ಸಮಯದ ಕಲ್ಪನೆ!

ಸಮಯದ ಕಲ್ಪನೆ!

ನಿನ್ನೆ ಭಾನುವಾರ. ಸುಮ್ನೆ ನೆಟ್ ಲ್ಲಿ ಅದ್ದಡ್ತಾ ಇದ್ದಾಗ ಕೆಲ ವಿಷಯಗಳು ಸಿಕ್ವು. ಹತ್ತು ನಿಮಿಷದ ಟೈಪು :) . ಸರಿ ಮಾಡಿದೆ.

ಇದು ಈ ಕೆಳಗಿನ ಲಿನ್ಕ್ಗಳಿಗೆ ಸಂಬಂದಿತವೂ ಹೌದು!
http://www.sampada.net/blog/savithru/22/01/2009/15943
http://www.sampada.net/blog/vasu565/04/02/2009/16452
http://www.sampada.net/blog/%E0%B2%B9%E0%B2%B0%E0%B3%8D%E0%B2%B7/07/02/2009/16611
....................................................................................................................

ನಿಮಿಷ ಅನ್ನುವುದು ಕಾಲದ ಅತ್ಯಂತ ಸಣ್ಣ ಯುನಿಟ್. ಇದು ಕಣ್ಣು ರೆಪ್ಪೆ ಮಿಟುಕಿಸುವಷ್ಟು ಸಮಯ.
೧೫ ನಿಮಿಷಗಳು = ೧ ಕಾಷ್ಠ
೩೦ ಕಾಷ್ಠ ಗಳಿಗೆ ೧ ಕಲಾ.
೩೦ ಕಲೆಗಳಿಗೆ ಒಂದು ಮುಹೂರ್ತ.
೩೦ ಮುಹುರ್ತಗಳಿಗೆ ೧ ದಿನ.
೩೦ ದಿನಗಳಿಗೆ ೧ ತಿಂಗಳು.
೧ ತಿಂಗಳನ್ನು ೨ ಪಕ್ಷಗಳನ್ನಾಗಿ ವಿಭಾಗಿಸಲಾಗಿದೆ. ( ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ)
೬ ತಿಂಗಳಿಗೆ ೧ ಆಯನ
೧ ವರ್ಷದಲ್ಲಿ ೨ ಆಯನಗಳು ಇರುತ್ತವೆ.
೩೬೦ ದಿನಗಳಿಗೆ ೧ ವರ್ಷ.
ಅಂತಹ ೩೬೦ ಮಾನವ ವರ್ಷಗಳಿಗೆ ಒಂದು ದೈವ ವರ್ಷ.

ಒಟ್ಟು ನಾಲ್ಕು ಯುಗಗಳಿವೆ.

ಸತ್ಯ ಯುಗ = ೪೦೦೦ ದೈವ ವರ್ಷಗಳು
ತ್ರೇತಾ ಯುಗ = ೩೦೦೦ ದೈವ ವರ್ಷಗಳು
ದ್ವಾಪರ ಯುಗ = ೨೦೦೦ ದೈವ ವರ್ಷಗಳು
ಕಲಿ ಯುಗ = ೧೦೦೦ ದೈವ ವರ್ಷಗಳು

ಈ ಯುಗಗಳ ನಡುವಿನ ಸಂಧ್ಯೆಗಳು ಮತ್ತು ಸಂಧ್ಯಾಂಶಗಳು ೨೦೦೦ ದೈವ ವರ್ಷಗಳು. ಹಾಗಾಗು ನಾಲ್ಕು ಯುಗಗಳನ್ನು ಸೇರಿಸಿದರೆ ೧೨ ದೈವ ವರ್ಷಗಳಾಗುತ್ತವೆ.

ಒಂದು ಕಲ್ಪದಲ್ಲಿ ನಾಲ್ಕು ಯುಗಗಳು ೧೦೦೦ ಬಾರು ಬರ್ತವೆ. ಮತ್ತು ಒಂದು ಕಲ್ಪದಲ್ಲೂ ೧೪ ಮನ್ವಂತರಗಳು ಬರ್ತವೆ. ಹಾಗಾಗಿ ಪ್ರತಿ ಮನ್ವಂತರದಲ್ಲಿ ಒಂದೊಂದು ಯುಗವೂ ೭೧ ಬಾರಿ ಬರುತ್ತವೆ.

ಒಂದು ಕಲ್ಪ ಅಂದರೆ ಬ್ರಹ್ಮನ ಒಂದು ದಿನ.
೧೦೦೦ ಕಲ್ಪಗಳಿಗೆ ಬ್ರಹ್ಮನ ಒಂದು ವರ್ಷ
೮೦೦೦ ಬ್ರಹ್ಮನ ವರ್ಷಗಳಿಗೆ ಒಂದು ಬ್ರಹ್ಮನ ಯುಗ.
೧೦೦೦ ಬ್ರಹ್ಮನ ಯುಗಗಳಿಗೆ ಇಂದು ಸಾವನ.
ಬ್ರಹ್ಮನ ಆಯಸ್ಸು ೩೦೦೦ ಸಾವನಗಳು. ಈ ಬ್ರಹ್ಮನ ಆಯಸ್ಸಿನ ಕಾಲವನ್ನು ತ್ರಿವೃತ ಅನ್ನುತ್ತಾರೆ.

ವಿಷ್ಣುವಿನ ಪ್ರತಿ ದಿನದಲ್ಲಿ ಒಬ್ಬ ಬ್ರಹ್ಮ ಹುಟ್ಟುತ್ತಾನೆ ಮತ್ತು ಸಾಯುತ್ತಾನೆ.

ಶಿವನ ಒಂದು ದಿನದಲ್ಲಿ ಒಬ್ಬ ವಿಷ್ಣು ಹುಟ್ಟಿ ಸಾಯುತ್ತಾನೆ. .

ಶಿವನೋ ಸ್ವಯಂಭೂ!! ಅವನಿಗೆ ಕಾಲವೇ?! ಅವನೇ ಕಾಲ!

ಮೂಲ :: ಶಿವ ಪುರಾಣ

Rating
Average: 5 (1 vote)