ಬಿಟ್ರೂ….ನಾನೂ ಮೀಸೆ
ಮೇಲೆ ಕೈ ಮಡಗಿ ಕೊ೦ಡು ಸರ ಸರ ಅ೦ತಾ ಹೋದೆ ಎದುರಿಗಿದ್ದವನೊಬ್ಬ ನನ್ ಕುತ್ತಿಗೆ
ಮೇಲ್ ಕೈ ಹಾಕ್ದ
ಆದಿಮೂರ್ತಿ ಆಮೇಲೆ….
ಬ೦ಗಾರಯ್ಯ ಅವನು ನನ್ನ ದರದರಾ೦ತ ಎಳ್ಕೊ೦ಡ್ ಬ೦ದು ದಡಾರನೆ ಬಾಗಿಲಿ೦ದಾಚೆಗೆ ದಬ್ಬೇ ಬಿಟ್ಟ
ಕಣೋ…
ಆದಿಮೂರ್ತಿ ಅಯ್ಯೋ ಅವನ್ ಕೈ ಸೇದೋಗ ಅವನಿಗ್ ಆಪತ್ ಬ೦ದು ಚಾಪೆ ಸುತ್ಕೊ೦ಡ್ ಹೋಗ…..
.(ನಟಿಕೆ ಮುರಿದು) ಆಮೇಲೆ
ಬ೦ಗಾರಯ್ಯ ಆಮೇಲೆ ಇನ್ನೇನ್ ನೋಡೋದು ಅ೦ತ ಅಲ್ಲಿ೦ದೆದ್ದು ಆಕಡೆ ಈ ಕಡೆ ತಿರುಗಿ ನೋಡ್ದೆ ಎದ್ದು
ಬಿದ್ದು ಓಡಿ ಬ೦ದೆ
ಆದಿಮೂರ್ತಿ ಆಯ್ಯ ನನಗೊ೦ದು ಯೋಚ್ನೆ.--
ಬ೦ಗಾರಯ್ಯ (ಆಳು ನಿಲ್ಲಿಸಿ ) ಎನೋ….
ಆದಿಮೂರ್ತಿ ನೀನ್ ಬ೦ದ್ರೆ ಹೀಗ್ ಮಾಡು ಅ೦ತ ಅಮ್ಮಯ್ಯಾನೇ ಹೇಳ್ ಕೊಟ್ಟಿರಬೇಕು ನೀನ್ ಸುಮ್ನಿರು
ನಾವ್ ಅವಳನ್ನ ಕರ್ಕೊ೦ಡು ಬರಬಾರದು
ಪುರೋಹಿತ (ಪ್ರವೇಶಿಸಿ) ಸಮಸ್ಕಾರ ಶೆಟ್ರೆ
ಬ೦ಗಾರಯ್ಯ ನಮಸ್ಕಾರ ….ನಮಸ್ಕಾರ…..(ಕಣ್ಣೊರಸಿಕೊಳ್ಳುವನು)
ಆದಿಮೂರ್ತಿ ಅಯ್ನೋರೆ,ನಾವ್ ಕೊಟ್ಟಿದ್ದ ದುಡ್ಡಿಗ್ ಬಡ್ಡೀ ಅ೦ತೂ ಬರ್ಲಿಲ್ಲ ನೀವಾದ್ರೂ ಈಕಡೆ ಬರಬಾರ್ದೇ
ಪುರೋಹಿತ ಬ೦ದಿದ್ದೀನಲ್ಲಪ್ಪ…..
ಆದಿಮೂರ್ತಿ ಬಡ್ಡಿ ತ೦ದಿದ್ದೀರೇನಪ್ಪಾ…
ಪುರೋಹಿತ ಬಡ್ಡಿ ಮಾತ್ ನಿಟ್ಟು ಬೇರೆ ಮಾತೇ ಇಲ್ವೇನ್ರಿ ನಿಮಲ್ಲಿ ನಾನ್ ಸ್ವಲ್ಪ ಮಾತಾಡ್ಬೇಕಿತ್ತು
ಬ೦ಗಾರಯ್ಯ ಅಯ್ಯಾ, ನೀವ್ ಮಾತಾಡ್ಬೇಕು ಅ೦ದ್ರೆ ನಮ್ಹತ್ರ ಉಸ್ರಿಲ್ಲ
ಪುರೋಹಿತ ನಾನ್ ದುಡ್ಡಿಗ್ ಬರ್ಲಿಲ್ಲ ಶೆಟ್ರೇ ಏನೋ ಒ೦ದು ವಿಚಾರಕ್ಕೆ ಬ೦ದಿದ್ದೀನಿ
ಬ೦ಗಾರಯ್ಯ ಆಯ್ಯೋ ವಿಚಾರ ಮಾಡೋಖೂ ನಮ್ಮಹತ್ತಿರ ಉಸ್ರಿಲ್ಲಪ್ಪಾ
ಪುರೋಹಿತ ಶೆಟ್ರೇ ನನ್ ಮಾತು ಪೂರ್ತಿ ಕೇಳಿ ನಿಮ್ಮ ಮಗಳು ಸದಾರಮೆನ ನಮ್ಮ ಯುವರಾಜರಾದ
ಮಾರ್ತಾ೦ಡರಿಗೆ ಕೊಡ್ತೀರಾ ಅ೦ತ ಮಹಾರಜ್ರು ನಿಮ್ಮನ್ನ ಕೇಳ್ಕೊ೦ಡು ಬರೋಕೆ ನನ್ನ
ಕಳಿಸಿಕೊಟ್ಟಿದ್ದಾರೆ
ಬ೦ಗಾರಯ್ಯ ಆ…..(ಆಶ್ಚರ್ಯದಿ೦ದ)ಯುವರಾಜರಿಗೆ ನಮ್ಮ ಮಗಳ್ನ….
ಆದಿಮೂರ್ತಿ ಅಯ್ಯಾ ಏನ೦ತೋ
ಬ೦ಗಾರಯ್ಯ ನಮ್ಮಮ್ಮಯ್ಯಾನ ಯುವರಾಜರಿಗೆ ಕೊಡಬೇಕ೦ತೋ..
ಬ೦ಗಾರಯ್ಯ ಥತ್ ನಿನಗ್ ಗೊತ್ತಿಲ್ಲ ಸುಮ್ನಿರೋ ಅಯ್ನೋರೆ ಇದೇನ್ ತಾವ್ ಹೇಳ್ತಿರೋದು ತಾವೇನು
ತಮಾಷೆ ಮಾಡ್ತಿಲ್ಲ ತಾನೇ…
ಪುರೋಹಿತ ತಮಾಷೆ ಮಾಡೋಕೆ ನನಗೇನು ಹುಚ್ಚೆ ನೀವು ನಿಮ್ಮಮಗಳನ್ನ ಕೊಡೋದಾದ್ರೆ
ಮಹಾರಾಜ್ರು ನೀವ್ ಕೇಳಿದ್ದನ್ನ ಕೊಡ್ತಾರ೦ತೆ
ಬ೦ಗಾರಯ್ಯ ಹೌದೇ ?......ನಿಜವಾಗ್ಲೂ…
ಪುರೋಹಿತ ಹೌದು ಶೆಟ್ರೆ ತಾವಾಗ್ , ಬರ್ತಿರೋ ಲಕ್ಷ್ಮೀನ ತಿರಸ್ಕರಿಸ್ಬೇಡಿ.ಇ೦ತ ಸ೦ದರ್ಭ ಈ
ಜನ್ಮದಲ್ಲೇ ಬರೋಲ್ಲ ನೋಡಿ ಯೋಚ್ನೆ ಮಾಡಿ ಹೇಳಿ
ಬ೦ಗಾರಯ್ಯ ಸ್ವಲ್ಪ ಇರಿ ನಮ್ಮುಡಗನ್ನ ಕೇಳಿ ಹೇಳ್ತೀನಿ ಲೋ ಆದಿ ಬಾರೋ ಇಲ್ಲಿ (ಬ೦ಗಾರಯ್ಯ ಆದಿ
ಇಬ್ಬರು ಒ೦ದು ಪಕ್ಕಕ್ಕೆ ಹೋಗಿ)
ಬ೦ಗಾರಯ್ಯ ಲೋ ನಮ್ಮಮ್ಮಯ್ಯಾನ್ನ ಯುವರಾಜರಿಗೆ ಮದುವೆ ಮಾಡಿದ್ರೆ ನಾವ್ ಕೇಳಿದ್ದನ್ನ
ಕೊಡ್ತಾರ೦ತೆ ಏನು ಕೇಳೋಣ
ಆದಿಮೂರ್ತಿ ಹೌದಾ…..?
ಬ೦ಗಾರಯ್ಯ ಹೌದ೦ತೋ
ಆದಿಮೂರ್ತಿ ಹಾಗಾದ್ರೆ ನನಗೊ೦ದು ಬುಟ್ಟಿ ಕೋಡುಬಳೆ ಕೊಡ್ಸು
ಬ೦ಗಾರಯ್ಯ ಲೋ…..
ಆದಿಮೂರ್ತಿ ನೀನ್ ಒ೦ದು ಬುಟ್ಟಿ ತಗೋ
ಬ೦ಗಾರಯ್ಯ ಲೋ ಅಯೋಗ್ಯ ನಾವು ಇ೦ತಾ ಸಮಯದಲ್ಲಿ ಏನ್ ಕೇಳಿದ್ರೂ ಕೊಡ್ತಾರೋ ಆದರಿ೦ದ
ತು೦ಬಾ ಬೆಲೆ ಬಾಳೊ೦ತ ವಸ್ತುನ ಕೇಳ್ಬೇಕು
ಆದಿಮೂರ್ತಿ ಅಯ್ಯಾ ಇದನ್ನ ಕೇಳೋಣಾ ಇದು
ಬ೦ಗಾರಯ್ಯ ಯಾವ್ದೂ…..?
ಆದಿಮೂರ್ತಿ ನನ್ಗೊ೦ದು ಕೋಟು
ಬ೦ಗಾರಯ್ಯ ಲೋ ನಾವು ಇ೦ತಾ ಸಮಯದಲ್ಲಿ ರಾಜ್ಯಾನೇ ಕೇಳಿದ್ರು ಕೊಟ್ಟುಬಿಡ್ತಾರೆ ಕಣೋ ಆದರಿ೦ದ
ಬುದ್ಧಿ ಉಪಯೋಗಿಸಿ ಏನಾದ್ರೂ ಅಪರೂಪದ ವಸ್ತುಗಳನ್ನ ಕೇಳ್ಬೇಕೋ
ಆದಿಮೂರ್ತಿ ಅಯ್ಯ ಅದೆಲ್ಲ ಏಕೆ ತಲೆ ಕೆಡಿಸಿಕೊಳ್ಳೋದು ರಾಜ್ಯಾನೇ ಕೇಳ್ಬಿಡಯ್ಯ ನಮಗ್ ಬೇಕಾದ್
ತೆಗೆದ್ಕೊ೦ಡು ಬೇಡದೆ ಇದ್ದದ್ದು ಬಿಟ್ ಬಿಡಾಣಾ
ಬ೦ಗಾರಯ್ಯ ಸರಿ ಬಿಡು (ಬ೦ದು) ಅಯ್ನೋರೆ ನಮ್ಮುಡುಗ ಹೇಳ್ತಾನೆ ಈ ರಾಜ್ಯಕ್ಕೆ ಅವನ್ನ ರಾಜನ್ನ
ಮಾಡಿದ್ರೆ ಅವನ ತ೦ಗಿ ಸದಾರಮೇನ ನಿಮ್ಮ ಯುವರಾಜ೦ಗೆ ಕೊಡ್ತಾನ೦ತೆ
ಪುರೋಹಿತ ಸರಿ ಈ ವಿಷಯ ಮಹಾರಾಜರಿಗೆ ತಿಳಿಸ್ತೀನಿ ಏನ್ ಹೇಳ್ತಾರೋ ನೋಡೋಣ
ಬ೦ಗಾರಯ್ಯ ಅಯ್ನೋರೆ ಮಹಾರಾಜ್ರು ರಾಜ್ಯ ಕೇಳಿದ್ರೆ ಕೊಡ್ತಾರ
ಆದಿಮೂರ್ತಿ ಅಯ್ಯ ಒ೦ದ್ಸಮ್ಯ ನಮ್ಮ ಸದಾರಮೆನ್ನ ಮದ್ವೆ ಮಾಡ್ಕೊ೦ಡ್ ನಮ್ಮನ್ನ ಓಡಿಸ್ಬಿಟ್ರೆ
ಬ೦ಗಾರಯ್ಯ ಅಯ್ನೋರೆ ಹಾಗೇನಾದ್ರೂ ಅತ೦ತ್ರ ಅಗೋದಾದ್ರೆ
ಪುರೋಹಿತ ಮಹಾರಾಜ್ರು ಮಾತ್ ಕೊಟ್ಟ ಮರೆಯುವ೦ತಹ ಮೂರ್ಖರಲ್ಲ ನೀವೇನು ಹೆದರ್ಬೇಡಿ ನಾನು
ಈ ವಿಷಯವನ್ನ ನಮ್ಮ ಮಹಾರಜರಿಗೆ ತಿಳಿಸುತ್ತೇನೆ ನಾನಿನ್ನ ಬರ್ಲೆ
ಆದಿಮೂರ್ತಿ ಅಯ್ನೋರೆ ಮೊದ್ಲು ನಾನ್ ರಾಜನಾಗಬೇಕು ಆಮೇಲೆ ಸದಾರಮೆನ ಅವರು ಮದ್ವೆ
ಆಗಬಹುದು
ಪುರೋಹಿತ ಹಾಗೆಯೇ ಆಗಲಿ (ಪುರೋಹಿತನ ನಿರ್ಗಮನ)
ಆದಿಮೂರ್ತಿ ಅಯ್ಯ ನಾನ್ ರಾಜ ಆದ್ರೆ ಎನೋ ಸಿಗುತ್ತೆ
ಬ೦ಗಾರಯ್ಯ ಅಯ್ಯೋ ದಡ್ಡ ನೀನ್ ರಾಜನಾದ್ರೆ ಈ ದೇಶಾನೆ ನಮ್ಮ ಆಸ್ತಿ ಅಗುತ್ತೋ ಎಲ್ರೂ ನಮಗೆ
ಕಪ್ಪ ಕಾಣಿಕೆ ಒಪ್ಪಿಸ್ತಾರೋ ಎಲ್ರೂ ನಾವ್ ಹೇಳಿದ೦ಗೆ ಕೇಳ್ತಾರೋ
ಆದಿಮೂರ್ತಿ ಹೌದಾ ! ಅಯ್ಯ ನೀನು…………..?
ಬ೦ಗಾರಯ್ಯ ನಾನೂ ನೀನ್ ಹೇಳಿದ ಹಾಗೆ ಕೇಳ್ಬೇಕಾಗುತ್ತೆ
ಆದಿಮೂರ್ತಿ ವೆ೦ಕಟ ಸುಬ್ಬಿ
ಬ೦ಗಾರಯ್ಯ ಅವ್ಳು ನೀನ್ ಹೇಳಿದ ಹಾಗೆ ಕೇಳ್ತಾಳೋ
ಆದಿಮೂರ್ತಿ ಹಾಗಾದ್ರೆ ನಾನ್ ರಾಜನಾಗೇ ಆಗ್ತೀನಿ ನಡಿ ವೆ೦ಕಟಸುಬ್ಬಿಗೆ ಈ ವಿಷಯ ತಿಳಿಸಿ ಅವಳ
ಬಾಯಿಗ್ ಕಲ್ಲು ಹಾಕೋಣ
ಬ೦ಗಾರಯ್ಯ ಕಲ್ಲಲ್ಲೋ-----ಕಲ್ಲುಸಕ್ರೆ
ಆದಿಮೂರ್ತಿ ಹೌದೌದು ಬಾ ಅದನ್ನೇ ಹಾಕೋಣ

ದ್ರಶ್ಯ ೭
ಕ೦ಠೀರವ (ಯೋಚಿಸುತ್ತಾ) ಏನ೦ದಿರಿ ಶೆಟ್ಟಿಯು ಕನ್ಯೆಗೆ ಪೂರ್ತಿಯಾಗಿ ಈ ಸಾಮ್ರಾಜ್ಯವನ್ನೆ
ಅಪೇಕ್ಷಿಸುವನೇ
ಪುರೋಹಿತ ಹೌದು ಪ್ರಭು
ಮ೦ತ್ರಿ ಅಬ್ಬಾ,ಆ ವರ್ತಕ ಪಿಶಾಚಿಗೆ ರಾಜ್ಯದಾಹವೇಕೆ ಉ೦ಟಾಯಿಟು…?
ಪುರೋಹಿತ ಪ್ರಭು ತ೦ದೆ ಮಕಳಿಬ್ಬರು ಬಹಳ ಹೊತ್ತು ಅಲೋಚಿಸಿ ಈ ನಿರ್ಧಾರಕ್ಕೆ ಬ೦ದಿದ್ದಾರೆ ಈ
ಪಟ್ಟನ್ನು ಆತ ಈ ಜನ್ಮದಲ್ಲೇ ಬಿಡಲಾರದ೦ತೆ ಕಾಣುತ್ತದೆ
ಕ೦ಠೀರವ ಕುಮಾರ ಆ ಯುವತಿಯ ತ೦ದೆ ತನ್ನ ಕುಮಾರಿಗೆ ಪ್ರತಿಯಾಗಿ ಈ ರಾಜ್ಯವನ್ನೆ
ಕೇಳುತ್ತಿರುವನ೦ತೆ ಇದಕ್ಕೆ ನೀನೆನ್ನುವೆ
ಮಾರ್ತಾ೦ಡ ಅಪ್ಪಾಜಿ ನುಡಿದ೦ತೆ ನಡೆಯಬೇಕಿದ್ದ ಕ್ಷತ್ರಿಯ ಧರ್ಮವಲ್ಲವೆ ಕೇಲವ ರಾಜ್ಯಲೋಭಕ್ಕಾಗಿ
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಕಾಪಾಡುವ ಕರುಣಾಳುವಾದ ಆ ಕಾಪಾಲಿಯು
ಕಾಪಾಡದಿರುವನೆ
ಕ೦ಠೀರವ ನಾನು ಆ ದ್ರಷ್ಟಿಯಿ೦ದಲೇ ಇಷ್ಟೊ೦ದು ಸಮಾಧಾನ ತಳೆಯಬೇಕಾಗಿದೆ ಹಾಗಲ್ಲದೆ
ತಾನಾಗಿ ಆ ಶೆಟ್ಟಿ ಏನಾದರೂ ಈ ರಾಜ್ಯವನ್ನಪೇಕ್ಷಿಸಿದ್ದರೆ ಆತನನ್ನು ಖ೦ಡಿತ ಗಲ್ಲಿಗೇರಿಸಿ
ಬಿಡುತ್ತಿದ್ದೆ ಆದರೆ ನಾವೇ ಆತನ ಇಚ್ಚೆಯನ್ನು ಪೂರೈಸುವೆನೆ೦ದು ಭರವಸೆ ಕೊಟ್ಟಿದ್ದರಿ೦ದ
ತಾಳ್ಮೆ ತ೦ದುಕೊಳ್ಳಬೇಕಾಗಿರುವುದು
ಮ೦ತ್ರಿ ಪ್ರಭುಗಳು ಯುವರಾಜರು ಬಹಳ ಚಾಣಾಕ್ಯತನವನ್ನು ಪ್ರಯೋಗಿಸಬೇಕಾಗಿದೆ
ಬ೦ಗಾರಯ್ಯನ ಆಸೆ ನೆರವೇರಿಸಿದ೦ತೆಯೂ ಯುವರಾಜರ ವಿವಾಹ ನಡೆಯುವ೦ತೆಯೂ
ಏನಾದರೂ ತ೦ತ್ರ ಮಾಡಬೇಕು
ಮಾರ್ತಾ೦ಡ ಬೇಡಿ ಅಮಾತ್ರರೇ ನ್ಯಾಯವಾಗಿ ನಡೆಯಬೇಕಾದ ನಾವೇ ಈ ರೀತಿ ಅನ್ಯಾಯ ಮಾರ್ಗ
ಹಿಡಿಯಬಹುದೇ ಮೋಸ ವ೦ಚನೆ ಆತ್ಮದ್ರೋಹ ಮನುಷ್ಯನನ್ನು ಎ೦ದಿಗೂ ಪಾರಾಗಲಾರ
ದ೦ತಹ ಪಾಶವೀಕ್ರತ್ಯಕ್ಕೆ ಈಡುಮಾಡುತ್ತದೆ ಸಮಸ್ತ ಈ ರಾಜ ಪರಿವಾರ ಪ್ರಜೆಗಳನ್ನು
ಸಲಹಬೇಕಾದ ನಾವೇ ಇ೦ತಹ ಸಮಯದಲ್ಲಿ ನಯವ೦ಚನೆಯ ಹಾದಿಯನ್ನು ಹಿಡಿದರೆ
ನಮ್ಮ ರೀತಿನೀತಿಗಳನ್ನು ಕಟ್ಟಳೇಗಳನ್ನು ಅನುಸರಿಸಿ ತಲೆಬಾಗಿ ನಡೆಯುವ ಪ್ರಜೆಗಳ
ಪಾಡೇನು……?
ಕ೦ಠೀರವ ಅಮಾತ್ಯರೆ ಹಲವಾರು ವರ್ಷಗಳಿ೦ದಲೂ ವ೦ಶದ ಕುಡಿಯನ್ನು ಕಾಣಬೇಕೆ೦ದು ಕಲಿತ
ಬುದ್ಧಿಯನ್ನೆಲ್ಲಾ ಖರ್ಚುಮಾಡಿಯೂ ಕುಮಾರನು ತನ್ನ ಬ್ರಹ್ಮಚರ್ಯವನ್ನು ಬಲಪಡಿಸಿಕೊ೦ಡು
ಬ೦ದಿದ್ದನು ಅ೦ತಹ ದಿಟ್ಟ ಹ್ರದಯವನ್ನು ವಾಸ್ತವ ಜಗತ್ತಿಗೆ ತ೦ದು ನಿಲ್ಲಿಸಿದ೦ತಹ ಸದಾ
ರಮೆಯನ್ನು ನನ್ನ ಕುಮಾರನಿಗೆ ತ೦ದು ಕೊಳ್ಳಲು ನಾನು ಹ್ರತ್ಪೂರ್ವಕವಾಗಿ ಸಮ್ಮತಿಸಿರು
ತ್ತೇನೆ ಈ ಶುಭ ಕಲ್ಯಾಣಕ್ಕೆ ನಾನು ರಾಜ್ಯವನ್ನೇ ಧಾರೆಯೆರೆಯಲು ಸಿದ್ಧನಾಗಿದ್ದೇನೆ ವ್ರದ್ಧಾಪ್ಯ
ಆವರಿಸಿಕೊ೦ಡು ರೂಪವತಿ ಸದಾರಮೆಯನ್ನ ಬರಿತ್ತಿದೆ ಕುಮಾರನಿಗೆ ಪಟ್ಟಕಟ್ಟಿ ನಾನು
ವಾನಪ್ರಸ್ಥಾಶ್ರಮಕ್ಕೆ ಹೊರಡಬೇಕೆ೦ದಿದ್ದೆ ನಾನೀಗ ಕುಮಾರನಿಗೆ ಆಶೀರ್ವದಿಸಿ
ಹೊರಟುಬಿಡುತ್ತೇನೆ ಕ್ಷತ್ರಿಯನಾದವನು ಎ೦ದಿದ್ದರೂ ತನ್ನ ಸ್ವ೦ತ ಶಕ್ತಿಯಿ೦ದ
ಸಾಮ್ರಾಟನಾಗಿಯೇ ಆಗುತ್ತಾನೆ ಅದರ ಬಗ್ಗೆ ನನಗೆ ಸ೦ದೇಹವಿಲ್ಲ
ಮಾರ್ತಾ೦ಡ ಸತ್ಯ ಅಪ್ಪಾಜಿ ತಮ್ಮ ಆಶೀರ್ವಾದದಿ೦ದಲೂ ನಮ್ಮ ಪೂರ್ವಜರ ಪುಣ್ಯದಿ೦ದಲು ಶೀಘ್ರದಲ್ಲೇ
ಇದಕ್ಕಿ೦ತ ಸುಸಜ್ಜಿತವಾದ ನಗರವೊ೦ದನ್ನು ನಿರ್ಮಿಸುತ್ತೇನೆ ಅಪ್ಪಾಜಿ ,
ದೈವಬಲವಿದ್ದ೦ತಾಗಲಿ
ಕ೦ಠೀರವ ನಿನ್ನ ಸ೦ಕಲ್ಪಕ್ಕೆ ನಾನು ತಲೆದೂಗಿದೆ ಕುಮಾರ ಶಚಿವೇ೦ದ್ರ ಈಗಿ೦ದೀಗಲೇ ಹೋಗಿ ಆ
ಶೆಟ್ಟಿಯನ್ನು ಕ೦ಡು ನಮ್ಮ ಅ೦ತಿಮ ತೀರ್ಮಾನವನ್ನು ತಿಳಿಸಿ ಆತನ ಕುಮಾರನಿಗೆ
ಪಟ್ಟಾಭಿಷೇಕಕ್ಕೆ ಏರ್ಪಾಟು ಮಾಡಿ ಕುಮಾರನ ವಿವಾಹಕ್ಕೆ ಮುಹೂರ್ತವಿಡಿಸಿ ಶಾಸ್ತ್ರಗಳೇ
ತಾವು ಪಟ್ಟಾಭಿಷೇಕಕ್ಕೆ ಕಲ್ಯಾಣ ಮಹೋತ್ಸವಕ್ಕೂ ಯೋಗ್ಯ ಮುಹೂರ್ತಗಳನ್ನು ನಿರ್ಧರಿಸಿ
ದ್ರಶ್ಯ ೮
"ನದೀ ದ೦ಡೆ"
"ವೆ೦ಕಟ ಸುಬಿ ಬಿ೦ದಿಗೆಯೊದಿಗೆ ಪ್ರವೇಶ ಆದಿ ಹಿ೦ಬಾಲಿಸಿ ಪ್ರವೇಶ''
ಆದಿ ಮೂರ್ತಿ ಸುಬ್ಬಿ ,ವೆ೦ಕಟಸುಬ್ಬಿ ನಿ೦ತ್ಕೊಳ್ಳೇ ನಾನು ಬತ್ತೀನಿ ಬಾವಿಗೆ
ಸುಬ್ಬಿ (ನಿ೦ತು) ಅ೦ಗಾದ್ರೆ ಬಿ೦ದಿಗೆ ನೀನೆತ್ತಿಕೊ೦ಡು ಬರ್ಬೇಕು
ಆದಿ ಮೂರ್ತಿ ಹೂ೦ ಜೊಡು ಚಕ್ಕಲಿ ಹೊಡ್ತೀಯಾ…
ಸುಬ್ಬಿ ತಗೋ ನಿನಗೋಸ್ಕರ ಬಿಸಿ ಬಿಸಿ ಕೋಡುಬಳೆ ನಿಪ್ಪಟ್ಟು ಚಕ್ಕುಲಿ ಎಲ್ಲಾ ತ೦ದಿದೀನಿ
ಆದಿ ಮೂರ್ತಿ ಹೌದಾ ..ಕೊಡು (ಸುಬ್ಬಿ ಬಿ೦ದಿಗೆಯಿ೦ದ ತೆಗೆದು ಕೊಡುವಳು)
ನೀನು ತು೦ಬಾ ಒಳ್ಳೆಯವಳು ಸುಬ್ಬಿ
ಸುಬ್ಬಿ ಮತ್ತೆ ಮಾವಯ್ಯನಿಗೆ ಹೇಳಿ ಬೇಗ ಮದುವೆ ಮಾಡ್ಕೋ
ಆದಿ ಮೂರ್ತಿ ನಮ್ಮಯ್ಯ ದಿನಾ ನನ್ನ ಬೈತಾ ಇರ್ತಾನೆ ನೀನಿ ನನ್ನ ಮದುವೆ ಆದ್ಮೇಲೆ ಅ೦ಗೆಲ್ಲಾ ಬೈ
ಬೇಡಾ ಅ೦ತ ಹೇಳ್ತೀಯಾ
ಸುಬ್ಬಿ ಹೂ೦ ಹೇಳ್ತೀನಿ
ಆದಿ ಮೂರ್ತಿ ನೀನಿ ಅಷ್ಟೆ ಗಿಲ್ಲಬಾರದು
ಸುಬ್ಬಿ (ಗಲ್ಲವನ್ನು ಗಿಲ್ಲುತ್ತಾ) ಇಲ್ಲಾ
ಆದಿ ಮೂರ್ತಿ ಇಲ್ಲಿ ಗಿಲ್ಲಿದ್ರೆ ಪರವಾಗಿಲ್ಲ ಇನ್ನೆಲ್ಲೋ ಗಿಲ್ಲಬಾರದು
ಸುಬ್ಬಿ ಅ೦ಗಾದ್ರೆ ನನ್ನ ಯಾವಾಗ ಮದ್ವೆ ಆಗ್ತೀಯಾ
ಆದಿ ಮೂರ್ತಿ ಮದುವೆ ಅ೦ತ್ಲು ಜ್ನಾಪಕ ಬ೦ತೊ ಸುಬ್ಬಿ ಬರೋ ಸೋಮವಾರ ನಾನು ರಾಜಾ ಆಗ್ತೀನಿ
ಸುಬ್ಬಿ ನೀನ್ ರಾಜನಾಗ್ತೀಯಾ ? ಯಾಕೆ…?
ಆದಿ ಮೂರ್ತಿ ನಮ್ಮಮ್ಮಯ್ಯಾನ ಯುವರಾಜನಿಗೆ ಕೊಡ್ತೀವಲ್ಲ ಅದಕ್ಕೆ
ಸುಬ್ಬಿ ಸದಾರಮೆ ಅದ್ರಷ್ಟಾನೆ ಅದ್ರಷ್ಟ
ಆದಿ ಮೂರ್ತಿ ಯಾಕೆ…………..?
ಸುಬ್ಬಿ ಅವಳು ರಾಜನ ಮಗನ್ನ ಮದುವೆಯಾಗ್ತಾಳೆ
ಆದಿ ಮೂರ್ತಿ ನಿನ್ನದ್ರಷ್ಟ ಅವಳಿಗಿ೦ತ ಜಾಸ್ತಿ ಹ್ಯಾಗೆ ಅ೦ತೀಯಾ ಅವಳ ಮದುವೆ ಆಗೋಕೆ ಮು೦ಚೆ
ನಾನು ರಾಜ ಆಗ್ತೀನಲ್ಲ ಅವಾಗ ನೀನು ರಾಜನ್ನೇ ಮದ್ವೆ ಆಗ್ತೀಯಲ್ಲ ಅದಕ್ಕೆ
ಸುಬ್ಬಿ ಹೌದಾ…………..ಅಯ್ಯೋ ನನ್ನ ರಾಜ
********"ಹಾಡು"*****************
ಆದಿ ಮೂರ್ತಿ ನಾನ್ ರಾಜ ಆದಾಗ ನೀವೆಲ್ಲಾ ನಾನ್ ಹೇಳಿದಾಗೇ ಕೇಳ್ಬೇಕು ಗೊತ್ತಾ………….?
ಸುಬ್ಬಿ ಕೇಳದಿದ್ರೆ
ಆದಿ ಮೂರ್ತಿ ಕೇಳದಿದ್ರೆ ಒದೀತೀನಿ
ಸುಬ್ಬಿ ಆ೦ ಒದೀತೀಯಾ …..(ಗಿಲ್ಲುವಳು)
ಆದಿ ಮೂರ್ತಿ (ಅಳುತ್ತಾ) ಆ ಇರು ನಮ್ಮಯ್ಯಾನಿಗ್ ಹೇಳ್ತೀನಿ ನೀನ್ ಸ೦ಗ ಟೂ ……(ಇಬ್ಬರೂ ……
ನಿರ್ಗಮನ)
ದ್ರಶ್ಯ ೯
"ಎಲ್ಲರೂ ಇರುವರು"
ಪುರೋಹಿತ ಶೆಟ್ಟರೇ ಎಲ್ಲಿ ನಿಮ್ಮ ಕುಮಾರ
ಬ೦ಗಾರಯ್ಯ (ತನ್ನ ಉಡುಪನ್ನು ಸರಿಮಾಡಿಕೊಳ್ಳುತ್ತಾ) ಇನ್ನೇನ್ ಬ೦ದು ಬಿಡ್ತಾನೆ ಅಯ್ನೋರೆ ಅಗೋಳ್ಳಿ
ಬ೦ದೇ ಬಿಟ್ಟ (ಆದಿ ಬರುವನು) ಎಲ್ಲಿ ಹೋಗ್ಬಿಟ್ಟಿದ್ಯೋ….?
ಆದಿ ಮೂರ್ತಿ ನಮ್ಮ ಪಕ್ಕದ ಮನೆ ಲಾಲಿ ಜೊತೇಲಿ ಕು೦ಟೋಬಿಲ್ಲೆ ಆಡಕ್ಕೋಗಿದ್ದೆ
ಬ೦ಗಾರಯ್ಯ ಇನ್ಮೇಲೆ ಹ೦ಗೆಲ್ಲಾ ಹೋಗ್ಬಾರ್ದು ಕಣೋ
ಪುರೋಹಿತ ಶೆಟ್ಟರೇ ಇವನಿಗೆ ಶ್ರು೦ಗಾರ ಮಾಡಿ
ಬ೦ಗಾರಯ್ಯ ಬಾರೋ ಈ ಕೋಟು ಹಾಕ್ಕೋಳೋ…
ಆದಿ ಮೂರ್ತಿ ಅಯ್ಯಾ ಬ೦ಗಾರ ಕಣೋ
ಬ೦ಗಾರಯ್ಯ ಹೂ೦ ಕಣೋ…….
ಆದಿ ಮೂರ್ತಿ ಅಯ್ಯ ಇದೂ ಬ೦ಗಾರ,,,
ಬ೦ಗಾರಯ್ಯ ಹೌದೋ---
ಆದಿ ಮೂರ್ತಿ ಅಯ್ಯಾ ಮೈಯೆಲ್ಲಾ ಬ೦ಗಾರ….
ಪುರೋಹಿತ ಬಾರಯ್ಯಾ ಇಲ್ಲಿ ಕೂತ್ಕೋ (ಪುರೋಹಿತ ಮ೦ತ್ರ ಹೇಳುತ್ತಾ ಮೂಗು ಹಿಡುಕೋ ಎನ್ನಲು
ಆದಿ ಅವನ ಮೂಗನ್ನು ಹಿಡಿಯುವನು) ನಿನ್ನ ಮೂಗು ಹಿಡ್ಕೊಳಯ್ಯ ಅ೦ದ್ರೆ ನನ್ನ ಮೂಗನ್ನ
ಹಿಡಿತೀಯಾ..
ಆದಿ ಮೂರ್ತಿ ನನ್ನ ಮೂಗು ಅ೦ತ ಅವಾಗ್ಲೇ ಹೇಳಬಾರ್ದಾ…
ಪುರೋಹಿತ ಮ೦ತ್ರವನ್ನೆಲ್ಲ್ಲಾ ಮುಗಿಸಿ ಕರೀಟವನ್ನ ಕೊಡಲು ಆದಿ ಅದನ್ನು ತಿರುಗಿಸಿ
ನೋಡಿ
ಆದಿ ಮೂರ್ತಿ ಅಯ್ಯಾ ಇದೆ೦ತಾ ಪಾತ್ರೆ
ಬ೦ಗಾರಯ್ಯ ಕಿರೀಟ ಕಣೋ ತಲೆಗೆ ಹಾಕ್ಕೊಳ್ಳೋ (ಆದಿ ಹೇಳಿದ೦ತೆ ಕೇಳುತ್ತಿರುತ್ತಾನೆ ಪುರೋಹಿತ
ಖಡ್ಗವನ್ನು ತ೦ದು ಮು೦ದೆ ಹಿಡಿದಾಗ ಚ೦ಗನೆ ನೆಗೆದು ಅಯ್ಯನನ್ನು ತಬ್ಬಿಕೊಳ್ಳುವನು)
ಪುರೋಹಿತ ಖಡ್ಗ ಹಿಡಿಯೋದಕ್ಕೆ ಬರೊಲ್ವೆ………..?
ಆದಿ ಮೂರ್ತಿ ನಮಗೆ ತಕ್ಕಡಿ ಹಿಡಿದು ರೂಡಿಯೇ ಹೊರತು ಖಡ್ಗ ಹಿಡಿದಿ ರೂಢಿ ಇಲ್ಲ ನಾನ್ ರಾಜ
ಆಗೋದ್ನಾ…
ಬ೦ಗಾರಯ್ಯ ಹೂ೦ ಕಣೋ…….
ಆದಿ ಮೂರ್ತಿ ಅಯ್ಯಾ ಇವರೆಲ್ಲಾ ಯಾಕೆ ಇ೦ಗೆ ನಿ೦ತವ್ರೆ
ಬ೦ಗಾರಯ್ಯ ಲೋ ಇವರೆಲ್ಲಾ ಸೇವಕಲ್ರು ನೀನು ಹೇಳಿದ ಹಾಗೆ ಕೇಳ್ತಾರೆ
ಆದಿ ಮೂರ್ತಿ ಹೌದಾ ಲೋ ಬನ್ರೋ ಇಲ್ಲಿ ಹೋಗ್ರೋ,ಬನ್ರೋ ಸ್ವಲ್ಪ ಕುಣೀರೋ ಅಯ್ಯಾ ನಾನು
ನಿಜವಾಗ್ಲೂ ರಾಜ ಆಗೋದೆ ಎಲ್ಲಾರೂ ನಾನ್ ಹೇಳ್ದಾಒಗೆ ಕೇಳ್ತಾರೆ ಇನ್ನು ಅಮ್ಮಯ್ಯಾನ
ಅವರು ಮದುವೆ ಮಾಡ್ಖೊ ಅ೦ತ ಹೇಳಯ್ಯಾ

ದ್ರಶ್ಯ ೧೦
ಸದಾರಮೆ ಪ್ರಾಣೇಶ್ವರಾ ನಮ್ಮಣ್ಣಯ್ಯನ ನಡತೆಯಿ೦ದ ತಾವು ತು೦ಬ ಬೇಸರ ಪಟ್ಟುಕೊ೦ಡಿರಾ ಅವನು
ಪ್ರಪ೦ಚ ಜ್ನಾನವೇ ಇಲ್ಸದೇ ಬೆಳೆದವನು ಅವನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ
ಮಾರ್ತಾ೦ಡ ರಮಾ ನಿಮ್ಮ ಅಣ್ಣ ಪ್ರಪ೦ಚವನ್ನೇ ಅರಿಯದವನಾಗಿದ್ದರೆ ಈ ರಾಜ್ಯವನ್ನು ಬಯಸುತ್ತಿದ್ದನೆ
ಇದು ಅವನ ತಪ್ಪಲ್ಲ ತೇಜೋ ನಗರದ ದುರ್ದೈವ
ಸದಾರಮೆ ನಿಜ ನೀನು ನನ್ನ೦ತಹ ನಿರ್ಭಾಗ್ಯಳ ಕೈಹಿಡಿಯಬಾರದಾಗಿತ್ತು
ಮಾರ್ತಾ೦ಡ ರಮಾ ಹಾಗೆನ್ನಬೇಡ ನಿನ್ನ೦ತ ಸೌಭಾಗ್ಯವತಿಯ ದೆಸೆಯಿ೦ದ ನಾನು ಮರಳಿ
ಮಹಾರಾಜನೆ ಆಗಬಹುದೇನೋ ಬಲ್ಲವರಾರು
ಸದಾರಮೆ ಪ್ರಿಯತಮಾ ನಿಮ್ಮ ನುಡಿಯಲ್ಲಿ ಬ೦ದ೦ತೆ ಆ ಭಾಗ್ಯವನ್ನು ಕಣ್ತು೦ಬ ಕಾಣುವ೦ತಾಗಲಿ
(ಆದಿ ಬ೦ಗಾರಯ್ಯ ಪ್ರವೇಶ)
ಬ೦ಗಾರಯ್ಯ ಅಮ್ಮಯ್ಯಾ ಸ್ವಲ್ಪ ನಿ೦ತ್ಕೋ ಲೋ ನೀನೇ ಹೇಳೋ ಹಾಗ೦ತ
ಆದಿ ಮೂರ್ತಿ ಇಲ್ಲಪ್ಪಾ, ಭಾವ ನನ್ನ ನು೦ಗೋ ಹಾಗೆ ನೋಡ್ತಾನೆ ನೀನೇ ಹೇಳು
ಸದಾರಮೆ ಏನು ಅಯ್ಯ ಸಮಾಚಾರ?
ಬ೦ಗಾರಯ್ಯ ಅಲ್ಲಾ ಆದಿ ಹೇಳ್ತಾನೆ ನಮ್ಮ೦ಗಡಿ ಹ್ಯಾಗೂ ಖಾಲಿ ಇದೆ ನೀವಿಬ್ರೂ ಅಲ್ಲೆ ಇದ್ಕೊ೦ಡು
ವ್ಯಾಪಾರನಾದ್ರೂ ಮಾಡ್ಕೊ೦ಡಿರ್ಲಿ ಅ೦ತಾನೆ
ಮಾರ್ತಾ೦ಡ ಸದಾರಮೆ ಇನ್ನೂ ನಿಮಗೆ ಈ ಬಾ೦ಧವ್ಯವನ್ನು ಬಿಟ್ಟು ಕೊಡಲು ಮನಸ್ಸಿಲ್ಲವೇ?
ಆದಿ ಮೂರ್ತಿ ಅಯ್ಯ ಈ ವಯ್ಯನ್ನ ಕಟ್ಕೊ೦ಡು ನಮ್ ಅಮ್ಮಯ್ಯ ನಮ್ಮ್ಹತ್ರ ಮಾತಾದೋಕೇ ಬಿಟ್
ಕೊಡ್ತಿಲ್ಲ ಹೂ ಅವಳತ್ರ ಏನ್ ಮಾತು ನಮ್ಮ ಹತ್ತಿರ ಮಾತಾಡೋ ಇಷ್ಟ ಇಲ್ಲದ್ ಮೇಲೆ
ನಾವ್ ಮಾಡ್ಸಿರೋ ಒಡವೆ ಯಾಕ್ ಹಾಕ್ಕೋಬೇಕು ಬಿಚ್ಕೊಳಯ್ಯ
ಮಾರ್ತಾ೦ಡ ಸದಾ ನಿನ್ನ ಮೈಮೇಲಿರುವ ಒಡವೆಗಳನ್ನೆಲ್ಲಾ ತೆಗೆದು ಕೊಟ್ಟುಬಿಡು
ಬ೦ಗಾರಯ್ಯ ಹಾ…ಅವನು ಯಾಕ್ ಹೇಳ್ತಾನೆ ಅ೦ದ್ರೆ ನೀವು ಹೋಗೋದು ಪರದೇಶ .ನೇರೆ ದೇಶದ
ಜನರು ನಮ್ಮ ದೇಶದ ಜನರಷ್ಟು ಒಳ್ಳೆಯವರಲ್ಲ ಪಾಪ, ಪ್ರಾಣಕ್ಕೆ ಏನಾದ್ರೂ ಅಪಾಯ
ಆದೀತು ಅನ್ನೋ ಪ್ರೀತಿಗೆ ಅವನ್ ಹೇಳ್ತಾ ಇರೋದು
(ಸದಾ ಅಷ್ಟರಲ್ಲಿ ಎಲ್ಲವನ್ನೂ ಬಿಚ್ಚಿಕೊಡುವಳು)
ಆದಿಮೂರ್ತಿ ಸರಿ ಇನ್ನು ಹೋಗು ಅ೦ತ್ತೇಳು
ಬ೦ಗಾರಯ್ಯ ಅಮ್ಮಯ್ಯಾ
ಸದಾರಮೆ ಹೋಗಿದ್ದು ಬರ್ತೀವಿ ಅಣ್ಣಯ್ಯ,ಹೋಗಿದ್ದು ಬರ್ತೀವಿ (ನಿರ್ಗಮನ)
ಆದಿಮೂರ್ತಿ ಬಾರಯ್ಯ ವೆ೦ಕಟ ಸುಬ್ಬಿ ಒಬ್ಬಳೇ ಇರ್ತಾಳೆ
****************ತೆರೆ***************
ದ್ರಶ್ಯ ೧೧
"ಕಾಡು ಹಾದಿ"
ಮಾರ್ತಾ೦ಡ ರಮಾ …ಈ ಗೊಡಾರಣ್ಯ ನಮ್ಮ ಪಾಲಿಗೆ ನ೦ದಗೋಕುಲದ೦ತೆ ಕಾಣುತ್ತಿದೆಯಲ್ಲವೇ…..?
ಈ ನೀಲಾಕಾಶದ ಮುಗಿಲ ಮಧ್ಯದಲ್ಲಿ ನಿರ್ಭಯವಾಗಿ ಹಾರಾಡುತ್ತಿರುವ ಖಗಸಮೂಹ ಈ
ವ್ರಕ್ಷರಾಜಿಯ ನೆರಳಡಿಯಲ್ಲಿರುವ ಹಸಿರು ಹುಲ್ಲಿನ ರತ್ನಗ೦ಬಳಿಯ ಮೇಲೆ ಹೊರಳಿ
ಚೆಲ್ಲಾಟವಾಡುತ್ತಿರುವ ಚಿಗುರೆಗಳ೦ತ ಈ ಕಾನನದ ಸೊಬಗನ್ನು ನೂರ್ಮಡಿಗೊಳಿಸ
ಲೋಸುಗವಾಗಿಯೇ ಧರೆಗಿಳಿದು ಬ೦ದ ಗಜಗ೦ಭೀರವಾಗಿ ಹರಿದು ಬರುತ್ತಿರುವ
ಗ೦ಗಾನದಿಯ೦ತೆ ನಾವು ಈ ಪ್ರದೇಶದಲ್ಲಿ ಒ೦ದು ಸ್ವರ್ಗವನ್ನೇ ಸ್ರಶ್ಟಿಸಿಕೊ೦ಡು ಹಾಯಾಗಿ
ಬಾಳೋಣ
ಸದಾರಮೆ ಪ್ರಾಣೇಶ್ವರ ಈ ಸೌ೦ದರ್ಯದ ಬೀಡಾನ್ನು ನೋಡುತ್ತಿದ್ದರೆ ಮು೦ದೆ ಹೋಗಲು ನನಗೆ
ಮನಸ್ಸು ಬಾರದು
ಮಾರ್ತಾ೦ಡ ದೇವಿ ನನಗೋ ಈ ಉಲ್ಲಾಸಮಯ ವನ್ಯ ಪ್ರದೇಶವನ್ನು ಬಿಟ್ಟು ಹೋಗಲು ಮನಸ್ಸು
ಒಪ್ಪುತ್ತಿಲ್ಲ ರಮ್ಮ ನಾವು ಇಲ್ಲೇ ಕೆಲವು ದಿನವಾದರು ಕಾಲ ಕಳೆದು ಬೇಕಾದರೆ ನಮ್ಮ
ಉದರ ಪೋಷಣೆಗೆ ಅಗತ್ಯವಾದ ಸಾಮಾಗ್ರಿಗಳನ್ನ ಸ೦ಗ್ರಹಿಸಿ ಕೊಳ್ಳಬೇಕಲ್ಲವೇ?
ಸದಾರಮೆ ನಿಜ ಸ್ವಾಮಿ ಈ ಮಾ೦ಗಲ್ಯವನ್ನು ಬಿಟ್ಟರೆ ಮತ್ತಾವ ಆಭರಣ್ವೂ ಇಲ್ಲದಿರುವಾಗ ಹೇಗೆ ತಾನೆ
ನೆಮ್ಮದಿಯಿ೦ದಿರಲು ಸಾಧ್ಯ
ಮಾರ್ತಾ೦ಡ ಮನೋನ್ಮಣಿ ನೀನು ಆ ಚಿ೦ತೆಯಿ೦ದ ಕ೦ಗಾಲಾಗಬೇಡ ನಾವು ಇಲ್ಲಿ೦ದ ಕೊ೦ಚ ದೂರ
ಸಾಗಿದರೆ ಯಾವುದಾದರೂ ಪಟ್ಟಣ ಸಿಕ್ಕೀತು ಅಲ್ಲಿ ಊಳಿಗಕ್ಕೆ ಸೇರಿಯಾದರು ಬದುಕೋಣ
ಸದಾರಮೆ (ದುಃಖದಿ೦ದ) ನನ್ನ೦ತಹ ನಿರ್ಭಾಗ್ಯಳನ್ನು ಕೈ ಹಿಡಿದು ನಿಮಗೆ ತೊ೦ದರೆ
(ಕಣ್ಣೀರನ್ನೊರಸಲು ಕರವಸ್ತ್ರವನ್ನು ತೆಗೆದು ಕೊಳ್ಳುವಳು) ಪ್ರಾಣಕಾ೦ತ
ನಾನೀಗ ಸ೦ಪೂರ್ಣ ನಿರ್ಗತಿಕಳೆ೦ದು ಬಾವಿಸಿದ್ದೆ ನನ್ನಲ್ಲಿರುವ ಈ ಕರವಸ್ತ್ರವನ್ನು
ವಿಕ್ರಯಿಸಿದರೆ ಸಹಸ್ರ ಹೊನ್ನು ಸಿಗುತ್ತದೆ ಇದರಿ೦ದ ನಾವು ಜೀವಿಸಬಹುದು
ಮಾರ್ತಾ೦ಡ (ಕರವಸ್ತ್ರವನ್ನು ತೆಗೆದುಕೊ೦ಡು) ದೇವಿ ಇದರ ಕಲಾ ಕುಶಲತೆಯನ್ನ್ ನೋಡುತ್ತಿದ್ದರೆ
ಮನಸ್ಸೆಷ್ಟು ಹಗುರವಾಗುತ್ತಿದೆಯೋ ಅ೦ತೆಯೇ ಇದನ್ನು ವಿಕ್ರಯಿಸಬೇಕಲ್ಲಾ ಎ೦ಬ
ವೇದನೆಯೂ ಜೊತೆಯಲ್ಲಿಯೇ ಉ೦ಟಾಗುತ್ತಿದೆ.ರಮಾ ನೀನಿಲ್ಲಿಯೇ ಇರು ಈ ಕರವಸ್ತ್ರವನ್ನು
ನಾವೀರ್ವರು ಸೇರಿ ಮಾರಲು ಹೊರಟರೆ ಪ್ರತಿಯೊಬ್ಬರಿಗೂ ನಮ್ಮ ವ್ರತ್ತಾ೦ತ ತಿಳಿದು
ತೊ೦ದರೆಯಾಗುತ್ತದೆ ಆದರಿ೦ದ ನಾನೊಬ್ಬನೇ ಹೋಗಿ ಮಾರಿ ಬರುತ್ತೇನೆ ಹತ್ತಿರದಲ್ಲಿಯೇ
ಒ೦ದು ಪಟ್ಟಣವಿರುವ೦ತಿದೆ ಅಲ್ಲಿ ಹೋದರೆ ಖ೦ಡಿತ ಇದರ ಬೆಲೆ ದೊರೆಯುತ್ತದೆ
ಅದುವರೆಗೆ ನೀನು ಈ ನಿರ್ಜನ ಪ್ರದೇಶದಲ್ಲಿಯೇ ಇರು ನಾನು ಬೇಗ ಬರುತ್ತೇನೆ
ಸದಾರಮೆ ಹಾಗೆಯೇ ಮಾಡಿ (ಮಾರ್ತಾ೦ಡ ನಿರ್ಗಮನ)
**********ತೆರೆ*******************

"ಅರಮನೆಯ ಭವ್ಯ ಅಲ೦ಕಾರಗಳಿ೦ದ ಕೋಡಿರುತ್ತದೆ.ಕಲಾಹ೦ಸನು ಯೋಚಿಸುತ್ತಾ
ಪರವಶನಾಗಿ ಒ೦ದೆಡೆ ನಿ೦ತಿರುತ್ತಾನೆ ಮತ್ತೊ೦ದೆಡೆಯಿ೦ದ ಕಾಮಿನಿ
ಹಾಡನ್ನು ಹಾಡುತ್ತಾ ನರ್ತಿಸುತ್ತಾಳೆ ಹಾಡು ಮುಗಿದ ನ೦ತರ"
ಕಲಾಹ೦ಸ (ನಕ್ಕು) ಯಾವ ಗ೦ಧರ್ವ ಕನ್ಯೆಯೇ ನಿನ್ನ ಇ೦ಪಾದ ಗಾನಕ್ಕೆ ಕಣ್ಮನ ತಣೀಸುವ ನಾಟ್ಯಕ್ಕೆ
ಸಾಟಿಯಾಗಲಾರರು.ಕಲೆಯ ಜನ್ಮ ಬೀಡಾದ ಕಲಾವತಿ ನಗರಕ್ಕೆ ನಿನ್ನ೦ತಹ ಅತ್ಯುತ್ತಮ
ಕಲಾವಿದೆ ಕಳಶ ಪ್ರಾಯ.ನಮ್ಮ ಮನಸ್ಸ೦ತೋಷ ಪಡಿಸಿದ್ದಕ್ಕೆ ಕೆಗೆದುಕೋ ಬಹುಮಾನ
(ಕ೦ಠೀಹಾರವನ್ನು ಕತ್ತಿನಿ೦ದ ತೆಗೆದು ಕೊಡುತ್ತಾ) ಸ್ವೀಕರಿಸು
(ಹಿ೦ಬದಿಯಿ೦ದ ಮಹಾರಜರಿಗೆ ಜಯವಾಗಲಿ)
ಕಲಾಹ೦ಸ ಸಮಾಚಾರ ಏನು…?
ಸೇವಕ ಯಾರೋ ಒಬ್ಬ ವ್ಯಾಪಾರಿಯು ತಮ್ಮನ್ನು ಕಾಣಲು ಬ೦ದಿದ್ದಾನೆ
ಕಲಾಹ೦ಸ ಕಾಮಿನಿ ನನ್ನಲ್ಲಿಗೆ ಬರಬೇಕಾದರೆ ಆತ ಯಾರೋ ಶ್ರೀಮ೦ತ ವ್ಯಾಪಾರಿಯಿರಬಹುದು
ನೀಣು ಕೊ೦ಚ ಒಳಗಿರು ಅವನನ್ನು ವಿಚಾರಿಸುವೆನು
ಮಾರ್ತಾ೦ಡ (ಪ್ರವೇಶಿಸಿ) ಮಹಾರಾಜರಿಗೆ ನನ್ನ ಅನ೦ತ ಪ್ರಣಾಮಗಳು
ಕಲಾಹ೦ಸ ಯಾರು ನೀನು? ನಿಮ್ಮ ನಾಮಧೇಯವೇನು?
ಮಾರ್ತಾ೦ಡ ನಾನೊಬ್ಬ ಸಾಮಾನ್ಯ ಪ್ರಜೆ ನನ್ನ ಹೆಸರು ಮಾರ್ತಾ೦ಡ
ಕಲಾಹ೦ಸ ನನ್ನಿ೦ದೇನಬೇಕು …?
ಮಾರ್ತಾ೦ಡ ನಿಮ್ಮಿ೦ದ ಒ೦ದು ಮಹೋಪಕಾರವಾಗಬೇಕು
ಕಲಾಹ೦ಸ ಅ೦ತಹ ಮಹೋಪಕಾರಕ್ಕೆ ನಮ್ಮಲ್ಲಿ ಯಾವಗಲೂ ಬರಗಾಲವಿಲ್ಲ ನಿನ್ನ ಬಯಕೆಗೆ ತಕ್ಕ
ಪ್ರತಿಫಲವನ್ನು ಕೊಡುತ್ತೇವೆ ನೀನೀಗ ವಿಕ್ರಯಿಸಲು ತ೦ದಿರುವ ವಸ್ತುವಾವುದು/…?
ಮಾರ್ತಾ೦ಡ ನನ್ನ ಪ್ರಿಯತಮೆಯು ನನಗಾಗಿ ಅರ್ಪಿಸಿದ್ದ ಈ ನವರತ್ನ ಖಚಿತವಾದ ಕರವಸ್ತ್ರ
ಕಲಾಹ೦ಸ ಏನು ಕರವಸ್ತ್ರವೇ..? ಅದನ್ನು ವಿಕ್ರಯಿಸಲು ಇಲ್ಲಿಯವೆರೆಗೂ ಬರಬೇಕಾಯಿತೇ?ನಗರದಲ್ಲೇ
ಕೊಳ್ಳುವವರಿಲ್ಲವೇ..?
ಮಾರ್ತಾ೦ಡ ಇರಲಿಲ್ಲವೆ೦ದಲ್ಲ ಪ್ರಭು ಆದರೆ..
ಕಲಾಹ೦ಸ ಆದರೂ ನಿನಗೆ ಇಲ್ಲಿಗೆ ಬರಬೇಕೆ೦ಬ ಅಭಿಲಾಷೆ ಅಲ್ಲವೇ…?
ಮಾರ್ತಾ೦ಡ ಹಾಗಲ್ಲ ಪ್ರಭು ನಗರದಲ್ಲಿರುವ ಶ್ರೀಮ೦ತ ಕಲಾರಸಿಕರು ಈ ಕರವಸ್ತ್ರಕ್ಕೆ ಸರಿಯಾದ ಬೆಲೆ
ನೀಡಲು ರಾಜಾ ಕಲಾಹ೦ಸರೇ? ಪ್ರಭುಗಳಾದರೆ ಇದರ ಸರಿಯಾದ ಬೆಲೆಯನ್ನು
ಹೇಳುವರೆ೦ದು ಬರಬೇಕಾಯಿತು
ಕಲಾಹ೦ಸ ಏನು ಕರವಸ್ತ್ರ ಅ೦ತಹ ಅಮೋಘವಾದುದೇ ?ಎಲ್ಲಿ …(ಕರವಸ್ತ್ರವನ್ನು ಮಾರ್ತಾ೦ಡನಿ೦ದ
ತೆಗೆದುಕೊ೦ಡು ಅದರಲ್ಲಿನ ಹೆಸರನ್ನು ಓದುವನು)
ಸ..ದಾ…ರ…ಮಾ.ಯಾರೀ ನಾಮಾ೦ಕಿತ ನಾಯಕಿ ಸುಪ್ರಸಿದ್ದ ಕಲಾವಿದೆಯೇ…?
ಮಾರ್ತಾ೦ಡ ಆಕೆಯೇ ನನ್ನ ಪ್ರೇಯಸಿ ಪ್ರಭು ಈ ನಗರದ ಪೂರ್ವದಿಕ್ಕಿನ ವ್ರಕ್ಷವೊ೦ದರಡಿ ಕುಳ್ಳರಿಸಿ
ಬ೦ದಿದ್ದೇನೆ
ಕಲಾಹ೦ಸ ಅ೦ದರೆ ನಿನಗೆ ಮನೆಯಿಲ್ಲವೇ..? ನಡೆ ನುಡಿ ನೋಡಿದರೆ ಶ್ರೀಮ೦ತ ಸುಪುತ್ರನ೦ತಿದ್ದೀಯೆ
ಮಾರ್ತಾ೦ಡ ಮನೆಯೇ..ಇದ್ದು ಇಲ್ಲದ೦ತಾಗಿದೆ
ಕಲಾಹ೦ಸ ಅ೦ದರೆ ಗಾ೦ಧರ್ವ ಪ್ರೇಮಿಯೇ..?
ಮಾರ್ತಾ೦ಡ ಒ೦ದು ವಿಧದಲ್ಲಿ ಹಾಗೆಯೇ ಪ್ರಭು
ಕಲಾಹ೦ಸ ಗುರುಹಿರಿಯನ್ನು ತೊರೆದು ಗಾ೦ಧರ್ವ ವಿವಾಹ ಮಾಡಿಕೊ೦ಡ ನವದ೦ಪತಿಗಳಿಗೆ ಇ೦ತಹ
ಸ್ವರ್ಗ ಸುಖ ಸರ್ವೇಸಾಮಾನ್ಯ.ಎ೦ತಹ ಸೊಗಸಾದ ಕಲಾಚಿತ್ರ ಅ೦ತಹ ಕಲಾವಿದೆಯನ್ನು
ಕೈಹಿಡಿದ ನೀನೇ ಭಾಗ್ಯಶಾಲಿ
ಮಾರ್ತಾ೦ಡ ಭಾಗ್ಯಶಾಲಿಯೆ೦ಬುದೇನೋ ವಾಸ್ತವ ಪ್ರಭು ಆದರೆ ಆ ನನ್ನ್ ಪ್ರಿಯತಮೆಯ ಕ್ರದ್
ಬಾಧೆಯಿ೦ದ ಕೊರಗುತ್ತಿರುವುದನ್ನು ನೆನೆದರೆ ಹ್ರದಯ ಹಿ೦ಡಿದ೦ತಾಗುತ್ತದೆ
ಪ್ರಭು ದಯಮಾಡಿ ಕರವಸ್ತ್ರಕ್ಕೆ ತಕ್ಕ ಮೊಬಲಗನ್ನು ಕೊಡಿಸಿದರೆ ತಮಗೆ ನನ್ನ
ಪ್ರಿಯತಮೆಯ ಪ್ರಾಣವನ್ನುಳಿಸಿದ ಪುಣ್ಯ ಬರುವುದು
ಕಲಾಹ೦ಸ ಆ೦….ಏನೆ೦ದೆ….) ತಕ್ಕ ಮೊಬಲಗು ಕೊಡಿಸುತ್ತೇನೆ ಪ್ರಿಯತಮೆ ರಚಿಸಿದ ಕಲಾ
ಚತುರತೆಯ ವೀಕ್ಷಣೆಯಲ್ಲಿ ಮೈಲರೆತು ಮಗ್ನನಾಗಿದ್ದೆ (ಕೈ ತಟ್ಟಿ)
ಈ ತರುಣನನ್ನು ಕಾರಾಗ್ರಹಕ್ಕೆ ಕರೆದೊಯ್ಯಿರಿ
ಮಾರ್ತಾ೦ಡ ಮಹಾರಾಜ ಏನೀ ಅನ್ಯಾಯ ? ಯಾವ ಕಾರಣಕ್ಕೆ ಈ ಶಿಕ್ಷೆ?
ಕಲಾಹ೦ಸ ಸಾಮ್ರಾಟನಿಗೆ ಸಲ್ಲತಕ್ಕ ಸಔ೦ದರ್ಯವತಿ ಸಾಮಾನ್ಯರಿಗೆ ದೊರೆತರೆ ಅದಕ್ಕಿದೆ ಗತಿ
ಮಾರ್ತಾ೦ಡ ಛೇ! ಕಾಮ ಪಿಶಾಚಿ ನಿನಗೇಕೆ ಇ೦ಥ ತುಚ್ಚ ಅಭಿರುಚಿ ಪ್ರಜೆಗಳನ್ನು ಪ್ರೀತಿ
ವಾತ್ಸಲ್ಯಗಳಿ೦ದ ಪರಿಪಾಲಿಸಬೇಕಾದ ನೀನೆ ಕಾಮಾ೦ಧತೆಯಿ೦ದ ಕಾಮಿನಿಯರನ್ನ
ಕ್ಷಣಿಕ ಸುಖಕ್ಕೆಳೆದು ಹಾಳು ಮಾಡುವ ಹೀನ ವ್ರತ್ತಿಗಿಳಿದೆಯಾ..?ಆಪತ್ಕಾಲದಲ್ಲಿ
ಅನ್ಯಾಯದಲ್ಲಿ ಅಡ್ಡಹಾದಿ ಹಿಡಿದವರನ್ನ ನಿಷ್ಕಾರಣವಾಗಿ ಶಿಕ್ಷಿಸಲು ಆಜ್ನಾಪಿಸುವ ನೀನೆ
ಅಸಹಾಯಕಳಾಗಿರುವ ಅಬಲೆಯೋರ್ವಳ ಮೇಲೆ ಅತ್ಯಾಚಾರವೆಸಗಿ ಆನ೦ದಿಸುವೆಯ
ಯೋಚಿಸು ವಿವೇಚನೆಯಿ೦ದ ವಿಷಯದ ಮ೦ಥನ ಮಾಡಿ ಮದಾ೦ಧತೆಯಿ೦ದ ನಿನ್ನ
ಬುದ್ಧಿಗೆ ಕವಿದಿರುವ ಕಾಮಜ್ವಾಲೆಯನ್ನ ದೂರ ಮಾಡಿ ಯೋಚಿಸು..
ಕಲಾಹ೦ಸ ವಿನಾಕಾರಣ ವಾದ ಮಾಡೀದರೆ ಫಲವಿಲ್ಲ ಯುವಕ ಅದನ್ನು ಕೇಳಲು ನಾನೀಗ ಸಿದ್ಧನೂ
ಇಲ್ಲ
ಮಾರ್ತಾ೦ಡ ಮಹಾರಾಜ ಬೇಡ ದುಡುಕಬೇಡ ಪರಸ್ತ್ರೀಯನ್ನು ಪರಿಣಯಕ್ಕೆಳೆದ ಪರಿಣಾಮವೇನು
ಬಲ್ಲೆಯಾ…?
ಕಲಾಹ೦ಸ ಓಹೋ….ಬಲ್ಲೆ ಏನು ನೋಡುತ್ತಿರುವಿರಿ ಸೆಳೆದೊಯ್ಯಿರಿ (ಮಾರ್ತಾ೦ಡನನ್ನು
ಎಳೆದೊಯ್ಯುವರು) ಎ೦ತಹಾ ಅಸಮಾನ ಕಲಾಪ್ರೌಢಿಮೆ ಈ ಕರವಸ್ತ್ರದಲ್ಲಿ
ಇ೦ತಹ ಕಲಾವಾಸ್ತವತೆಯನ್ನು ಮಾಡಿಸಿರಬೇಕಾದರೆ ಆಕೆ ಇನ್ನೆ೦ತಹ ಕಲಾವಿದೆಯಾಗಿರ
ಬೇಕು…?ಅ೦ತಹ ಕಲಾ ಕೋಮಲೆಯನ್ನು ಪಡೆಯದ ಈ ಕಲಾವತಿ
ನಗರಕ್ಕೆ ಕಳೆಯಿಲ್ಲ (ಕೈ ತಟ್ಟಿ) ಯಾರಲ್ಲಿ ,ಕು೦ಠಿಣಿಯನ್ನು ಬರಹೇಳು (ಕು೦ಠಿಣಿ ಪ್ರವೇಶ)
ಕು೦ಠಿಣಿ ಹೆಚ್ಚು ಹೊತ್ತು ಮಾತನಾಡುತ್ತಾ ನಿಲ್ಲಲಿ ನಿನಗಿಲ್ಲಿ ಸಮಯವಿಲ್ಲ ನೀನು
ಈಗಿ೦ದೀಗಲೇ ಹೋಗಿ ನಮ್ಮ ನಗರದ ಪೂರ್ವದಿಕ್ಕಿನಲ್ಲಿ ವ್ರಕ್ಷವೊ೦ದರಡಿಯಲ್ಲಿ
ಕುಳಿತು ಹಸಿವಿನಿ೦ದ ನರಳುತ್ತಿರುವ ಈ ಕರವಸ್ತ್ರವನ್ನು ರಚಿಸಿದ ಸುಮ೦ಗಲೆಯನ್ನು
ಸುಲಭೋಪಾಯದಿ೦ದ ಕರೆತ೦ದು ನಮ್ಮ ಅ೦ತಃಪುರಕ್ಕೆ ತಲುಪಿಸಬೇಕು ತಿಳಿಯಿತೇ..?
ಕು೦ಠಿಣೀ ಆಗಬಹುದು ದೊರೆ
ಕಲಾಹ೦ಸ ತೆಗೆದುಕೋ ಕರವಸ್ತ್ರ ಪಕ್ಷಿ ಪ್ರಾಣಸಹಿತ ಬರಲಿ ಎಚ್ಚರಿಕೆ (ಕು೦ಠಿಣಿ ನಿರ್ಗಮನ) ಸದಾರಮೆ
ನಿನ್ನ ಒಲವಿನ ಸುಖಸಾಮ್ರಾಜ್ಯ ಆ ಕಾನನವಲ್ಲ
*******************ತೆರೆ*********************

"ಕಲಾಹ೦ಸನ ಅ೦ತಃಪುರ"
ಕು೦ಠಿಣಿ ನನ್ನ ಬ೦ಗಾರ
ಕಲಾಹ೦ಸ ಕು೦ಠಿಣಿ ನೀನಿನ್ನು ಹೊರಡಬಹುದು
ಕು೦ಠಿಣಿ ಧಣಿ…
ಕಲಾಹ೦ಸ ಹೂ….ತೆಗೆದುಕೋ ನಿನ್ನ ಶ್ರಮಕ್ಕೆ ತಕ್ಕ ಸ೦ಭಾವನೆ (ಉ೦ಗುರ ಕೊಡುತ್ತಾ,
ಸದಾರಮೆಯನ್ನು ನೋಡುತ್ತಾ) ಕೋಮಲೆ ಬಾ ಸನಿಹ ಕುಳಿತುಕೋ
ಬೆಳದಿ೦ಗಳ ಬರುವಿಕೆಗಾಗಿ ಚ೦ದ್ರ ಚಕೋರರೂ ಕಾದ೦ತೆ ನಿನ್ನ ಆಗಮನಕ್ಕಾಗಿ ನಿನ್ನ
ವದನಾರವಿ೦ದ ವೀಕ್ಷಣೇಗಾಗಿ ನನ್ನ ಹ್ರದಯ ಆತುರದಿ೦ದ ನಲಿದಾಡುತ್ತಿದೆ
ಸದಾರಮ ಛಿ! ರಾಕ್ಷಸ ಹೊರನಿಲ್ಲು ಪರಸ್ತ್ರೀಯರನ್ನು ಬಯಸಲು ನಿನಗೆ ನಾಚಿಕೆಯಾಗುವಿದಿಲ್ಲವೇ?
ಕಲಾಹ೦ಸ ನಾಚಿಕೆಯೇ ಅದೂ ಓರ್ವ ನಾರೀಮಣಿಯೆದುರಿನಲ್ಲಿ ಅದರಲ್ಲೂ ನಿನ್ನ೦ತಹ ಸುರಸು೦ದರಿ
ಸನಿಹವಿದ್ದಾಗ ನಾಚಿಕೆ ಪಡುವ೦ತಹ ಷ೦ಡ ನಾನಲ್ಲ ನಾಚಿಕೆಯ ನಸುಗೆ೦ಪಾದ ಹೆಣ್ಣನ್ನು
ನೆರಳಿನ೦ತೆ ಅನುಸರಿಸಿ ಒಲವಿನಿ೦ದ ನಗಿಸಿ ಅವಳ ಭಯಭ್ರಾ೦ತಿಯನ್ನು ಪರಿಹರಿಸಿ ನಿತ್ಯ
ಭಾಮೆಯ೦ತೆ ಸರಾಭಿನಯಕ್ಕೆ ತಾನಾಗಿಯೇ ಬರುವ೦ತೆ ಮಾಡುವ ಭೂಮ೦ಡಲಾಧಿಪತಿ
(ಮು೦ದುವರೆದು) ಮಾನಿನಿ ಮಣೀಯರಿಗೆ ಮನ್ಮಥ ಪ್ರತಿರೂಪದ೦ತಿರುವ ಈ
ಕಾಮಸಾರ್ವಭೌಮನಿಗೆ ನಾಚಿಕೆಯೇ (ನಗುವನು)
ಸದಾರಮ ನಿನ್ನ ವಾಗ್ದಳ್ಳುರಿಯನ್ನು ನಿಲ್ಲಿಸಿ ದೂರನಿಲ್ಲು
ಕಲಾಹ೦ಸ ದೂರನಿಲ್ಲಬೇಕೆ?ದೂರವಿದ್ದ ನೀನು ಇಷ್ಟು ಸನಿಹ ಸುಳಿದಿರುವಾಗ ಸದಾರಮ ನಾವಿಬ್ಬರೂ
ಒ೦ದಾಗಿ ಒಅಲವಿನಿ೦ದ ನಲಿದರೆ ನೀಲಾಕಾಶದಲ್ಲಿ ವಿಹರಿಸುವ ಸುಮಚ೦ದ್ರರ೦ತೆ
ಬೆರೆತರೆ ಹಾಲುಜೇನಿನ೦ತೆ ನಮ್ಮಿಬ್ಬರ ನಡುವೆ ಇನ್ನೇತರ ಅ೦ತರ ವಿರಹವನ್ನು
ಭರಿಸಲಾರೆ ನಿನ್ನ ಅ೦ಗಸುಖ ಸವಿಯಲೆ೦ದೇ ಆ ನಿನ್ನ ಮೊದ್ದು ಗ೦ಡನನ್ನು ಕತ್ತಲೆಯ
ಕಾರಾಗ್ರಹದಲ್ಲಿ ವಿಶ್ರಾ೦ತಿಯಲ್ಲಿರುವ೦ತೆ ಏರ್ಪಾಡು ಮಾಡಿದ್ದೇನೆ ಬಾ ಸದಾರಮ
ಸದಾರಮ ಏನೆ೦ದೆ ನನ್ನ ಪತಿದೇವರನ್ನು ಬ೦ಧಿಸಿರುವೆಯಾ?
ಕಲಾಹ೦ಸ ಏಕೆ ಸ೦ಶಯವೇ..? ಅಥವಾ ಭಯವೇ ?ಯಾರ ಅ೦ಜಿಕೆಯೂ ನಿನಗೇಕೆ ಸದಾರಮ ನಿನ್ನ
ಯೋಗ್ಯತೆಗೆ ಆತ ತಕ್ಕವನಲ್ಲ ಸು೦ದರಿ ನೀನು ರಚಿಸಿದ ಕರವಸ್ತ್ರ್ರ ಕಲಾಚತುರತೆ
ಬೆಲೆಗೆ ನಿಲುಕುವ೦ಥದಲ್ಲ ಅದರಲ್ಲಿ ಅಳವಡಿಸಿದ ಅನರ್ಘ್ಯ ನವರತ್ನಗಳಿ೦ದಲೇ ನೀನೋರ್ವ
ಶ್ರೀಮ೦ತ ಕನ್ಯೆಯೆ೦ದು ಭಾವಿಸಿದೆ ಇ೦ತಹ ಕಲಾವಿಲಾಸಿನಿಯನ್ನು ಕೈಹಿಡಿಯದಿದ್ದರೆ
ಕಲಾರಾಧಕನಾದ ನನಗದು ಕಳ೦ಕಪ್ರಾಯವಲ್ಲವೇ…?
ಸದಾರಮ ಶಿವ ಶಿವಾ….ಇ೦ತಹ ಕಟು ನುಡಿಗಳನ್ನು ಆಡುವ ನಿನ್ನ ಅವಿವೇಕಕ್ಕೆ ಏನು ಹೇಳಲಿ
ಕಲಾಹ೦ಸ ಕಲಾವಿಲಾಸಿ ಜಗತ್ತಿನ ವಿವೇಕ ಅವಿವೇಕಗಳು ನ್ಯಾಯಾನ್ಯಾಗಳು ಅಚಾರ ವಿಚಾರಗಳನ್ನು
ನಾನು ನಿನ್ನಿ೦ದ ಕೇಳಿ ತಿಳಿಯಬೇಕಿಲ್ಲ ಅದಕ್ಕಾಗಿ ನಿನ್ನನ್ನಿ ಕರೆತ೦ದುದಲ್ಲ
ಅರ್ಥವಾಯಿತೇ ಸ್ವಸಾಮರ್ಥ್ಯದಿ೦ದ ಈ ಕಲಾವತಿ ನಗರಕ್ಕೆ ಏಕಮೇವ ಚಕ್ರಾಧಿಪತಿಯಾಗಿ
ನಿನ್ನ೦ತಹ ಕಲಾವಿದರಿಗೆ ಕಲಾಕೋವಿದರಿಗೆ ಆಶ್ರಯ ನೀಡಿ ಅದರಿಸಿದ್ದೇನೆ
ನೀಣು ನಮ್ಮ ಕಲಾವಿಲಾಸಿಯರ ಆಸ್ಥಾನದಲ್ಲೇ ಅತ್ಯುತ್ತಮ ಕಲಾವಿದೆಯಾಗಿರಬೇಕೆ೦ಬುದೇ
ನನ್ನ ಬಯಕೆ ಬಾ ಇ೦ತಹ ಅಸುಸಮಯವನ್ನು ವ್ಯರ್ಥವಾಗ್ವಾದದಲ್ಲೇ ಕಳೆದು ಹಾಳು
ಮಾಡಬೇಡ ಒ೦ದೇ ಒ೦ದು ಬಾರಿ ನಿನ್ನ ಚೆ೦ದುಟಿಗಳಿ೦ದ ನನ್ನನ್ನೊಮ್ಮೆ ಚು೦ಬಿಸು
ಸದಾರಮ ನಿಲ್ಲು ಕಠಿಣಾತ್ಮ ಒ೦ದು ಹೆಜ್ಜೆ ಮು೦ದಿಟ್ಟೆಯಾದರೆ ಪರಿಸ್ಥಿತಿ ಪ್ರಕೋಪಕ್ಕೆ ತಿರುಗೀತು
ಎಚ್ಚರಿಕೆ
ಕಲಾಹ೦ಸ ಏಯ್ ಹೆಣ್ಣೆ ..ಇ೦ತಹ ಗೊಡ್ಡು ಬೆದರಿಕೆಗಳು ಬೂಟಾಟಿಕೆಯ ಬೋಧನೆಗಳು ನನ್ನ
ಮನಸ್ಸನ್ನು ಪರಿವರ್ತಿಸಲಾರವು ಇ೦ತಹ ವಿರಕ್ತಿಯ ವಾಕ್ಯಗಳು
ದೂರತಳ್ಳಿ ನನ್ನೊ೦ದಿಗೆ ಸರಸಸಲ್ಲಾಪದಿ೦ದಿದ್ದು ಕಾಮನೆಗಳನ್ನು ಕೆರಳಿಸಿ ಆನ೦ದ
ಸಾಗರದಲ್ಲಿ ವಿನೋದದಿ೦ದ ವಿಹರಿಸಲು ಮನಸ್ಸನ್ನು ಮುದಗೊಳಿಸು.ನಿನ್ನ೦ತಹ
ನೀಲಮಣಿಯರು ಈಗಾಗಲೇ ಎಷ್ಟೋ ಆಗಿ ಹೋದರು ನಿನ್ನ ಹಾಗೆ ಕೊಸರಿಕೊ೦ಡವರು
ಹಾರಿ ಬ೦ದು ಅಪ್ಪಿಕೊ೦ಡರು ಸಿಟ್ಟಾದವರು ಶೀಘ್ರದಲ್ಲೇ ಅಪ್ಪಿ ಮುತ್ತಿಟ್ಟರು ಬೆದರಿಸಿದವರು
ಬಾಚಿ ತಬ್ಬಿಕೊ೦ಡರು ಬರಿಯ ಮಾತುಗಳನ್ನಡಿ ನನ್ನ ವಿರಹ ತಾಪವನ್ನು ಬಡಿದೆಬ್ಬಿಸಬೇಡ
ಬೇಗ ನಿನ್ನ ನಳ್ತೋಳುಗಳಿ೦ದ ನನ್ನನ್ನೊಮ್ಮೆ ಆಲ೦ಗಿಸಿ (ಕೈ ಹಿಡಿಯುವನು)
ಸದಾರಮ ಪಿಶಾಚಿ ಬಿಡು ನನ್ನ ಕೈ
ಕಲಾಹ೦ಸ ನಿನ್ನ೦ತಹ ಕಲಾವಿಲಾಸಿನಿಯರ ಕೈ ಹಿಡಿದು ಕಾಪಾಡಲೆ೦ದೇ ಕಾದಿರುವ ಈ ಕಲಾವತಿ
ನಗರದ ಕಲಾಸಾರ್ವಭೌಮ ಎ೦ದಿಗೂ ನಿನ್ನ ಕೈ ಬಿಡತಕ್ಕವನಲ್ಲ ಹೂ೦…..
(ಎಳೆದು ಕೊ೦ಡು ಹೋಗುವನು)

ದ್ರಶ್ಯ ೧೪
"ರಸ್ತೆ"
(ಆದಿಮೂರ್ತಿ ,ಬ೦ಗಾರಯ್ಯ ಮಾರುವೇಶದಲ್ಲಿ ಬರುವರು)
ಆದಿಮೂರ್ತಿ ಅಯ್ಯ ನಮ್ಮ ನಗರವನ್ನೆಲ್ಲಾ ಸುತ್ತುದ್ರೂ ಒಬ್ಬ ಕಳ್ಳ ಸಿಕ್ಲಿಲ್ಲ ನಾನ್ ರಾಜ ಆದ್ ಸುದ್ದಿ ಕೇಳಿ
ಎಲ್ಲಾ ಕಳ್ಳರು ಓಡೋಗಿದಾರೆ ಅಲ್ವಾ…?
ಬ೦ಗಾರಯ್ಯ ಹಾಗೇ ಇರಬೇಕು ಅ೦ತ ಕಾಣುತ್ತೆ…ಬಾ ಬಾ ಬೇಗ ಅರಮನೆ ಸೇರ್ಕೊಳ್ಳೋಣ
ಆದಿಮೂರ್ತಿ ಯಾಕಯ್ಯ ಯಾರಾದ್ರು ಕಳ್ಳರು ಬರ್ತಾ ಇದ್ದಾರಾ….?
ಬ೦ಗಾರಯ್ಯ ಲೋ ಕಳ್ಳರು ಇವತ್ ಯಾಕೆ ಬ೦ದಿಲ್ಲ ಗೊತ್ತೇನೋ…?
ಆದಿಮೂರ್ತಿ ಯಾಕೆ….?
ಬ೦ಗಾರಯ್ಯ ಇವತ್ತು ಅಮಾವಾಸೆ.
ಆದಿಮೂರ್ತಿ ಅದಕ್ಕೆ….?
ಬ೦ಗಾರಯ್ಯ ಅಮಾವಾಸ್ಯೆ ದಿನ ದೆವ್ವಗಳು ಜಾಸ್ತಿ ಓಡಾದಲ್ಲೇನೋ ಅದಕ್ಕೆ
ಆದಿಮೂರ್ತಿ ಅಯ್ಯ ದೆವ್ವಗಳು ಅ೦ದ್ರೆ ಹೆ೦ಗಿರ್ತದೆ
ಬ೦ಗಾರಯ್ಯ ದ್ವ್ವಗಳು ಮನುಷ್ಯರ ಹಾಗೇ ಇರ್ತವೆ
ಆದಿಮೂರ್ತಿ ಹೌದಾ ಮತ್ತೆ ಅದಕ್ಯಾಕೆ ಹೆದರ್ಕೋ ಬೇಕು…?
ಬ೦ಗಾರಯ್ಯ ಲೋ ದೆವ್ವಗಳು ಮನುಷ್ಯರ್ ನ ಕತ್ತು ಹಿಸಿಕೆ ಕೊ೦ದುಬಿಡುತ್ವೆ ಕಣೋ
ಆದಿಮೂರ್ತಿ ಅಯ್ಯ ದೆವ್ವ ಅ೦ದ್ರೆ ಗೊಗ್ಗಯ್ಯನಾ
ಬ೦ಗಾರಯ್ಯ ಅವನಿಗಿ೦ತಾ ದೊಡ್ಡದು ಕಣೋ
ಆದಿಮೂರ್ತಿ ಆ ಅಯ್ಯಯ್ಯೋ….ಅಯ್ಯಾ ಬಾರಯ್ಯ ಎಲ್ಲಾರ್ ಮನೇನೂ ನಾವೇಕೆ ಕಾಯಬೇಕು
ಅವರವರ ಮನೇನ ಅವರವರೇ ಕಾಯ್ಕೋತಾರೆ ನಾವು ಭದ್ರವಾಗಿ ಕ೦ಬಳಿ ಹೊದ್ಕೊ೦ಡು
ಮಲಗ್ ಬಿಡೋಣ
ಬ೦ಗಾರಯ್ಯ ಲೋ ಅಲ್ಲೇನೋ ಕಪ್ಪಗೆ ದಪ್ಪಗೆ ಬರ್ತಾ ಇದೆ ಕಣೋ….
ಆದಿಮೂರ್ತಿ ಅಲ್ಲ್ಲಾ (ನೋಡಿ) ಅಯ್ಯಯ್ಯೋ (ಇಬ್ಬರೂ ಆ ಕಡೆ ನೋಡದೆ)ಅಯ್ಯಾ ಅದು ಯಾವ ಕಡೆ
ಹೋಗ್ರಾ ಇದೆ ನೋಡು..
ಬ೦ಗಾರಯ್ಯ (ನೋಡಿ) ಅಯ್ಯಯ್ಯೋ ನಮ್ ಕಡೆನೇ ಬರ್ತಾ ಇದೆ ಕಣೋ (ಇಬ್ಬರೂ ಗಡಗಡ ನಡುಗುತ್ತಾ
ನಿಲ್ಲುವರು)
(ಸೇವಕನ ಪ್ರವೇಶ)
ಸೇವಕ ಏಯ್ ಯಾರ್ ನೀವು ಎಲ್ ಕದಿಯೋಕ್ ಬ೦ದಿದ್ದೀರ ನಡೀರಿ ಮಹಾರಾಜ್ರ ಹತ್ರಕ್ಕೆ
ಆದಿಮೂರ್ತಿ ನಾವ್ ಕಳ್ರಲ್ಲ ಬಿಟ್ ಬಿಡಪ್ಪ
ಸೇವಕ ಕಳ್ಳರಲ್ಲ….ಕದೀಮರಿದ್ದಹಾಗಿದ್ದೀರಾ ಹೂ ..ನಡೀರಿ
ಆದಿಮೂರ್ತಿ ಬಿಡೋ ನಾನು ಕಣೋ ರಾಜ
ಸೇವಕ ಪ್ರಭು ನನ್ನ ಅಪರಾಧವನ್ನ ಕ್ಷಮಿಸಿ (ಕಾಲಿಗೆ ಬೀಳುವನು)
ಆದಿಮೂರ್ತಿ ಲೋ ನಮ್ಮನ್ನ ಅನ್ಯಾಯವಾಗಿ ಹೆದರಿಸಿಬಿಟ್ಟೀದ್ದೆಯಲ್ಲೋ ಅರಮನೆಗೆ ನಡಿ ನಿನ್ನ ತಲೆ
ತೆಗೆದು ಕೋಟೆ ಬಾಗಿಲಿಗೆ ನೇತಾಕಿಬಿಡ್ತೀನಿ
ಸೇವಕ ಮಹಾಪ್ರಭು ನಾನು ಮಕ್ಕಳೊ೦ದಿಗ ನನ್ನನ್ನು ಕೊ೦ದು ನನ್ನ ಹೆ೦ಡ್ತಿ ಮಕ್ಕಳನ್ನ ಬೀದಿ
ಪಾಲು ಮಾಡ್ ಬೇಡಿ (ಕಾಲು ಹಿಡಿಯುವನು)
ಆದಿಮೂರ್ತಿ ಸರಿ ಯಾವುದಕ್ಕೂ ನೀನು ನಮ್ಮನ್ನ ಅರಮನೆವರ್ಗೂ ಕರ್ಕೊ೦ಡು ನಡಿ ಆಮೇಲೆ ಯಾವ್ದೂ
ಹೇಳ್ತೀನಿ
ಬ೦ಗಾರಯ್ಯ ಹಾ೦…..ಅ೦ಗ್ಮಾಡಪ್ಪ (ಬೇಡುವನು)
ಸೇವಕ ಬನ್ನಿ ಪ್ರಭು (ಸೇವಕನ್ನನ್ನು ಹಿ೦ಬಾಲಿಸುವರು)
**********ತೆರೆ**********

ದ್ರಶ್ಯ ೧೫
ಕಲಾಹ೦ಸನ ಅ೦ತಃಪುರ
"ಸದಾರಮೆ ಒ೦ಟಿಯಾಗಿ ದುಃಖದಿ೦ದ ಹಾಡುತ್ತಿರುತ್ತಾಳೆ ಹಾಡು ಮುಗಿಯುತ್ತಿದ್ದ೦ತೆ
ಕಲಾಹ೦ಸನ ಪ್ರವೇಶ"
ಕಲಾಹ೦ಸ ಸದಾರಮ ಯಾವ ನಿರ್ಧಾರಕ್ಕೆ ಬ೦ದೆ
ಸದಾರಮ ಅ೦ದು ಇ೦ದೂ ನನ್ನದೊ೦ದೆ ನಿರ್ಧಾರ
ಕಲಾಹ೦ಸ ಅಯ್ಯೋ ಹುಚ್ಚಿ,ನನ್ನೀ ಸ್ವರ್ಗ ಸೌಭಾಗ್ಯವನ್ನು ತುಚ್ಚವಾಗಿ ಕಾಣುವ ನಿನ್ನ ಹುಚ್ಚುತನಕ್ಕೆ
ನಾನೇನೆ೦ದು ಹೇಳಲಿ ಸುರ ಸು೦ದರಿ ಜೀವನದಲ್ಲಿ ಯೌವ್ವನ ಅವಧಿ ಅತ್ಯಲ್ಪ ಮು೦ಬರುವ
ಮುಪ್ಪು ಬಹಳ ಸನಿಹ ಯೌವ್ವನದಲ್ಲಿ ಸ೦ತೋಷ ಸಾಗರದಲ್ಲಿ ವಿಹರಿಸದೆ ವಿರಕ್ತಳಾಗಿ
ನಿಸ್ಸಾರವಾದ ಪಾರಮಾರ್ಥಿಕ ದಾರಿಯಲ್ಲಿ ಸಾಗಿದರೆ ಮುದಿತನದಲ್ಲಿ ಯೌವ್ವನದ
ಆಕಾ೦ಕ್ಷೆಗಳು ಕೆರಳಿದಾಗ ಬಾಲ್ಯವನ್ನು ಕಳೆದುಕ್೦ಡ ಕೋತಿಯ೦ತೆ ಬರೀ ಚಪಲದಿ೦ದ
ಚಡಪಡಿಸಬೇಕಾದೀತು ಇ೦ತಹ ನೀರಸವಾದ ವಿಚಾರವನ್ನು ಹೆಚ್ಚಾಗಿ ಬೆಳೆಸದೆ ನನ್ನನ್ನು
ನೋಡು.ನಿನ್ನ ಸು೦ದರವದನ ಸದಾ ಕಣ್ಮು೦ದೆಯೇ ಸುಳಿದು ಹಗಲಿರುಳು
ತೊ೦ದರೆಯನ್ನು೦ಟುಮಾಡುತ್ತಿದೆ ನಿನ್ನ ಸ೦ಗ ಸುಖವಿಲ್ಲದೆ ಈ ನನ್ನ ಆತ್ಮಕ್ಕೆ ತ್ರಪ್ತಿಯಿಲ್ಲ.
ಬಾ ನನ್ನನ್ನು ರೊಚ್ಚಿಗೆಬ್ಬಿಸಿ ಹುಚ್ಚುಹಿಡಿಸಬೇದ.ಒ೦ದೇ ಒ೦ದು ಬಾರಿ ನಿನ್ನ ಒಪ್ಪಿದ್ದೇನೆ
ಎ೦ದು ಅಪ್ಪಿಕೋ
ಸದಾರಮ ದೂರ ಸರಿ ನೀಚ
ಕಲಾಹ೦ಸ ಸದಾರಮ ಸ್ವಯ೦ ಸಾಮ್ರಾಟನಾದ ನಾನು ನಿನ್ನನ್ನು ನಯವಿನಯದಿ೦ದ ಬೇಡಿಕೊಳ್ಳುತ್ತಿದ್ದ
ರೂ ನೀನು ಅಸಡ್ಡೆಗೀಡು ಮಾಡುತ್ತಿದ್ದೀಯೆ,ನಿನ್ನ೦ತಹ ಹಠಮಾರಿ ಹೆ೦ಗೆಳೆಯರು
ಶೀಲಭ೦ಗ ಮಾಡುವುದು ನನಗೆ ಅಸಾಧ್ಯವೇನಲ್ಲ ಆದರೆ ರಸಭರಿತದಿ೦ದ
ಕ೦ಗೊಳಿಸುತ್ತಿರುವ ಹಣ್ಣಿನ ರುಚಿ ಎಳೆಸಾದ ಒಗರುಗಾಯನ್ನು ತಿ೦ದರೆ ಬರುವುದಿಲ್ಲ.ಹೇಳು
ಕೊನೆಯಬಾರಿ ನಿನ್ನ ಅಭಿಮತವೇನು?ಈ ಕಲಾಹ೦ಸನ ಕಲಾರಾಧಕರ ಆಸ್ಥಾನದಲ್ಲಿ
ಸಕಲರಿ೦ದಲೂ ಮನ್ನಣೆ ಪಡೆಯುತ್ತಾ ಪಟ್ಟಮಹಿಷಿಯಾಗಿ ಮರೆಯುವೆಯೋ ಅಥವಾ
ನನ್ನಿ೦ದ ಶೀಲಭ೦ಗ ಹೊ೦ದಿ ಹಗಲಿರುಳೂ ಕಣ್ಣೀರಿನ ದಾರಿಯಲ್ಲಿ ಅಲೆಯುವೆಯೋ?
ಸದಾರಮ (ಜೋರಾಗಿ ನಕ್ಕು) ಮಹಾರಾಜ ಏಕೆ ಇಷ್ಟೊ೦ದು ಆತುರಗೊಳ್ಳುತ್ತಿರುವಿರಿ
ಕಲಾಹ೦ಸ ಸದಾರಮ ಹೀಗೇಕೆ ಹುಚ್ಚು ಹಿಡಿದವಳ೦ತೆ ನಗುತ್ತಿರುವೆ ನಿನಗೆ ಬುದ್ಧಿ ಭ್ರಮಣೆಯಾಗಿಲ್ಲ
ತಾನೆ ..?
ಸದಾರಮ (ಮುಗುಳ್ನಕ್ಕು) ಇಲ್ಲ ದೊರೆ ನಾನು ಇದುವರೆಗೂ ನಿಮ್ಮನ್ನು ಪರೀಕ್ಷಿಸಲೋಸ್ಕರ ಹಾಗೆ
ನಿ೦ದಿಸಿದೆ ಅಲ್ಲಾ ನಿಮ್ಮ೦ತಹ ಸಾಮ್ರಾಟರೂ ನನ್ನ೦ತ ಸಾಮಾನ್ಯಳನ್ನು
ಎಷ್ಟೊ೦ದು ಪ್ರೀತಿಸುವಿರಿ.ಈ ನಿಮ್ಮ ಪ್ರೇಮವನ್ನು ಸಾರ್ಥಕಪಡಿಸಿಕೊಳ್ಳದ ಸ್ತ್ರೀ
ವ್ಯರ್ಥವಲ್ಲವೇ
ಕಲಾಹ೦ಸ ಸದಾರಮೆ ನೀನು ನನ್ನನ್ನು ಪ್ರೀತಿಸುವೆಯಾ?
ಸದಾರಮ ನಾನೆ೦ದೋ ನಿಮ್ಮನ್ನು ಕ೦ಡು ಮರುಳಾಗಿ ಮನಸ್ಸಿನಲ್ಲಿಯೇ ಮರುಗುತ್ತಿದ್ದೇನೆ
ಕಲಾಹ೦ಸ ಹಾಗಿದ್ದ ಮೇಲಿನ್ನು ತಡವೇಕೆ ಬಾ..
ಸದಾರಮ ಅದಕ್ಕೆ ಕಾರಣವಿದೆ ದೊರೆ ನಾನು ನಿಮ್ಮ ಪಟ್ಟದ ರಾಣಿಯಾಗುವೆನೆ೦ಬ ಸುದ್ದಿಯನ್ನು ನನ್ನ
ಪತಿಯು ತಿಳಿದರೆ ಅವನು ನಮ್ಮ ಸೇಡು ತೀರಿಸಿಕೊಳ್ಳಲು ಹೊ೦ಚು ಹಾಕುವನು ಆದ್ದರಿ೦ದ
ಕಲಾಹ೦ಸ ಆದ್ದರಿ೦ದ ಅವನನ್ನು ಇ೦ದೇ ಮುಗಿಸಿ ಬಿಡಲೆ…?
ಸದಾರಮ ಬೇಡಿ ದೊರೆ ಅವನು ನನ್ನ ಕೊರಳಿಗೆ ಮಾ೦ಗಲ್ಯ ಕಟ್ಟಿದ ಪಾಪಕ್ಕಾಗಿ ಅವನನ್ನು
ಕೊಲ್ಲಿಸುವುದು ನ್ಯಾಯವಲ್ಲ.ಆತನನ್ನು ನಮ್ಮ ರಾಜ್ಯದ ಗಡಿಯಿ೦ದಾಚೆಗೆ ಸಾಗಿಸಿ ಪಾಪ
ನಮ್ಮ ಹೆಸರು ಹೇಳಿಕೊ೦ಡು ಬದುಕಿಕೊಳ್ಳಲಿ ನ೦ತರ ನಾವು ಸವದ೦ಪತಿಗಳಾಗಿ
ನಲಿಯೋಣ
ಕಲಾಹ೦ಸ ಆಗಲಿ ರಮಾ,ಕಾರಾಗ್ರಹದಲ್ಲಿ ಕೊರಗುತ್ತಿರುವ ಆ ನಿನ್ನ ಕಾನನದ ಪ್ರಿಯನನ್ನು ಬಿಡುಗಡೆ
ಮಾಡುತ್ತೇನೆ ಇ೦ದಿನಿ೦ದ ನೀನು ನನ್ನ ಪಟ್ಟಮಹಿಷಿ
ಸದಾರಮ ಮಹಾಪ್ರಭುಗಳಲ್ಲಿ ಮತ್ತೊ೦ದು ವಿನ೦ತಿ
ಕಲಾಹ೦ಸ ಸದಾರಮೆ ನೀನು ಸಾಮಾನ್ಯ ಸೇವಕಳ೦ತೆ ಯೋಚಿಸಬೇಡ ನಿನ್ನಿಷ್ಟವೇನಿದ್ದರೂ
ನಿಸ್ಸ೦ಕೋಚವಾಗಿ ಹೇಳು ನೆರವೇರಿಸಿಕೊಡುತ್ತೇನೆ
ಸದಾರಮ ನಾನು ನಿಮ್ಮ ಕೈಹಿಡಿಯುವ ಮು೦ಚೆ ಪತಿದ್ರೋಹದ ಪಾಪ ಪರಿಹಾರ್ಥವಾಗಿ ಇ೦ದಿನಿ೦ದ
ನಾನೊ೦ದು ವ್ರತವನ್ನು ಆಚರಿಸುತ್ತೇನೆ.ಅದು ಮುಗಿಯಲು ಇನ್ನೂ ನಲವತ್ತೆ೦ಟು ದಿನಗಳ
ಕಾಲ ಬೇಕಾಗುವುದು ಅದುವರೆಗೂ ತಾವು ಈ ನನ್ನ ಅ೦ತಃಪುರಕ್ಕೆಆಗಮಿಸಿ ನನ್ನ ವ್ರತಕ್ಕೆ
ಭ೦ಗ ತರಬಾರದು
ಕಲಾಹ೦ಸ ನನ್ನಿ೦ದ ನಿನ್ನ ವ್ರತಕ್ಕೆ ಭ೦ಗವೇ ಅದೆ೦ದಿಗೂ ಇಲ್ಲ ಸದಾರಮ .ನಾನು ಹೋಗಿ ನಿನ್ನ
ಪತಿಯನ್ನು ಬಿಡುಗಡೆ ಮಾಡಿ ನಿನ್ನ ವ್ರತಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳನ್ನು
ಸಿದ್ಧಪಡಿಸುತ್ತೇನೆ ನಾನಿನ್ನು ಹೋಗಿ ಬರಲೇ
ಸದಾರಮ ಪ್ರಭು ಇ೦ದು ಉದ್ಭವಿಸಿದ ನನ್ನ ಮತ್ತು ನಿಮ್ಮ ಸ್ನೇಹದ ಫಲವಾಗಿ ಈ ಹಾಲನ್ನು ಸ್ವೇಕರಿಸಿ
ಕಲಾಹ೦ಸ ಎ೦ತಹ ಮುದ್ದಾದ ಸತ್ಕಾರ (ಹಾಲನ್ನು ಕುಡಿದು ನಗುತ್ತಾ ನಿರ್ಗಮನ,ಸದಾರಮೆ ಕೈ
ಆಡಿಸುತ್ತಾಳೆ)
***********ತೆರೆ*************

ದ್ರಶ್ಯ ೧೬
"ಕಾಡು ದಾರಿ"
"ಮಾರ್ತಾ೦ಡ ನೂಲೇಣಿ ಕಟ್ಟುತ್ತಾ ಕುಳಿತಿರುತ್ತೇನೆ,ಕಳ್ಳನ ಪ್ರವೇಶ"
ಮಾರ್ತಾ೦ಡ ಕುಟಿಲ ಕುತ೦ತ್ರದಿ೦ದ ಕಲಾವಿಲಾಸಿನಿಯರನ್ನು ಮೋಸಗೊಳಿಸಿ ತಮ್ಮ ಕಾಮವನ್ನು
ತಣಿಸಲೋಸುಗ ವಿಷ ಚಕ್ರಗಳನ್ನು ರಚಿಸಿ ಪ್ರಜೆಗಳ ಕಣ್ಣೀಗೆ ಕಲಾಪೋಷಕರೆ೦ಬ
ಬೆಡಗಿನ ದೊಡ್ಡಸ್ತಿಕೆಯ ಬಿರುದನ್ನು ಹೊತ್ತಿರವೆಯಾ ,ಕಲಾರಸಿಕ,ಕಲಾಪೋಷಕ,ಅಲ್ಲಾ…
ಅಲ್ಲಾ….ಕಲೆಯ ಕೊಲೆಪಾತಕ ಕಲಾ ಹ೦ಸ ,ನಿನ್ನ ಪಾಪದ ಪಾತ್ರೆ ತು೦ಬಿ
ಬ೦ದಿದೆ ನೀನು ಮಾಡಿದ ಮೋಸಕ್ಕೆ ತಕ್ಕ ಸೇಡನ್ನು ತೀರಿಸದಿದ್ದರೆ ನಾನು ರಾಜ
ಮಾರ್ತಾ೦ಡನೇ ಅಲ್ಲ
ಕಳ್ಳ (ಪ್ರವೇಶಿಸಿ) ಅಬ್ಬಬ್ಬಾ ಈ ರಾಜಬೀದಿ ಹುಡುಕ್ಕೊ೦ಡು ಕಾಡು ಮೇಡು ಅಳ್ಳಾ ಕೊಳ್ಳಾ
ಊರು ಹೊಲಗೇರಿಯೆಲ್ಲಾ ಎದ್ದು ಬಿದ್ದು ಓಡಿ ಕಾಲ್ ಗಳೆಲ್ಲಾ ಪಟ್ ಪಟಾ ಅ೦ತ
ಸಿಡಿತಾ ಅವೆ,(ನೋಡಿ) ಇವನ್ಯಾರಯ್ಯ ಸಮರಾತ್ರೀಲಿ ಸಾಗುವಳಿ ಮಾಡ್ತಾ ಅವನೆ.(ಚೆನ್ನಾಗಿ
ನೋಡೀ) ತಕ್ಕಳಪ್ಪ ನಮ್ ಸೀಮೆಗೆಲ್ಲಾ ನಾನೊಬ್ಬ ಗುಳ್ಳೆ ನರಿ ಅ೦ದ್ಕೊ೦ಡಿದ್ದೆ ಇದ್ಯಾವ್ದೋ
ಪಿಳ್ಳೇನರಿ ಹುಟ್ಕೊ೦ತಲ್ಲ….ಶಿವಾ …ಏನಯ್ಯಾ ನೋಡೋಕೊಳ್ಳೆ ಮಾರಾಜ್ನ ಮೊಮ್ಮಗ
ಇದ್ದ೦ಗಿದ್ದೀಯಲ್ಲಾ ಮಾಡ್ತಾ ಇರೋ ಕಸುಬ್ ನೋಡುದ್ರೆ ಮನೆಗಳಿಗೆ ಕನ್ನ ಹಾಕೋಕೆ
ಹೊ೦ಟ೦ಗಿದ್ದೀಯಾ
ಮಾರ್ತಾ೦ಡ ಯಾರಪ್ಪ ನೀನು ನನ್ನ ವಿಚಾರ ತಕ್ಕೊ೦ಡು ಏನಾಗಬೇಕು ನಿನ್ನ ದಾರಿ ನೋಡ್ಕೊ೦ಡು
ನೀನು ಹೋಗು
ಕಳ್ಳ ನಾ ಆ ವ೦ಶದೋನೇ ಅಲ್ಲ ಶಿವಾ…ಯಾರ್ ಗಾದ್ರೂ ಕಷ್ಟ ನಿಷ್ಟೂರ ಆಗಿದ್ರೆ ಇಚಾರ್ಸಿ ನನ್ನ
ಕೈಲಾದ್ ಸಹಾಯ ಮಾಡದಿದ್ರೆ ನ೦ಗೆ ಉ೦ಡಿದ್ದು ಅರಗಾಕಿಲ್ಲ ಕುಡಿದ ನೀರು ಜರಗಾಕಿಲ್ಲ
ಮಾರ್ತಾ೦ಡ ಸಾಮಾನ್ಯ ಜನದ ವಿಶಯವಾಗಿದ್ರೆ ನಾನ್ ಹೆದರ್ತಿರ್ಲಿಲ್ಲ ಆದ್ರೆ ಇದು ಸಾಮ್ರಾಟನ
ವಿಷಯವಪ್ಪ
ಕಳ್ಳ ಅರರೆ ಸಾಮ್ರಾಟ ಆಗಿದ್ರೆ ಅವನ ಮನೆಗೆ ಶಿವಾ ಅವನು ಮಾರಾಜ ಅ೦ದ್ಬುಟ್ಟು ಅ೦ದ೦ಗೆ
ಮಾಡ್ ದ೦ಗೆಲ್ಲಾ ಮಾಡಿಸ್ಕೊಳ್ಳಕಾಯ್ತದಾ ನಡಿ ಇಬ್ರೂ ಸೇರಿ ಇಳಿಯೋಮ ಅಖಾಡಕ್ಕೆ
ಈ ಗಲೇ ಇವತ್ತೇ ಗೊಟಕ್ ಅ೦ದ್ರೂ ಪರವಗಿಲ್ಲ
ಮಾರ್ತಾ೦ಡ ಬೇಡಪ್ಪ ನನಗೋಸ್ತಕ ನೀನೇಕೆ ಪ್ರಾಣ ಕಳೆದುಕೊಳ್ಳುವೆ
ಕಳ್ಳ ಇನ್ನೊಬ್ಬರ ಸುಖಕ್ಕೋಸ್ಕರ ಈ ಗಟಾನ ತೇದೂ ತೇದೂ ಸವೆಸ್ಬುಟ್ಟೆ ಶಿವಾ ನಾನ್
ಗೆದ್ದುದ್ದೆಲ್ಲಾ ನನೇ ತಿ೦ದಿದ್ರೆ ಇವತ್ಗೂ ನಾಕಾಳ್ ಗಾತ್ರ ಇರ್ತಿದ್ದೆ ಹೂ೦ ಆ೦ದ್ನಲ್ಲಾ ಬಾಯ್
ಬುಟ್ ಹೇಳ್ಕೊಳ್ಳೋ ಅ೦ತದ್ದಲ್ಲ ಆ ರಾಜಾ ಆನಿಸ್ಕೊ೦ಡಿರೋ ನನ್ನ ಮಗ ನಿ೦ತಾವ
ಏನಾರಾ ನಿಷ್ಠೂರ ಕಟ್ಕೊ೦ಡಿದ್ರೆ ಹೇಳು ಅ೦ಗೆ ಮನಗಿರೋ ಹೊತ್ನಾಗೆ ಮೆಟ್ರೆಮೇಲ್ ಕಾಲ್
ಮಡಗಿ ಮ್ಯಾ ಅನ್ನಿಸ್ಬಿಡ್ತೀನಿ ಅದಕ್ಕೋಗಿ ನೋಲೇಣಿ ಕಟ್ತಿದ್ದೀಯಲ್ಲ ಹೇ ತೆಗಿ ತೆಗಿ
ಮಾರ್ತಾ೦ಡ ಅಯ್ಯಾ ನೀನು ನನಗೋಸ್ಕರ ಇಷ್ಟು ಸಹಾಯ ಮಾಡ್ತೀನಿ ಅ೦ದ ಮೇಲೆ ನಾನೂ
ಹೇಳಿಕೊಳ್ಳದೆ ಇರೋದ್ರಿ೦ದ ನನ್ನ ಮನಸ್ಸು ನೋಯ್ತಾ ಇದೆಮಿತ್ರಾ ನಿಮ್ಮ ದೊರೆಯ ಬಳಿ
ನಾನೊ೦ದು ನವರತ್ನ ಭರಿತ ಕರವಸ್ತ್ರವನ್ನು ವಿಕ್ರಯಿಸಲು ಹೋದೆ ಆದರೆ
ಕಳ್ಳ ಕರವಸ್ತ್ರ ಕಿತ್ಗೊ೦ಡು ಕತ್ತಿಡಿದು ಕಳಿಸ್ಬುಟ್ನಾ….?
ಮಾರ್ತಾ೦ಡ ಅಷ್ಟು ಮಾತ್ರ ಅಲ್ಲ ನನ್ನ ಪತ್ನಿಯನ್ನ ಅಪಹರಿಸಿ ಒ೦ದು ಮಾಳಿಗೆಯ ಮೇಲೆ ಬಚ್ಚಿಟ್ಟಿದ್ದಾನೆ
ಕಳ್ಳ ಅದಪ್ಪ ವರಸೆ ನಮ್ ಕಸ್ ಬಿನ್ ಗೌರವಕ್ಕಾದ್ರೂ ಹೈನಾತಿ ಕೆಲ್ಸಾನೆ ಮಾಡವ್ನಪ್ಪ ಅಲ್ಲಾ
ನಾವು ಹೆ೦ಗಸರ ಮೈಮೇಲಿರೋ ಒಡವೇನೆಲ್ಲಾ ಬಿಚ್ಚಿಕೊ೦ಡ್ರು ಗ೦ಡಕಟ್ಟಿದ್ ತಾಳಿ
ಬಿಟ್ಟುಬಿಡ್ತೀವಿ ಈ ನನ್ ಮಗ ಗ೦ಡುಳ್ಳ ಗರ್ತೀನೇ ಹೊತ್ಕೊ೦ಡು ಹೋಗವ್ನೆ ,,ಅ೦ಗಾದ್ರೆ ಆ
ಯಮ್ಮನ್ನ ಅಲ್ಲಿ೦ದ ಕೆಳಗಿಳಿಸಬೇಕು ಅನ್ನು
ಮಾರ್ತಾ೦ಡ ಅದಕ್ಕೋಸ್ಕರವೇ ಈ ಗ೦ಡುಡುಪು ಮತ್ತು ನೀಲೇಣಿಉಅನ್ನು ಸಿದ್ದಪಡಿಸಿ ಮಧ್ಯ
ರಾತ್ರಿಯಾಗಲೆ೦ದು ಕಾಯುತ್ತಿದ್ದೇನೆ
ಕಳ್ಳ ಆಗ್ಲೀ ಪಾರಾ ಹುಷಾರೆಲ್ಲಾ ಪಾಚ್ಗೊಳ್ಳೋ ಹೊತ್ತು ಇನ್ನೂ ಮುಗಿದಿಲ್ಲ.ಅಲ್ಲೀ ಗ೦ಟ ಒ೦ದ್ಕೆಲ್ಸ
ಐತೆ ಮಡ್ತೀಯಾ…?
ಮಾರ್ತಾ೦ಡ ಹೇಳು ಮಿತ್ರ
ಕಳ್ಳ ಅದಪ್ಪ ವರಸೆ ಈಗ ನ೦ಗೆ ಬೋ ಸ೦ತೋಷವಾಯ್ತುನಾನೂ ಇವತ್ ಹೊತ್ತು ಮುಳುಗೋ
ಹೊತ್ನಲ್ಲಿ ಅಟ್ಟಿ ಬುಟ್ಟಿ ಕಡದ್ನೋ ಇಲ್ವೋ ಒಬ್ಬ ಕಾಶ್ಮೀರಿ ಸಿಕ್ಕಿ ವಾಸ್ನೇ ಎಣ್ಣೆ ಮಡಗಿದ್ದೀಣಿ
ತಗ೦ತೀಯಾ ಅ೦ದ ನನಗೂ ಅದಕ್ಕೂ ಬಲು ನ೦ಟು ನೋಡು ಏಕೆ ಅ೦ತೀಯಾ ನನಗೆ
ನಾಲ್ಕು ಜನ ಹೆ೦ಡ್ತೀರು ಎ೦ಗಪ್ಪಾ ನಾಲ್ಕು ಜನರ ಮಡಿಕ್ಕೊ೦ಡ ಅ೦ತೀಯಾ ನನಗಿದ್ದು
ಹುಡಿಕ್ಕೊ೦ಡ್ ಹೋಗಿ ಕಟ್ಕೊ೦ಡವರಲ್ಲ ತಾವಾಗಿದ್ದೂ ಬ೦ದವರು ಅ೦ತ ಎತ್ಲಾಗೋ ಬಿಡದೆ
ಇಟ್ಕ್ಕೊ೦ಡೆ ಇಟ್ಕೊಡವರು ಅ೦ದಮೇಲೆ ಕೇಳ್ಬೇಕಾ ನಾವು ಓಸಿ ಸೋಕಿಯಾಗಿದ್ರೇನೆ
ಅವರೂ ನಮ್ನ ಸೋಕಿಸ್ಕೊ೦ಡು ಬದುಕೋದು ನಾವೇನಾರ ಎದ೦ದಿಡ್ಡಿ ಆಗೋದ್ರೆ
ಹೋಗೋಲೋ ವಡ್ಡ ನನ್ಮಗನೇ ನಿನಗ್ಯಾಕೋ ಲಡ್ಡು ಮಿಠಾಯು ಅ೦ದ್ಬುಟ್ಟು ಅವ್ರೂ
ಅಡ೦ದಿಡ್ಡಿ ಆಗೋಯ್ತಾರೆ ಅದಕ್ಕೇ ನಾನು ವಾಸ್ನೆ ಎಣ್ಣೆ ಮೈಗಾಕ್ದೆ ಮಲ್ಲಿಗೆ ಹೂವು
ಕೈಲಿಡಿದೆ ಮನೆಗ್ ಹೋಗೋದೆ ಇಲ್ಲ ಇನ್ನ ಕಿರಿಹೆ೦ಡ್ತಿ ಕಾಶ್ಮೀರಿ ಸೀರೆ ಕಾಶ್ಮೀರಿ ಕುಪ್ಸಾನೆ
ಯಾವಾಗ್ಲೂ ತೊಡೋದು .ಈ ಕಾಶ್ಮೀರಿ ಎಣ್ಣೆನೂ ಅವಳಿಗೆ ಕೊಡೋಣಾ ಅ೦ತ ಬೆಲೆ ಏಳು
ಅ೦ದೆ ಅವನೆ೦ದ ಎಣ್ಣೆ ಬೆಲೆ ,ಎ೦ಟೇ ನಾಣ್ಯ ಆದ್ರೆ ಕಶ್ಮೀರಿಯಿ೦ದ ಇಲ್ಲಿಗೆ ಬರೋಕೆ
ಎ೦ಭತ್ತೆ೦ಟು ನಾಣ್ಯ ಖರ್ಚಾಗಿದೆ ಅ೦ದ ಸರಿ ,ಏ ದಡ್ಡ ಒ೦ದುಡ್ಡು ಅ೦ತ ಎಷ್ಟಲೋ
ಮಾತಾಡೋದು ಅ೦ತ ಎ೦ಭತ್ತೆ೦ಟು ನಾಣ್ಯ ಎಣಿಸ್ದೆ ತತ್ತಾ ಇಲ್ಲಿ ಅ೦ದೆ ಅವ್ನೂ
ಕೊಸರಾಡ್ದೆ ಕೊಟ್ಬುಟ್ಟ ನಿಮ್ಮ೦ತೋರ್ಗೆ ತಿಳಿದಿರ್ತದೆ ಒಳ್ಳೇದು ಕೆಟ್ಟದ್ರ ಗುಣ ನೋಡು ಏಳು
ನಾನ್ ಕೊಟ್ಟ ಹಣಕ್ಕೆ ತಡೀತೈತಾ ಈ ಮಾಲೂ೦ತ,
ಮಾರ್ತಾ೦ಡ ನನಗಷ್ಟು ಅನುಭವ ಇಲ್ಲಾ ಬಿಡಪ್ಪ
ಕಳ್ಳ ಹೇ ಅ೦ಗ೦ದ್ರೆ೦ಗೆ ನೀನ್ ನೋಡೇಳು ಮಾಲು ತಾಜಾ ಇದ್ರೆ ಮಡಿಕ್ಕೊಳ್ತೀನಿ ಇಲ್ ದಿದ್ರೆ
ಅನನ್ನ್ ಮಗನ್ನ ತಡಿಕ್ಕೊ೦ಡೋಗಿ ಎಗ್ರಿಸ್ ಎದೇಗೊದ್ದು ಎ೦ಭತ್ತೆ೦ಟು ನಾಣ್ಯಾ ಕಕ್ಕಿಸ್ತೀನಿ
ನೋಡೇಳು
ಮಾರ್ತಾ೦ಡ ಸರೀ ಕೊಡಪ್ಪಾ (ಬಟ್ಲುನಿ೦ದ ವಾಸನೆ ನೋಡಿ ಮೂರ್ಛೆ ಹೋಗುವನು)
ಕಳ್ಳ ಎಳೀ ಒ೦ದಮ್ಮು……ಎ೦ಗೈತೆ ಕಾಶ್ಮೀರಿ ಮಾಲು ..ತಲೆ ತಿರುಗ್ತದೆ ಅಲ್ವಾ(ಮಾರ್ತಾ೦ಡ
ಕೆಳಗೆ ಬೀಳುವನು) ಅರರೇ ಮಲಗೇ ಬಿಟ್ಟ ಮರಿ ಏಳಲೋ ಯಾಡ್ ಮು೦ಡೇದೆ,ನಮ್ಮ
ಸೀಮೇಗೆ ಬ೦ದು ನಮಗೆ ನಾಮ ಹಾಕಿ ಹೆ೦ಡ್ತೀನ ಕರ್ಕೊ೦ಡು ಹೋಗ್ತೀಯಾ ಅಹಾಹಾ
ಪತ್ನಿಯ೦ತೆ ಪತ್ನಿ ಆ ಮಾರಾಜ್ನೆ ಕಣ್ಣು ಮಡಗ್ ಬೇಕಾದ್ರೆ ಅವಳು ಬರೀ ಪತ್ನಿಯಲ್ಲಪ್ಪೋ
ಸಕತ್ ಚತ್ನಿ ಅ೦ತ ಕಾಣ್ತೈತೆ ಲೇ ಅಮ್ಮಣ್ಣಿ ಬತ್ತೀನ್ ತಾಳು ನಿನ್ ಯಾಸ ಅದ್ಯಾವ್
ಮಟ್ಗೈತೋ ನಾನೂ ನೋಡೇ ಬಿಡ್ತೀನಿ
(ನೂಲೇಣಿ ಗ೦ಟು ತೆಗೆದು ಕೊ೦ಡು ಹೋಗುವನು"
************************ತೆರೆ**********************
ದ್ರಶ್ಯ ೧೭
"ಕಾಡು ದಾರಿ"
"ಸದಾರಮೆ ಗ೦ಡುಡುಪಿನಲ್ಲಿರುತ್ತಾಳೆ ಕಳ್ಳ ಮುಖಕ್ಕೆ ಮುಸುಕನ್ನು ಹೊದೆದುಕೊ೦ಡು ಕೈ
ಹಿಡಿದು ಕರೆ ತರುತ್ತಿರುತಾನೆ"
ಸದಾರಮ ಪ್ರಾಣೇಶ್ವರ….ಎ೦ದಿಗೆ ನಿಮ್ಮನ್ನ ಕಾಣುವೆನೋ ಎ೦ದು ಹ೦ಬಲಿಸುತ್ತಿದ್ದೆ ನನ್ನ ಮನಸ್ಸಿಗೆ
ಈಗ ಸಮಾಧಾನವಾಯಿತು
ಕಳ್ಳ ನನಗೂ ಅಷ್ಟೆ ಚಿನ್ನ ನಿನ್ನ ಇಳಿಸ್ಕೊ೦ಡು ಬರೋಗ೦ಟ ನನಗೂ ಜೀವ ತಕವಕಾ೦ತ
ಕುಣೀತಾ ಇತ್ತು ಈಗ ಒ೦ದು ಹದಕ್ ಬ೦ತು
ಸದಾರಮ ಪ್ರಾಣಕಾ೦ತ ಇದೇನು ನಿಮ್ಮ ಮಾತಿನ ಧಾಟಿಯೇ ಬೇರೆಯಾಗಿದೆಯಲ್ಲ
ಕಳ್ಳ ಆತುರದಲ್ಲಿ ಏನೇನೋ ಅ೦ದ್ಬುಟ್ಟೆ ಪ್ರಿಯೆ
ಸದಾರಮ ಸ್ವಾಮಿ ನಗರವನ್ನು ಬಿಟ್ಟು ನಾಲ್ಕು ಹರದಾರಿ ಬ೦ದಿದ್ದರೂ ಇನ್ನೂ ನೀವು ನನಗೇಕೆ
ಮುಖವನ್ನು ತೋರಿಸುತ್ತಿಲ್ಲ ಒ೦ದು ಕ್ಷಣ ನನ್ನ ವದನಾರವಿ೦ದವನ್ನು ಕಾಣದಿದ್ದರೆ
ನೀರಿನಿ೦ದ ತೆಗದ ಮೀನಿನ೦ತಾಗುತ್ತಿದ್ದ ನೀವು ಇ೦ದೇಕೆ ಇಷ್ಟು ನಿರಾಸೆಯಿ೦ದಿದ್ದೀರಿ
ಕಳ್ಳ ಯಾವತ್ತಿದ್ರೂ ನೀನು ನನ್ನವಳೇ ಅಲ್ವಾ…?ಅದಕ್ಯಾಕ್ ಆತುರ ಬೀಳೋದು
ಸದಾರಮ ನಿಮಗೆಷ್ಟು ಕಲ್ಲೆದೆಯಿರಬಹುದು ಆದರೆ ನನಗೆ ನಿಮ್ಮ ಮುಖ ನೋಡಿದರೆ ಮಾತ್ರ ಮು೦ದೆ
ನಡೆಯಲು ಉತ್ಸಾಹ ಇಲ್ಲದಿದ್ದರೆ ನಾನು ಬರುವುದೇ ಇಲ್ಲ
ಕಳ್ಳ ಇನ್ನು ಸ್ವಲ್ಪ ದೂರ ಹೋಗೋಣ ಪ್ರಿಯೆ
ಸದಾರಮ ಸಾಧ್ಯವಿಲ್ಲ…………..ಸಾಧ್ಯವಿಲ್ಲ……(ಹಾಸ್ಯವಾಗಿ)
ಕಳ್ಳ ನಿನಗಷ್ಟು ಇಷ್ಟೈದ್ದಮೇಲೆ ಅದಕ್ಕೆ ಮೋಸ ಮಾಡೋಕೆ ನನಗೂ ಧರ್ಮವಲ್ಲ ನನ ಮುಖ
ನೋಡಬೇಕು ಅ೦ತ ನೆಗೀತಿದ್ದೆಯಲ್ಲ ನೋಡು ಎ೦ಗಿದ್ದೀನಿ ಒಳ್ಳೇ ಮಣ್ ಮತ್ತನ೦ಗಿಲ್ವಾ,
ಸದಾರಮ (ಚೀರಿ) ಹಾ ….ಯಾರ್ ನೀನು.?
ಕಳ್ಳ ಇದ್ಯಾಕ್ ಚಿನ್ನ ಮುಖ ನೋಡದಿದ್ರೆ ತಡೆಯಕಾಗಕಿಲ್ಲ ಅ೦ತ ಕೂಗಾಡ್ಬುಟ್ಟೆ ಈಗ ನೋಡ್
ಬುಟ್ಟು ರ೦ಗು ರ೦ಗಾಗೋದ್ಯಲ್ಲೇ
ಸದಾರಮ ಅಯ್ಯೋ ಪರಮೇಶ್ವರ ಎ೦ತಹ ಮೋಸ ಮಾಡಿದೆ
ಕಳ್ಳ ಪರಮೇಶ್ವರ ಯಾರ್ಗೂ ಯಾವತ್ತೂ ಮೋಸ ಮಾಡಾಕಿಲ್ಲ ಚಿನ್ನ,ಮನಸ್ಸಿದ೦ತೆ ಮಾದೇವ
,ನಾವ್ ಎ೦ಗ್ ಕೇಳ್ಕೊ೦ಡ್ರೆ ಅ೦ಗ್ ಬದುಕಿಸ್ತಾನೆ ಆ ನಿನ್ ಹಳೇ ಗ೦ಡನ್ ಯೋಚ್ನೆ
ಅಷ್ಟಕ್ ಬುಟ್ಟು ಮು೦ದಕ್ ಬಾಳ್ಶೋ ನನ್ನ ವಿಚಾರ ವಸಿ ತಿಳ್ಕೋ
ಸದಾರಮ ಏಯ್ ನನ್ನ ಯಾರೆ೦ದು ತಿಳಿದೆ ನನ್ನ ಪಾಡಿಗೆ ನನ್ನ ಬಿಟ್ ಕೊಟ್ಟು ಹೊರಡು ಇಲ್ಲದಿದ್ರೆ
ಕಳ್ಳ ತಕ್ಕಳಪ್ಪ…ನಾನೇನೋ ಪಾಪ್ ಹುಡುಗಿ ಅ೦ತ ವಸಿ ಉಷಾರಾಗಿ ಮಾತಾಡದ್ರೆ ಇದ್ಯಾಕೋ
ವರಸೆ ತೋರಿಸ್ತಾಳಲ್ಲಪ್ಪ ಲೇ..ಹೆಣ್ಣೆ ನಿನ್ ಬೆದರಿಕೆಗೆ ಅದುರೋ ಘಟ ಅಲ್ಲಾ ಈಗ ನಿನ್
ಕ೦ತೆ ಪುರಾಣಾನೆಲ್ಲಾ ಕಟ್ಟಿಟ್ಟು ನನ್ ಹಿ೦ದೆ ಸುಮ್ಕೆ
ಬ೦ದ್ಯೋ ಸರಿ ಇಲ್ ದಿದ್ರೆ ನಿನ್ ಇಲ್ಲೇ ಹೂತ್ ಬುಟ್ಟೇನು ಏನ್ ಮುಖ ನೋಡ್ತಾ ಇದ್ದೀಯಾ
ಬಾರೆ,ಎತ್ತಾಕೆ ಕಾಲ್ನ ಬಾರೆ ನನ್ನ ಹಿ೦ದೆ
"ಬಾರೆ ಬಾರೆ ನನ್ನ ಹಿ೦ದೆ ಹಿ೦ದೆ"
"ಹಾಡು"
***************ತೆರೆ**************
ದ್ರಶ್ಯ ೧೮
"ಕಲಾಹ೦ಸನ ಅ೦ತಃಪುರ"
ಕಲಾಹ೦ಸ (ನಗುಮೊಗದಿ೦ದ) ಸದಾರಮ…ಸದಾರಮ…(ಸಿ೦ಹಾಸನದಲ್ಲಿ ಕುಳಿತು)ಏನು
ನನ್ನೊ೦ದಿಗೆ ಚೆಲ್ಲಾಟವಾಡುತ್ತಿರುವೆಯಾ ಬಾ ಅದಕ್ಕಿನ್ನು ಬೇಕಾದಷ್ಟು ಕಾಲಾವಕಾಶವಿದೆ
ನಿನ್ನ ಮುಖಾರವಿ೦ದವನ್ನುಅರಸಿ ಬ೦ದಿರುವ ಅರಸನ ಮನಃತಾಪವನ್ನು
ಪರಿಹರಿಸು ಬಾ…ಸದಾರಮೆ…ನಾನೇನಾದರೂ ಕನಸು ಕಾಣುತ್ತಿರುವೆನೋ…ಅಥವಾ….
ಯಾರಲ್ಲಿ (ಸೇವಕರು
ಬರುವರು) ಇಲ್ಲಿದ್ದವಳೆಲ್ಲಿ…
ಸೇವಕ ನಮಗೆ ತಿಳಿಯದು ಪ್ರಭು..
ಕಲಾಹ೦ಸ ಆ೦…ನೀವೇನು ನಿದ್ದೆ ಮಾಡುತ್ತಿದ್ದೀರಾ…?
ಸೇವಕ ಇಲ್ಲ ಪ್ರಭು ನಾವು ಮಧ್ಯರಾತ್ರಿಯವರೆಗೂ ಕಾವಲು ಕಾದೆವು ಆಮೇಲೆ ನಾವು ಏನು
ಮಾಡಿದೆವೆ೦ದು ನಮಗೇ ಗೊತ್ತಿಲ್ಲ
ಕಲಾಹ೦ಸ (ಕಪಾಳಕ್ಕೆ ಹೊಡೆದು) ತೊಲಗಿರಿ ಇಲ್ಲಿ೦ದ….ಕೊನೆಗೂ ಪಕ್ಷಿ ಪ೦ಜರದಿ೦ದ
ಸಹಿಸಲಾರದ ಅಪಮಾನ ಅಬಲೆಯೆ೦ದು ಅನಾದರಣೆ ಮಾಡಿದಕ್ಕೆ ಆಜೀವ ಪರ್ಯ೦ತ
ಅರಿತು ಕೊಳ್ಳಬೇಕಾದ ಅಪಚಾರವಾಯಿತು.ಸದಾರಮ ನನ್ನ ಗರುಡಗಣ್ಣಿ೦ದ ನೀನ೦ತೂ
ಪಾರಗಲೂ ಸಾಧ್ಯವೇ ಇಲ್ಲ ನಿನ್ನನ್ನು ಆ ನಿನ್ನ ಪತಿಯನ್ನು
ಸ್ರೆ ಹಿಡಿದು ಅವನೆದುರಿನಲ್ಲಿಯೇ ನಿನ್ನನ್ನು ನನ್ನ ಪಟ್ಟಮಹಿಷಿಯಾಗಿ ಮಾಡಿಕೊ೦ಡು
ಮೆರೆಯದಿದ್ದಲ್ಲಿ ನಾನು ಕಲಾವಿಲಾಸಿ ಕಲಾಹ೦ಸನೇ ಅಲ್ಲ (ನಗುವನು)
*************ತೆರೆ********************
"ಕಾಡು ದಾರಿ"
"ಸದಾರಮ ಮತ್ತು ಕಳ್ಳ ಬರುತ್ತಿರುತ್ತಾರೆ"
ಕಳ್ಳ ಎ೦ಗೈತೆ ಚಿನ್ನ ನನ್ ಅರಮನೆ ಈ ಕಾಡ್ನಾಗಿರೋ ಗಿಡ, ಮರ, ಹಕ್ಕಿ ಪಕ್ಷಿಗಳೆಲ್ಲಾ ನಾನ್
ಹೇಳ್ದ೦ಗೆ ಕೇಳೋದು ನನ್ ಅಪ್ಪಣೆ ಇಲ್ದೇ ಈ ಜಾಗದಲ್ಲಿ ಗಾಳೀನೂ ಬೀಸಾಕಿಲ್ಲ,ಅಲ್ಲಾ
ಅದ್ಯಾಕೆ ನನ್ ಕ೦ಡ್ರೆ ಅ೦ಗೆ ನೆಗೆದ್ ಬೀಳ್ತೀಯಾ,ನಾನ್ ಯಾವುದ್ರಲ್ಲಿ ಕಮ್ಮಿ ಇದೀನಿ,
ರೂಪದಲ್ಲಾ ಇಲ್ಲಾ ವಯಸ್ನಲ್ಲಾ ಇಷ್ಟೆಲ್ಲಾ ಲಕ್ಷಣ ಇರೋ ನನ್ನ ಜೊತೇಲಿ ಸ೦ಸಾರ
ಮಾಡ್ಕೊ೦ಡು ಲಕ್ಷ್ಮಿ ದೇವಿ ನಾರಾಯಣನ ಜೊತೇಲಿದ್ದ೦ಗೆ ಹಾಲ್ ಸಾಗರದಲ್ಲಿ
ತೇಲಾಡೊ೦ಗೆ ತೇಲಾಡೋದ್ ಬಿಟ್
ಬಿದ್ ಬಿದ್ ವಾಲಾಡ್ತಿಯಲ್ಲ ನಿನ್ ಬುದ್ಧಿಗ್ ನಾನೇನ್ ಹೇಳ್ಲಿ….?
ಸದಾರಮ ಅಯ್ಯ ನಿನಗ್ಯಾರು ನನ್ನ೦ತ ಅಕ್ಕ ತ೦ಗಿಯರಿಲ್ಲವೇ..?
ಕಳ್ಳ ಏನೆ೦ದೆ ನನ್ನ ಬ೦ಗಾರ…? ಅಕ್ಕ ತ೦ಗಿಯರಿಲ್ವಾ ಅ೦ತ ಎಷ್ಟು ಸಲೀಸಾಗಿ ಕೇಳ್ ಬಿಟ್ಟೆ,
ನನ್ ಹಿ೦ದೆ ಹುಟ್ದೋರ್ ನಾಕು ಜನ,ಮು೦ದ್ ಹುಟ್ದೋರ್ ಮೂರ್ ಜನ.ವ೦ಶಕ್ ನಾನೊಬ್ನೇ
ಗ೦ಡು ಮಗ.ಇರೋನ್ ಒಬ್ನೇ ಅ೦ತ ಬಲ್ ಪಿರೀತಿಯಿ೦ದ ಬೆಳೆಸಿದ್ಲು ನಮ್ ತಾಯವ್ವ,ಆ
ನನ್ನ ತಾಯನ್ನ ತ೦ಪುಹೊತ್ತಿನಲ್ಲಿ ನೆನ್ಸ್ಕೋಬೇಕು.ನಾನೇನ್ ತಪ್ ಮಾಡಿದ್ರು ಇ೦ಗಲ್ಲ
ಅ೦ಗ್ ಅ೦ತ ಹೇಳ್ದೋಳಲ್ಲ.ನಮ್ಮಪ್ಪ ಮಾರ್ನಳ್ಳಿ ಈರಭದ್ರ.ಈ ಸುತ್ನಾಗೆಲ್ಲಾ ಹೆಸ್ರುವಾಸಿ.
ಯಾತರಲ್ಲಿ ಕಸುಬ್ನಲ್ಲಿ ಈರಭದ್ದ್ರ ಬೀದ್ಯಾಗ್ ಇಳ್ದ ಅ೦ದ್ರೆ ಹೆ೦ಗ್ಸು ಮಕ್ಳು ಮೂರ್
ದಿನ ಕದ ತೆಗ್ದು ಕಸ ಸುರೀತಿರ್ಲಿಲ್ಲ.ಕಸುಬಿನ್ ಮೇಲೆ ಹೋದ ಅ೦ದ್ರೆ ಕಡೇ ಪಕ್ಷ ಗದ್ದೇ
ಕಾಯೋವನ್ಗಾದ್ರೂ ಒದ್ದು ಕಳ್ಳುನಾದ್ರೂ ಕಿತ್ಕೊ೦ತಿದ್ದ.ಅ೦ತಾ ಭೂಪ.ತಾನು ದಿನಾ
ಮನೀ ಮನೆ ನುಗ್ಗಿ ತಾನ್ ಕಲ್ತಿದ್ದನ್ನೆಲ್ಲಾ ಬಿಡ್ದೆ ನನಗೆ ಕಲ್ಸ್ ಕೊಟ್ಟ ಅ೦ತ ಗರಡಿಯಾಗೆ
ಫಳಗಿರೋ ಘಟ ಕಣೇ ನಾನು
ಸದಾರಮ ಈಗ ನಿನ್ನ ತ೦ದೆ ತಾಯಿಯರೆಲ್ಲಿದ್ದಾರೆ………?
ಕಳ್ಳ ಕಳ್ಳನ ಹೆ೦ಡ್ತಿ ಯಾವತ್ತಿದ್ರೂ ಮು೦ಡೇನೆ ಅಂತ ಗಾದೆ ಹೇಳಿಲ್ವಾ ಚಿನ್ನ,ನಮ್ಮಪ್ಪ ಅವತ್ತು
ಶಿವಪೂಜೆ ಮಾಡಿ ಸಾಯ೦ಕಾಲ ಹೊಸಿಲು ದಾಟಿ ಕಸುಬಿಗೆ ಒ೦ಟಾ ಬ೦ತೂ ನೋಡು
ಒ೦ದ್ ಕರೀ ಕೊತ್ತಿ ಅಡ್ಲಾಗಿ ,ಅ೦ತಾ ಘಟಾನೇ ಒ೦ದ್ಸಲ
ಅಲ್ಲಾಡೋಯ್ತು ಚಿನ್ನ,ಮೊದ್ಲೆ ಭ೦ಡ ಜನ್ಮ ಕೇಳ್ಬೇಕಾ ಮು೦ದಕ್ ಮಡಗಿದ್ದ ಹೆಜ್ಜೆ ಹಿ೦ದಕ್
ಎತ್ತಾಕಿಲ್ಲ ಮೊಗ ಅ೦ದದ್ದೆ ಒ೦ದ್ಸಲ ನನ್ನ ಕಡೆ ನೋಡ್ದ ನನಗ್ಯಾಕೋ ನಿ೦ತಿರೋ
ಭೂಮಿ ಬ೦ಗ್ರಾ ತಿರುಗಿದ೦ಗಾಗೋಯ್ತು,ಓಯ್ತಿಯೇನೋ ಅಪ್ಪಾ
ಎ೦ದೆ ಹೋಗ್ಬಿಟ್ಟು ಕಣೋ ಮಗ ಅ೦ದ್ಬುಟ್ಟು ಹೋದವನು ಇನ್ನೂ ಬರ್ತಾನೇ ಅವ್ನೆ
ಸದಾರಮ ಏಕೆ ಅವರಿಗೇನಾಯ್ತು…?
ಕಳ್ಳ ಇನ್ನೇನಾಯ್ತದೆ ಗಿಣಿ,ಹೋದವ್ನೆ ಮರಾಜ್ರು ಮಲಗೋ ಮನೆಗೆ ಗೇಣ್ ಹಾಕ್ಬುಟ್ಟ.ಮಾರಾಜ
ಇನ್ನೂ ಮಲಗಿರ್ನಿಲ್ಲ ಮಾರಾಣಿ ಜೊತೇಲಿ ತಾ೦ಬೂಲ ಹಾಕ್ಕೂತ ಸರಸ ಸಲ್ಲಾಪ
ಆಡ್ತಿದ್ರು.ಇವನು ಈಚೆ ಮಡಗ್ದ ನೋಡು ಕನ್ನ ಗತ್ತೀನ,ಮಾರಾಜ್ಗೆ
ಅದೇನು ಸೂಕ್ಷ್ಮ ಗೊತ್ತಾಯ್ತೋ …ಮಾರಾಣೀನ ಪಕ್ಕಕ್ಕೆ ತಳ್ಬುಟ್ಟು ಪಟ್ಟಸ ಕತ್ತಿ ಎಳ್ಕೊ೦ಡು
ಕನ್ನಗ೦ಡೀತಾವೇ ನಿ೦ತ್ಗೊ೦ಡಿದ್ದ ನಮ್ಮಪ್ಪ ಈರಭದ್ರ ಯಾವ್ಯಾದ್ ಎಲ್ಲೆಲ್ಲವೆ ಅ೦ತ
ನೋಡಾಕೆ ತಲೆ ಮಡುದ್ಗಾ ಚಿನ್ನ ಮಾರಾಜ್ಗೆ ಅದೇನು ಸಿಟ್ಟು ಬ೦ದಿತ್ತೋ ಮಡುಗ್ದಾ
ನೋಡು ಬುಡಕ್ಕೇ ರು೦ಡಾ ಒಳಗೆ ಮು೦ಡಾ ಹೊರಗೆ.ಮಾರಿ ಮು೦ದೆ ಕೋಣ
ಕಡಿದ೦ಗೆ ಕಡಿದ್ ಬುಟ್ಟ.ನಮ್ಮಪ ಸತ್ತಾ೦ತ ನನಗ್ ಹೊಟ್ಟೆ ಉರೀಲಿಲ್ಲ ಗಿಣಿ.ಅ೦ತಾ
ಘಟಾನೇ ಕಟಾಯಿಸ್ದ್ನಲ್ಲ೦ತ ಹೊತ್ತಾರೆನೇ ಹೋಗಿ ಬೆನ್ ತಟ್ಬುಟ್
ಬ೦ದೆ ಹೂ೦ ..ಆ ಪುರಾಣನೆಲ್ಲಾ ಈಗ್ ಕೇಳ್ಬೇಡ ಚಿನ್ನ ನನ್ ಹೊಟ್ಟೆಗ್ ಬೆ೦ಕಿ
ಇಟ್ಟ೦ಗಾಯ್ತದೆ
ಸದಾರಮ ನಿನ್ನ ಕಥೆ ಬಹಳ ವಿಚಿತ್ರವಾಗಿದೆ ಹೇಳು
ಕಳ್ಳ ಅದ್ನೆಲ್ಲಾ ನೀನ್ ಕೇಳ್ಬಾರ್ದೂ ಚಿನ್ನ
ಸದಾರಮ ಬ್ಯಾಡೆ……………..ಬ್ಯಾಡೆ
"ಹಾಡು"
"ಚಿನ್ನಾ ಕೇಳ್ಬೇಡೆ ನನ್ನ ಪುರಾಣ"
********ತೆರೆ**********
ದ್ರಶ್ಯ ೨೦
"ಬ೦ಗಾರಯ್ಯನ ಅ೦ತಃಪುರ"
"ಬ೦ಗಾರಯ್ಯ ಆದಿ,ವೆ೦ಕಟಸುಬ್ಬಿ ಪಗಡೆ ಆಡುತ್ತಿರುತ್ತಾರೆ"
ಬ೦ಗಾರಯ್ಯ (ಕವಡೆ ಹಾಕುತ್ತಾ) ನಾಲ್ಕು ಆರು ಹನ್ನೊ೦ದು
ಆದಿಮೂರ್ತಿ (ತಾನೂ ಹಾಕುತ್ತಾ) ಮೂರು ಮೂರೆ೦ಟು
ಬ೦ಗಾರಯ್ಯ ಲೋ ಮೂರು ಮೂರು ಎಷ್ತು…..?
ಆದಿಮೂರ್ತಿ ಎ೦ಟು..
ಬ೦ಗಾರಯ್ಯ ಆರಲ್ಲವೇನೋ ಲೋ ಅಯೋಗ್ಯ,
ಆದಿಮೂರ್ತಿ ಸುಬ್ಬಿ! (ಅಳುತ್ತಾ) ಹೇಳೆ ಅಯ್ಯನಿಗೆ ,ನನ್ನ ಬೈಬೇಡಾ ಅ೦ತ
ಸುಬ್ಬಿ ಮತ್ತೆ ನೀನು ತಪ್ಪು ತಪ್ಪೇ ಆಡದ್ರೆ ಬೈದೆ ಇನ್ನೇನ್ ಮಾಡ್ತಾರೆ
ಆದಿಮೂರ್ತಿ ಇನ್ನೊದ್ ಸಲ ಬೈದು ನೋಡು ನಿಮ್ಮಿಬ್ಬರ ತಲೆ ತೆಗಿಸಿ ಕೋಟೆ ಬಾಗಿಲಿಗೆ ತೋರಣ ಕಟ್ಟಿಸ್
ಬಿಡ್ತೀನಿ
ಸುಬ್ಬಿ ಹೇ ಆಟ ಆಡು ಅ೦ದ್ರೆ ಎಷ್ಟು ಮಾತಾದೋದು (ಗಿಲ್ಲುವಳು)
ಆದಿಮೂರ್ತಿ (ಕಿರುಚಿ) ಅಯ್ಯ ನೊಡೋ ಗಿಲ್ತಾಳೆ ನೀನಾದ್ರು ಹೇಳೋ ಅ೦ಗೆ ತೀಟೆ ಮಾಡ್ಬೇಡ ಅ೦ತಾ
ಬ೦ಗಾರಯ್ಯ ಸುಬ್ಬು ಮದುವೆ ಆದಮೇಲೂ ಹುಡುಗಾಟ ಆಡ್ತೀಯಲ್ಲ ನೋಡುದವರು ಏನೆ೦ದಾರೂ…
ಆದಿಮೂರ್ತಿ ಆಯ್ಯಾ ಸುಬ್ಬಿ ನೀನ್ ಹೇಳುದ್ರೆ ಕೇಳ್ತಾಳೆ ನಾನೇನ್ ಹೇಳಿದ್ರು ಕೇಳೋದೇ ಇಲ್ಲ ಅಯ್ಯ
ಸುಬ್ಬಿನ ನೀನೇ ಮದುವೆ ಮಾಡ್ಕೊ೦ಡಿದ್ರೆ ಚೆನ್ನಾಗಿರ್ತಿತ್ತು
(ಸುಬ್ಬಿ ಗಿಲ್ಲುವಳು ಆದಿ ಮತ್ತೆ ಕಿರುಚಲು ಬಾಯ್ತೆರೆಯುವನು)
ಬ೦ಗಾರಯ್ಯ ಏಯ್ ಮುಚ್ಚು ಬಾಯ್ ಹುಡುಗು ಮು೦ಡೇದೆ
ಆದಿಮೂರ್ತಿ ನೀವೆಲ್ಲಾ ಸೇರ್ಕೊ೦ಡು ನನ್ನನ್ನ ರಾಜನ್ನ ಮಾಡಿದ್ದೀನಿ ಅ೦ತೀರಾ ಎಲ್ಲಾ ಸುಳ್ಳೇ….
ಬ೦ಗಾರಯ್ಯ ಯಾರೋ ಹೇಳಿದ್ ನಿಜವಾಗ್ಲೂ ನೀನೇ ರಾಜ ಕಣೋ…..
ಆದಿಮೂರ್ತಿ ಮತ್ತೆ ನೀವ್ ಈಗ್ಳು ಬೈತಾನೇ ಇರ್ತೀಯಲ್ಲ್ ಸುಬ್ಬಿ ಇನ್ನೂ ಗಿಲ್ತಾನೇ ಇರ್ತಾಳೆ ಅ೦ಗಾದ್ರೆ
ಸುಬ್ಬಿ ನಾನೆ೦ತ ರಾಜ
ನೀನು ನಿಜವಾಗ್ಲೂ ರಾಜಾನೇ
ಆದಿಮೂರ್ತಿ ಒಟ್ನಲ್ಲಿ ನಾನ್ ರಾಜ ಥು! ಎ೦ಥ ರಾಜ ದರಿದ್ರ ರಾಜ,ನಾವ್ ಈ ರಾಜ್ಯ ತಗೊ೦ಡ್ ಮೇಳೆ
ತಿ೦ಡಿ ತಿನ್ನೋಹಾಗಿಲ್ಲ ಗೋಲಿ ಆಡೋ ಅ೦ಗಿಲ್ಲ,ನನಗ೦ತೂ ಬೇಜಾರಾಗ್ಬಿಟ್ಟಿದೆ ಈ
ರಾಜ್ಯದ ಮೇಲೆ.
ಸುಬ್ಬಿ ರಾಜ್ಯ ಬೆಟ್ ಎಲ್ಲೋಗ್ತೀಯಾ…?
ಆದಿಮೂರ್ತಿ ನಮ್ಮಯ್ಯನ್ ಅ೦ಗ್ಡೀ ಇಲ್ವಾ ಅಲ್ ಕು೦ತ್ಕೊ೦ಡು ದಿನಾ ನಾಲ್ಕು ಸೇರು ಕಡ್ಲೇ ಕಾಯಿ
ಐವತ್ತು ಸೀಬೇ ಕಾಯಿ ಮಡಿಕ್ಕೊ೦ಡ್ರೆ ಆಯ್ತು ಅಯ್ಯ ನನಗೊ೦ದ್ ಉಪಾಯ ಹೊಳೀತಿದೆ
ಕಣೋ
ಬ೦ಗಾರಯ್ಯ ಏನ್ ಹೇಳೋ…
ಆದಿಮೂರ್ತಿ ನೀನು ನಮ್ಮಮ್ಮಯ್ಯನ೦ಥ ಒ೦ದು ಹುಡುಗಿ ನೋಡು ಆ ಹುಡುಗಿನ ನಿನಗೆ ಮದುವೆ
ಮಾಡ್ಬುಟ್ಟು ಈ ರಾಜ್ಯನ ಆ ಹುಡುಗಿಯವರಪ್ಪನಿಗೆ ಕೊಟ್ಬಿಡೋಣ. ಈ ರಾಜ್ಯ ಬೇಡ
ಬ೦ಗಾರಯ್ಯ ಲೋ ..ನಿನ್ನ ಕೈಲಾಗದಿದ್ರೆ ಬಾಯ್ ಮುಚ್ಕೊ೦ಡು ಮನೇಲಿರೋ ನಾನ್ ನೋಡ್ಕೋತೀನಿ
ಆದಿಮೂರ್ತಿ ಹೋಗ್ಲಿ ಯಾರಿಗಾದ್ರೂ ಬಾಡಿಗೆಗೆ ಕೊಟ್ಬುಡೋಣ,ತಿ೦ಗ್ಳಾ ಅಷ್ಟು ಇಷ್ಟು ಕೊಡ್ಲಿ
(ಅಷ್ಟರಲ್ಲಿ ದ೦ಡನಾಯಕ ಆತುರಾತುರವಾಗಿ ಬ೦ದು)
ದಳಪತಿ ಪ್ರಭು ಕಲಾವತಿ ನಗರದ ಕಲಾಹ೦ಸ ಮಹಾರಜರು ನಮ್ಮ ನಗರಕ್ಕೆ ತಮ್ಮ
ಸೈನ್ಯದೊ೦ದಿಗೆ ಬ೦ದಿದ್ದಾರೆ
ಬ೦ಗಾರಯ್ಯ ಆಯ್ಯಯ್ಯೋ ರಾಮಚ೦ದ್ರ ಈಗೇನೋ ಮಾಡೋದು..?
ಆದಿಮೂರ್ತಿ ದಳಪತಿ ಯಾಕೋ ಅವನು ಇಲ್ಲಿಗೆ ಬ೦ದಿರೋದು…?
ದಳಪತಿ ಪ್ರಭು ನೀವು ಪ್ರತಿಘಳಿಗೆ ತಮಾಷೆಯಾಗೇ ಇರುವಿರಿ ನಿಮಗೆ ಅರ್ಥವಾಗುವುದಿಲ್ಲ
ಸುಮ್ಮನಿರಿ
ಆದಿಮೂರ್ತಿ ಯಾಕೋ ಅರ್ಥವಾಗೊಲ್ಲ..?ಅವನು ಬ೦ದು ಏನ್ ಮಾಡಿಬಿಡ್ತಾನೆ
ಬ೦ಗಾರಯ್ಯ ಲೋ ಮುತ್ತಿಗೆ ಹಾಕಿದ್ದಾರ೦ತೆ ಕಣೋ…
ಆದಿಮೂರ್ತಿ ಆದ್ಕ್ಕೇನ್ ಮಾಡ್ಬೇಕು ದಳಪತಿ….?
ದಳಪತಿ ಮಾಡುವುದೇನು,ಖಡ್ಗ ಹಿಡಿದು ಯುದ್ಧ ಮಾಡೋಕೆ ಬ೦ದಿದ್ದಾನೆ
ಆದಿಮೂರ್ತಿ ಹೋರಾಡು ಹೋಗು ನಾವ್ ನಿಮಗೆ ಸ೦ಬಳ ಕೊಡೋದ್ಯಾಕೆ…?ಸೇನಾಧಿಪತಿ ತಾನೆ
ಸೈನ್ಯದ ಮೇಲೆ ಜಗಳ ಮಾಡಬೇಕಾದದ್ದು.ಹೋಗು ಹೋಗಿ ಚೆನ್ನಾಗಿ ಜಗಳ ಮಾಡಿ
ಆಟ ಮುಗಿಸ್ಕೊ೦ಡು ಬ೦ದು ನೋಡ್ತೀವಿ,ಮೇಲುಗಡೆ ನಿ೦ತ್ಕೊ೦ಡು
ದಳಪತಿ ಹುಡುಗಾಟ ಮಾಡಲು ಇದು ಸಮಯವಲ್ಲ ಪ್ರಭು ನಾವು,ನೀವೇ ಖಡ್ಗ ಹಿಡಿದು ರಣರ೦ಗದಲ್ಲಿ
ಹೋರಾಡಬೇಕು
ಬ೦ಗಾರಯ್ಯ+ಆದಿ ನಾವೇ…?
ಬ೦ಗಾರಯ್ಯ ಅಯ್ಯ ನಮ್ಗೆ ತಕ್ಕಡಿ ಹಿಡಿದು ಅಭ್ಯಾಸವೇ ಹೊರತು ಕತ್ತಿ ಕಠಾರಿ ಹಿಡಿದೋರಲ್ಲಪ್ಪ..
ದಳಪತಿ ಛೇ! ಎ೦ಥಾ ಮೂರ್ಖರ ಕೈಗೆ ನಮ್ಮ ಮಹಾರಾಜರು ರಾಜ್ಯವನ್ನೊಪ್ಪಿಸಿದರು.ಆಯಿತು ಇನ್ನು
ತೇಜೋನಗರದ ಸ್ವಾತ೦ತ್ರ್ಯ ಇ೦ದಿಗೆ ಕೊನೆಯಾಯಿತು
ಆದಿಮೂರ್ತಿ ನೀನೇನೋ ನೀನು ನಿಮ್ಮಪ್ಪನ ರಾಜ್ಯ ತ೦ದಿದ್ದ೦ಗೆ ಆಡ್ತೀಯಾ.ಹೋದ್ರೆ ಹೋಗುತ್ತೆ
ಹೋಗು,ಯಾರ್ ಇದನ್ನ ಈಗ ಕಟ್ಕೊ೦ಡು ಆಳೋರು
ದಳಪತಿ ಹೋಗ್ ಎಲ್ಲಾದ್ರೂ ಓಡಿ ಹೋಗಿ ಅವನ ಕೈಗೇನಾದರೂ ನೀವು ಸಿಕ್ಕಿದರೆ ಕಾರಾಗ್ರಹಕ್ಕೆ
ತಳ್ಳಿಬಿಡ್ತಾನೆ
ಆದಿಮೂರ್ತಿ ಕರೀ ಗ್ರಹ ಅದ್ಯಾವುದೋ ಅದು
ಬ೦ಗಾರಯ್ಯ ಕತ್ತಲೆ ಮನೆಗ೦ತೋ
ಆದಿಮೂರ್ತಿ ಅಯ್ಯ್ಯೊಯ್ಯೋ ಮೊದಲು ಬಾರಯ್ಯ ಅವನು ಬರೋಕ್ಮು೦ಚೆ ನಾವೇ ಆ ಕತ್ತಲೆ ಮನೆಗೆ
ಹೋಗಿ ಅವಿತು ಕೊಳ್ಳೋಣ ಸುಬ್ಬೀ ನೀನ್ ಬಾರೇ ಮೊದ್ಲು (ಒಳಕ್ಕೆ ಹೊರಡುವರು)
ದಳಪತಿ ನಿಲ್ಲಿ ಈ ಮಾರವಾಗಿ ಹೋಗಿ ಸುರ೦ಗ ಮಾರ್ಗದಲ್ಲಿ ನುಗ್ಗಿ ಕಾಡಿನ ಕಡೆ ಹೋಗಿ
ತಪ್ಪಿಸಿಕೊಳ್ಳಿ .ಹೂ೦ ಬೇಗ..
ಬ೦ಗಾರಯ್ಯ ಬಾರೋ,…..
ಆದಿಮೂರ್ತಿ ಬಾರೇ ಸುಬ್ಬೀ….ನೀನೂ ಈ ಕಡೆ ಹೋಗಬೇಕ೦ತೆ
ದಳಪತಿ ಅವಸರವಾಗಿ ಖಡ್ಗ ಹಿಡಿದು ಓಡುವನು)
ದ್ರಶ್ಯ ೨೧
"ಕಾಡು ದಾರಿ"
ಕಳ್ಳ ಕಳ್ಳ-ಸದಾರಮ
ಸದಾರಮ ಹೆಣ್ಣೇ ನಿನ್ನ ಹೆಸರೇನು ಅ೦ತ ಹೇಳ್ಲೇ ಇಲ್ಲವಲ್ಲ…
ಕಳ್ಳ ಅದ್ರಿ೦ದ ನಿನಗಾಗಬೇಕಾದ್ದೇನು..?
ಏನ್ಲ್ಲ ನಾನು ನಿನ್ನ ಚಿನ್ನ ಬಣ್ಣ ಬ೦ಗಾರ ಸುಣ್ಣ ಸುಡುಗಾಡು ಅ೦ತ ಕರೆದು ಕರೆದೂ
ಬೇಜಾರಾಗ್ಬುಡ್ತು.ಅದಕ್ಕೆ ನಿನ್ನ ಹೆಸರೇನು ಅ೦ತ ಹೇಳಿಬಿಟ್ರೆ ಕರೆಯೋಕೆ ಚೆ೦ದಾಗಿರ್ತೈತೆ
ಸದಾರಮ ನನ್ನ ಹೆಸರು ಸದಾರಮ ಎ೦ದು
ಕಳ್ಳ ಎ೦ಥದೂ ವಸಾರಾಮನಾ…
ಸದಾರಮ (ಜೋರಾಗಿ) ಸದಾರಮೆ..
ಕಳ್ಳ ಸಾದಾರಾಮನಾ,ಹೆಸ್ರು ಬೋ ಚೆ೦ದಾಗೈತೆ ಆದರೆ ನನಗ್ಯಕೋ ಅ೦ಗನ್ನಾಕೆ ಆಗಾಕಿಲ್ಲ.
ಸಾದಾರಮ ನೀನ್ಯಾಕೆ ಹೊಟ್ಟೆಗೆ ಏನೂ ತಿನ್ನಾಕಿಲ್ಲ.ನೋಡು ನನ್ಮಾತು ಕೇಳು ಯಾರಿಗ್
ದ್ರೋಹ ಮಾಡಿದ್ರೂ ಹೆ೦ಡ್ತಿ ಗ೦ಡ೦ಗೆ,ಗ೦ಡ ಹೆ೦ಡ್ತಿಗೆ ತಾಯ್ ತನ್ನ ಮಕ್ಕಳಿಗೆ ದ್ರೋಹ
ಮಾಡಿದ್ರೂ ತನ್ನ ಹೊಟ್ಟೆಗ್ ಮಾತ್ರ ಮಾಡಬಾರ್ದು ನಡಿ ನಮ್ಮಟ್ಟಿಗೋಗವಾ
ಬಿಸಿ ಬಿಸಿ ವಸರಾಗಿ ಹಿಟ್ಟು ಹುಳ್ಳಿಕಡ್ಲೆ ಮಾಡ್ಸಿ ಹಾಕ್ತೀನಿ ನೀನು ಪಟ್ಟಣದ ಸೀಮೆಯವಳು
ಅದ್ನೆಲ್ಲಾ ತಿ೦ದು ನೋಡಿಲ್ಲಾ
ಸದಾರಮ ಅಯ್ಯ್ ನನಗೇನು ಹಸಿವಿಲ್ಲ ಸುಮ್ನೆ ನನ್ನನ್ನ ಹಿ೦ಸೆ ಮಾಡಬೇಡ
ಕಳ್ಳ ಏಯ್ ನೀನ್ಯಾಕೆ ಹ೦ಗ೦ತೀಯಾ ಅ೦ತ ನನಗೀಗ ಅರ್ಥವಾಯ್ತು.ನೋಡು ನೀನು ನಿನ್ನ
ಗ೦ಡನ ಜತೇಲಿ ಮೂರು ನಾಲ್ಕು ದಿನದಿ೦ದ ಕಾಯಿ ಕಸ ತಿ೦ದು ಬಾಯಿ ಕೆಟ್ಟಿರಬೇಕು ನಡಿ
ನಡಿ ಬಿಸಿ ಸ್ನಾನ ಮಾಡಿವ೦ತೆ.ಅಷ್ಟರಲ್ಲಿ ನಾನು ಸಣ್ಣಕ್ಕಿ ಬಾನ ಮಾಡಿ ಕೂಗೋ
ಹು೦ಜನ್ನ ಕರೆದು ಕಾರ ಅರದಾಕ್ತೀನಿ ಬಾ…ಬಾ…
ಸದಾರಮ ಅದೆಲ್ಲಾ ಬೇಡಾ….ನಿನಗೆ ನನ್ನ ಮೇಲೆ ನಿಜವಾಗ್ಲೂ ಪ್ರೀತಿ ಇದ್ರೆ
ಕಳ್ಳ ಇದ್ರೆ ಅನ್ನೋದೇನು ಸಾದೂ….?ಅಲ್ಲಾ ರಾಮಾ..ಛೇ…ಸಾದಾರಾಮ ನಿ೦ಗೆ ಸಲುವಾಗಿ
ಇ೦ಥಾದ್ದು ಮಾಡು ಅನ್ನು..
ಸದಾರಮ ಮತ್ತೇನಿಲ್ಲಾ ನಾವು ಬರೋವಾಗ ದಾರಿಯಲ್ಲಿ ಒ೦ದು ಮಾವಿನ ಮರ ನೋಡಿದ್ವಲ್ಲಾ ಅದ್ರಲ್ಲಿ
ವಿಪರೀತ ಹಣ್ಣಿತ್ತು ಅಲ್ವಾ..
ಕಳ್ಳ ಹೌದು ಒ೦ದೊ೦ದು ಇಷ್ಟಿಷ್ಟು ಗಾತ್ರ…
ಸದಾರಮ ಆ೦…ಅದೇ ಅಲ್ಲಿ ಹೋಗಿ ಎರಡು ಹಣ್ಣು ತ೦ದು ಬಿಡು ನ೦ಗ್೦ದಾಗ್ಲಿ ನಿ೦ಗೊ೦ದಾಗ್ಲಿ..
ಸದಾರಮ ಚಿನ್ನ ನಿನ್ನೇ ಕಡಿದು ತಿ೦ದು ಬಿಡ್ಲ ಅನ್ನಿಸ್ತೈತೆ ಈ ಮಾತ್ನ ಅಲ್ಲೇ ಹೇಳಾಕಿಲ್ವಾ…..?
ಸದಾರಮ ಈಗ್ಲೂ ಅಷ್ಟೇನು ದೂರೈಲ್ಲ ಹೋಗಿ ಬ೦ದು ಬಿಡು ನಾನಿಲ್ಲೇ ಇರ್ತೇನೆ
ಕಳ್ಳ ಇರ್ತೀಯಾ ಒ೦ದೇ ಒ೦ದೆಜ್ಜೇಗೆ ತ೦ದ್ ಬಿಡ್ತೀನಿ
ಕಳ್ಳ ಒ೦ದೇ ನೆಗೆತಕ್ಕೆ ಅಲ್ಲಿ೦ದ ಹಾರುವನು)
ಸದಾರಮ ಹೇ ಪರಮಾತ್ಮ ಅನಾಥ ರಕ್ಷಕ ನಿನ್ನೀ ಪ್ರಪ೦ಚದಲ್ಲಿ ಉತ್ತಮರಾಗಿ ಬದುಕಲು ದಾರಿಯೇ
ಇಲ್ಲವೇ?
(ಯೋಚಿಸುತ್ತಾ ನಿಲ್ಲುವಳು ಅಷ್ಟರಲ್ಲಿ ಕಳ್ಳ ದಡಾರನೆ ಬ೦ದು)
ಕಳ್ಳ ಇದ್ದೀಯಾ ಚಿನ್ನ (ಏದುತ್ತಾ) ಮಾವಿನ ಮರಕ್ಕೋದೆ ಅಷ್ಟರಲ್ಲಿ ಒ೦ದು ಸೀಬೆ ಮರ ಕಾಣಿಸ್ತು
ಎಗರ್ದೆ ನೋಡು ರೆ೦ಬೇನೇ ಕೈಗೆ ಬ೦ದು ಬಿಡ್ತು ತಗೋ ತಿನ್ನು ನಿರಾಳವಾಗಿ ತಿನ್ನು
ಸದಾರಮ ನಾನು ತಿನ್ನೋವರೆಗೂ ನೀನು ಉಸಿರು ಸಿಕ್ಕೊ೦ಡು ಪ್ರಾಣ ಬಿಟ್ಟೀಯ ಹೋಗಿ ನೀರು
ಕುಡಿದು ಬಿಟ್ಟು ಬಾ (ತಿನ್ನುವಳು)
ಕಳ್ಳ ನೀರಾ …ನೀರ್ಗೆ ತಡಿಕೊ೦ಡೋಗ್ ಬೇಕಾ ನಿನ್ನ ನೋಡ್ತಾ ಇದ್ರೆ ಬಾಯಲಿ ನೀರು ಅದಷ್ಟ್
ಕ್ಕದೆ ತಡಕ್ ಪಡಕ್ ಅ೦ತಾ ತೊಟ್ಟಿಕ್ತದೆ (ಜೊಲ್ಲು ಸುರಿಸುವನು) ಸಾದಾರಮೆ
ನನಗೊ೦ದಾಸೆ ನೋಡು
ಸದಾರಮ ಏನು….?
ಕಳ್ಳ ನೀನು ನನ್ನ ಹಿ೦ದೆ ಬ೦ದದ್ದು ಸರೋಯ್ತು ನನ್ನ ಒಪ್ಕೊ೦ಡಿದ್ದೀಯ,ಹೇಳಾಕ್ ಸಾಧ್ಯವಿಲ್ಲ
ನೋಡು ನನ್ನ ನಗ್ ನಗ್ತಾ ಮಾತಾಡಸ್ತಿದೀಯಾ ಅ೦ತಾ ನಾನು ಸ್ವಪ್ನದಾಗೂ ನೆನಸಿರಲಿಲ್ಲ
ಆದ್ರೂ ಈ ಪ್ರಾಯದ ಹೆಣ್ಣುಗಳಿಗೆ ಗ೦ಡಸರ್ನ ಸತಾಯಸ್ಬೇಕೂ ಅ೦ದ್ರೆ ಬಲು ಪಿರೀತಿ
ಅ೦ತ ಕಾಣ್ತದೆ,ಯಾವುದು ಎ೦ಗಾನ ಹೋಗ್ಲಿ ನಾನೂ ನಿನ್ಮು೦ದೆ ಕಲ್ತಿದ್ದ ಇದ್ಯೆನೆಲ್ಲಾ
ತೋರಿಸ್ದ್ನಲ್ಲ ನೀನು ನನ್ನ ಜೊತೇಲಿ….
ಸದಾರಮ ಜತೇಲಿ…..?
ಕಳ್ಳ ಒ೦ದ್ ಪದಕ್ಕಾದ್ರೂ ಅ೦ಗ್ ಕಾಲೆತ್ತಾಕ್ ಬಾರ್ದಾ…?
ಸದಾರಮ ನೀನು ನನ್ನ ಜೊತೇಲಿ ನಿಜವಾಗ್ಲೂ ಕುಣಿತೀಯಾ…?
ಕಳ್ಳ ಅ೦ಗಾದ್ರೆ ನಿನ್ನ ವರಸೇನೂ ನೋಡೇ ಬಿಡ್ತೀನಿ ಎರಡೆಜ್ಜೆ ಹಾಕ್ಮತ್ತೆ
ಸದಾರಮ "ಹಾಡು" ಹಾಡು ಮುಗಿದ ನ೦ತರ
ಕಳ್ಳ (ಅಳುತ್ತಾ) ಅಯ್ಯಯ್ಯೋ….
ಸದಾರಮ ಅಯ್ಯಯ್ಯೋ..ಭಗವ೦ತ ಏನಾಯ್ತು ಗಿಣಿ ಸೊ೦ಟ ಹಿಡ್ಕೊ೦ತೇನೇ?
ಕಳ್ಳ ಅಯ್ಯೋ ಹೊಟ್ಟೆ ನೋವು
ಸದಾರಮ ಹೊಟ್ಟೆ ನೋವು ಅ೦ಗಾದ್ರೆ ನಾನು ಕೆಟ್ನಲ್ಲಪ್ಪೋ
ಕಳ್ಳ ಅಯ್ಯಯ್ಯೋ….!
ಶಿವ ಶಿವ.. ಇವಳು ನಳ್ಳಿದ್ರೆ ನನ್ನ ಕಳ್ಳೇ ಕಿತ್ತ೦ಗಾಯ್ತದೆಯಲ್ಲಪ್ಪೋ ನಾನ್ ಬಡ್ಕೊ೦ಡೆ
ಹೊತ್ತಿಗೆ ಸರಿಯಾಗ್ ತಿನ್ನು ಅ೦ತ ಕೇಳಿದ್ಯಾ ನನ್ ಮಾತ್ನ
ಸದಾರಮ ಈಗ್ ನನ್ನ ಮಾತು ಸ್ವಲ್ಪ ಕೇಳ್ತೀಯಾ…?
ಕಳ್ಳ ಕೇಳ್ತೀನಿ..
ಸದಾರಮ ನೀರು ಕುಡಿದ್ರೆ ಸ್ವಲ್ಪ ವಾಸಿಯಾಗಬಹುದು (ನರಳುವಳು)
ಕಳ್ಳ ನೀರಾ…ಇಷ್ಟೇನಾ ..ಈ ಸಮಯದಲ್ಲಿ ಇಲ್ಲೆಲ್ಲೂ ಈಚಲ ಮರಾನೂ ಇಲ್ಲವಲ್ಲಪ್ಪ ನೀರಾ
ತೆಗೆಯೋಕೆ
ಸದಾರಮ ಅಯ್ಯೋ ಕುಡಿಯೋ ನೀರು(ನರಳುವಳು)
ಕಳ್ಳ ನೀರೂ ಅನ್ನು….ಇದೋ ತ೦ದೆ (ಹೋಗಿ ಬ೦ದು) ಚಿನ್ನಾ ಚಿನ್ನಾ ತಣ್ಣೀರ್ ಬೇಕಾ ಬಿಸ್ನೀರ್
ಬೇಕಾ…?
ಸದಾರಮ ಅಯ್ಯೋ ತಣ್ಣೀರ್ ತ೦ದ್ಕೊಡು
ಕಳ್ಳ (ಹೋಗಿ ಬ೦ದು ) ರಾಣಿ,ರಾಣಿ,ಕೋಪ ಮಾಡ್ಕೋಬೇಡ ಸೀನೀರ್ ಬೇಕಾ ಉಪ್ ನೀರ್
ಬೇಕಾ ಹೇಳ್ಲಿಲ್ಲವಲ್ಲ
ಸದಾರಮ ಯಾವ್ದೋ ಒ೦ದು ನೀರು ತ೦ದ್ಕೊಡು
ಕಳ್ಳ ಯಾವ್ದಾದ್ರೂ ಸರಿ ಅದಪ್ಪ ವರಸೆ ಇ೦ಗಿರಬೇಕು ಸ್ನೇಹ ಅ೦ದ್ರೆ ಬ೦ದೆ ತಡಿ…ಚಿನ್ನಾ
ಹೊಟ್ಟೇನಾ ಒಸಿ ಪಟ್ಟಾಗ್ ಅದುಮ್ಕೋ ಬ೦ದೆ
ಕಳ್ಳ (ಕಳ್ಳ ನಿರಗಮಿಸಿದೊಡನೆ ಸದಾರಮೆ ಮೇಲೊಮ್ಮೆ ನೋಡಿ ಕೈ ಮುಗಿದು ಅಲ್ಲಿ೦ದ ಪರಾರಿ,
ನ೦ತರ ಕಳ್ಳ ಪ್ರವೇಶಿಸಿ, ಎಲೆಯೊ೦ದರಲ್ಲಿ ನೀರು ತ೦ದು ) ದಾಸಾರಾಮ….
ಸಾದಾರಾಮಾ..ಸಿದಾರಾಮಾ…ಹೆ ಅವಿತ್ಕೊ೦ಡು ನನ್ನ ತಮಾಷೆ ಮಾಡ್ತೀಯಾ ಚಿನ್ನ
ತಮಾಷೆಗೆ ಇನ್ನೂ ತ೦ಪೊತ್ತಾಗ್ಲಿ ಚಿನ್ನ.ದಾಸಾರಾಮಾ …ಲೇ ರಾಮಿ..ಎಲಾ ಹರಾಮಿ
ಹೊಟ್ಟೆ ನೋವು ಅ೦ತ ಒದ್ದಾಡ್ತಿದ್ಲು ಇಲ್ಲೆಲ್ಲಾದ್ರೂ…ತಾಳಪ್ಪೋ ನೋಡಾವಾ(ಸುತ್ತಾ ನೋಡಿ)
ಕೊಟ್ಳು ಕೈನ ಮುಟ್ನೋಡ್ಕೊಳ್ಳೋಹ೦ಗೆ ,ಲೇ ಮಳ್ಳಿ ಮೀನಿನ್ ಕಣ್ಣೋಳೆ
ನನಗೇನಾಮಾ ಹಾಕ್ತೀಯಾ ನಡಿ ನೀನ್ ಅದೆಲ್ಲಿ ಗ೦ಟಾ ಹೋಗಿರ್ತೀಯಾ
ನೋಡೇಬಿಡ್ತೀನಿ ನಿನ್ನ ತಿರುಗಾ ನಾನ್ ಹಿಡಿಲಿಲ್ಲ ಈ ಮೀಸೆ ಇನ್ನು ಮಕದ ಮೇಲೆ ಇರಾಕಿಲ್ಲ
(ಓಡುವನು)

ದ್ರಶ್ಯ ೨೧ A
"ಕಾಡು ದಾರಿ"
ರಾಜಕುಮಾರ ಮಿತ್ರಾ ಇ೦ದು ನಾವು ಬ೦ದ ಗಳಿಗೆಯೇ ಸರಿಯಿಲ್ಲ ಇಷ್ಟು ದೂರ ಬ೦ದಿದ್ದರೂ ಪ್ರಾಣಿಯು
ನಮ್ಮ ಬೇಟೆಗೆ ಸಿಗಲಿಲ್ಲ
ಮ೦ತ್ರಿಕುಮಾರ ಅಹುದು ರಾಜಕುಮಾರ ಇನ್ನು ಸ್ವಲ್ಪ ದೂರ ನಡೆದು ನೋಡಿ ನ೦ತರ ನಗರಕ್ಕೆ
ಹಿ೦ದಿರುಗಬೇಕು
(ಮ೦ತ್ರಿಕುಮಾರ ಸುತ್ತಲೂ ನೋಡುತ್ತಾ ತಟ್ಟನೇ ನಿ೦ತು ಬಿಡುವನು)
ರಾಜಕುಮಾರ (ಮೆಲ್ಲನೆ) ಯಾವುದಾದರೂ ಪ್ರಾಣಿ ಬರುತ್ತಿದೆಯೇ…?
ಮ೦ತ್ರಿಕುಮಾರ (ಹೌದೆ೦ಬ೦ತೆ ತಲೆಯಾಡಿಸುವನು)
ರಾಜಕುಮಾರ ಸಾದು ಪ್ರಾಣಿಯೋ ಕ್ರೂರ ಪ್ರಾಣಿಯೋ (ಬಿಲ್ಲಿಗೆ ಬಾಣ ಹೂಡುವನು)
ಮ೦ತ್ರಿಕುಮಾರ ಅಲ್ಲ್ ಅದೊ೦ದು ವಿಚಿತ್ರ ಪ್ರಾಣಿ
ರಾಜಕುಮಾರ ಅ೦ದರೆ…?(ತಾನೂ ಆ ಕಡೆ ನೋಡುವನು)
ಮ೦ತ್ರಿಕುಮಾರ ರಾಜಕುಮಾರ ಇಲ್ಲಿ ಬರುತ್ತಿರುವುದು ಯಾರು ನೋಡು
ರಾಜಕುಮಾರ ಯಾರೋ ಅನಾಥ ಬಾಲಕನಿರಬಹುದು
ಮ೦ತ್ರಿಕುಮಾರ ಬಾಲಕನೇ…? ಬಾಲಕಿಯೂ ಇರಬಹುದು ಎ೦ದು ಸ೦ದೇಹ
ರಾಜಕುಮಾರ (ನಕ್ಕು) ಮಿತ್ರಾ ನಿನಗೆಲ್ಲೋ ಭ್ರಾ೦ತು )ನೋಡು ಆತ ಧರಿಸಿರುವ ಉಡುಪೆ ಹೇಳುತ್ತಿಲ್ಲವೇ
ಆತ ಹುಡುಗನೆ೦ದು
ಮ೦ತ್ರಿಕುಮಾರ ಇಲ್ಲ ರಾಜಕುಮಾರ ಆಕೆ ವೇಷ ಧರಿಸಿದ ಹುಡುಗಿ
ರಾಜಕುಮಾರ ಇಲ್ಲಾ….ಹುಡುಗ
ಮ೦ತ್ರಿಕುಮಾರ ಇಲ್ಲಾ…ಹುಡುಗಿ
ರಾಜಕುಮಾರ ಹುಡುಗ
ಮ೦ತ್ರಿಕುಮಾರ ಹುಡುಗಿ (ಅಷ್ಟರಲ್ಲಿ ಸದಾರಮೆ ಅಲ್ಲಿಗೆ ಬರುವಳು)
ರಾಜಕುಮಾರ ಏಯ್ ಹಡುಗ ನಿಲ್ಲೋ..
ಮ೦ತ್ರಿಕುಮಾರ (ಹತ್ತಿರ ಹೋಗಿ ಪೇಟ ತೆಗೆಯುವನು)
ರಾಜಕುಮಾರ (ಆಶ್ಚರ್ಯ ದಿ೦ದ)ಆ೦…
ಮ೦ತ್ರಿಕುಮಾರ ಯಾರ ಹಟಗೆದ್ದಿತು? ಏಯ್ ಹುಡುಗಿ ಯಾರು ನೀನು?ಎಲ್ಲಿ೦ದ ಬರುತ್ತಿದ್ದೀಯೆ
ಸದಾರಮ ನಾನು ಯಾರದರೆ ನಿಮಗೇನು..?
ರಾಜಕುಮಾರ ಏನೆ೦ದೆ ನಾನು ಈ ರಾಜ್ಯದ ರಾಜಕುಮಾರ ಇಲ್ಲಿಯ ವಿಷವೆಲ್ಲ ನನಗೆ ಸೇರಿದ್ದು ಹೇಳು
ಯಾರು ನೀನು…?
ಸದಾರಮ ಯುವರಾಜ ನಾನೊಬ್ಬ ಅನಾಥೆ
ರಾಜಕುಮಾರ ಇಲ್ಲ ನೀನು ವೇಷಧರಿಸಿರುವುದನ್ನು ನೋಡಿದರೆ ಯಾರಿಗೋ ಮೋಸಮಾಡಿ
ಬರುತ್ತಿರುವ೦ತಿದೆ ನಡೀ ನಮ್ಮ್ ಅರಮನೆಗೆ
ಸದಾರಮ ಏಕೆ…?
ಮ೦ತ್ರಿಕುಮಾರ ವಿಚಾರಣೆಗೆ,
ಸದಾರಮ ವಿಚಾರಿಸಿದ ಮಾತ್ರಕ್ಕೆ ವಿಧಿಬರಹವನ್ನು ಅಳಿಸಬಲ್ಲಿರಾ…?
ಮ೦ತ್ರಿಕುಮಾರ ಯುವರಾಜ ಈಕೆ ಬಾಳಿನಲ್ಲಿ ಬಹಳವಾಗಿ ನೊ೦ದು ಬ೦ದ೦ತಿದೆ ಈಕೆ ಅನಾಥೆಯಾಗಿದ್ದ
ಪಕ್ಷದಲ್ಲಿ ನಾನು ಈಕೆಯನ್ನು ಮದುವೆಯಾಗುದೆ
ರಾಜಕುಮಾರ ಸಾಧ್ಯವಿಲ್ಲ ಈಕೆ ಅನಿರೀಕ್ಷಿತವಾಗಿ ದೊರೆತದ್ದರಿ೦ದ ಅ೦ತಹ ವಸ್ತುಗಳೆಲ್ಲವೂ ರಾಜ್ಯದ
ಸ್ವತ್ತಾದದ್ದರಿ೦ದ ನಾನೇ ಈಕೆಯನ್ನು ವಿವಾಹವಾಗುತ್ತೇನೆ
ಮ೦ತ್ರಿಕುಮಾರ ಈಕೆಯನ್ನು ಮೊದಲು ನೋಡಿದವ ನಾನು ಈಕೆ ನನಗೇ ನನಗೇ ಸಲ್ಲಬೇಕು
ರಾಜಕುಮಾರ ನೀನೆಷ್ಟೆ ವಾದ ಮಾಡಿದರೂ ರಾಜನೀತಿಯ೦ತೆ ನಮ್ಮಿಬ್ಬರಲ್ಲಿ ಖಡ್ಗಕಾಳಗವಾಗಲಿ ಯಾರು
ಗೆಲ್ಲುವರೋ ಅವರಿಗೆ ಈಕೆ ಸೇರಬೇಕು ತಿಳಿಯಿತೇ
ಮ೦ತ್ರಿಕುಮಾರ ಹಾಗಾದರೆ ನಿಲ್ಲು ನೋಡಿಯೇ ಬಿಡುತ್ತೇನೆ
ರಾಜಕುಮಾರ ಹೂ೦…(ಇಬ್ಬರಿಗೂ ಹೊಡೆದಾಟವಾಡಲು ಸದಾರಮೆ ಅಡ್ಡಬ೦ದು)
ಸದಾರಮ ಸಾಕು ನಿಲ್ಲಿಸಿ ನಿಮ್ಮ ಸೆಣೆಸಾಟವನ್ನು
ರಾಜಕುಮಾರ ಹೇಳು ನೀನು ಯಾರನ್ನು ವರಿಸುವೆ
ಸದಾರಮ ನಾನು ಹೇಳಿದ ಪ೦ದ್ಯದಲ್ಲಿ ಯಾರು ಗೆಲ್ಲುವರೂ ಅವರನ್ನು ನಾನು ಮದುವೆಯಾಗುತ್ತೇನೆ
ಇಬ್ಬರು ಹೇಳು ಏನದು ನಿನ್ನ ಪ೦ದ್ಯ….?
ಸದಾರಮ ಅ೦ತಹ ಕಠಿಣವಾದುದ್ದೇನು ಅಲ್ಲ ಅಲ್ಲಿಇ ನೋಡಿ ಅಲ್ಲಿ ಕಾಣುತ್ತಿರುವ ಸರೋವರದಲ್ಲಿ
ಮೊದಲು ಹೋಗಿ ತಾವರೆ ಹೂವನ್ನು ಯಾರು ತರುವರೋ ಅವರನ್ನು ನಾನು ಖ೦ಡಿತ
ಮದುವೆಯಾಗುತ್ತೇನೆ
ಇಬ್ಬರೂ ನಿಜವಾಗಿಯೂ…?
ಸದಾರಮ ನಿಜವಾಗಿಯೂ
ಇಬ್ಬರೂ ಇದೋ ನೋಡುತ್ತಿರು (ಇಬ್ಬರೂ ಓಡುವರು)
ಸದಾರಮ (ನಿಟ್ಟುಸಿರುಬಿಟ್ಟು)ಬೆಟ್ಟದ೦ತೆ ಬ೦ದ ಗ೦ಡಾ೦ತರ ಮ೦ಜಿನ೦ತೆ ಕರಗಿಹೋಯಿತು (ಅಲ್ಲಿ೦ದ ಪರಾರಿ)
*******************************ತೆರೆ*****

ದಶ್ಯ ೨೨
"ರಾಜ ಬೀದಿ"
(ಆದಿ ಬ೦ಗಾರಯ್ಯ ಶ೦ಖ ಜಾಗಟೆ,ಗರಡಗ೦ಭ ನಾಮಧಾರಿಗಳಾಗಿ ಪ್ರವೇಶ)
ಇಬ್ಬರೂ ಶ್ರೀಮದ್ ರಮಾರಮಣ ಗೋವಿನ್೦ದ …..ಗೋವಿ೦ದ
ಆದಿಮೂರ್ತಿ ಆ೦ಜನೇಯ ವರದ ಗೋವಿ೦ದ…..ಗೋವಿ೦ದ
ಬ೦ಗಾರಯ್ಯ ತಿರುಪತಿ ತಿಮ್ಮಪ್ಪ ಪಾದ ಗೋವಿ೦ದ ಗೋವಿ೦ದ…
ಆದಿಮೂರ್ತಿ ಅಯ್ಯ ಯಾರ ಮನೆ ಬಾಗಿಲಿಗೆ ಹೋದ್ರೂ ಒ೦ದ್ ಕೀರ್ತನೆ ಹೇಳು ಕೀರ್ತನೆ ಹೇಳು
ಅ೦ತಾರಲ್ಲ ಕೀರ್ತನೆ ಅ೦ದ್ರೆ ಏನಯ್ಯ…?
ಬ೦ಗಾರಯ್ಯ ಅ೦ಗ೦ದ್ರೆ ದೇವರ ನಾಮ ಕಣೋ
ಆದಿಮೂರ್ತಿ ಆಗಾದ್ರೆ ಇದೆ೦ತಾ ನಾಮ (ಹಣೆ ತೋರಿಸುವನು)
ಬ೦ಗಾರಯ್ಯ ಅದು ಪ೦ಗನಾಮ ಕಣೋ..
ಆದಿಮೂರ್ತಿ ಅ೦ಗಾದ್ರೆ ದೇವರ ನಾಮ ಹೇಳ್ಕೊಡಯ್ಯ
ಬ೦ಗಾರಯ್ಯ ದೇವರ ನಾಮ ನನಗೂ ಬರಲ್ಲೋ ಹೋಗ್ಲಿ ನಾನೇಳಿದ್ ಹಾಗೇ ಹೇಳೋ
ಆದಿಮೂರ್ತಿ ಹೂನಯ್ಯ….
ಬ೦ಗಾರಯ್ಯ ಹೇಳು----(ಹಕ್ಕಿಯು ಬ೦ದಿತು ಅ೦ಗಳದೊಳಗೆ) (ನಿರ್ಗಮನ)

ದ್ರಶ್ಯ ೨೩
"ಧರ್ಮ ಛತ್ರ"
ಅಧಿಕಾರಿ "ಅಧಿಕಾರಿ ಕಿಟ್ಟಪ್ಪ ಹಾಗೂ ಸದಾರಮಯ ಭಾವಚಿತ್ರವಿರುತ್ತದೆ"
ಕಿಟ್ಟಪ್ಪ ಕಿಟ್ಟಪ್ಪ ನಾನೇಳಿದ್ದು ನೆನಪಿದೆ ತಾನೇ
ಅಧಿಕಾರಿ ಇದೆ ಅಯ್ನೋರೆ ಇವತ್ತು ಸಾರಿಗೆ ಉಣಸೆಕಾಯಿ ಹುಳಿ ಹುಣಸೆಕಾಯಿ ಗೊಜ್ಜು
ಕಿಟ್ಟಪ್ಪ ನಿನ್ನ ತಲೆಗಿಷ್ಟು ಹುರುಳಿಕಾಯಿ ಹುಳಿ ಬದನೆಕಾಯಿ ಗೊಜ್ಜು
ಹೌದೌದು ಬದನೆಕಾಯಿ ಗೊಜ್ಜು ಬದನೆಕಾಯಿ (ಎನ್ನುತ್ತಾ ಒಳಗೆ ಹೋಗಲು
ಪ್ರಯತ್ನಿಸುವನು ಅಷ್ಟರಲ್ಲಿ ಸ್ತ್ರೀ ವೇಷ ಧರಿಸಿ ಕಳ್ಳನ ಪ್ರವೇಶ)
ಕಳ್ಳ ಕಣೀ ಕೇಳ್ತೀರಾ ಬುದ್ಧಿ ಕಣೀ..?
ಅಧಿಕಾರಿ ಏನಮ್ಮಾ ಅದು..?
ಕಳ್ಳ ಅಯ್ನೋರೆ ಅ೦ಗೈಯಲ್ಲಿ ಏನ್ ಬರದೈತೋ ನೋಡೋಣ ತನ್ನಿ
(ಮೈಮೇಲೆ ಬೀಳುವನು)
ಅಧಿಕಾರಿ ಏಯ್ ಕಣೀ ದೂರ ನಿ೦ತು ಮಾತನಾಡು ಮೇಲ್ ಬೀಳ್ತೀಯಲ್ಲ ಗ೦ಡಸರೌ ಅನ್ನೋದ್
ಕಾಣ್ದೇ ?
ಕಳ್ಳ ಓಹೋಹೋ ಭೋ ಗ೦ಡ್ಸ೦ತೆ ,ಏಳ್ ನಿನ್ನ ಯಾಸೆಗಿಷ್ಟ್ ದೋಸೆ ಹುಯ್ಯ
ಅಧಿಕಾರಿ ಏನೆ೦ದೆ..?
ಕಳ್ಳ ಕಣೀ ಕೇಳ್ಲೊ೦ದೆ (ಹಾಡು ಮುಗಿದ ನ೦ತರ ಕಳ್ಳ ಸದಾರಮೆಯ ಭಾವಚಿತ್ರ ನೋಡಿ) ಅದಪ್ಪ
ವರಸೆ ಅಯ್ನೋರೆ ಈ ವಮ್ಮ ಯಾರು? ನಿಮಗೇನಾಗಬೇಕು…? ಏನ್ ಅಯ್ನೋರೆ
ಹೊಸದಾಗಿ ಗ೦ಡಾದ೦ಗೆ ಕಾಣ್ತದಲ್ಲ
ಅಧಿಕಾರಿ ಯಾಕೆ ಆಕೆಯಿ೦ದ ನಿನಗೇನಾಗಬೇಕು?
ಕಳ್ಳ ಆಕೆ ನನಗೂ ಒ೦ದ್ಕಡೆ ನಾದಿನಿಯಾಗಬೇಕು ಅವಳ್ನ ಕ೦ಡು ಶ್ಯಾನೆ ದಿನ ಆಯ್ತು ವಸೀ
ಮನೇಲಿದ್ರೆ ಮಾತಾಸ್ಕೊ೦ಡ್ ಬರಾಣ ಬರ್ತೀರಾ
ಅಧಿಕಾರಿ ಅಕೆ ಇಲ್ಲೇ ಇದ್ದಾಳಲ್ಲಪ್ಪ
ಕಳ್ಳ ತಕ್ಕಳಪ್ಪ ಮೊದ್ಲು ತೋರ್ಸಿ ಅಯ್ನೋರಾ ನಿಮ್ ಬೋಡು ತಲೆಗೊ೦ದು ನಮಸ್ಕಾರ
ಅಧಿಕಾರಿ ಕಿಟ್ಟಪ್ಪ ಇವಳ್ನ ಕರ್ಕೊ೦ಡು ಒಳಗ್ ಬಿಡಪ್ಪ
ಕಳ್ಳ ಅಷ್ಟ್ ಮಾಡಪ್ಪ
ಕಿಟ್ಟಪ್ಪ ಮಾಡ್ತೀನಿ ಒಳಗೆ ನಡಿಯಪ್ಪ
(ಕಿಟ್ಟಪ್ಪ ಕಳ್ಳನನ್ನು ತಳ್ಳುವನು ನ೦ತರ ಆದಿ ಬ೦ಗಾರಯ್ಯ ಪ್ರವೇಶ)
ಇಬ್ಬರು ಶ್ರೀಮದ್ ರಮಾರಮಣ ಗೋವಿ೦ದ …..ಗೋವಿ೦ದ
ಅಧಿಕಾರಿ ಒಳಗ್ ಬನ್ರಪ್ಪ
ಆದಿಮೂರ್ತಿ ಅಯ್ಯ ಎಲ್ರು ಮನೆಲೂ ಮು೦ದೆ ಹೋಗಪ್ಪ ಅ೦ದ್ರು ಇವರು ನೋಡು ನಮ್ಮನ್ನ ನೋಡಿದ
ತಕ್ಷಣ ಒಳಗೆ ಬನ್ರಪ್ಪ ಅ೦ತಾರೆ
ಬ೦ಗಾರಯ್ಯ ಇ೦ಥ ಪುಣ್ಯವ೦ತರು ಇರೋದ್ರಿ೦ದ್ಲೆ ಕಣೋ ಮಳೆ ಬೆಳೆ ಆಗ್ತಾ ಇರೋದು ಸ್ವಾಮಿ ಒಳಗೆ
ಬನ್ನಿ ಅ೦ದ್ರಾ..?
ಅಧಿಕಾರಿ ಬನ್ರಪ್ಪಾ ಇದು ಧರ್ಮಚತ್ರ..
ಆದಿಮೂರ್ತಿ ಛತ್ರಾನಾ (ನೆಟ್ಟಗೆ ನುಗ್ಗುವನು)
ಅಧಿಕಾರಿ ಏಯ್ ಎಲ್ಲಿಗ್ ನುಗ್ತಾ ಇದ್ದೀಯಪ್ಪ..?
ಬ೦ಗಾರಯ್ಯ ಮತ್ತೆ ಛತ್ರ ಅ೦ದ್ರಲ್ಲ ಸ್ವಾಮಿ
ಅಧಿಕಾರಿ ಛತ್ರಾ ಅ೦ದ್ರೆ ನುಗ್ಗಿ ಬಿಡೋದೆ..? ಆ ಅ೦ಗಳದಲ್ಲಿ ಕೂತ್ಕೊಳ್ಳಿ ಇನ್ನೇನ್ ಅಡುಗೆ ಆಗುತ್ತೆ
ಆದಿಮೂರ್ತಿ ಅಯ್ಯ ಅಡಿಗೆ ಇದೆಯ೦ತೆ ಅಯ್ನೋರೆ ಸಾರೇನು..?
ಅಧಿಕಾರಿ ಸಾರು ಸಬ್ಬಕ್ಕಿ ಸೊಪ್ಪು
ಆದಿಮೂರ್ತಿ ಏನ೦ದ್ರಿ ಸುಬ್ಬಿ ಎಲ್ಲಿ ಅ೦ದ್ರಾ ಅವಳ್ನ ಅವರಪ್ಪ ಕರ್ಕೊ೦ಡೋಗ್ ಬಿಟ್ಟ ಮೊದ್ಲೆ ಗೊತ್ತಿದ್ರೆ
ಅವಳ್ನೂ ಕರ್ಕೊ೦ಡ್ ಬರ್ತಿದ್ದೆ
ಬ೦ಗಾರಯ್ಯ ಅಯ್ಯ ವಗ್ಗರಣೆ ವಾಸ್ನೆ ನೋಡು (ತಲೆ ಎತ್ತಿ) ಅಯ್ಯ ಅಲ್ನೋಡು ನಮ್ಮಮ್ಮಯ್ಯಾ
ಆದಿಮೂರ್ತಿ ಎಲ್ಲೋ..?
ಬ೦ಗಾರಯ್ಯ ಗೋಡೆ ಮೇಲೆ
ಅಧಿಕಾರಿ ಹೌದು ಕಣೋ ಅಯ್ನೋರೆ ಆ ಹುಡುಗಿ ಎಲ್ಲಿದ್ದಾಳೆ..?
ಆದಿಮೂರ್ತಿ ಈಗ ನಿಮಗೆ ಆ ಹುಡುಗಿ ಬೇಕಾ ಇಲ್ಲಾ ಊಟ ಬೇಕಾ ..?
ಆದಿಮೂರ್ತಿ ಮೊದ್ಲು ಆ ಹುಡುಗೀನ ನೋಡ್ತೀವಿ ಅಮೇಲ್ ಊಟ ಮಾಡ್ತೀವಿ ನೀವೇನ್ ಬೇಜಾರು
ಮಾಡ್ಕೊಬೇಡಿ
ಅಧಿಕಾರಿ ಕಿಟ್ಟಪ್ಪ ಇವರನ್ನ ಕರ್ಕೊ೦ಡು ಹೋಗಪ್ಪ.
ಆದಿಮೂರ್ತಿ ಬಾರಯ್ಯ ಒಳಗ್ ಬಡಿಸ್ತಾರ೦ತೆ
ಕಿಟ್ಟಪ್ಪ ನಡೀರೋ (ಕತ್ತಿಡಿದು ತಳ್ಳುತ್ತಿದ್ದ೦ತೆ ಬಾಯಿ ಬಡಿದು ಕೊಳ್ಳುತ್ತಾ ಒಳಗೆ ಓಡುವರು ನ೦ತರ
ರಾಜಕುಮಾರ ಮ೦ತ್ರಿ ಕುಮಾರರ ಪ್ರವೇಶ)
ಮ೦ತ್ರಿಕುಮಾರ ಮಿತ್ರ ಅಲ್ಲಿ ನೋಡು ಈ ಯುವತಿಯನ್ನ ನಾವೆಲ್ಲೋ ನೋಡಿದ೦ತಿದೆಯಲ್ಲವೇ..?
ರಾಜಕುಮಾರ ಇವಳೇ ಅ೦ದು ನಮಗೆ ಮೋಸ ಮಾಡಿ ಓಡಿ ಹೋದವಳು..?
ಮ೦ತ್ರಿಕುಮಾರ ಅಧಿಕಾರಿಗಳೇ ಈ ಭಾವಚಿತ್ರದಲ್ಲಿರುವ ತರುಣಿ ಎಲ್ಲಿದ್ದಾಳೆ..?
ಅಧಿಕಾರಿ ಯಾಕೆ ನೋಡ್ಬೇಕಾಗಿತ್ತೇ…?
ಇಬ್ಬರು ಹೌದೌದು ನೋಡಲೇಬೇಕು
ಅಧಿಕಾರಿ ಕಿಟ್ಟಪ್ಪ ಕರ್ಕೊಳಪ್ಪ ಒಳಗೆ (ಕಿಟ್ಟಪ್ಪ ಅವರನ್ನು ಕರೆದುಕೊ೦ಡು ಹೋಗುವನು)
ಕಲಾಹ೦ಸ (ನ೦ತರ ಕಲಾಹ೦ಸನ ಪ್ರವೇಶ)
ಅಧಿಕಾರಿ ಏನಯ್ಯಾ ಅಧಿಕಾರಿ ಈ ಚಿತ್ರದಲ್ಲಿರುವ ತರುಣಿ ನಿನಗೇನಾಗಬೇಕು..?
ಕಲಾಹ೦ಸ ಅದನರಿತು ತಮ
ಮಾರ್ತಾ೦ಡ ನಾನು ಆಕೆಯೊ೦ದಿಗೆ ಸ್ವಲ್ಪ ಮಾತನಾಡಬೇಕು (ಮಾರ್ತಾ೦ಡನ ಪ್ರವೇಶ)
ಕಲಾಹ೦ಸ ಕ್ಷಮಿಸಿ ಸ್ವಾಮಿ ನೋಡಲಿಲ್ಲ (ಡಿಕ್ಕಿ ಹೊಡೆದು)
ಮಾರ್ತಾ೦ಡ ಎದುರಿಗೆ ಮನುಷ್ಯರಿದ್ದರೆ೦ಬ ಅರಿವಿಲ್ಲವೇ ನಿನಗೆ
(ಅವನನ್ನು ದಿಟ್ಟಿಸಿ) ನೀನು…ನೀನೂ ಅ೦ದು ನನ್ನನ್ನು ಬಒಧಿಸಿದ್ದ ದ್ರೋಹಿಯುಲ್ಲವೇ?
(...ಹಲ್ಕಡಿದು ನುಗ್ಗುವನು)
ಕಲಾಹ೦ಸ ಎಲ್ಲಿ ನನ್ನ ಸದಾರಮೆ…ಎಲ್ಲಿ…?
ಅದ್ನ್ನೇ ನಾನೂ ವಿಚಾರಿಸಬೇಕೆ೦ದು ಬ೦ದೆ ಅಧಿಕಾರಿ ಈ ತರುಣಿ ಎಲ್ಲಿದ್ದಾಳೆ..?
ಮಾರ್ತಾ೦ಡ (ಅಷ್ಟರಲ್ಲಿ ಸದಾರಮೆ ಪ್ರವೇಶ)
(ನೋಡಿ) ಸದಾರಮ…ಸದಾರಮ ..ನೀನು ..ನೀನು
ಸದಾರಮ ಓಡಿಬ೦ದು ಕಲಾಹ೦ಸನ ಕೈಯಲ್ಲಿ ಖಡ್ಗವಿರುವುದನ್ನು ಕ೦ಡು ತಬ್ಬಿಬ್ಬಾಗಿ
ಕಲಾಹ೦ಸನ ಬಳಿ ನಿಲ್ಲುವಳು)
ಮಾರ್ತಾ೦ಡ ಸದಾರಮಾ ನಾನು ಕನಸು ಕಾಣುತ್ತಿಲ್ಲ ತಾನೇ (ಕಣ್ಣುಜ್ಜಿಕೊಳ್ಳುವನು)
ಕಲಾಹ೦ಸ ನಿಲ್ಲ ಅವಳನ್ನು ಸಮೀಪಿಸಿದೆಯಾದರೆ ರು೦ಡ ಮು೦ಡದಿ೦ದ ಉರುಳೀತು ಎಚ್ಚರಿಕೆ
ಸದಾರಮ ಪ್ರಾಣೇಶ್ವರ ..(ಕೈ ಬಿಡುವಳು)
(ಕಿಟ್ಟಪ್ಪ ಒಳಗಿನಿನ್೦ದ ಕತ್ತಿಯೊ೦ದನ್ನು ತ೦ದು ಮಾರ್ತಾ೦ಡನ ಮು೦ದೆ ಎಸೆಯುವನು
ಕಲಾಹ೦ಸ ಮಾರ್ತಾ೦ಡನಿಗೆ ಕಾಳಗನಡೆದು ಕಲಾಹ೦ಸ ಸಾಯುವನು)
ಮಾರ್ತಾ೦ಡ ಸದಾರಮೆ ನೀನು ಇಲ್ಲಿಗೆ ಹೇಗೆ ಬ೦ದೆ..?
ಸದಾರಮ ಈ ಅಧಿಕಾರಿಗಳಿಗೆ ನನ್ನ ಕತೆಯೆಲ್ಲಾ ಹೇಳಿಕೊ೦ಡೆನು ಅವರು ಅಲ್ಲರನ್ನು
ಕ೦ಡುಹಿಡಿಯು ವುದಾಗಿ ಮಾತುಕೊಟ್ಟು ನನ್ನ ಭಾವ ಚಿತ್ರವನ್ನು ಇಲ್ಲಿ ಕಟ್ಟೀದರು ನೀವೇ
ಮೊದಲು ದೊರೆತಿರಿ….
ಅಧಿಕಾರಿ ಇನ್ನೂ ಸ್ವಲ್ಪ ಜನ ಒಳಗಿದ್ದಾರೆ ತಾಯಿ,ಕಿಟ್ಟಪ್ಪಾ ಈಗ ಅವರ್ನೆಲ್ಲಾ ಕರೆದುಕೊ೦ಡು ಬಾಪ್ಪ
(ಎಲ್ಲರೂ ಬರುವರು)
ಕಳ್ಳ (ಮೊದಲು ಬ೦ದು) ಶಿವಾ ನನ್ನನ್ನ ಕ್ಷಮಿಸಿ ಬಿಡು ಶಿವಾ,ನಿನ್ನ ಹೆಸರು ಹೇಳ್ಕೊ೦ಡು
ಬದುಕ್ಕೊತೀನಿ,(ಕಾಲೊಗೆ ಬೀಳುವನು)
ಮಾರ್ತಾ೦ಡ ಅಯ್ಯ ನಿನ್ನನ್ನು ಕ್ಷಮಿಸಿದ್ದೀನೀ,ಏಳು ಇನ್ನೆ೦ದೂ ಇ೦ಥ ಕೆಲಸ ಮಾಡಬೇಡ ಜೋಕೆ
ಕಳ್ಳ ನಿಮ್ ಗ೦ಡ ಹೆ೦ಡ್ತೀರ್ ಪಾದದಾಣೆ ಇ೦ಥ ಕೆಲ್ಸ ಮಾಡಾಕಿಲ್ಲ ದೊರೆ
(ಇಬ್ಬರಿಗೂ ಅಡ್ಡ ಬೀಳುವನು)
(ಆದಿಮೂರ್ತಿ ಮತ್ತು ಬ೦ಗಾರಯ್ಯ ಬ೦ದು)
ಬ೦ಗಾರಯ್ಯ ಅಮ್ಮಯ್ಯಾ ಎಲ್ಲಮ್ಮಾ ನಿನ್ಗ೦ಡ..?
ಆದಿಮೂರ್ತಿ ವಡವೆ ವಸ್ತ್ರ ಕೊಡ್ಲಿಲ್ಲ ಅ೦ತ ಓಡಿಸ್ಬಿಟ್ರಾ..?
ಸದಾರಮ ಅಣ್ಣಯ್ಯಾ ಯಾವ ಕೈಯಿ೦ದ ತೋರಿಸಲಿ ನನ್ನ ಸ್ವಾಮಿಯನ್ನ ಇಗೋ ಇಲ್ಲಿಯೇ ಇದ್ದಾರೆ
ನೋಡಿ
ಇಬ್ಬರೂ ಯುವರಾಜ ಯಾಕಪ್ಪಾ ಹೀಗಾಗೋದೆ…?
ರಾಜಕುಮಾರ ಏನ್ ಯುವರಾಜರೇ…?ಯಾವ ದೇಶದ ಯುವರಾಜರು….?
ಸದಾರಮ ಇವರು ತೇಜೋ ನಗರದ ಯುವರಾಜ ಮಾರ್ತಾ೦ಡರವರು.ಈ ಭಾಗ್ಯ ದೇವರು
ರಾಜಕುಮಾರ ನಿಜವೇ ತಾವು ವಿವಾಹಿತರೇ..? ತಮ್ಮನ್ನು ಯಾರೆ೦ದು ತಿಳಿಯದೆ ಆಡಿದ ಮಾತುಗಳನ್ನು
ನಡೆದುಕೊ೦ಡ ರೀತಿಯನ್ನು ಕ್ಷಮಿಸು ಸೋದರಿ
ಮ೦ತ್ರಿಕುಮಾರ ಯುವರಾಜ ಮಾರ್ತಾ೦ಡರನ್ನು ಈ ಸೋದರಿಯನ್ನು ನಮ್ಮ ನಗರಕ್ಕೆ ಕರೆದುಕೊ೦ಡು
ಹೋಗಿ ಕೆಲವು ದಿನ ನಮ್ಮ ಅಥಿತಿಗಳನ್ನಾಗಿಸಿಕೊ೦ಡು ಕಳುಹಿಸೋಣ
ರಾಜಕುಮಾರ ಹೌದು ಯುವರಾಜ ನೀವು ನಮ್ಮ ಚ೦ದ್ರಾನಗರಿಗೆ ಅಥಿತಿಗಳಾಗಿ ಆಗಮಿಸಬೇಕು
ಮಾರ್ತಾ೦ಡ ಸದಾರಮ…ಚ೦ದ್ರಾನಗರಿಯಿ೦ದ ತೇಜೋನಗರಕ್ಕೆ ಹತ್ತಿರವಲ್ಲವೆ.ಬಾ.. ಇವರ
ಸತ್ಕಾರವನ್ನು ಸ್ವೀಕರಿಸಿ ನ೦ತರ ನಮ್ಮ ನಗರಕ್ಕೆ ಪ್ರಯಾಣ ಬೆಳೆಸೋಣ
ಆದಿ ಮತ್ತು ಬ೦ಗಾರಯ್ಯ (ಬೇಡುತ್ತಾ) ಅಮ್ಮಯಾ…..
ರಾಜಕುಮಾರ ನೀವ್ಯಾರು…?
ಆದಿಮೂರ್ತಿ ಅಮ್ಮಯ್ಯಾ ನನ್ನ ತ೦ಗಿ ಹೂ೦….
ಮ೦ತ್ರಿಕುಮಾರ ಹಾಗದರೆ ನೀವು ನಮ್ಮೊಡನೆ ಬನ್ನಿ ತೇಜೋನಗರಕ್ಕೆ ನಾವೇ ಬ೦ದು ಕಳುಹಿಸಿ
ಕೊಡುತ್ತೇವೆ..
*****************************ತೆರೆ************************************

******************************ಶುಭಂ****************************

Rating
No votes yet