ಸಹವಾಸ ದೋಷ ಕೊಳ್ಳಿಗೆ ದೊಣ್ಣೆ

ಸಹವಾಸ ದೋಷ ಕೊಳ್ಳಿಗೆ ದೊಣ್ಣೆ

ನಾನು ಚಿಕ್ಕವನಾಗಿದ್ದಾಗ ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿ ಹೇಳ್ತಾ ಇದ್ರು, ಸಹವಾಸ ದೋಷ ಕೊಳ್ಳಿಗೆ (ಕೊರಳಿಗೆ) ದೊಣ್ಣೆ ಅಂತ. ಅ ಸಮಯದಲ್ಲಿ ಅದು ನಂಗೆ ಅಷ್ಟು ಅರ್ಥ ಆಗದಿದ್ರೂ, ಈಗ ಅದು ಎಷ್ಟು ನಿಜ ಅಂತ ಗೊತ್ತಾಗ್ತಿದೆ. ಸ್ನೇಹಿತರ, ಸಹಪಾಠಿಗಳ ಅಥವಾ ಸಹವಾಸಿಗಳ ಜೊತೆಗೆ ನಾವು ಇರುವಾಗ ಅವರ ಗುಣ, ಸ್ವಭಾವ, ನಡತೆ, ಅಭ್ಯಾಸಗಳು ನಮ್ಮನ್ನು ತುಂಬ influence ಮಾಡುತ್ತದೆ. ನಮ್ಮ ಮನಸ್ಸ್ಸು ಗಟ್ಟಿ ಇದ್ರೆ, ಅವರ ಕೆಟ್ಟ ಅಭ್ಯಾಸಗಳಿಂದ ದೂರ ಇದ್ರೂ, ಅವರ ಗುಣ, ಸ್ವಭಾವ ನಮಗೆ ಅರಿವಿಲ್ಲದಂತೆ ನಮ್ಮನ್ನಾ ವರಿಸಿರುತ್ತದೆ. ಹಾಗಾಗಿ ಸ್ನೇಹಿತರ/ಸಹವಾಸಿಗಳ ಆಯ್ಕೆಯಲ್ಲಿ ಜಾಗರೂಕರಾಗಿರುವುದು ಒಳಿತಲ್ಲವೇ?

Rating
No votes yet

Comments