ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ

ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ

--> ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ <--

1. ಕಡಲತೀರದಲಿ ಬರೆದೆ ಆಕೆಯ ಹೆಸರು. ಮೊದಲಾಗಿ ನಾನೇ ಅಳಿಸಿದೆ. ನಂತರ ಬಂದ ಅಲೆಯೊಂದು ಸಹಾ ಅದನ್ನು ನಿರ್ದಾಕ್ಷಿಣ್ಯವಾಗಿ ನಾಶಮಾಡಿ ವಾಪಾಸಾಯಿತು!

2. ಕಡಲ ನೀರು ಉಪ್ಪಾಗಿದೆ. ಹೃದಯವು ಕುಸಿದಾಗ ಕಣ್ಣುಗಳಿಂದ ಹೊರಬರುವ ದುಃಖಾಶೃಗಳೂ ಉಪ್ಪು. ಕಡಲಿನಲ್ಲಾಡುವಾಗ ಬರುವ ಕಣ್ಣೀರನ್ನು ಯಾರೂ ಗುರುತಿಸಲಾಗುವುದಿಲ್ಲ. ಅಷ್ಟೊಂದು ದುರದೃಷ್ಟವಂತರ ಕಣ್ಣೀರಿನಿಂದ ಸಮುದ್ರ ಉಪ್ಪಾಗಿದೆಯೇ ಅಥವಾ ಅವರ ಕಣ್ಣೀರಿನಲ್ಲಿರುವ ದುಃಖಕ್ಕೆ ಸಮುದ್ರವೇ ಉಪ್ಪನ್ನು ಸೇರಿಸುವುದೆ?
-> ನ. ಗೋ.ಪ್ರ.

Rating
No votes yet