ಸಪ್ತಗಿರಿವಾಸಿಗಳ ಸೃಷ್ಟಿ

ಸಪ್ತಗಿರಿವಾಸಿಗಳ ಸೃಷ್ಟಿ

  ಸಪ್ತಗಿರಿವಾಸಿಗಳು "ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)" ಎಂಬ ಕಥೆಯ ೬ನೇ ಭಾಗವನ್ನು ಬರೆದು ಮುಗಿಸಿದಾಗ.. ನಡೆದ ಘಟನೆ...

 
ರಾತ್ರಿ ಯಾಕೋ ಸುಸ್ತಾದಂತೆ ಅನಿಸಿ ಬೇಗ ಮಲಗಿ ಕೊಂಡಿದ್ದೆ. ಮನಸಿನಲ್ಲಿ ಸಪ್ತಾಗಿರಿವಾಸಿಗಳ ಕಥೆ ಗುಂಯ್ ಗುಡುತಿತ್ತು. ಯಾಕೋ ನಿದ್ದೆ ಬರದೇ ಒದ್ದಾಡುತ್ತಿರಲು ನಮ್ಮ ಮನೆಯ ಕಿಡಕಿ ತೆರೆದ ಶಬ್ದವಾಯಿತು. ಇದ್ಯಾವುದಪ್ಪ.. ಕಥೆಯಲ್ಲಿ ಕೊಂಡ ಬೆಕ್ಕಿನ ಶಬ್ದ ಕೇಳಿತಲ್ಲ ಎಂದು ನೋಡಿದರೆ, ಪಕ್ಕದ ಮನೆಯ ಬೆಕ್ಕು ಕುಳಿತಿತ್ತು. ಆ ಪಕ್ಕದ ಮನೆಯ ಬೆಕ್ಕು ಏಕೋ ಗಾಬರಿಗೊಂಡಂತೆ ಆ ಕಡೆ ಈ ಕಡೆ ನೋಡಿ ಬಲವನ್ನು ಹಿಗ್ಗಿಸಿ ಮೀಯೌ ಅನ್ನುತ್ತಿತ್ತು. ಸರಿ ಏನಾಗಿದೆ ಎಂದು ಎದ್ದು ದೀಪವ ಹಚ್ಚಿ ನೋಡಿದರೆ , ಬೆಕ್ಕಿನ ಕೊರಳಿಗೆ ಏನೋ ಗಾಯವಾದಂತೆ ಕಂಡಿತು. ಸರಿ ಏನಾಗಿದೆ ಎಂದು ಕಿಡಕಿಯಲ್ಲಿ ನೋಡಿದರೆ ಅದೇ ನಮ್ಮ ಸಪ್ತಾಗಿರಿವಾಸಿಗಳ ಕಥಾ ನಾಯಕಿ ಸೃಷ್ಟಿ..... ನಮ್ಮ ಕಿಡಕಿ ಚಿಕ್ಕದಾದ ಕಾರಣ ಒಳಗೆ ಬರಲಾರದೇ ಒದ್ದಾಡುತ್ತಿದ್ದ ಸೃಷ್ಟಿ ನನ್ನ ನೋಡಿ ಅದೇಕೋ ಒಂದು ಒಳ್ಳೆಯ ನಗೆ ಬೀರಿದ್ದನ್ನು ನೋಡಿ ನನಗೆ ಭಯವಾಯಿತು. ನನ್ನ ಕಾಣಲು ಬಂದ ಸೃಷ್ಟಿ ಕಿಡಕಿ ಹತ್ತಿರ ಬಂದು, ದಯವಿಟ್ಟು ಮನೆಯ ಬಾಗಿಲು ತೆರೆಯುವಂತೆ ಕೇಳಿದಳು. ನನಗೋ ಯಾಕಾದಾರೂ ಎ ಕಥೆಯನ್ನು ಓದಿದೆನಪ್ಪ ಎಂದು ಅನಿಸಿತು. ಸರಿ ಆಗಲಿ ಎಂದು ಒಂದು ಮನಸ್ಸು ಮಾಡಿ ಕಾಡವ ತೆರೆದು ಒಳಗೆ ಬ ಎಂದು ಕರೆದೆ.
 
ಸೃಷ್ಟಿ  : ನನಗೆ ತಿನ್ನಲು ಸ್ವಲ್ಪ ವಿಟಮಿನ್ ಕೊಡುತ್ತೀರ?
 
ನಾನು : ಮನೆಯಲ್ಲಿ ವಿಟಮಿನ್ ಇಲ್ಲ ಸೃಷ್ಟಿ.
 
ಸೃಷ್ಟಿ : ಸರಿ ನಂಗೆ ನೀರು ಸಾಕು. (ಎದ್ದು ನೇರವಾಗಿ ಬಚ್ಚಲು ಮನೆಗೆ ಹೋಗಿ ನೀರಿನಲ್ಲಿ ಆಟ ಆಡುತ್ತಾ ಕುಳಿತಳು)
 
ನಾನು : ಇಲ್ಲಿಗೆ ಏಕೆ ಬಂದೆ?
 
ಸೃಷ್ಟಿ : ನನ್ನನು ನನ್ನ ಅಪ್ಪ ಅಮ್ಮ ( ಸಪ್ತಾಗಿರಿವಾಸಿ) ಬಂಧಿಸಿ ಇಟ್ಟಿದ್ದರು. ಅದಕ್ಕೆ ನನ್ನ ರೆಕ್ಕೆ ಬಳಸಿ ಇಲ್ಲಿಗೆ ಹಾರಿ ಬಂದಿದ್ದೆ. ಮೊನ್ನೆ ಕಂಪ್ಯೂಟರ್ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ, ನೀವೊಬ್ಬರೇ ನನಗೆ ಸಹಾಯ ಮಾಡಬಹುದು ಎಂದು ಭಾವಿಸಿ ಬಂದಿದ್ದೇನೆ.
 
ನಾನು : ನನ್ನಿಂದ ನಿನಗೆ ಎಂಥ ಸಹಾಯ ಮಾರಯ್ತಿ?
 
ಸೃಷ್ಟಿ : ನನ್ನ ಪ್ರಾಣ ನಿನ್ನ ಕಯ್ಯಲ್ಲಿದೆ.
 
ನಾನು : (ನನ್ನ ಪ್ರಾಣವೂ ನಿನ್ನ ಕಯ್ಯಲ್ಲೇ ಇದೆ ಮಾರಯ್ತಿ:(()
 
ಸೃಷ್ಟಿ : ಹೆದರಬೇಡ ನಿನಗೆ ನಾನು ನಿನಗೆ ಏನು ಮಾಡುವದಿಲ್ಲ.
 
ನಾನು : ಸರಿ ನಿನ್ನ ಬಾಲವನ್ನು ನಿನ್ನ ಅಮ್ಮ ಕತ್ತರಿಸಿದ್ದರಲ್ಲ, ಮತ್ತೆ ಹೇಗೆ ಬೆಳೆಯಿತು? 
 
ಸೃಷ್ಟಿ : ಪೆದ್ದು! ನಾನು ಸಾಮಾನ್ಯದವಳಲ್ಲ, :) ಪಲ್ಲಿಗೆ ಬಾಲ ಕತ್ತರಿಸಿದರೆ ಮತ್ತೆ ಬೆಳೆಯುವುದನ್ನು ನೋಡಿಲ್ಲವೇ?
 
ನಾನು : ಅಂದರೆ ನೀನು ಪಲ್ಲಿಯ ಜಾತಿಯವಳೇ?
 
ಸೃಷ್ಟಿ : ಪ್ರಾಣಿಗಳಲ್ಲಿ ಜಾತಿ ಎಂಬ ಬೇಧಾ ಭಾವ ಇಲ್ಲ :) ಎಲ್ಲ ಮನುಜ ಮಾಡಿಕೊಂಡಿದ್ದು.
 
ನಾನು : ಸರಿ ಹೋಗ್ಲಿ ಬಿಡು:) ಮತ್ತೆ ನೀನು ಇಲ್ಲಿಗೆ ಬಂದ ವಿಚಾರ?
 
ಸೃಷ್ಟಿ : ಹೇಳುವದನ್ನೇ ಮರೆತೆ. ನನಗೆ ಯಾಕೋ ನನ್ನ ಸೃಷ್ಟಿಕರ್ತನನ್ನು ಕಂಡರೆ ಬಹಳ ಸಿಟ್ಟು. 
 
ನಾನು : ಯಾಕೆ ಹಾಗೆ ಹೇಳ್ತೀಯಾ? ಡಾ|| ವಿಶಾಲ್ ಒಳ್ಳೆಯವರಲ್ಲವೇ.???? ಅವರು ಅಂಥ ಯಾವ ತಪ್ಪನ್ನು ಮಾಡಿದ್ದರು?
 
 
ಸೃಷ್ಟಿ : ಅದಕ್ಕೆ ನಿನ್ನ ಪೆದ್ದು ಅಂದಿದ್ದು:) ನಾನು ಈಗ ಹೇಳುತ್ತಿರುವ ವಿಚಾರ ಸಪ್ತಗಿರಿಗಳ ಬಗ್ಗೆ:) ಆಯಪ್ಪ ತಾನೇ ನನ್ನ ಸೃಷ್ಟಿಸಿ, ನನ್ನ ಭಾರವನ್ನು ಡಾ|| ವಿಶಾಲ್ ತಲೆಯ ಮೇಲೆ ಕಟ್ಟಿದ್ದು... ಬರುತ್ತ ಬರುತ್ತ ನನ್ನ ಪಾತ್ರಕ್ಕೆ ಹೆಚ್ಚು ಹೆಚ್ಚು ಉಪ್ಪು ಖಾರ ಹಾಕಿ ವಿವಾದಕ್ಕೆ ಕಾರಣೀಭೂತನಾಗಿದ್ದು...
 
ನಾನು : ಹೌದಲ್ವಾ???!!!!!!
 
ಸೃಷ್ಟಿ : ನಿನ್ನೆ ಅವನ ಮನೆಗೆ ಹೋಗಿದ್ದೆ. ಬೇಗ ಕಥೆ ಮುಗಿಸು ಅಂತ ಹೇಳಿ ಬೆದರಿಕೆ ಹಾಕಿ ಬಂದಿದ್ದೇನೆ.. ಆದರೆ ಕಥೆ ಹೀಗೆ ಇರಬೇಕೆಂದೂ ಹೇಳಲು ಮರೆತೆ. ಬಹುಶ: ನನ್ನ ಕೊಂದು ಕಥೆಗೆ ವಿದಾಯ ಹೇಳಬಹುದು. ಅದಕ್ಕೆ ಮತ್ತೆ ಮನೆಗೆ ಹೋಗಿ ಅವನ ಕರೆದರೆ, ಅವನ ಮನೆ ಬೀಗ ಹಾಕಿತ್ತು:( ನಾನೇನು ಮಾಡಲಿ? ನನ್ನ ಜೀವ ಈಗ ನಿನ್ನ ಕಯ್ಯಲ್ಲಿ ಮಾರಾಯ.... ದಯವಿಟ್ಟು ನನಗೆ ಸಹಾಯ ಮಾಡು..
 
ನಾನು : ಸರಿ ಸಪ್ತಗಿರಿವಾಸಿಯವರ ನಂಬರ್ ನನ್ನ ಹತ್ತಿರ ಇದೆ. ಅವರನ್ನು ನಾನು ಕೇಳಿ ಕಥೆ ಏನಾಗಬಹುದು ಎಂದು ನಿನಗೆ ಹೇಳುತ್ತೇನೆ...
 
ಸೃಷ್ಟಿ : ಸರಿ ಏನೋ ಒಂದು ಮಾಡಪ್ಪ....
 
ನಾನು : (ಫೋನ್ ಕೈಗೆ ತೆಗೆದುಕೊಳ್ಳುತ್ತ ಡೈಯಲ್ ಮಾಡಿ) ಹಲೋ ಸಪ್ತಾಗಿರಿಯವರಾ?
 
ಸಪ್ತಗಿರಿ : ಅಲ್ಲ ಇದು ಸಪ್ತಗಿರಿವಾಸಿ:)
 
ನಾನು : ಹಲೋ ಸಾರ್ ನಾನು ನಿಮ್ಮ ಮೂಕ ಅಭಿಮಾನಿ. ನಿಮ್ಮ ಕಥೆ ಚೆನ್ನಾಗಿ ಮೂಡಿ ಬಂದಿದೆ:)
 
ಸೃಷ್ಟಿ : (ಮೆಲ್ಲಗೆ) ಚೆನ್ನಾಗಿದೆಯಾ... ನಿನ್ನ ಗತಿಯು ಈಗ ಚೆನ್ನಾಗಿದೆ....
 
ನಾನು : ಸಾರ್ ಮುಂದಿನ ಭಾಗ ಕೊನೇ ಎಂದು ಹೇಳಿದ್ದೀರಿ.. ಕಥೆ ಯಾವ ರೀತಿ ಬರುವ ಚಾನ್ಸ್ ಇದೆ ಸಾರ್. 
 
ಸಪ್ತಗಿರಿ : ಲೊ... ಯಾರಪ್ಪ ನೀನು, ಕಥೆ ಹಾಗಲ್ಲ ಲೀಕ್ ಮಾಡಕ್ಕೆ ಆಗಲ್ಲ. ನಾಳೆ ಹಾಕುತ್ತೇನೆ ಎಂದು ಹೇಳಿದ್ದೆನಲ್ಲ. ಅಲ್ಲೇ ಹೋಗಿ ನೋಡು.... (ಫೋನ್ ಕಟ್)
 
ನಾನು : ಸಾರ್ ಸಾರ್ ಸಾರ್:::::: (:(:(:(:(
 
ಸೃಷ್ಟಿ : ಬಹುಶ ನನ್ನ ಕೊಲ್ಲುವ ಪ್ಲಾನ್ ಮಾಡಿ ಸುಸ್ತಾಗಿರಬೇಕು. ಅದ್ಕೆ ಕಟ್ ಮಾಡಿದ್ರು..
 
ನಾನು : ಇನ್ನೂ ಮುಂದೆ ನೀನಾಯ್ತು ನಿನ್ನ ಸಪ್ತಗಿರಿ ಆಯ್ತು. ನನ್ನ್ ತಲೆ ತಿನ್ನ ಬೇಡ. ಹೋರ್ಡು ಬೇಗ ಇಲ್ಲಿಂದ. 
 
ಸೃಷ್ಟಿ : ಯಾಕೆ ನನ್ನ್ ಬಾಲದ ರುಚಿ ನೋಡೋ ಅಸೇನಾ? ಬಿಟ್ರೆ ಒಂದು ... ತಿಂಗಳಾದ್ರೂ ಎಳ್‌ಬಾರ್ದೂ:)
 
ನಾನು : ನಂಗೆ ಯಾಕೆ ಕಾಡ್ತೀಯಾ? ಹೋಗಿ ಅವ್ರನ್ನೇ ಕೇಳು. 
 
ಸೃಷ್ಟಿ : ಆಯಪ್ಪ ಮಾಡೋದ್ ಮಾಡಿಬಿಟ್ಟು ತಲೆ ಮರೆಸಿ ಕೊಂಡವ್ರೇ...
 
ನಾನು : ಸರಿ ಎನ್ ಮಾಡ್ಲಿ ಈಗ?
 
ಸೃಷ್ಟಿ : ಇನ್ನೊಂದ ಸಲ ಫೋನ್ ಮಾಡಿ ಕಥೆ ತಿಳ್ಕೊ. ಅಲ್ದೇ ನನ್ನ್ ಕೊಲೆ ಮಾಡಬೇಡ ಅಂತ ಬೇಡ್ಕೋ:) ಏನಾದ್ರೂ ನನ್ನ ಕೊಲೆ ಆಯ್ತೋ...,,, ದೆವ್ವ ಆಗಿ , ನಿನ್ನ ದೇಹ ಸೇರ್‌ಕೊಂಡು ...... ಅಷ್ಟೇ ಗೊತ್ತಲ್ಲ ಮುಂದೆ ನನ್ನ ಪವರ್ ಏನಂತ:)
 
ನಾನು : (ಮತ್ತೊಮ್ಮೆ ಡೈಯಲ್ ಮಾಡುತ್ತಾ) ಹಲೋ ಸಾರ್... ಸ್ವಲ್ಪ ನನ್ನ ಮಾತು ಕೇಳಿ... ದಯವಿಟ್ಟು ಕಥೆಯಲ್ಲಿ ಸೃಷ್ಟಿಯನ್ನು ಸಾಯಿಸಬೇಡಿ:) ಪ್ಲೀಸ್ ಪ್ಲೀಸ್ ಪ್ಲೀಸ್ :)
 
ಸಪ್ತಗಿರಿ : ಯಪ್ಪ ನಿನ್ ಯಾರು ನಂಗೆ ಕಥೆ ಹೀಗಿರ್ಬೇಕು ಹಾಗಿರ್ಬೇಕು ಅಂತ ಸಲಹೆ ಕೊಡ್ಲಿಕ್ಕೆ. ನೋಡೋಣ ನಾಳೆ ಏನು ಆಗುತ್ತೆ ಅಂತ. ದಯವಿಟ್ಟು ನಂಗೆ ಫೋನ್ ಮಾಡಿ ಸತಾಯಿಸಬೇಡ... ನಾನು ಇನ್ನೊಂದು ಹೊಸ ಕಥೆಗೆ ತಾಳ ಮೇಳ ಹಾಕಿ ವಿಚಾರ ಮಾಡುತ್ತಿದ್ದೇನೆ.... ಒಳ್ಳೇ ಐಡಿಯಾ ಬಂದಿತ್ತು. ನಿನ್ ಫೋನ್ ಮಾಡಿ ಎಲ್ಲ ಹಾಳು ಮಾಡ್ಬಿಟ್ಟೆ... ಬೈ ಬೈ:)
 
ನಾನು : ಸಾರ್ ಸಾರ್ ಸಾರ್:(((((((
 
(ಸೃಷ್ಟಿ ಆಗ್ತಾನೇ ಎದ್ದು ಮನೆಯಿಂದ ಹೊರ್ಗೆ ಎದ್ದು ಹೋದ್ಲು.) 
 
ನಾನು : ಸೃಷ್ಟಿ ನಿಲ್ಲು ಎಲ್ಲಿಗೆ ಹೋಗ್ತಿಯ? 
 
ಸೃಷ್ಟಿ : ಡ್ರೈವರ್ನ ಮುಗ್ಸಿ ಆಯ್ತು... ಈಗ ಡಾ: ಕಣ್ನನ್ ಅವ್ರನ್ನ ಮುಗಿಸ್‌ಬೇಕು... ಬೈ ಬೈ... ಬಹುಶ ಮುಂದಿನ ಪಾಳಿ ನಿನ್ನದು... ಹಾ ಹಾ ಹಾ :))))
 
ನಾನು : :(((((
 
(ಮುಂದೆ ರಾತ್ರಿ ಸಪ್ತಗಿರಿವಾಸಿಗಳಿಗೆ ಮೆಸೇಜ್ ಮಾಡಿ ಮಾಡಿ ಬೇಡ್ಕೊಂಡಿದಕ್ಕೆ,, ಪಾಪ ನನ್ನ ಕಷ್ಟ ನೋಡಿ, ಸುಖಾಂತ್ಯವನ್ನು ಬರೆದ್ರು...))
 
 
 

ಅಲ್ಲಿಂದ ಮುಂದೆ ಸೃಷ್ಟಿ ಪಸ್ಚಿಮ ಘಟ್ಟಕ್ಕೆ ಹೋಗುವ ಮುನ್ನ ಬಂದು ನಂಗೆ ಧನ್ಯವಾದ ಹೇಳಿ, ಬೈ ಎಂದು ಹೊರಟಳು.... ಅವಳ ನಂಬರ್ ತಗೊಂಡಿದ್ದೇನೆ... ಆವಾಗ ಆವಾಗ ಮೆಸೇಜ್ ಮಾಡ್ತಾ ಇರ್ತೀನಿ ,, ಅವಳು ಮಾಡ್ತಾಳೆ:) ಒಟ್ಟಿನಲ್ಲಿ ಒಳ್ಳೆಯ ಕಥೆಯೊಂದಿಗೆ ಮೂಡಿ ಬಂದ ಸಪ್ತಗಿರಿಗಳಿಗೆ ವಂದಿಸುತ್ತಾ....... ಮುಗಿಸುತ್ತೇನೆ:)

Rating
No votes yet

Comments