ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ!!!
ಯಡ್ಡಿ ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ
ಯಡ್ಡಿ ಮುಖದಲ್ಲೂ ಹಿಂದೆ ಇರದಿದ್ದ ಆ ನಗೆ ಕಾಣಬಹುದಂತೆ
ನಿತಿನ್ ಗಡ್ಕರಿ ದೆಹಲಿಯಲಿ ನೀಡಿದ್ದಾರಂತೆ ಈ ಆಶ್ವಾಸನೆ
ಇಲ್ಲಿ ಕೆಲವರ ಮುಖ ಗಂಟಾಯ್ತು ಬಂದಿದ್ದರಿಂದದರ ವಾಸನೆ
ಸ್ತ್ರೀ ಶಾಪದಿಂದ ವಿಮುಕ್ತಿ ಪಡೆಯಬಹುದೇ ಈ ನಮ್ಮ ಸರ್ಕಾರ
೨೦೧೦ ರ ಗಡಿದಾಟಲು ಬಿಟ್ಟೀತೇ ಅದನು ಅದರ ಆ ಗ್ರಹಚಾರ
ಕೋಡೀ ಮಠದ ಸ್ವಾಮಿ ಮೊನ್ನೆ ಮತ್ತೆ ನುಡಿಯಿತಂತೆ ಭವಿಷ್ಯ
ಬಿಡಿಸಲಾಗದ ಕಗ್ಗಂಟು ಯಡ್ಡಿಗಿದೆ ಎಂದು ಸಾರಿದೆ ಆ ಮನುಷ್ಯ
ಭವಿಷ್ಯ ಹೇಗಿದ್ದರೂ ಸರಿಯೇ ಅಡ್ಡಿಯೇ ಇಲ್ಲವಂತೆ ಈ ಯಡ್ಡಿಗೆ
ಶೋಭ ಮಂತ್ರಿಯಾಗಲೊಮ್ಮೆ ಮತ್ತಾಗಲಿ ಏನಾದರೂ ಆಚೆಗೆ
ಮಾಡಿದ ಪಾಪ ಪರಿಹಾರ ಆದರೆ ಸಾಕು ಅಲ್ಲಿಗೆ ಮನಶ್ಯಾಂತಿ
ನಾಡಿನ ಸಮಸ್ಯೆ ಹೇಗಿದ್ದರೇನು ಮನೆಯಲ್ಲಿರಲಿ ಸುಖ ಶಾಂತಿ
**********************************
- ಆಸು ಹೆಗ್ಡೆ
Rating