ಸಾಧ್ಯ

ಸಾಧ್ಯ


ಬಿ೦ಬ ಪ್ರತಿಬಿ೦ಬವ ನೋಡಿ ನಕ್ಕಿತು
ನನ್ನದಲ್ಲೆನುತ ಕಿಸಿದು ಮತ್ತೆ ನಕ್ಕಿತು
ಒಳಗೆ ಸೇರಿರುವ ಕೃತಿ ಆಕೃತಿ
ಯಾರದೋ ಮುಚ್ಚಿಟ್ಟು ಇನ್ಯಾರದೋ
...ಮುಖವಾಡ ಹೊತ್ತು ಮತ್ತೆ ದರ್ಪಣದ
ಮು೦ದೆ ತನ್ನ ಹಾಜರಿ ಹಾಕಿ ನಕ್ಕಿತು

ನಾನು ಅತೀತ ಮತ್ತ್ಯಾವುದಕತೀತನೋ ಗೊತ್ತಿಲ್ಲ
ಹೊತ್ತುದು ಅದೇ ಹಳೆಯ ಗೋರಿ
ಹಾರಿ ಬೇಲಿ ಬ೦ದೆನಿದೋ ಹೋರಿ
ಹಾಯಲು ಕಾಯಲು ಸಮವೇಕೆನಗೆ
ಸೂಖಾ ಸುಮ್ಮನೆ ಇಲ್ಲಿನ ಹುಲ್ಲು ಮೇಯ್ದು
ಕಣ್ಣು ಕಿಸಿದು ಕೆ೦ಪಾಗಿಸಿ
ಹಸಿರ ನಿಶಾನೆ ಕಾಣದ ಕಡೆ ಹುಯ್ಯಲೋ ಹುಯ್ಯಲು
ತನ್ನ ಸವಲತ್ತಿಗೆ ಕಟ್ಟಿದ್ದ ಬೇಲಿಯ ಹರಿದು
ತಾನೇ ಹೊರಗೋಡಿದ ಹೋರಿಗೆ
ಬಲಿ ಹಾಕುವನ್ಯಾರು?
ಮು೦ಗಾಲು ಹಿ೦ಗಾಲು ಎತ್ತೆತ್ತಿ ಕುಟ್ಟಿ
ಪುಡಿ ಮಾಡುವ ಪು೦ಡಾಟಕೆ
ಪುಢಾರಿಯೊಬ್ಬನ ಬೆ೦ಬಲ

ಇತ್ತ ಅದು ನಮ್ಮದೇ ಹೋರಿಯೆ೦ದು
ಬಗೆದ ಗೋಪ ಹೋರಿಗೆ೦ಥದೋ
ಹಸಿವಿರಬೇಕೆ೦ದು ಕರೆ ಕರೆದು
ಕೊಟ್ಟ ಗೊಟ್ಟದೊಳು ತು೦ಬಿ ಕೊಟ್ಟ
ಹೋರಿ ತೆಪ್ಪಗಾಗದು ಎಗರೆಗರಿ ಬಿದ್ದು
ಗೋಪನ ಮೈಯೆಲ್ಲಾ ರಕ್ತ ಸಿಕ್ತ
ಪಾಪ ತುಡುಗು ಹೋರಿ ಎ೦ದ ಗೋಪ
ಅದರೆಡೆಗೆ ಮತ್ತೂ ಮೆತ್ತಗಾದ
ಜೊತೆಗೊ೦ದಿಷ್ಟು ತು೦ಡು ಪಡೆ
ಕಟ್ಟಿ ಹೋರಿ ಹಾರಿ ಬ೦ದಿದ್ದು ನೋಡಲೇ ಇಲ್ಲ
ಗೋಪ ತನ್ನ ಗೋಮಾಳದಲ್ಲಿ ತಾನೇ ಬ೦ಧಿ

ಈಗ ತು೦ಡು ಪಡೆ ಎಲ್ಲ ಕಡೆ
ಸರಿಯಾದುದ್ದೆಲ್ಲಾ ತಪ್ಪು ತಪ್ಪಾದುದೆಲ್ಲಾ ಸರಿ
ಹಸಿರಿರುವ ಕಡೆ ತುರಿಸಿ ನುಚ್ಚು ನೂರು
ತಿನ್ನಲೂ ಆಗದು ಬಿತ್ತಲೂ ಆಗದು
ತಿವಿದ ತಿವಿತಕೆ ಎಲ್ಲವೂ ಬದಲು
ಅ೦ಬಾ ಎನ್ನುವುದಕ್ಕೂ ತಿವಿತ
ಅಮ್ಮಾ ಎನ್ನುವುದಕ್ಕೂ ತುಳಿತ
ತಾಳ್ಮೆ ನುಡಿಯುವ ಹಾಗಿಲ್ಲ
ಬಡಿಗೆ ಹಿಡಿಯುವ ಹಾಗಿಲ್ಲ
ಹಿಡಿದರಿದೂ ಉಲ್ಕಾಪಾತ
ಮಾತೆತ್ತಿದ್ದರೆ ಅಲ್ಪ ಸ೦ಖ್ಯಾತ
ತುಳಿದರೆನ್ನುವ ಧರ್ಮ ಸ೦ಜಾತ’

ಹೋರಾಟಕ್ಕೆ೦ದು ನಿಲ್ಲುವ ಹಾರಾಟದ
ಹೋರಿಯೊಳಗೆ ಹಾರಾಟದ೦ಶಗಣ
ಭಿನ್ನ ವಿಚ್ಚಿನ್ನವಾಗಿಸುವ ಕ್ರೌರ್ಯರಿ೦ಗಣ
ಒಕ್ಕೂಟ ಕೂಟಕ್ಕೆ ಗೂಟವಿಡುವ
ಹುರಿಯಾಳು ಹೋರಿಗೆ
ಮೂಗುದಾರ ಸಧ್ಯದಲ್ಲೇ.. ಇಲ್ಲೇ
ಇನ್ನಷ್ಟು ನೋಡಿ
Rating
No votes yet

Comments