'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

http://www.kannadasaahithya.com                                 http://www.kanlit.com

   ತನ್ನ ಆರಂಭಕಾಲದಿಂದಲೂ, ಕನ್ನಡಸಾಹಿತ್ಯ.ಕಾಂ, ಕನ್ನಡದಲ್ಲಿಯೇ ಅಲ್ಲದೇ, ಅಂತರ್ಜಾಲ ಮಾಧ್ಯಮದಲ್ಲಿನ, ಭಾರತೀಯ ಭಾಷಾ ವಲಯದಲ್ಲಿ ಹಲವು ಪ್ರಥಮಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತಾ ಸಾಗಿದೆ. ಕನ್ನಡ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಅಂತರ್ಜಾಲದಲ್ಲಿ ಲೇಖಕರ ಅನುಮತಿಯೊಂದಿಗೆ, ಮೊಟ್ಟಮೊದಲ ಬಾರಿಗೆ ಒದಗಿಸಿದ್ದಲ್ಲದೆ, ಕನ್ನಡಕ್ಕೆ ಬೇಕಾದ ತಾಂತ್ರಿಕ ಪರಿಕರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿ 'ಸಂಪೂರ್ಣ' - ಪ್ರಪ್ರಥಮ ಬಹುಭಾಷಾ, CMS ಅನ್ನು ರೂಪಿಸಿತ್ತು. ಕರ್ನಾಟಕದ ಮೂಲೆಮೂಲೆಗೂ, ಈ ಪರಿಕರಗಳ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ, ಬೆಂಬಲಿಗರ ಬಳಗಗಳನ್ನು ಹುಟ್ಟುಹಾಕಿ, ಸ್ಥಳೀಯ ಮಟ್ಟದಲ್ಲಿ ಅವು ಸಕ್ರಿಯವಾಗಿರುವಂತೆ, ಕಾರ್ಯಕ್ರಮಗಳನ್ನು ಕೂಡ ಕನ್ನಡಸಾಹಿತ್ಯ.ಕಾಂ ಬಳಗವು ಆಯೋಜಿಸುತ್ತಿದೆ. ಈಗಾಗಲೇ, ಹಾಸನ, ತುಮಕೂರು ನಗರಗಳಲ್ಲಿ ಬೆಂಬಲಿಗರ ಬಳಗದ ವತಿಯಿಂದ ವಿಚಾರಸಂಕಿರಣಗಳು ಯಶಸ್ವಿಯಾಗಿ ನಡೆದಿವೆ. ಇದಲ್ಲದೆ, ಕನ್ನಡದ ತಾಂತ್ರಿಕ ಪರಿಕರಗಳನ್ನು ಕನ್ನಡನಾಡಿನ ಪ್ರತಿಯೊಂದು ಶಾಲೆಯ ಗಣಕಯಂತ್ರಗಳಲ್ಲಿ, ಸೈಬರ್‍ ಕೆಫೆಗಳಲ್ಲಿ ಅನುಸ್ಥಾಪಿಸಲು, ಹಾಗು ಕನ್ನಡದಲ್ಲಿ ತಾಂತ್ರಿಕ ಪಠ್ಯವನ್ನು ಸಿದ್ಧಪಡಿಸಲು, ಸರ್ಕಾರದ ಗಮನಸೆಳೆಯುವ ದಿಸೆಯಲ್ಲಿ, ಮನವಿ ಪತ್ರವೊಂದನ್ನು ಅರ್ಪಿಸಲು, ಹಾಗೂ ಆ ಮನವಿ ಪತ್ರಕ್ಕೆ ನಾಡಿನ ಖ್ಯಾತನಾಮರ ಹಾಗೂ ಜನಸಾಮಾನ್ಯರ ಬೆಂಬಲ ಪಡೆಯಲು ಸಹಿ ಸಂಗ್ರಹಣಾ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದೀಗ, ಕನ್ನಡಸಾಹಿತ್ಯ.ಕಾಂ ತಾಣದ ಮೂಲಕ ಬೆಳಕು ಕಂಡ ಆರು ಸಣ್ಣಕಥೆಗಳ , ಹಾಗೂ ಕನ್ನಡಸಾಹಿತ್ಯ.ಕಾಂ ಲೇಖಕರ ಬಳಗದ ಶ್ರೀ ವಿಕ್ರಮ್ ಹತ್ವಾರರ ೪೦ ಕವಿತೆಗಳ ಸಂಕಲನವನ್ನು ಪ್ರಕಟಿಸುತ್ತಿದೆ, 'ಸಲ್ಲಾಪ' - ಎಂಬ ತನ್ನದೇ ಆದ ಪ್ರಕಟಣಾ ವಿಭಾಗದಡಿಯಲ್ಲಿ. 'ಕಟ್ ಸೀಟ್ ಮತ್ತು ಇತರ ಕಥೆಗಳು' ಹಾಗೂ 'ಇದೇ ಇರಬೇಕು ಕವಿತೆ' ಎಂಬ ಹೆಸರಿನ ಈ ಎರಡು ಪುಸ್ತಕಗಳು, ಬರುವ ಭಾನುವಾರ, ೨೦, ಮೇ, ೨೦೦೭ರಂದು, ಮೈಸೂರಿನಲ್ಲಿ ಬಿಡುಗಡೆಯಾಗಲಿವೆ.

ಕಾರ್ಯಕ್ರಮದ ವಿವರಗಳು ಇಂತಿವೆ:

ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಮೈಸೂರು.

(ಸಹಯೋಗ, ಸಹಕಾರ: ಎಸ್.ಟಿ.ಸಿ ಇಂಜಿನಿಯರಿಂಗ್ ಕಾಲೇಜು, ಮೈಸೂರು)

ಬೆಂಬಲಿಗರ ಬಳಗದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ.

ಉದ್ಘಾಟನೆ: ಶ್ರೀ ಚಿದಾನಂದ ಗೌಡ.

ಮುಖ್ಯ ಅತಿಥಿಗಳು ಹಾಗೂ ಪುಸ್ತಕ ಬಿಡುಗಡೆ : ಶ್ರೀ ಲಿಂಗದೇವರು ಹಳೆಮನೆ.

ಕೃತಿಗಳ ಬಗ್ಗೆ ಮಾತನಾಡುವವರು: ಶ್ರೀ ಸುಚೇಂದ್ರ ಪ್ರಸಾದ್

'ಸಲ್ಲಾಪ' (ಕನ್ನಡಸಾಹಿತ್ಯ.ಕಾಂ ಪ್ರಕಟಣಾ ವಿಭಾಗ) ದಡಿಯಲ್ಲಿ ಬಿಡುಗಡೆಯಾಗಲಿರುವ ಕೃತಿಗಳು:

'ಇದೇ ಇರಬೇಕು ಕವಿತೆ' (ವಿಕ್ರಮ್ ಹತ್ವಾರ್‌ರ ಕವನಗಳು) 'ಕಟ್ ಶೀಟ್ ಮತ್ತು ಇತರ ಕಥೆಗಳು' (ಮೊದಲಬಾರಿಗೆ ಕೆ.ಎಸ್.ಸಿಯಲ್ಲಿ ಪ್ರಕಟವಾದ ಕಥೆಗಳ ಸಂಕಲನ)

ವಿಚಾರ ಸಂಕಿರಣ: 'ಗ್ರಾಮೀಣ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ'

ವಿಷಯದ ಕುರಿತು ಎಸ್.ಟಿ.ಸಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಜಿ ಸಂಗಮೇಶ ಅವರು ಮಾತನಾಡುತ್ತಾರೆ.

ಸ್ಥಳ ಮತ್ತು ದಿನಾಂಕ:

ಎಸ್.ಟಿ.ಸಿ ಇಂಜಿನಿಯರಿಂಗ್ ಕಾಲೇಜು ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕ್ಯಾಂಪಸ್ ಮೈಸೂರು

ಭಾನುವಾರ, ೨೦/೦೫/೦೭

ಬೆಳಿಗ್ಗೆ ೧೦.೩೦ಕ್ಕೆ

     ಕಥಾಸಂಕಲನದಲ್ಲಿ ಆರು ಕಥೆಗಳಿದ್ದು, 'ಕಟ್ ಸೀಟ್' ಒಂದನ್ನು ಹೊರತುಪಡಿಸಿ ಉಳಿದವೆಲ್ಲವೂ ಅನಿವಾಸಿ ಪರಿಸರದಲ್ಲಿ ರಚಿಸಲ್ಪಟ್ಟಿದ್ದು, ಇದೂ ಒಂದು ಪ್ರಥಮವಾಗಿದೆ.

Rating
No votes yet

Comments