ಸಮ್ಮಿಲನ

ಸಮ್ಮಿಲನ

ಮೈ ಕೋರೈಸೋ ಚಳಿ. ಟ್ರೈನಿನಲ್ಲಿ ಬರುವಾಗ ಮೈಗೆಲ್ಲಾ ಚಳಿ ಅಡರಿಕೊಂಡಿತ್ತು.ಎಲ್ಲೋ ಮೂಲೆಯಲ್ಲಿದ್ದ ಸಿಖ್ ಪ್ರಯಾಣಿಕ ಕಿಟಕಿ ಬಾಗಿಲನ್ನು ತೆಗೆದು ಮಲ್ಕೊಂಡಿದ್ದ. ಅವನಿಗೆ ಚಳಿ ಆಗ್ತಾ ಇತ್ತೊ ಇಲ್ವೊ ಗೊತ್ತಿಲ್ಲ, ಆದ್ರೆ ನನಗೆ ಮೈ ಕೈ ನಡುಕ. ಬೆಳಗಿನ ಜಾವ 4 ಗಂಟೆ ಹೆಗಲ ಮೇಲೆ ಭಾರದ ಬ್ಯಾಗ್ ಹಾಕ್ಕೊಂಡು ಇಳ್ದೆ. ಅಲ್ಲಿ ಗಾಳಿಗೆ ಮೈಗೆಲ್ಲಾ ಕಚಗುಳಿ ಇಟ್ಟಂಗೆ ಆಯ್ತು. ಅಬ್ಬಾ! ಎಂಥಾ ಚಳಿ,ಆದ್ರೂ ಮನಸ್ಸು ಹೇಳ್ತಾ ಇತ್ತು ಮೊದಲಿಗಿಂತ ಈಗ ಚಳಿ ಕಡಿಮೆ ಇದೆ ಅಂತ. ಒಮ್ಮೆ ನಕ್ಕು,ಕೈಗಳನ್ನ ಉಜ್ಜುತ್ತ ಬಿಸಿ ಗಾಳಿಯನ್ನ ಕೈಯೊಳಗೆ ಊದುತ್ತ ಮೆಲ್ಲಗೆ ಹೊರಟೆ. ಆ ಸ್ಟೇಷನ್‍ನಲ್ಲಿ ಇಳ್ದಿದ್ದು ನಾನೊಬ್ಬನೆ.

ಟ್ರೈನ್ ತನ್ನ ದಾರಿ ಹಿಡಿದು ಸಾಗಿತು.ರೀಬೋಕ್ ಶೂ ಒಳಗಿನ ಕಾಲು ಜುಂ ಹಿಡಿದಿತ್ತು. ಜರ್ಮನಿಯಿಂದ ತಂದಿದ್ದ ಜರ್ಕಿನ್ನು ಅಂತಹ ಕೊರೆಯುವ ಚಳಿಯಲ್ಲಿ ಕೂಡ ನನ್ನ ಮೈಯನ್ನ ಬೆಚ್ಚಗೆ ಇಡಬಹುದು ಅಂತ ಯೋಚನೆ ಮಾಡಿ ಬ್ಯಾಕ್‍ಪ್ಯಾಕ್‍ನಲ್ಲಿ ಇದ್ದ ಲೆದರ್ ಜ್ಯಾಕೆಟ್ ತೆಗೆದು ಹಾಕ್ಕೊಂಡೆ. ನನ್ನ ಊಹೆ ಸುಳ್ಳು ಆಗಲಿಲ್ಲ. ಕೈಗಳಿಗೆ ಗ್ಲೌಸ್ ಹಾಕ್ಕೊಂಡು ಮೆಲ್ಲಗೆ ನಡೆಯುತ್ತ ಪ್ರಕೃತಿಯ ಸೌಂದರ್ಯ ಸವಿಯುತ್ತ ಹೊರಟೆ. ಭಾರವಾದ ಹೆಜ್ಜೆ,ನಾನು ಈ ಜಾಗಕ್ಕೆ ಮರಳಿ ಬಂದಿದ್ದು 15 ವರ್ಷದ ನಂತರ. ಎಂಥಾ ಸೊಗಸಾದ ಜಾಗ. ಪ್ರಕೃತಿ ಮಡಿಲಲ್ಲಿ ಸ್ವಚ್ಛಂದವಾಗಿ ಮಿನುಗಿದ ನಮ್ಮ ಹರೆಯದ ಮನಸ್ಸುಗಳು. ನನ್ನಲ್ಲಿ ಪ್ರೇಮ ಲಹರಿ ಮೂಡಿಸಿದ ಪ್ರಕೃತಿ ಇದು. ಆ ಪ್ರೇಮ ಲಹರಿಯಲ್ಲಿ ಬೆಸೆದ ನನ್ನ 'ವಸುಧಾ'ಗೆ ನನ್ನಿಂದ ಇವತ್ತು ಇಬ್ಬರು ಮಕ್ಕಳು.ಅವಳು ಪ್ರಚಂಡ ಹೋಮ್ ಮೇಕರ್.ಅಬ್ಬಾ! ಏನೆಲ್ಲಾ ಪಾತ್ರ ಅವಳದು.ಮೊದಲಿಂದಾನು ಹೀಗೆ ಅವಳು.ಬಹಳ ಕೇರಿಂಗ್ ಅಂಡ್ ಲವಿಂಗ್. I love her too much . I mean we love each other very much. ಅವಳ ನೆನಪೇ ಹಾಗೆ, ಬಂದ್ರೆ ನಿದ್ದೆಯಲ್ಲೂ ಮುಗುಳುನಗುತ್ತೆ ಮನಸ್ಸು. ಹೀಗೆ ಹೇಳಿದ್ರೆ ನಂದು ಲವ್ ಮ್ಯಾರೇಜ್ ಅಂತ ಅಲ್ಲ ನಂದು purely arranged marriage. 'ಪ್ರೇಮ ಲಹರಿ' ಅಂದ್ರೆ ಒಂದು ಸುಂದರ ಕಲ್ಪನೆ. ಅದನ್ನ ಮೂಡಿಸಿದ್ದೇ ಈ ಪ್ರಕೃತಿ ನನಗೆ. ಈ 15 ವರ್ಷದಲ್ಲಿ ನಾನು ದೇಶ ವಿದೇಶದಲ್ಲಿ ಕೆಲಸ ಮಾಡಿದ್ದೀನಿ. Almost 8 ವರ್ಷಗಳನ್ನ ಹಲವಾರು ದೇಶಗಳಲ್ಲಿ ಕಳ್ದಿದೀನಿ, ಆದ್ರೆ ಈ ಪ್ರಕೃತಿ ಸೌಂದರ್ಯ ನನಗೆ ಯಾವಾಗ್ಲೂ ಕಾಡ್ತಾನೇ ಇತ್ತು. ಈಗ್ಗೆ 1 ತಿಂಗಳ ಹಿಂದೆ ನನಗೊಂದು ಮೇಲ್ ಬಂತು. ನಾನು ಓದಿರೋ ಕಾಲೇಜ್‍ನ ಕಲ್ಚರಲ್ ಡಿಪಾರ್ಟಮೆಂಟ್ ಇಂದ "OLD STUDENTS MEET" ಅಂತ ಸಬ್ಜೆಕ್ಟ್ ಲೈನ್. ಬೇಜಾರಲ್ಲೇ ಓಪನ್ ಮಾಡಿದ್ದ ನನಗೆ ಒಳಗಡೆಗೆ ಒಂದು ಆಶ್ಚರ್ಯ ಇದ್ದಿದ್ದು ಗೊತ್ತಾಗಿದ್ದು. ಇದು ನಮ್ ಬ್ಯಾಚ್‍ನ ಸ್ಟೂಡೆಂಟ್ಸ್‍ಗೆ ಮಾತ್ರ ಮಾಡಿರೋ " OLD STUDENTS MEET " . ನಮ್ ಬ್ಯಾಚ್,ನಮ್ ಸೀನಿಯರ್ಸ್,ಅಂಡ್ ನಮ್ ಜೂನಿಯರ್ಸ್‍ಗೆ ಅಂತ ಸ್ಪೆಷಲ್ ಆಗಿ ಮಾಡಿರೋ ಮೀಟ್. ಮೇಲ್ ಕಳಿಸಿದ್ದ ಹುಡುಗಿಯ ರೈಟಿಂಗ್ ಬಹಳ ಅದ್ಭುತವಾಗಿತ್ತು. ಇಷ್ಟ ಆಯ್ತು. ಅವಳು ಕೇಳಿದ್ಲು ಅದರಲ್ಲಿ ನೀವೇನಾದ್ರು ಕಲ್ಚರಲ್ ಆಕ್ಟಿವಿಟೀಸ್‍ನಲ್ಲಿ ಭಾಗವಹಿಸುತ್ತೀರಾ ಅಂತ. ಸುಮ್ನೆ ಇರಲಿ ಅಂತ ಯೆಸ್ ಅಂದಿದ್ದೆ. ಅವಳ ರಿಪ್ಲೇ ವಾಸ್ ಶಾಕಿಂಗ್. ನಮ್ ಕೈಯಲ್ಲಿ ಒಂದು ನಾಟಕ ಮಾಡಿಸೋ ಪ್ಲಾನ್ ಅವರಿಗೆಲ್ಲಾ. ಅದರ ಕಥೆ ನನಗೆ ಕಳಿಸಿದ್ಲು. ಏನೋ ಥ್ರಿಲ್ ಅನ್ಸ್ತು. ನನ್ ಬ್ಯಾಚ್ ಮೇಟ್ಸ್‍ಗೆಲ್ಲಾ ಮೆಸೇಜ್ ಮುಟ್ಟಿಸಿದೆ. ಅವರಿಗೂ ಹಾಗೆ ಮೇಲ್ ಬಂದಿತ್ತಂತೆ,ಆದ್ರೆ ಅವರು ಯಾರು ರಿಪ್ಲೇ ಮಾಡ್ಲಿಲ್ಲ ಅಂದ್ರು. ಅವರಿಗೆಲ್ಲಾ ಅಲ್ಲಿಗೆ ಬರೋಕೆ ಟೈಂ ಇರಲಿಲ್ಲ. ಹಾಗಂತ ನಾನೇನು ಖಾಲಿ ಇರಲಿಲ್ಲ. ನನಗೂ ಕೆಲಸ ಇತ್ತು. ಆದ್ರೆ ಯಾಕೋ ಗೊತ್ತಿಲ್ಲ ನನಗೆ ಅಲ್ಲಿಗೆ ಹೋಗ್ಬೇಕು ಅನ್ನೋ ತುಡಿತ ಜಾಸ್ತಿ ಆಯ್ತು. ಆ ಹುಡುಗಿ ಎರಡು ಮೂರು ರಿಮೈಂಡರ್ ಹಾಕಿದ್ಮೇಲೆ ನಾನು ರಿಪ್ಲೇ ಮಾಡಿದೆ. I will come on 25.01.2013 ಅಂತ ಮೀಟ್ ಇದ್ದಿದ್ದು 27.01.2013. ಹುಡುಗಿ ಕಾಲ್ ಮಾಡಿ ನನಗೆ ಡಿಟೇಲ್ಸ್ ಎಲ್ಲಾ ಕೊಟ್ಟು ನನ್ ಪಾಲಿನ ಸ್ಕ್ರಿಪ್ಟ್‍ಗೆ ಡೈಲಾಗ್ಸ್ ಕಳಿಸಿದ್ಲು. ಅದಕ್ಕೇ ನಾನು ಇಂದು ಈ ಚಳಿಯಲ್ಲಿ ಹಾಜರ್ ಆಗಿದ್ದು. ಸ್ಟೇಷನ್ ಇಂದ ನಮ್ ಕಾಲೇಜ್‍ಗೆ ಏನಿಲ್ಲಾ ಅಂದ್ರು 8 ಕಿ.ಮೀ.ಆ ಊರಲ್ಲಿ ಒಂದು ಒಳ್ಳೇ ಲಾಡ್ಜ್ ಇತ್ತು. ಅದನ್ನ ಮೊದಲೇ ಬುಕ್ ಮಾಡಿದ್ದೆ. ಅದು ಸ್ಟೇಷನ್ ಹತ್ತಿರಾನೇ ಇತ್ತು. ನನಗೆ ಈಗ ಊರು ಸ್ವಲ್ಪ ಕಸಿವಿಸಿ ಅನ್ನಿಸಿತು. ಆದ್ರೆ ಅದೇ ಜಾಗದಲ್ಲಿ ಕೂತು ಹರಟೆ ಹೊಡೆದು, ಜೂನಿಯರ್ ಹುಡುಗಿಯರಿಗೆ ಕಾಳು ಹಾಕುತ್ತಾ, ಸಿಗರೇಟ್ ಸೇದುತ್ತಿದ್ದೆವು. ಹೋಟೆಲ್‍ಗೆ ಹೋದೆ ಚೆಕ್ ಇನ್ ಮಾಡಿ ನಿದ್ದೆ ಮಾಡಿದೆ. ಎದ್ದಾಗ 9.30 ಆಗಿತ್ತು. ಕಾಲೇಜ್‍ಗೆ 11 ಗಂಟೆಗೆ ಬರ್ತೀನಿ ಅಂತ ಹೇಳಿದ್ದೆ. ಸ್ನಾನ ಮಾಡ್ಕೊಂಡು ರೆಡಿ ಆಗಿ ಹೊರಗಡೆ ಬಂದಾಗ ಗಂಟೆ 10.15. ನಮ್ ಖಾಯಂ ಬೀಡಾ ಅಂಗಡಿಗೆ ಹೋದೆ. "ಏನು ಶ್ಯಾಮಣ್ಣ ಹೇಗಿದ್ದೀರಾ ಅಂದೆ". ಶ್ಯಾಮಣ್ಣನಿಗೆ ಆಗ್ಲೇ ಬಹಳಷ್ಟು ವಯಸ್ಸಾಗಿದೆ ಅನ್ನಿಸ್ತಾ ಇತ್ತು. ಅವರಿಗೆ ಗೊತ್ತಾಗ್ಲಿಲ್ಲ. ಹೇಳಪ್ಪಾ ಏನು ಬೇಕು ಅಂದ್ರು. ನನ್ ಪಾಕೇಟ್ನಲ್ಲಿ ಇಂಪೋರ್ಟೆಡ್ ಸಿಗರೇಟ್ ಇದ್ರೂ, ಅಲ್ಲಿನ ಸಿಗರೇಟ್ ಸೇದಬೇಕು ಅನ್ನಿಸಿತು. ನನ್ ಬ್ರಾಂಡ್ ತೊಗೊಂಡು,ಆಟೋ ಹಿಡ್ಕೊಂಡು ಹೊರಟೆ ಕಾಲೇಜ್ ಕಡೆಗೆ. ಉಳ್ದಿದ್ದೆಲ್ಲಾ ಜಸ್ಟ್ ಮಾತು ಕತೆ ಲೆಕ್ಚರರ್ಸ್ ಜೊತೆಗೆ, ಆಫೀಸ್ ಅಸಿಸ್ಟೆಂಟ್ಸ್ ಜೊತೆಗೆ. ಜೂನಿಯರ್ಸ್‍ಗೆ ಅಡ್ರೆಸ್ ಮಾಡೋಕೆ ಹೇಳಿದ್ರು ನಮ್ ಪ್ರೊಫೆಸರ್. ಅದನ್ನೆಲ್ಲಾ ಮಾಡಿದೆ. ಒಂದೆರಡು ದಿನ ರಿಹರ್ಸಲ್ ಮಾಡಿ, ಡ್ರಾಮಾಗೆ ಎಲ್ಲಾ ರೆಡಿ ಆಗಿದ್ವಿ. ಗೊತ್ತಿಲ್ಲದಂಗೆ ನಾನು ಅಲ್ಲಿ ಒಂದು ಅಟ್ರಾಕ್ಷನ್ ಪಾಯಿಂಟ್ ಆಗಿದ್ದೆ. ನಮ್ ಬ್ಯಾಚಿಂದ ನಾನು ಗೌತಮಿ ಬಿಟ್ರೆ ಮತ್ತ್ಯಾರೂ ಬಂದಿರಲಿಲ್ಲ. ಅವಳಿಗೆ 10 ವರ್ಷದ ಮಗು ಇತ್ತು. ಹಾಗಾಗಿ ಅವಳು ಸುಮ್ಮನೆ ವೀಕ್ಷಕಳಾಗಿದ್ದಳು. ನಮ್ಮ ಸೀನಿಯರ್ಸ್ ಸುಳಿವಿರಲಿಲ್ಲ. ಜೂನಿಯರ್ಸ್ ಬಂದಿದ್ರೂ ಹೆಸರಿಗಷ್ಟೇ. ಒಂದೊಳ್ಳೆ ಡ್ರಾಮಾ ಆಯ್ತು. ಒಳ್ಳೇ ಪ್ರೋಗ್ರಾಂ ಇತ್ತು. ಚೆನ್ನಾಗಿ ಆರ್ಗನೈಜ್ ಮಾಡಿದ್ರು. ಎಲ್ಲಾ ಪ್ರೋಗ್ರಾಂ ಮುಗಿಸಿಕೊಂಡು ವಾಪಸ್ ಹೊರಟಾಗ ಮನಸ್ಸಲ್ಲಿ ಏನೋ ಸಂಚಲನ.ಮೆಲ್ಲಗೆ ನಡ್ಕೊಂಡು ಬಂದೆ ಸ್ಟೇಷನ್ ಕಡೆಗೆ. ಸ್ಟೇಷನ್‍ನಲ್ಲಿ ಸಿಕ್ಕಾಪಟ್ಟೆ ಗದ್ದಲ ಇತ್ತು. ಸಖತ್ ಗಲಾಟೆ ಮಾಡ್ತಾ ಇದ್ರು ಮಿಡಲ್ ಏಜ್ಡ್ ಜಂಟ್ಸ್ ಅಂಡ್ ಲೇಡೀಸ್. ಕಿರುಚಾಟ,ಹುಡುಗಾಟ,ಗುದ್ದಾಟ,ಎಲ್ಲಾ ಇತ್ತು.ಬೇಸರದಲ್ಲೇ ಈ ಪ್ರಕೃತಿಯನ್ನ ಎಂಜಾಯ್ ಮಾಡ್ತಾ ಕುಳಿತಿದ್ದೆ.ಸಡೆನ್ ಆಗಿ ಒಂದು ಫೆಮಿಲಿಯರ್ ವಾಯ್ಸ್ ಕೇಳಿಸ್ತು.ತಿರುಗಿದೆ,ಆ ಗುಂಪಿನಂದಲೇ ಬಂದಿದ್ದು ಅಂತ ನನಗೆ ಗೊತ್ತಾಯ್ತು. ಮೆಲ್ಲಗೆ ನಡೆಯುತ್ತ ಹೋದೆ. "ಹೇ ಚೇತು ನೀನು"ಶಾಕ್ ಆಗಿದ್ದೆ ನಾನು. ನನ್ ಬ್ಯಾಚ್ ಮೇಟ್ಸ್ ಎಲ್ರೂ ಇದ್ರು. ಅವರು ಮೀಟ್‍ಗೆ ಬಂದಿರಲಿಲ್ಲ ಅಂತ ಬೇಜಾರಾಗಿತ್ತು. ಎಲ್ಲರೂ ಒಬ್ಬರನ್ನೊಬ್ಬರು ಮಾತಾಡ್ಸಿದ್ವಿ.  ಅವರಿಗೆ ಕೇಳ್ದೆ ಯಾಕ್ರೋ ಪ್ರೋಗ್ರಾಂಗೆ ಬರ್ಲಿಲ್ಲ ಅಂತ. ಪ್ರೋಗ್ರಾಂಗೆ ಬರಬೇಕು ಅಂತಾನೇ ಎಲ್ಲರೂ ಬಂದ್ವಿ, ಆದ್ರೆ ಸ್ಟೇಷನ್‍ನಲ್ಲೇ ಮೀಟ್ ಆದ್ವಿ, ಸಡೆನ್ ಆಗಿ ನಮ್ ಪ್ಲಾನ್ ಚೇಂಜ್ ಆಗಿ, ಬೇರೆ ಎನೋ ಕೆಲಸ ಮಾಡಿದ್ವಿ. ನೀನು ಎಲ್ಲೋ ಹೋಗಿದ್ದಿ? We tried to reach you . ನಿನ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. oh Shit, ಆಫೀಸ್ ಕಾಲ್ ಬರಬಹುದು ಅಂತ ಸ್ವಿಚ್ ಆಫ್ ಮಾಡಿ, ಪರ್ಸನಲ್ ನಂಬರ್ ತೊಗೊಂಡು ಬಂದಿದ್ದೆ. ಎಂತಹ ಮಿಸ್ಟೇಕ್ ಆಯ್ತು ಅನ್ಕೊಂಡೆ. ಪ್ರೋಗ್ರಾಂನ ಕಥೆಯೆಲ್ಲಾ ಹೇಳಿದೆ. ಅವರಿಗೆ ಕೇಳಿದೆ ಏನು ಮಾಡಿದ್ರಿ ನೀವು ಇಲ್ಲಿ ಬಂದು. ಎಲ್ಲರೂ ಒಮ್ಮೆ ಒಬ್ಬರನ್ನೊಬ್ಬರು ನೋಡ್ಕೊಂಡು ಏನೋ ಡಿಸೈಡ್ ಮಾಡಿದ್ರು. ನನಗೆ ಗೊತ್ತಾಗ್ಲಿಲ್ಲ. ಚೇತು ಮೊಬೈಲ್ ಕೊಟ್ಟ "ನಿಮ್ ಬಾಸ್‍ಗೆ ಕಾಲ್ ಮಾಡಿ ಹೇಳು ನಾಡಿದ್ದು ಬರ್ತೀನಿ ಅಂತ". ಆಯಸ್ಕಾಂತದಂತೆ ಆತನ ಮಾತಿಗೆ ಮರುಳಾಗಿ ಕಾಲ್ ಮಾಡಿದೆ.

ಎಲ್ಲರೂ ಹೊರಟೆವು.ಟ್ರೈನ್ ಬಂದು ಹೋಗಿದ್ದ ಸದ್ದು ಕೇಳ್ತಾ ಇತ್ತು. ಸುಮ್ಮನೆ ಕಾಡಲ್ಲಿ ಹೋಗ್ತಾ ಇದ್ವಿ. ನನ್ನನ್ನು ಕರ್ಕೊಂಡು ಹೋಗ್ತಾ ಇದ್ದ ಗುಂಪಲ್ಲಿ ಏನೋ ಸಾಧಿಸಿದ ಕಳೆ ಇತ್ತು. ಅವರಲ್ಲಿ ಆ ಉತ್ಸಾಹ ಕುಗ್ಗಿರಲಿಲ್ಲ. ನಾವು ತಲುಪಿದ್ದು ಭವ್ಯ ಕಾಡಿನ ಮಧ್ಯೆ ಇದ್ದ ಒಂದು ವಿಶಾಲವಾದ ಅಂಗಳಕ್ಕೆ. ಅರೆ, ಇದು ಅದೇ ಅಂಗಳ. ನಾವು ಓದುತ್ತಿದ್ದಾಗ ನಾವೆಲ್ಲಾ ಇಲ್ಲಿ ಬಂದು ಎಣ್ಣೆ ಹೊಡೆದು, ನೈಟ್ ಕ್ಯಾಂಪ್ ಮಾಡ್ತಾ ಇದ್ದ ಜಾಗ. ಆದ್ರೆ ಈಗ ಎಲ್ಲಾ ಬದಲಾಗಿದೆ. ಅಲ್ಲಿ 3 ರೂಂನ ಒಂದು ಸ್ಕೂಲ್ ಇದೆ. ಅಲ್ಲಿ ಕಾಡಿನ ಸೋಲಿಗರ ಮಕ್ಕಳು ಮಣ್ಣಿಂದ, ಕಟ್ಟಿಗೆಯಿಂದ, ಕಾಗದದಿಂದ, ಹೀಗೆ ಕಾಡಿನಲ್ಲಿ ಸಿಗುವ ವಸ್ತುಗಳಿಂದ ಹಲವಾರು ಸಾಮಾನುಗಳನ್ನು ಮಾಡ್ತಾ ಇದ್ರು. ರೂಂನಲ್ಲಿ ಕೆಲವರಿಗೆ ಪಾಠ ನಡೀತಾ ಇತ್ತು. ನಮ್ ಜೂನಿಯರ್ ಚಂದ್ರು ಇದ್ದ ಹಾಗೆ ಇದ್ದ ಆತ. ಅರೆ,ಹಾಗೆ ಏನು ಆತನೇ.

ಬೆಪ್ಪಾಗಿ ಒಮ್ಮೆ ನೋಡಿದೆ. ತಲೆ ಅಲ್ಲಾಡಿಸಿ ಹೂಂ ಅಂದ್ಲು ಗೌರಿ. ಅಂಗಳದ ತುಂಬೆಲ್ಲಾ ಸೋಲಿಗರು ಮಾಡಿದ್ದ ಕಲಾಕೃತಿಗಳೇ ರಾರಾಜಿಸುತ್ತಿದ್ದವು. ಅದು ಮಕ್ಕಳ ತಾಯಿಯ ಭವ್ಯ "ಸಮ್ಮಿಲನ". ಪ್ರಕೃತಿಯನ್ನು ತಾಯಿಯಂತೆ ಪ್ರೀತಿಸುವ ಕಾಡಿನ ಮಕ್ಕಳ ಹಾರೈಕೆ. ಕ್ಷಣಾರ್ಧದಲ್ಲಿ ಕಣ್ಣೀರು ಜಿನುಗಿತು.ಎಂಥಾ "ಸಮ್ಮಿಲನ" ಕಳ್ಕೊಂಡೆ ನಾನು. ಹೌದು ಈಗ ನೆನಪಾಯ್ತು  10 ವರ್ಷದ ಕೆಳಗೆ ಚೇತು ನನಗೊಂದು ಮೇಲ್ ಕಳಿಸಿದ್ದ, " We are venturing unique, will you be part of it ? “ನನಗೆ ರಿಪ್ಲೇ ಕಳಿಸೊ ಮನಸ್ಸಾಗಿರಲಿಲ್ಲ. ಸುಮ್ಮನೆ ಇದ್ದೆ. ಅವರು ಮಾಡಿದ್ದ ಆ ಗುಂಪಿನ ಹೆಸರು "ಸಮ್ಮಿಲನ". ಒಂದು ಅರ್ಥಪೂರ್ಣ ಕಾರ್ಯಕ್ಕೆ ಕೈ ಹಾಕಿದ್ರು. ಕಾಡಲ್ಲಿ ಇದ್ದ ಮಕ್ಕಳಿಗೆ ಒಂದು ಸ್ಕೂಲ್ ಮಾಡಿದ್ರು. ತಮ್ಮ ತಮ್ಮ ಸ್ಯಾಲರಿಯ ಸ್ವಲ್ಪ ಭಾಗವನ್ನ ಬಳಸಿ ಅವರು ಆ ಸೋಲಿಗರಲ್ಲಿ ಸ್ವಾವಲಂಬನೆಯ ಬೀಜ ಬಿತ್ತಿದರು. ಅವರ ಟ್ಯಾಲೆಂಟ್ ಬಳಸಿ ಕಾಡಲ್ಲೇ ಸಿಗುವ ವಸ್ತುಗಳಿಂದ ಅವರು ಮಾಡುವ ವಸ್ತುಗಳನ್ನ ತಾವಿರುವ ಜಾಗದಲ್ಲಿ ಮಾರ್ಕೆಟಿಂಗ್ ಮಾಡಿದರು.ಅದರಿಂದ ಬಂದ ಆದಾಯದಿಂದ ಅಲ್ಲಿ ಒಂದು ಸ್ಕೂಲ್ ಕಟ್ಟಿಸಿ ಮಕ್ಕಳಿಗೆ ಎಜುಕೇಷನ್ ಕೊಡಿಸ್ತಾ ಇದ್ರು. ಈಗ ಅಲ್ಲಿ ಒಂದು ಹಾಸ್ಪಿಟಲ್ ಮಾಡೋಣ ಅಂತ ನಿರ್ಧಾರ ಮಾಡಿದ್ರು. ಮುಂದೆ ಅವರ ವಿಚಾರಗಳನ್ನ ಕೇಳಿದೆ. ಛೇ ಎಂಥಾ "ಸಮ್ಮಿಲನ"ದಲ್ಲಿ ನಾನು ಭಾಗಿಯಾಗಲಿಲ್ಲ ಅನ್ಕೊಂಡೆ.

ಅದು ನನ್ನಲ್ಲಿ ಒಂದು ಪ್ರಶ್ನೆ ಮೂಡಿಸಿತ್ತು "ಹೌದು ಸಮಾಜಕ್ಕೆ ನಾನೇನು ಕೊಟ್ಟಿದ್ದೀನಿ"?

Rating
No votes yet

Comments