ಸರಿಯಾದ ಶಬ್ದಗಳ ಬಳಕೆ

ಸರಿಯಾದ ಶಬ್ದಗಳ ಬಳಕೆ

ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ.  ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ.

ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು . 

'ಸಾಯೋತನಕ '  ಅನ್ನಬಾರದು - ' ಇರೋತನಕ' ಅನ್ನಬೇಕು .

ಒಬ್ಬರು ಬೆಂಕಿಕಡ್ಡಿಗೆ ದೀಪದ ಕಡ್ಡಿ ಎನ್ನುವುದನ್ನು ನೋಡಿದ್ದೇನೆ. 

ಕನ್ನಡದ ಬಗ್ಗೆ ಮಾತನಾಡುವಾಗ 'ಉರ್ದು/ ತಮಿಳು ಹಿನ್ನೆಲೆಯಿಂದ '  ಅನ್ನುವ ಬದಲು 'ಕನ್ನಡ ವಲ್ಲದ ಹಿನ್ನೆಲೆಯಿಂದ ' ಎನ್ನಬೇಕು .  

ಇನ್ನೊಂದು ಗಮನಿಸಿದ್ದೀರಾ - ಇಂಗ್ಲೀಷಿನ moral policing ಗೆ ಪ್ರಜಾವಾಣಿಯವರು ಬಳಸುವ ಶಬ್ದ - 'ಅ'ನೈತಿಕ ಪೋಲಿಸುಗಿರಿ. ಮತ್ತೆ honour killing ಗೆ  ಅವಮರ್ಯಾದೆ ಹತ್ಯೆ ಅನ್ನುತ್ತಾರೆ.  ಏಕೆ ? ಗಮನಿಸಿ moral policing ನಿಜಕ್ಕೂ  ಅನೈತಿಕ. ಹಾಗೆಯೇ
honour killing ನಲ್ಲಿ ಯಾವುದೇ ಮರ್ಯಾದೆ ಇಲ್ಲ.    moral policing ಮತ್ತು  honour killing ಇವುಗಳು ಸರಿಯಲ್ಲ.  ಇವುಗಳನ್ನು ಸಮಾಜದಲ್ಲಿ ಪ್ರೋತ್ಸಾಹಿಸಕೂಡದು ಎಂಬ ತಿಳುವಳಿಕೆ ಈ ಕನ್ನಡಪದಗಳ ಬಳಕೆಯಲ್ಲಿದೆ. 

ಇವತ್ತು ಪಾರ್ಲಿಮೆಂಟ್ ನಲ್ಲಿ social distancing ಶಬ್ದದ ಬದಲು Safe distancing  ಅಥವಾ 6- feet distancing ಬಳಸಲು ಸೂಚಿಸಿದ್ದಾರೆ.
ಏಕೆಂದರೆ ಆ ಶಬ್ದವು ಅಸ್ಪೃಶ್ಯತೆಯನ್ನು ಸೂಚಿಸುತ್ತದೆ.
 

ಶಬ್ದ ಮುಖ್ಯವೋ ಅಥವಾ  ಅರ್ಥ ಮುಖ್ಯವೋ -  ಬೇರೊಂದು ವಿಚಾರಧಾರೆಯನ್ನು ಇನ್ನೊಂದು ದಿನ ನೋಡೋಣ. 

 

Rating
Average: 4 (2 votes)