ಸರಿಯಾಗಿ ಗಡ್ಡ ಕೆರೆಯಲೂ ಕನ್ನಡ ಗೊತ್ತಿದ್ರೆ ಸಾಲ್ದಂತೆ!

ಸರಿಯಾಗಿ ಗಡ್ಡ ಕೆರೆಯಲೂ ಕನ್ನಡ ಗೊತ್ತಿದ್ರೆ ಸಾಲ್ದಂತೆ!

ಪ್ರಾಕ್ಟರ್ & ಗ್ಯಾಂಬೆಲ್ ಕಂಪನಿ-ಯ "ಜಿಲೆಟ್" ಎಂಬ ಬ್ರಾಂಡ್-ನಡಿ ಮಾರಾಟವಾಗುವ ಕ್ಷೌರ ಸಾಮಗ್ರಿಗಳ ಪ್ಯಾಕೇಜ್-ನಲ್ಲಿ, ಮಾಹಿತಿ ಕನ್ನಡದಲ್ಲಿಲ್ಲದೇ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದೆ. ಜಿಲೆಟ್ ಬ್ಲೇಡ್-ನಿಂದ ಅನಾಯಾಸವಾಗಿ ಕ್ಷೌರ ಮಾಡಿಕೊಳ್ಳುವ ಬಗೆ, ಸುರಕ್ಷಿತವಾದ ಉಪಯೋಗ, ಮುಂತಾದ ಮಾಹಿತಿಗಳು ಗ್ರಾಹಕರ ಭಾಷೆಯಲ್ಲಿಲ್ಲ. ಕ್ಷೌರಕ್ಕೆ ಬಳಸುವ ಕ್ರೀಂ-ನ "expiry date" ಮತ್ತು ಅವಧಿ ಮೀರಿದ ಬಳಕೆಯಿಂದಾಗುವ ತೊಂದರೆಯ ವಿವರಣೆ ಕನ್ನಡದಲ್ಲಿಲ್ಲ. ಶೇವಿಂಗ್ ಜೆಲ್ ಅಕಸ್ಮಾತ್ ಕಣ್ಣಿಗೆ ತಾಕಿದರೆ ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಬೇಕು ಅನ್ನೋ ಮುಖ್ಯವಾದ ಮಾಹಿತಿ ಇಂಗ್ಲಿಷ್ ಮತ್ತು ಹಿ೦ದಿಯಲ್ಲಿ ಮಾತ್ರ ಇದೆ.

ಇ೦ಗ್ಲೀಷಿನಲ್ಲಿ ಅರ್ಥ ಅಗುತ್ತಿರಬೇಕಾದ್ರೆ ನಿಮಗೆ ಕನ್ನಡದಲ್ಲಿ ಏಕೆ ಇರಬೇಕು ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿದ್ದರೆ, ನಾವು ತಿಳಿದುಕೊಳ್ಳಬೇಕಾದ ಅ೦ಶವೇನ೦ದ್ರೆ ಕರ್ನಾಟಕದಲ್ಲಿ ಮಾರಾಟವಾಗುವ ಸಾಮಗ್ರಿಗಳ ಮೇಲೆ ಬೇರೆ ಭಾಷೆಯಲ್ಲಿ ಮಾಹಿತಿ ಇರುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದ್ರೆ ಕೋಟ್ಯಾಂತರ ಕನ್ನಡಿಗರನ್ನು ತಲುಪಬೇಕಾದರೆ ಕನ್ನಡದಲ್ಲಿ ಮಾಹಿತಿ ಇರುವುದೇ ಸೂಕ್ತ ಎಂಬುದು ಉದ್ದಿಮೆದಾರರು ತಿಳಿದುಕೊ೦ಡ೦ತಿಲ್ಲ.
ಯಾವುದೇ ಸಾಮಗ್ರಿಗೆ ಸಂಬಂಧಪಟ್ಟ ಮಾಹಿತಿಯನ್ನು ತನ್ನ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕು ಗ್ರಾಹಕನಿಗಿದೆ. ಆದರೆ ಜಿಲೆಟ್-ನ ಪ್ಯಾಕೇಜ್-ನಲ್ಲಿ ಕನ್ನಡವನ್ನು ಬಳಸದೇ ಇರುವುದು ಗ್ರಾಹಕನಿಗೆ ಸಿಗುವ ಸೌಲಭ್ಯಕ್ಕೆ ತಡೆ ಹಾಕಿದ೦ತಾಗಿದೆ.

ಕನ್ನಡದ ಗ್ರಾಹಕನು ತೂಕ, ಅಳತೆ, ಗುಣಮಟ್ಟ ಮತ್ತು ಮೌಲ್ಯಗಳನ್ನು ಲೆಕ್ಕ ಹಾಕೋ ಹಾಗೆ, ಪದಾರ್ಥಗಳ ಮಾಹಿತಿಗೆ ಸ೦ಭ೦ದ ಪಟ್ಟ೦ತೆ ಭಾಷಾ ಆಯಾಮದಲ್ಲೂ ತನ್ನ ಹಕ್ಕನ್ನು ಅರಿತುಕೊಳ್ಳಬೇಕಾಗಿದೆ.
ಜಿಲೆಟ್-ನವರಿಗೆ ಮಿಂಚೆ ಕಳುಹಿಸಿ ಕನ್ನಡದ ಗ್ರಾಹಕರ ಮನಸ್ಸನ್ನು ಗೆಲ್ಲಲು ನಿಮ್ಮ ಪದಾರ್ಥಗಳ ಮೇಲೆ ಕನ್ನಡವನ್ನು ಬಳಸಬೇಕು ಎ೦ಬುದನ್ನು ಹೇಳೋಣ. ಜಿಲೆಟ್ ಉತ್ಪಾದಕರಿಗೆ ಈ ಕೆಳಗಿನ ವಿಳಾಸದಲ್ಲಿ ಮಿ೦ಚೆ ಬರೆಯಬಹುದು.
ಇವರ ಮಿಂಚೆ: gillette@in.pgconsumers.com

Gillette

Rating
No votes yet

Comments