ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!!!

ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!!!

ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ
ನೀವಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ

ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ
ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂಗಳನ್ನೆಣಿಸುತ್ತಿದ್ದಿರಿ

ಸಂಸ್ಕೃತಿ ಸಂಸ್ಕೃತಿ ಎಂದು ಹೀಗೆ ಸುಮ್ಮನೇ ಬಡಬಡಿಸದಿರಿ
ಸಾಧ್ಯವಿದ್ದರೆ ನಮ್ಮ ನಾಡಿನ ಕೃಷಿ ಸಂಸ್ಕೃತಿಯನ್ನು ಉಳಿಸಿರಿ

ಎಲ್ಲಾ ಕಲ್ಚರಿಗೂ ಮುಖ್ಯ ನಮ್ಮ ನಾಡಿನ ಅಗ್ರಿಕಲ್ಚರ್ ಕೇಳಿ
ನಿಮ್ಮಿಂದ ಅದನ್ನುಳಿಸಲು ಸಾಧ್ಯವಿದೆಯಾ ಯೋಚಿಸಿ ಹೇಳಿ

ನಾಡಿನ ಜನತೆಯನು ಒಂದಾಗಿಸುವ ಅಭಿಯಾನ ಮಾಡಿ
ಆಗ ನಿಮ್ಮೊಂದಿಗೆ ಇಡೀ ಸಮಾಜವೇ ಬರುವುದು ನೋಡಿ

ಸಮಾಜವನು ಒಡೆಯುವುದಕೆ ರಾಜಕಾರಣಿಗಳು ಸಾಕು
ಅವರು ಮಾಡುವ ಕೆಲಸಕ್ಕೆ ನಿಮ್ಮ ಸಹಕಾರ ಏಕೆ ಬೇಕು

ಮುಂಬರುವ ಹೋಳಿಯ ಬಣ್ಣಕ್ಕೆ ತಣ್ಣೀರೆರಚದಿರಿ ಇನ್ನು
ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು
*****************************

Rating
No votes yet

Comments