ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು..
ಸಾವಿರಾರು ಮರಗಳ ಮರಣ ಹೋಮದ ಬಳಿಕ
ಸರಾಗವಾಗಿದ್ದ ಸಹ್ಯಾದ್ರಿ
ಇಬ್ಬಾಗವಾಗಿದೆ.
ಭೀತಿ ಇಲ್ಲದೆ ಸಂಚರಿಸುತಿದ್ದ ವನ್ಯ ಸಂಕುಲಕ್ಕೆ
ಜೀವ ಭಯ ಬಾದಿಸಿದೆ.
ಸ್ವತಂತ್ರವಾಗಿ ಹಾರುತಿದ್ದ ಹಕ್ಕಿಗಳು
ವಿದ್ಯುತ್ ತಂತಿ ತೊಡರಿ ಸಾಯಬೇಕಾಗಿದೆ.
ಸಹ್ಯಾದ್ರಿ ಹರಿದು ಹಂಚಿ ಅಂಟಿಸಲಾಗದ ಗಾಯವಾಗುತ್ತಿದೆ
ಆದರೂ ವಿದ್ಯುತ್ ಹರಿಯುತ್ತಲೇ ಇದೆ.
ಬೇಲಿಯೆ ಎದ್ದು ಹೊಲ ಮೈದಾಗ ನಂಬುವುದಾರನ್ನು.
ಸರ್ಕಾರದ ಒಳ್ಳೆ ಕೆಲಸಕ್ಕೆ ಕುದುರೆ ಮುಖಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಇನ್ನೂ ಅನೇಕ ಒಳ್ಳೆ ಕೆಲಸ ಮಾಡಲು ಹೊರಟಿರುವ
ಸರ್ಕಾರವನ್ನ ನಿಲ್ಲಿಸುವವರಾರು.
ನೊಂದವರಿಗೆ ನ್ಯಾಯ ನೀಡಬಲ್ಲ ಕೋರ್ಟ್ ಇದ್ರೆ ಹೇಳಿ
ಕಾಡಾನೆ ಕಾಯ್ತಾ ಇವೆ.
ಪಾಪ ಅವಕ್ಕೆ ನಮ್ಮ ಖಡತಗಳ, ಕಾಂಸ್ಟಿಟ್ಯೂಷನ್ಗಳ ಜ್ಞಾನ ಇಲ್ಲ.
ಅಂದು ಬರೆದವುಗಳು..
ಪ್ರಯೋಜನಕ್ಕೆ ಬಾರದೆ ಅವ್ಟ್ ಡೇಟೇಡ್ ಆಗಿವೆ. ಮಾಹಿತಿಗಿರ್ಲಿ ಅಂತ.
ಇಂದನ ಪರಿಸ್ಠಿತಿ ಹೀಗಿದೆ.. ನಾಳೆ, ಯೋಚಿಸುವುದೂ ಕಸ್ಟ.
ಬಾರಿಮಲೆಯ ಒಂದು ಸುಂದರ ದೃಶ್ಯ
![ಗೂಗಲ್ ಮ್ಯಾಪ್ - ಪರ್ವತಕೇಂದ್ರಿತ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.](http://sampada.net/files/satelite_img.jpg)
ಗೂಗಲ್ ಮ್ಯಾಪ್ - ಪರ್ವತಕೇಂದ್ರಿತ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.
ಚಿತ್ರಕೃಪೆ: ಗೂಗಲ್ ಮ್ಯಾಪ್ - ಪರ್ವತಕೇಂದ್ರಿತ ದೃಶ್ಯ
![ಗೂಗಲ್ ಮ್ಯಾಪ್ - ಉಪಗ್ರಹ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.](http://sampada.net/files/satelite_img2.jpg)
ಗೂಗಲ್ ಮ್ಯಾಪ್ - ಉಪಗ್ರಹ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.
ಚಿತ್ರಕೃಪೆ: ಗೂಗಲ್ ಮ್ಯಾಪ್ - ಉಪಗ್ರಹ ದೃಶ್ಯ
![ಟವರ್ನ ಬುಡದಲ್ಲಿ ಮಬ್ಬಾಗಿ ಕಾಣುವ ಅಪರಿಚಿತ ವ್ಯಕ್ತಿಗಳು](http://sampada.net/files/tower_UPCL.jpg)
ಟವರ್ನ ಬುಡದಲ್ಲಿ ಮಬ್ಬಾಗಿ ಕಾಣುವ ಅಪರಿಚಿತ ವ್ಯಕ್ತಿಗಳು
ಸರಪಣಿಯಂತೆ ಕಾಣುವ ವಿದ್ಯುತ್ ಟವರುಗಳು
ಟವರ್ ಹತ್ತಿರದ ನೋಟ.
File attachments
Rating
Comments
ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು..
ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು..-
ಗೆಳೆಯ ವಿದ್ಯಾಕುಮಾರ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಕಳಕಳಿಯ ಆಪ್ತತೆಯನ್ನು ಸೂಸುವ ಕವನ. ತಾಯ ಮಮತೆಯ ಒಡಲಾಳದಿಂದ ಉದ್ಭವಿಸಿದಂತಿವೆ. ಭಾವನೆಗಳನ್ನು ಹೊರಹಾಕುತ್ತ ಉತ್ತಮವಾಗಿದೆ. ಜೊತೆಗೆ ಚಿತ್ರಗಳೂ ಸರಿಯಾಗಿ ಸಾಂದರ್ಬಿಕವಾಗಿ ಅರ್ಥವತ್ತಾಗಿವೆ. ಧನ್ಯವಾದಗಳು.
In reply to ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು.. by lpitnal@gmail.com
ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು @ ಲಕ್ಷ್ಮೀಕಾಂತ ಇಟ್ನಾಳ್
ಧನ್ಯವಾದಗಳು ಇಟ್ನಾಳರೆ, ನಿಮ್ಮ ಮೆಚ್ಚುಗೆಗೆ ಆಭಾರಿ.
ತಾಯ ಮಮತೆಯ ಕವನ ಎಂದಿರಿ ಸಂತೋಷ ವಾಯ್ತು, ಬರೆಯುವಾಗ 'ಎನ್ಟರ್' ಬಟನ್ ಜಾಸ್ತಿ ಒತ್ತಿದ್ದೆ, ಕವನವಾಗಿದೆ.
ವನ್ಯಸಂಕುಲ ಉಳಿಸಲು ನಿಮ್ಮ ಸಜೆಶನ್ ಬರೆದಿದ್ರೆ ಒಳ್ಳೆಯದಿತ್ತು..
In reply to ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು.. by lpitnal@gmail.com
ಆತ್ಮೀಯ ವಿದ್ಯಾಕುಮಾರರೆ ,
ಆತ್ಮೀಯ ವಿದ್ಯಾಕುಮಾರರೆ ,
ನಿಮ್ಮ ವಿಚಾರ ಮತ್ತು ಪ್ರಸ್ತುತಿ ಚಿಕ್ಕದಾಗಿ ಚೊಕ್ಕವಾಗಿದೆ .ನಿಮ್ಮ ಕಳಕಳಿಯಲ್ಲಿ ನಾವೂ ನಿಮ್ಮೊಡ ನಿದ್ದೇವೆ . ಉತ್ತಮ ವಿಚಾರಕ್ಕೆ ಧನ್ಯವಾದಗಳು.
In reply to ಆತ್ಮೀಯ ವಿದ್ಯಾಕುಮಾರರೆ , by Prakash Narasimhaiya
ಸಹ್ಯಾದ್ರಿಯ ತಂಪಾದ ನೆರೆಳು..@ ಪ್ರಕಾಶ್ ನರಸಿಂಹಯ್ಯ
ನರಸಿಂಹಯ್ಯನವ್ರೆ ನಾವೂ ನಿಮ್ಮೊಡ ನಿದ್ದೇವೆ ಎಂದಿರಿ ಸಂತೋಶ ಆಯ್ತು.
ನೀವು ಹಾಸನದವರೆಂದು ತಿಳಿತು.. ಹತ್ತಿರದಲ್ಲೆ ಇದ್ದೀರಿ
ಉತ್ತರ ಕನ್ನಡದ ಎಸ್ಟೋ ಜಿಲ್ಲೆಗಳಲ್ಲಿ ಒಂದು ಲೊಟ ಸಿಹಿ ನೀರಿಗೂ ಸಂಕಸ್ಟ.
ಹಾಗೆ ನೋಡಿದರೆ ನಾವುಗಳೆ ಧನ್ಯ.
ಕಾಡಿದ್ದರೆ ನಾಡು.
In reply to ಸಹ್ಯಾದ್ರಿಯ ತಂಪಾದ ನೆರೆಳು..@ ಪ್ರಕಾಶ್ ನರಸಿಂಹಯ್ಯ by vidyakumargv
ಸಹ್ಯಾದ್ರಿ ಪರ್ವತ ಶ್ರೇಣಿ ನಮ್ಮ
ಸಹ್ಯಾದ್ರಿ ಪರ್ವತ ಶ್ರೇಣಿ ನಮ್ಮ ಮುಂಬೈ ನಿಂದ ದಕ್ಷಿಣದ ಕಡೆ ಧಾವಿಸುತ್ತದೆ. ಅದು ನಿಸರ್ಗ ರಮಣೀಯ ತಾಣಗಳಲ್ಲೊಂದು.. ನಮಗೆ ಅತಿ ಪ್ರೀತಿಯ ಸ್ಥಾನ. ..
In reply to ಸಹ್ಯಾದ್ರಿ ಪರ್ವತ ಶ್ರೇಣಿ ನಮ್ಮ by venkatesh
ಸಹ್ಯಾದ್ರಿಯ ತಂಪಾದ ನೆರೆಳು...@ ವೆಂಕಟೇಶ್
ಹೌದು ವೆಂಕಟೇಶ್ ಅವರೆ.. ಸಹ್ಯಾದ್ರಿ ಪರ್ವತ ಶ್ರೇಣಿ, ನಮಗೆ ಅತಿ ಪ್ರೀತಿಯ ಸ್ಥಾನ.
ನಮ್ಮ ಜೀವ ನಾಡಿ, ನದಿಗಳ ಮೂಲ.
ನಿಮ್ಮ ಮುಂಬೈ ನಿಂದ ನಮ್ಮ ಕಡೆಗೆ ಸಹ್ಯಾದ್ರಿ ಚಾಚಿ ಕೊಡಿರುವುದು ಹೀಗೆ
ಚಿತ್ರ ಕೃಪೆ:Zoological Survey of India.
ಧನ್ಯವಾದಗಳು
ಕೆಲವೇ ವ್ಯಕ್ತಿಗಳ ಅನುಕೂಲಕ್ಕೆ
ಕೆಲವೇ ವ್ಯಕ್ತಿಗಳ ಅನುಕೂಲಕ್ಕೆ ಸಾವಿರಾರು ಮರಗಳ ವನ್ಯಮೃಗಗಳ ಮಾರಣಹೋಮ :(