ಸರ್ಕಾರಿ ಕಛೇರಿಗಳ ಲಂಚದ ಕರ್ಮಕಾಂಡ

ಸರ್ಕಾರಿ ಕಛೇರಿಗಳ ಲಂಚದ ಕರ್ಮಕಾಂಡ

ನಮ್ಮ ಸರ್ಕಾರಿ ಕಛೇರಿಯೊಳಗೆ ಕಾಲಿಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಿ ಕಾಲಿಡಬೇಕು. ಬಹು ಪಾಲು ಕಛೇರಿಗಳಲ್ಲಿ ಲಂಚದ ಮಹತ್ವ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದರೆ ಲಂಚ ನೀಡುವವರಿಗೂ ನೀಡದೇ ಇರುವವರಿಗೂ ಸಿಗುವ ಮರ್ಯಾದೆ ಬೇರೆ ತರಹುದೇ ಆಗಿರುತ್ತದೆ. ಸಣ್ಣ ಜವಾನನಿಂದ ಹಿಡಿದು ದೊಡ್ಡ ಅಧಿಕಾರಿಯವರೆಗೆ ಲಂಚ ನೀಡಬೇಕು. ಇಲ್ಲದಿದ್ದರೆ ತಮ್ಮ ಕೆಲಸ ಅಥವಾ ಕಡತ ತಿಂಗಳುಗಟ್ಟಲೆ ಒಂದೇ ಟೇಬಲ್ಲಿನಲ್ಲಿ ಧೂಳು ಹಿಡಿದು ಲಂಚದ ಮಂಗಳಾರತಿಗಾಗಿ ಕಾಯುತ್ತಿರುತ್ತದೆ. ಕೆಳ ಮಟ್ಟದವರಿಗೆ ಲಂಚ ನೀಡಿದರೆ ಮೇಲವರ್ಗದವರು ಲಂಚಕ್ಕಾಗಿ ಮತ್ತೆ ಕೆಲ ದಿನಗಳ ಕಾಲ ಆಗೆ ಪೂರ್ಣಗೊಳಿಸದೇ ಉಳಿಸುತ್ತಾರೆ. ಜನ ತಾವು ಏನನ್ನು ಮಾಡಬಾರದೆಂದು ಹೇಳುತ್ತಾರೊ ಅದನ್ನೆ ಹೆಚ್ಚಾಗಿ ಮಾಡುತ್ತಾರೆ. ಲಂಚ ಮುಕ್ತ ಆಡಳಿತ ಬರುವುದು ಯಾವಾಗ? ಲಂಚ ತಿನ್ನುವ ರಾಕ್ಷಸರನ್ನು ಮಟ್ಟ ಹಾಕುವ ಕಾನೂನು ಸರಿಯಾಗಿ ಜಾರಿಯಾಗದಿರುವುದು ಇದರ ಜೀವಂತಿಕೆಗೆ ಸಾಕ್ಷಿ.

Rating
No votes yet

Comments