ಸರ್ವಕಾಲಿಕ 'ಭಜಗೋವಿಂದಮ್' ಈ ಕಾಲಕ್ಕೆ

ಸರ್ವಕಾಲಿಕ 'ಭಜಗೋವಿಂದಮ್' ಈ ಕಾಲಕ್ಕೆ

ಚಿತ್ರ

ಸಾವು ಸನ್ನಿಹಿತವಾದಾಗ
ನಿನ್ನ ಪದವಿಯಾಗಲಿ,  
ಹುದ್ದೆಯಾಗಲಿ ರಕ್ಷಣೆಗೆ ಬಾರದು
ಆ ಪರಮಾತ್ಮನ ಹೊರತು
ಮತ್ತೆಲ್ಲರೂ ಅಸಹಾಯಕರು
ಎಲೋ ಮೂರ್ಖ ಇನ್ನಾದರೂ
ಆ ಪರಮಾತ್ಮನನ್ನ ಆರಾಧಿಸು

ಕಾರು, ಫ್ಲ್ಯಾಟು, ಕರಿಯರ್
ಎಷ್ಟು ದಿವಸ ಹೀಗೆ
ಬಯಕೆಗಳಿಗೆ ಕೊನೆಯೇ ಇಲ್ಲ
ಇನ್ನಾದರೂ ನೈಜ್ಯತೆಗೆ ಗಮನ ಕೊಡು
ನಿನ್ನ ಹಿಂದಿನ ಅನುಭವಗಳನ್ನೇ ಆಧರಿಸಿ
ಮುಂದಿನ ಸಂಕಲ್ಪಗಳನ್ನು ಮಾಡು

ನೀನು ಎಲ್ಲಿಯ ತನಕ ದುಡಿಯಬಲ್ಲೆಯೋ
ಎಲ್ಲಿಯ ತನಕ ಗಟ್ಟಿ ಮುಟ್ಟಾಗಿ ಇರುವೆಯೋ
ಅಲ್ಲಿಯತನ ಎಲ್ಲರೂ ನಿನ್ನವರು
ಯಾವಾಗ ಮೂಲೆಗೆ ಬೀಳುವೆಯೋ
ಆಗ ನೀನೂ ಯಾರೀಗೂ ಬೇಡವಾಗುವೆ
ನಿನ್ನ ಬಳಿ ಯಾರೂ ಒಂದು ಮಾತನ್ನೂ ಆಡರು

ಸಿರಿತನ, ಯೌವನ, ಗೆಳೆತನ
ನಿನ್ನ ಬಳಿಬಂದಿವೆ ಎಂದು ಹೌಹಾರ ಬೇಡ
ಇದಾವುದೂ ನಿಜವಲ್ಲ
ಒಂದು ಗಳಿಗೆಗೆ ಎಲ್ಲವೂ
ನಾಶ ಆಗಬಲ್ಲುದು
ಆದ್ದರಿಂದ ಕಾಲವನ್ನೇ ಮೀರಿದ
ಸತ್ಯವನ್ನ ಅರಸು

ಎಲ್ಲಾ ಅನುಕೂಲತೆಯನ್ನೂ ತ್ಯಜಿಸು
ಗುಡಿಯ ಜಗಲಿಯೋ,
ಮರದ ಬುಡವೋ ನಿನ್ನ ವಾಸವಾಗಲಿ
ಜಿಂಕೆಯ ತುಪ್ಪಟವೇ ನಿನ್ನ ಉಡುಗೆಯಾಗಲಿ
ನೆಲವೇ ನಿನ್ನ ಹಾಸಿಗೆಯಾಗಿಸಿಕೊ
ಇಂತಹ ವೈರಾಗ್ಯ ಉಳ್ಳವನು ಎಂದಿಗೂ ವಿಫಲವಾಗನು

ಕಿಂಚಿತ್ತು ಗೀತೆಯ ಪಠಣ
ಒಂದು ಹನಿ ಗಂಗಾ ಜಲ ಪಾನ
ಒಮ್ಮೆ ಆ ಮುರಾರಿಯ ಸ್ಮರಣೆಯೇ ಸಾಕು
ಯಮನೊಂದಿಗಿನ ನಿನ್ನ ಚರ್ಚೆಯನ್ನು ತಪ್ಪಿಸಲ್ಲು

ಮತ್ತದೇ ಹುಟ್ಟು ಮತ್ತದೇ ಸಾವು
ಮತ್ತದೇ ಗರ್ಭದೊಳಗೆ ವಿಕಾಸನ
ದಾಟಲು ಕಠಿಣವು
ದಡವೇ ಕಾಣದ ಸಂಸಾರ ಸಾಗರ
ಓ ಮುರಾರಿ ಪಾರುಮಾಡೆನ್ನ

ಪ್ರತಿದಿನ ಗೀತಾಧ್ಯಾಯನ ರೂಡಿಸು
ಆ ಸರ್ವೇಶ್ವರನ ಸಹಸ್ರನಾಮಾವಳಿಯ ಭಜಿಸು
ಆ ಶ್ರೀಪತಿಯ ರೂಪವ ಧ್ಯಾನಿಸು
ಸಜ್ಜನರ ಸಂಘವ ಮಾಡು
ಸಂಪತ್ತನ್ನೆಲ್ಲಾ ದೀನರಿಗೆ
ದಲಿತರಿಗೆ ದಾನಕೊಡು

ಶೀಮಂತಿಕೆ ನೆಂಮದಿಯನ್ನು ತಾರದು
ಕಾಲವೇ ಇದನ್ನ ಪ್ರತಿಬಿಂಬಿಸಿ ತೋರಿಸಿದೆ
ಶ್ರೀಮಂತ ವ್ಯಕ್ತಿ ತನ್ನ ಸ್ವಂತ ಮಗನನ್ನೂ ನಂಭನು
ಅದೇ ಸಿರಿತನದ ಒಳ ಮರ್ಮ

ಗುರುವಿನ ಚರಣಕೆ ಎರಗಿರುವ ಓ ಭಕ್ತ
ಇಂದ್ರಿಯಗಳನ್ನು ಜಯಿಸಿರುವ ನೀನು
ಆ ಪರಮಾತ್ಮನ ಹೃದಯವನ್ನ ಜಯಿಸುವೆ.

ಎಮ್.ಎಸ್ ಸುಬ್ಬಲಕ್ಷ್ಮಿಯವರ ದ್ವನಿಯ: ಒಂದು ವೀಡಿಯೋಲಿಂಕು
ಸಂಪೂರ್ಣ ಭಜಗೋವಿಂದಮ್: ಆಂಗ್ಲ ಭಾಷೆಯಲ್ಲಿ

Rating
No votes yet