ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರು
ಮೇರ ಭಾರತ್ ಮಹಾನ್
============
ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರು
ರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು
ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು
ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲು
ಕಪ್ಪು ಹಣದ ದೂರ್ತರ ಕೂಟಕ್ಕೆ ಬಲಿಯಾಯಿತು ದೇಶ
ಭಾರತಾಂಭೆಯ ಆತ್ಮ ಕೂಗುತಿದೆ "ಉಳಿಸು ನನ್ನ ದೇವ"
ಎಲ್ಲಡೆಯು ಅರಾಜಕತೆಯ ನಗ್ನ ನರ್ತನ,ವಿಕೃತಿಗಳ ದರ್ಶನ
ದ್ವನಿಯೇಕೊ ಗಂಟಲಲ್ಲಿಯೆ ಉಳಿಯುತ್ತಿದೆ ಕೂಗಲು ಹೋದರೆ
" ಮೇರ ಭಾರತ್ ಮಹಾನ್"
Rating
Comments
ಗುರುಗಳೇ-
ಗುರುಗಳೇ-
ಇನ್ನೂ ಮೂಕ ಪ್ರೇಕ್ಷಕರಾಗಿ ನಾವುಳಿದರೆ -ಆ ಅಪರಾಧಗಳಿಗೆ -ಅನ್ಯಾಯಕ್ಕೆ ನಾವೂ ಕಾರಣರು ಎಂಬ ಭಾವ ನನ್ನಲ್ಲಿ ಮೂಡುತಿದೆ...
ಸ್ವಾತಂತ್ರ್ಯ ನಂತರದ ಈ ಕೆಲವೇ ವರ್ಷಗಳಲ್ಲಿ ಭಾರತದ ಸ್ಥಿತಿ ಹೀಗಾದರೆ -ಇನ್ನು ಮುಂದಿನ ದಿನಗಳಲ್ಲಿ ಅದೆಸ್ಟು ಹದಗೆಡಬಹುದೋ ಎಂಬ ಆತಂಕ..
"ನನ್ನ ಪ್ರಕಾರ ಅತ್ಯಾಚಾರಕ್ಕೆ
"ನನ್ನ ಪ್ರಕಾರ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ವಿಧಿಸ ಬೇಕು. ಅದರ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ತೋರಿಸುವದನ್ನು ನಿಲ್ಲಿಸಬೇಕು. ಬಹುಶಃ ಅದೂ ಸಹ ಸಮಾಜದ ಮೇಲೆ ತನ್ನ ಕೆಟ್ಟ ಪರಿಣಾಮ ಬೀರುತ್ತಿರಬಹುದು. ಇಂತಹ ಹೀನ ಕೃತ್ಯಕ್ಕೆ ಪ್ರಚೋದಿಸುತ್ತಿರಬಹುದು"
ಇದು ನಿಜವಾಗಿಯೂ ಮನುಕುಲ ಅದರಲ್ಲೂ ನಾವ್ ನವ ಭಾರತದ -ನವ ತರುಣರು -ಹುಡುಗರು ತಲೆ ತಗ್ಗಿಸಬೇಕಾದ ವಿಚಾರ..
ಇದನ್ನು ಯಾರೋ ಮಾಡಿದ್ದರೂ ಅದ್ಕೆ ನಾವೂ ಒಂದಲ್ಲ ಒಂದು ವಿಧದಲ್ಲಿ ಕಾರಣರು ಎಂಬ ಅಪರಾಧಿ ಭಾವ ಮನದಲ್ಲಿ ಮೂಡುತಿದೆ..
ಈ ವಯಸಿನ ತರುಣರು ಅಂದು ಸ್ವಾತಂತ್ರ್ಯಕ್ಕಾಗಿ ನಗು ನಗುತ್ತ ಗಲ್ಲಿಗೇರಿದರು -ಅದು ಸ್ವಾತಂತ್ರ್ಯಕ್ಕಾಗಿ.
ಅಂದು ಅವರು ಮಾಡಿದ ತ್ಯಾಗ-ಬಲಿದಾನ-ಸಶಕ್ತ-ಸುಂದರ -ಸದೃಢ -ಭಾರತಕ್ಕಾಗಿ
ಆದರೆ ಇಂದು ಟೀ ವಿ-ಮುದ್ರಣ-ದೃಶ್ಯ ಮಾಧ್ಯಮಗಳಿಂದ ಅವುಗಳ ಕಾಮ ಪ್ರಚೋದಕ ದೃಶ್ಯಗಳು -ಕಾರ್ಯಕ್ರಮಗಳು-ಮೊಬೈಲ್ ನೆಟ್ ಕಾರಣವಾಗಿ ಹದಿಹರೆಯದವರು ಹಾದಿ ತಪ್ಪಿ ಅಡ್ಡ ದಾರಿ ಹಿಡಿದು ಮಾಡುತ್ತಿರುವ ಈ ಕೆಟ್ಟ ಕೆಲಸಗಳು ಖಂಡನೀಯ -ಅಂಥವರಿಗೆ ಅತ್ಯುಗ್ರ ಶಿಕ್ಷೆ ಕೊಡಬೇಕು..
ಈಗಿರುವ ದುರ್ಬಲ ಕಾನೂನುಗಳು-ಪ್ರಕರಣಗಳ ಆಮೆ ವೇಗದ ವಿಚಾರಣೆ -ವಿಚಾರಣ ನೆಪದಲ್ಲಿ ಹಿಂಸೆ (ಮಾನಸಿಕ)-ಕೇಸ್ ಮುಂದಕ್ಕೆ ಹಾಕುವುದು ಇತ್ಯಾದಿ ತೊಡಕುಗಳು ನಿವಾರಿಸಿ ಆತಿ ತ್ವರಿತ ನ್ಯಾಯ ಸಿಕ್ಕು ಅಪರಾಧಿಗಳಿಗೆ ಶಿಕ್ಷೆ ಆಗಬೇಕು..
ಸಹೋದರಿ ನಿರ್ಭಯ ರ ಈ ಘಟನೆಯಲ್ಲಿ ಎಲ್ಲ ಮಾಧ್ಯಮಗಳು ಸ್ವ ನಿಯಂತ್ರಣ ಹಾಕಿಕೊಂಡು ವರ್ತಿಸದ ಪರಿ ಅಭಿನಂದನಾರ್ಹ..
ಈ ಘಟನೆ ನಂತರ ಯುವ ಜನತೆಯ ವ್ಯಾಪಕ ಪ್ರತಿಭಟನೆ -ಬೀದಿಗಿಳಿದು ಪ್ರತಿಭಟಿಸಿದ ಯುವ ಜನತೆಯ ಬಗ್ಗೆ ಹೆಮ್ಮೆ ಅನಿಸುತ್ತಿದೆ..
ಆ ನಂತರವೂ ಈ ತರಹದ ಅತ್ಯಾಚಾರದ ಘಟನೆಗಳು ದಿನ ನಿತ್ಯ ನಡೆಯುತ್ತಿರುವುದು- ಅಪರಾಧಿಗಳಿಗೆ ಭಯ ಇಲ್ಲದಿರುವಿಕೆ ತೋರಿಸುತ್ತಿದೆ.ಈ ಕಾರಣಕ್ಕಾಗಿಯಾದರೂ ಈಗಿರುವ ಕಾನೂನು ತೊಡಕು ನಿವಾರಿಸಿ ಅತ್ಯುಗ್ರ ಶಿಕ್ಷೆಯನ್ನ ತ್ವರಿತವಾಗಿ ನೀಡಿ ಆ ತರಹದ ಅಪರಾಧಗಳಿಗೆ ಕಡಿವಾಣ ಹಾಕಿ ಅಪರಾಧ ಎಸಗುವವರು ಭಯ ಪಡುವ ಹಾಗೆ ಮಾಡುವ ಅವಶ್ಯಕತೆ ಇದೆ...
ಮುಂದೆಂದೂ ಈ ತರಹದ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸುವೆ...
ಸಕಾಲಿಕ ಅಶ್ರು ತರ್ಪಣ . ಸಂತಾಪಪ ಬರಹ.
ಸಹೋದರಿ ನಿರ್ಭಯ ಆತ್ಮಕ್ಕೆ ಶಾಂತಿ ಸಿಗಲಿ- ಆವರ ಅಕಾಲಿಕ ಅಂತ್ಯಕ್ಕೆ ಕಾರಣರಾದ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಆಗಲಿ...
\|
In reply to "ನನ್ನ ಪ್ರಕಾರ ಅತ್ಯಾಚಾರಕ್ಕೆ by venkatb83
ಇದಕ್ಕೆಲ್ಲ ಉತ್ತರ ಇವತ್ತಿನ
ಇದಕ್ಕೆಲ್ಲ ಉತ್ತರ ಇವತ್ತಿನ "ಮಾಧ್ಯಮ" ಅಂತ ನನಗನ್ಸುತ್ತೆ....