ಸಾಫ್ಟ್ ವೇರ್ ಕಂಪನಿ ಸೇರಿ!!!
ಗೆಳೆಯ ಕಳಿಸಿದ ಇಮೇಲ್ನಲ್ಲಿ ಬಂದ ಕವನ, ಬರೆದವರು ಯಾರೋ ಗೊತ್ತಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ನಿಜ ಇದೆ ಇದರಲ್ಲಿ. ಸಾಫ್ಟವೇರ್ ಇಂಜಿನಿಯರ್ ಜೀವನ ಹೀಗೂ ಇರುತ್ತೆ!!!
ಕವನ ಕೆಟ್ಟದಾಗಿದ್ರು, ಒಳ್ಳೆದಾಗಿದ್ರು ಎರಡು ಬರೆದವರಿಗೆ ಸೇರುತ್ತದೆ.
ಕಷ್ಟಪಟ್ಟು ಇಂಜಿನಿಯರಿಂಗ್ ಸೇರಿದ್ವಿ , ೪ ವರ್ಷ ಪರೀಕ್ಷೆ ಬರೆದು ಪಾಸದ್ವಿ,
ಸಾಫ್ಟ್ ವೇರ್ ಕಂಪನಿ ಸೇರಿ ಎಲ್ಲ ಹಾಳಗೊಯ್ತಲ್ಲಾ.
ಸಂಜೆ ಆದ್ರೆ ಆಟ ಆಡ್ತಿದ್ವಿ, ಕ್ಲಾಸ್ ಬಂಕ್ ಮಾಡಿ ಸಿನಿಮಾಗೆ ಹೋಗ್ತಿದ್ವಿ,
ಸಾಫ್ಟ್ ವೇರ್ ಕಂಪನಿ ಸೇರಿ ವೀಕೆಂಡ್ಗೆ ಕಾಯೊಂಗಾಯ್ತಲ್ಲಾ.
ಪೈಸೆ ಪೈಸೆಗೂ ಮನೆಯವರಿಗೆ ಲೆಕ್ಕ ಹೇಳಿ ಇಸ್ಕೊಳ್ತಿದ್ವಿ.
ಸಾಫ್ಟ್ ವೇರ್ ಕಂಪನಿ ಸೇರಿ ದುಡ್ಡಿಗೆ ಬೆಲೆ ಇಲ್ದಂಗೆ ಆಗೊಯ್ತಲ್ಲಾ.
ಕಾಲೇಜ್ಗೆ ಹೋದರು ಕ್ಲಾಸ್ಗೆ ಹೋಗ್ತಿರ್ಲಿಲ್ಲ , ಕಾಲೇಜ್ಗೆ ಹೋದರು ಪಾಠ ಕೇಳ್ತಿರಲಿಲ್ಲ.
ಸಾಫ್ಟ್ ವೇರ್ ಕಂಪನಿ ಸೇರಿ ಕೆಲಸ ಇಲ್ದೆ ಫಾರ್ವರ್ಡ್ ಮೇಲ್ಸ್ ಒದೊಂಗಾಯ್ತಲ್ಲಾ.
ಪರೀಕ್ಷೇಲಿ ಫೈಲ್ ಆದರು ಅಳ್ತಿರ್ಲಿಲ್ಲ, ಜೇಬಲ್ಲಿ ದುಡ್ಡಿಲ್ಲದಿದ್ದರು ಯೋಚಿಸುತ್ತಿರಲಿಲ್ಲ.
ಸಾಫ್ಟ್ ವೇರ್ ಕಂಪನಿ ಸೇರಿ ಮುಂದೆ ಜೀವನ ಹೆಂಗಪ್ಪ ಅನ್ನೋಹಂಗಾಯ್ತೊಲ್ಲಾ.
ಮಜಾ ಮಾಡೋದು ಮರ್ತಿರ್ಲಿಲ್ಲ , ಬೇಜಾರು ಅಂದ್ರೆ ಏನು ಗೊತ್ತ್ರ್ಲಿಲ್ಲ.
ಸಾಫ್ಟ್ ವೇರ್ ಕಂಪನಿ ಸೇರಿ ಜೀವನವೇ ಬೇಜಾರ್ ಆಗೋಯ್ತಲ್ಲಾ.
ಯಾರ್ ಏನೇ ಅಂದ್ರು ತಲೆ ಕೆಡಿಸ್ಕೊತಿರ್ಲಿಲ್ಲ, ಹುಡ್ಗೀರು ಲೊಫರ್ಸ್ ಅಂದ್ರು ಕೇರ್ ಮಾಡ್ತ್ರ್ಲಿಲ್ಲ.
ಸಾಫ್ಟ್ ವೇರ್ ಕಂಪನಿ ಸೇರಿ ಈ ತರ ಕವನ ಬರೆದು ಲೊಫರ್ಸ್ ಇಂದ ಫಿಲೋಸೋಪೆರ್ಸ್ ಆಗೋದ್ವಲ್ಲಾ.... !!!!!
Comments
ಉ: ಸಾಫ್ಟ್ ವೇರ್ ಕಂಪನಿ ಸೇರಿ!!!
In reply to ಉ: ಸಾಫ್ಟ್ ವೇರ್ ಕಂಪನಿ ಸೇರಿ!!! by ಅರವಿಂದ್
ಉ: ಸಾಫ್ಟ್ ವೇರ್ ಕಂಪನಿ ಸೇರಿ!!!
In reply to ಉ: ಸಾಫ್ಟ್ ವೇರ್ ಕಂಪನಿ ಸೇರಿ!!! by Rakesh Shetty
ಉ: ಸಾಫ್ಟ್ ವೇರ್ ಕಂಪನಿ ಸೇರಿ!!!