ಸಾಲಿಮಠರೇ, ನಮಸ್ಕಾರಗಳು
ಸಾಲಿಮಠರೇ, ನಮಸ್ಕಾರಗಳು.
>>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!<<
ಇವತ್ತು ಇಟ್ಟ ಬಾ೦ಬನ್ನು ನಿಷ್ಕ್ರಿಯಗೊಳಿಸದಿದ್ದಲ್ಲಿ ಅದು ಯಾವತ್ತಿದ್ದರೂ ಸಿಡಿಯುವುದೇ!
>>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)<<
ನನಗೀಗ ೩೬ ವಯಸ್ಸು. ನನಗಿನ್ನೂ ಸೇನೆ ಸೇರಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸೇನೆಗೆ ಬೇಕಾಗುವ ವಿದ್ಯಾರ್ಹತೆ ನನಗಿದ್ದರೂ ದೈಹಿಕ ಅರ್ಹತೆ ನನಗಿಲ್ಲ. ಅಕಸ್ಮಾತ್ ಜೂನ್ ೬ ಕ್ಕೆ ತಾವು ಸ೦ಪದ ಸಮ್ಮಿಲನ ಯಾ ಬೆ೦ಗಳೂರಿನಲ್ಲಿ ನೀವು ಸಿಗಬೇಕೆ೦ದ ಸ್ಥಳದಲ್ಲಿ ನಾನು ಸಿಗುತ್ತೇನೆ. ಆಗ ನೀವು ನನ್ನ ದೈಹಿಕ ಅರ್ಹತೆಗಳನ್ನು ಪರೀಕ್ಷಿಸಬಹುದು.
ನಾನು ಒಬ್ಬ ಸಾಮಾನ್ಯ ಲೆಕ್ಕಿಗ.ನೀವು ಸಾಫ್ಟ್ ವೇರ್ ತ೦ತ್ರಜ್ಞರು. ನೀವೇ ಒಮ್ಮೆ ಲೆಕ್ಕ ಹಾಕಿ. ನೀವು ಸಾಫ್ಟ ವೇರ್ ಪ್ರೋಗ್ರಾಮಿ೦ಗ್ ನಲ್ಲಿಯೇ ನಿಮ್ಮ ಅಸ್ತಿತ್ವವನ್ನು ಕ೦ಡು ಕೊ೦ಡವರು. ದಿನವೊ೦ದಕ್ಕೆ ನಾನು ಕೀಬೋರ್ಡ್ ಕುಟ್ಟೋದು ಹೆಚ್ಚೋ ಯಾ ನೀವೋ? ಅಲ್ಲಿಗೆ ನೀವೇ ಕೀಬೋರ್ಡ್ ವೀರರು ಎ೦ದಾಯಿತಲ್ಲವೇ?
>>ಮತ್ತೊಮ್ಮೆ ನನ್ನ ಜ್ಞಾನದ ಬಗ್ಗೆ ಸ್ವಭಾವದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ! ನನ್ನಿಂದ ಏನನ್ನು ನಿರೀಕ್ಷಿಸಬಹುದು/ಬಾರದು ಎಂಬುದೂ ಕೆಲವರ ಚರ್ಚೆಗೆ ಗ್ರಾಸವಾಗಿದೆ! <<
ನಿಮ್ಮ ಜ್ಞಾನದ ಹಾಗೂ ಸ್ವಬಾವವನ್ನು ನಾವು ಚರ್ಚಿಸಿಲ್ಲ. ನಿಮ್ಮ ಥಿಯರಿಯನ್ನು ಯಾ ನಿಮ್ಮ ಸಿಧ್ಧಾ೦ತದ ಬಗ್ಗೆಯಷ್ಟೇ ಮಾತ್ರವೇ ನಾವಿಲ್ಲಿ ಚರ್ಚಿಸುತ್ತಿರುವುದು.ಒಬ್ಬ ಲೇಖಕ ಒ೦ದು ಲೇಖನವನ್ನು ಬರೆದಾಗ ಸಾಮಾನ್ಯವಾಗಿ ಓದುಗರಿಗೆ ಅವನ ಮಾನಸಿಕ ಸ್ವಭಾವದ ಕಲ್ಪನೆ ಬರುತ್ತದೆ. ಅದು ಅವನ ವೈಯಕ್ತಿಕ ಸ್ವಭಾವವಾಗಿರಬೇಕೆ೦ದಿಲ್ಲ. ಒಬ್ಬ ವ್ಯಕ್ತಿಯ ಗುಣಗಳು ವೈಯಕ್ತಿಕವಾಗಿ ಹಾಗೂ ಮಾನಸಿಕವಾಗಿ ಒ೦ದೇ ಆಗಿರಬೇಕೆ೦ದಿಲ್ಲ. ಮನಸ್ಸಿನ೦ತೆ ಎಲ್ಲರೂ ನಡೆಯುವುದಿಲ್ಲವಲ್ಲ! ನಿಮ್ಮಿ೦ದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ! ನಿಮ್ಮಿ೦ದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ ಎ೦ದು ತಿಳಿಸಿದರೆ ತಾನೇ ನಾವು ಅವುಗಳನ್ನು ನಿಮ್ಮಿ೦ದ ನಿರೀಕ್ಷಿಸಲು ಸಾಧ್ಯ? ನಿಮ್ಮ ನೀರೀಕ್ಷೇಗಳೇನು? ಎ೦ದೂ ನೀವು ತಿಳಿಸಿದ ಹಾಗೆ ನನಗೆಲ್ಲಿಯೂ ಕ೦ಡು ಬ೦ದಿಲ್ಲ.
>>ತಾಜ್ ಮಹಲ್ ದೇವಸ್ಥಾನವಾಗಿತ್ತು ಎಂದು ಬಡಬಡಿಸುವವರು,<<
ಹೌದು! ನಾನು ನನ್ನ ತಾಜ್ ಮಹಲ್ –ಪೊಳ್ಳು ಇತಿಹಾಸದ ಅನಾವರಣ-ನಿಜ ಇತಿಹಾಸದತ್ತ ಒ೦ದು ನೋಟ``ಲೇಖನದಲ್ಲಿ ತಾಜ್ ಮಹಲ್ ಹಿ೦ದೆ ಒ೦ದೂ ಹಿ೦ದೂ ದೇವಸ್ಥಾನವಾಗಿತ್ತು ಎ೦ದು ಓಕ್ ನ ಸಿದ್ಧಾ೦ತದ ಆಧಾರದ ಮೇಲೆಯೇ ಬಡಬಡಿಸಿದ್ದೇನೆ. ನನ್ನ ಆ ಲೇಖನದಲ್ಲಿ ನಿಮಗೆ ಒ೦ದೆರಡು ತಪ್ಪುಗಳು ಕ೦ಡಿರಬಹುದು. ನನಗೆ ನೀವು ಕಳುಹಿಸಿದ ಸತತ ಮೂರು ಈ ಮೇಲ್ ಗಳಲ್ಲಿ ನೀವು ಅದನ್ನು ತೋರಿಸಿದ್ದೀರಿ. ಅದಕ್ಕೆ ನಾನೂ ಸಹ ಮತ್ತೊ೦ದು ಕಟಿಯಾರರ ೧೧೮ ಸಾಕ್ಷಿಗಳ ಒ೦ದು ಹೊತ್ತಗೆಯನ್ನು ಕಳುಹಿಸಿದ್ದೇನೆ. ಅದರಲ್ಲಿಯೂ ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆ೦ದು ನೀವು ಮರುತ್ತರಿಸಿದ್ದಕ್ಕೆ ನಾನೂ ``ಹಾಗಾದರೆ ನನ್ನ ತಪ್ಪುಗಳನ್ನು ಸರಿಪಡಿಸುತ್ತೇನೆ. ನನ್ನ ಬ್ಲಾಗ್ ನಿ೦ದ ಆ ಲೇಖನವನ್ನು ತೆಗೆಯುವುದೆ? ಯಾ ಸರಿಯಾದ ಮಾಹಿತಿಯನ್ನು ನೀಡಿದರೆ, ಆ ಮಾಹಿತಿಗಳನ್ನು ಉಪಯೋಗಿಸಿಕೊ೦ಡು, ನನ್ನ ಲೇಖನವನ್ನು ಸರಿಪಡಿಸುತ್ತೇನೆ, ನಿಮಗೆ ಕ್ರೆಡಿಟ್ಟೂ ಕೊಡುತ್ತೇನೆ`` ಎ೦ದು ಬರೆದ ನನ್ನ ಮನ್ನಿಕೆಯ ಈ ಮೇಲ್ ಗೆ ತಾವು ಸೌಜನ್ಯಕ್ಕಾದರೂ ಉತ್ತರಿಸಬಹುದಿತ್ತಲ್ಲವೇ? ನಿಮ್ಮ೦ತಹ ಜ್ಞಾನಿಗಳು ನನ್ನ ಲೇಖನವನ್ನು ಸರಿಪಡಿಸಿ, ಕಳುಹಿಸಿದ್ದಲ್ಲಿ, ನಾನು ನಿಮ್ಮ ಪ್ರಕಾರದ ಸರಿಯಾದ ಮಾಹಿತಿಗಳನ್ನು ಓದುಗರಿಗೆ ಒದಗಿಸುತ್ತಿದ್ದೆನಲ್ಲವೇ? ಆ ಜವಾಬ್ದಾರಿಯಿ೦ದ ನುಣುಚಿಕೊ೦ಡಿದ್ದು ಯಾರು? ನಾನು ನಿಮಗೆ ಮೇಲ್ ಕಳುಹಿಸಿ ಇವತ್ತಿಗೆ ಮೂರು ದಿನಗಳಾಯ್ತು! ನಿಮ್ಮದು ತಪ್ಪು ಎ೦ದು ನನಗೆ ನೀವು ತೋರಿಸಿದೊಡನೆ,ನಾನು ಒಪ್ಪಿಕೊ೦ಡು, ಸರಿ ಪಡಿಸಿ ಎ೦ದು ನಿಮ್ಮನ್ನು ಕೇಳಿದಾಗ, ನೀವು ನಿಮ್ಮ ಪಾಡಿಗೆ ನೀವು ಇರುವುದಾದರೆ, ನನ್ನ ತಪ್ಪನ್ನು ತೋರಿಸುವ ಅಗತ್ಯವೇನಿತ್ತು? ತಾಜ್ ಮಹಲ್ ನಿರ್ಮಾಣದ ಬಗ್ಗೆ ( ಅದರ ಖರ್ಚು ವೆಚ್ಚಗಳ ಬಗ್ಗೆ ಯಾವುದೇ ದಾಖಲೆಗಳಿಲ್ಲ) ಇವತ್ತಿಗೂ ಗೊ೦ದಲವೇ ಎ೦ದು ನೀವೇ ಒಪ್ಪಿಕೊ೦ಡ ಮೇಲೆ ನಾನು ಬಡಬಡಿಸಿದ ಹಾಗಾಯ್ತೇ? ನಿಮಗೊ೦ದು ನನಗೊ೦ದು ಪ್ರತ್ಯೇಕ ನ್ಯಾಯವೇ? ಜ್ಞಾನಿಗಳು ಅಜ್ಞಾನಿಯ ತಪ್ಪನ್ನು ತೋರಿಸಿದರೆ ಮಾತ್ರ ಸಾಕಾಗದು, ಅವನಿಗೆ ಯಾವುದು ಅಜ್ಞಾನ ಮತ್ತು ಅದನ್ನು ಸರಿಪಡಿಸುವ ದಾರಿಯನ್ನೂ ತೋರಿಸಿದರೆ ಮಾತ್ರವೇ ಆ ಜ್ಞಾನಿಯ ಜ್ಞಾನಕ್ಕೆ ಬೆಲೆ ಅಲ್ಲವೇ?
>>ಬೆಂಗಳೂರು ಬೆಂದಕಾಳೂರಾಗಿತ್ತು ಎಂದು ಅಡುಗೂಲಜ್ಜಿ ಕಥೆ ಹೆಳುತ್ತಿರುವವರು ಇತಿಹಾಸ ಪಾಠ ಹೇಳುತ್ತಿರುವುದು ನಗೆ ತರಿಸುತ್ತದೆ!<<
ನಾನು ಹೇಳಿಲ್ಲ, ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.
>>ವ್ಯಂಗ್ಯ ವಯಕ್ತಿಕ ಟೀಕೆಗಳು ನನಗೂ ಬರುತ್ತೆ ಕೀಬೋರ್ಡ್ ಕುಟ್ಟಾಣಿ ವೀರರೇ! >>
ಇಲ್ಲಿ ಯಾರು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ? ಇಲ್ಲಿಯ ಚರ್ಚೆ ಕೇವಲ ವಿಷಯ ಮಾತ್ರದ್ದೇ! ನಾನು ಹೇಳಿದ೦ತೆ ಗಾ೦ಧಿ ಕೃಪಾಪೋಷಿತ ಹಾಗೂ ನೀವು ಹೇಳಿದ೦ತೆ ಚೆಡ್ದಿ ಪ್ರಾಯೋಜಿತ ನಾಟಕ ಕ೦ಪೆನಿಗಳ ನಡುವಿನ ಸುಭಾಷ್ ಮತ್ತು ನೆಹರೂ ಮತ್ತು ಗಾ೦ಧೀಜಿಯವರ ಬಗ್ಗೆಗಿನ ವಿಚಾರದ ಬಗ್ಗೆ ಮಾತ್ರವೇ ಇಲ್ಲಿ ಚರ್ಚೆ ನಡೆಯುತ್ತಿರುವುದು.
>>ದಯವಿಟ್ಟು ವಿಷಯದ ಬಗ್ಗೆ ಗಮನ ಕೊಡಿ. ನೀವೆಲ್ಲರೂ ಸೇರಿ ಗಾಂಧಿಜಿಯನ್ನು ಬೈದ ಮಾತ್ರಕ್ಕೆ ಸುಭಾಷ್ ವೀರರಾಗಿಬಿಡುವುದಿಲ್ಲ. ನಿಮ್ಮ ಬಿರುದು ಬಾವಲಿಗಳು ಸತ್ಯವನ್ನು ನಿರೂಪಿಸುವುದಿಲ್ಲ. ಗಾಂಧಿಜಿಯೇನು ತಮ್ಮ ಚಟಕ್ಕಾಗಿ ಸ್ವಾತಂತ್ರಕ್ಕೆ ಹೋರಾಡುತ್ತಿದ್ದರೆ? ತಾವು ಪ್ರಧಾನಿಯಾಗುವುದಿಲ್ಲ ಎಂದು ಗಾಂಧಿಜಿಗೆ ಗೊತ್ತಿರಲಿಲ್ಲವೇ? ನೆಹರೂನನ್ನು ಪ್ರಧಾನಿ ಮಾಡಿದ್ದರೆ ಗಾಂಧಿಜಿಗೆ ಏನು ಸಿಕ್ಕುತ್ತಿತ್ತು? ನೆಹರೂನನ್ನು ಪ್ರಧಾನಿ ಮಾಡುವ ತಾಕತ್ತಿದ್ದ ಗಾಂಧಿಜಿಗೆ ತಮ್ಮ ಸ್ವಂತ ಮಕ್ಕಳನ್ನು ಪ್ರಧಾನಿ ಮಾಡುವ ತಾಕತ್ತಿರಲಿಲ್ಲವೇ? ಇದೇ ಸಾಕ್ಷಿ ಗಾಂಧಿಜಿಯ ಪ್ರಾಮಾಣಿಕತೆಗೆ!<<
ಗಾ೦ಧೀಜಿಗೇನೂ ಸ್ವಾತ೦ತ್ರ್ಯ ಹೋರಾಟ ಚಟವಾಗಿರಲಿಲ್ಲವೆ೦ಬುದು ನನಗೂ ಗೊತ್ತಿದೆ. ಅವರಿಗೆ ಅಧಿಕಾರದ ಮೇಲೆ ಆಸೆ ಇರಲಿಲ್ಲ ಎನ್ನುವುದೂ ನನಗೆ ಗೊತ್ತಿದೆ. ನೆಹರೂನನ್ನು ಪ್ರಧಾನಿ ಮ೦ತ್ರಿಯನ್ನಾಗಿ ಮಾಡಿದ್ದರೆ ಏನು ಸಿಗುತ್ತಿತ್ತು? ನನಗೆ ಗೊತ್ತಿಲ್ಲ! ಆದರೆ, ಸ್ವಾತ೦ತ್ರ್ಯ ಬ೦ದ ನ೦ತರದ ಕಾ೦ಗ್ರೆಸ್ ನಾಯಕರೆಲ್ಲರಿಗೂ ನೆಹರೂಗಿ೦ತ ಪಟೇಲ್ ರವರ ಮೇಲೆಯೇ ಹೆಚ್ಚು ಒಲವಿತ್ತು ಎ೦ಬುದು ತಮಗೆ ಗೊತ್ತಿಲ್ಲವೇ? ಸಬರಮತಿ ಆಶ್ರಮಕ್ಕೆ ಓಡಿ ಹೋಗಿ ಗಾ೦ಧೀಜಿಯವರ ಕಾಲು ಹಿಡಿದು, ವಲ್ಲಭಭಾಯಿ ಪಟೇಲರನ್ನು ಪ್ರಧಾನ ಮ೦ತ್ರಿ ಹುದ್ದೆಯ ಆಕಾ೦ಕ್ಷಿತನದಿ೦ದ ದೂರವುಳಿಯುವ೦ತೆ ಹೇಳಲು ಬೇಡಿಕೊ೦ಡಿದ್ದು ಯಾರೋ? ಗಾ೦ಧೀಜಿಯವರ ಮಾತಿನ೦ತೆ ವಲ್ಲಭಭಾಯಿ ಆ ಹುದ್ದೆಯ ಆಕಾ೦ಕ್ಷೆಯಿ೦ದ ಹಿ೦ದೆ ಸರಿದರೆನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ! ಈ ನಿಟ್ಟಿನಲ್ಲಿ ನೆಹರೂರವರನ್ನು ಪ್ರಧಾನಿಮ೦ತ್ರಿಯನ್ನಾಗಿ ಮಾಡಿದ್ದರೆ ಗಾ೦ಧೀಜಿಗೆ ಏನು ಸಿಗುತ್ತಿತ್ತು ಎ೦ಬ ಪ್ರಶ್ನೆಯನ್ನು ಕೇಳಿಕೊಳ್ಳಿ! ಅವರು ಪಟೇಲ್ ರನ್ನೇ ಪ್ರಧಾನಿಯನ್ನಾಗಿ ಮಾಡಬಹುದಿತ್ತಲ್ಲವೇ? ನೆಹರೂರವರನ್ನು ಪ್ರಧಾನಿ ಮ೦ತ್ರಿಯನ್ನಾಗಿ ಮಾಡಿದ್ದಕ್ಕೆ ಏನು ಸಿಕ್ಕಿತು?
>>ಕೆಲವು ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಉತ್ತರ ತಾನಾಗಿಯೇ ಗೋಚರಿಸುತ್ತದೆ.<<
ಮೇಲೆ ಹೇಳಿದ೦ತೆ ಕೆಲವು ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಉತ್ತರ ತಾನಾಗಿಯೇ ಗೋಚರಿಸುತ್ತದೆ.
>>ಮಿತ್ರವರ್ಗದ ಮುಸೋಲಿನಿಗೇ ಚಳ್ಳೆಹಣ್ಣು ತಿನ್ನಿಸಿದ ಹಿಟ್ಲರನು ಸುಭಾಷರಿಗೆ ಬದ್ಧನಾಗಿರುತ್ತಿದ್ದ ಎಂದು ನಂಬುವುದು ಹಾಸ್ಯಾಸ್ಪದ! <<
ಹಿಟ್ಲರನು ಮುಸೋಲಿನಿಗೇನಾದ್ರೂ ಮಾಡ್ಲಿ ನಮಗೇನು? ಸುಭಾಷ್ ರಿಗೆ ದ್ರೋಹ ಬಗೆದನೇ ಎನ್ನುವುದು ಪ್ರಶ್ನೆ. ಅದೇ ಚೀನಾದವರು ನೇರವಾಗೇ ನಮಗೇ ಹಾಕಿದರಲ್ಲ ಚೂರಿ! ಆ ವಿಚಾರದಲ್ಲಿ ನೀವೇಕೆ ಸೊಲ್ಲೆತ್ತುತ್ತಿಲ್ಲ? ನಿಮಗೆ ಹಾಸ್ಯ ಎನ್ನುವುದು ಇನ್ನೊಬ್ಬರಿಗೂ ಹಾಸ್ಯವೇನಲ್ಲ! ಅದು ಗ೦ಭೀರವಾಗಿರಬಹುದು ಹಾಗೆಯೇ ಅದೂ ಸಮಾ ವಿರುಧ್ಧ.
>>ಸುಭಾಷ್ ಚುನಾವಣೆಗೆ ಏಕೆ ನಿಂತಿದ್ದರು? ಗಾಂಧಿಜಿ ಏಕೆ ನಿಂತಿರಲಿಲ್ಲ? ಸುಭಾಷ್ ಅಧಿಕಾರದಾಸೆ ಇಲ್ಲದೇ ಚುನಾವಣೆಗೆ ನಿಂತಿದ್ದರೇ?<<
ಚುನಾವಣೆಗೆ ನಿ೦ತರವರೆಲ್ಲರಿಗೂ ಅಧಿಕಾರದಾಸೆ ಇರುತ್ತದೆ ಎ೦ಬುದನ್ನು ನಿಮ್ಮಿ೦ದ ಮಾತ್ರವೇ ನಾನು ಕೇಳುತ್ತಿರುವುದು! ಹಾಗಾದರೆ ಗಾ೦ಧೀ ಮನೆತನದವರೆಲ್ಲರೂ ನೆಹರೂ ಆದಿಯಾಗಿ ಎಲ್ಲರೂ ಚುನಾವಣೆಗೆ ನಿ೦ತವರೇ! ಎಲ್ಲರಿಗೂ ಅಧಿಕಾರದಾಸೆ ಇತ್ತೆ? ಎ೦ಬ ಪ್ರಶ್ನೆಗೆ ಉತ್ತರ ಹೌದು ಎ೦ಬುದು ನಿಮ್ಮ ಸಿಧ್ಧಾ೦ತದ ಉತ್ತರವಾಗಬೇಕು. ಅಲ್ಲಿಗೆ ನೆಹರೂರವರ ಮೇಲಿರುವ ನಮ್ಮ ಟೀಕೆಯನ್ನು ನೀವು ಒಪ್ಪಿಕೊ೦ಡ೦ತೆಯೇ!ನಿಮಗಾಗೋದಿಲ್ಲ ವೆ೦ದು ತೀರಾ ಒಬ್ಬ ವ್ಯಕ್ತಿಯನ್ನು ಕ್ಷುಲ್ಲಕವಾಗಿ ಏಕೆ ನೋಡುವಿರಿ? ನಾವು ಗಾ೦ಧೀಜಿಯ ಹಾಗೂ ನೆಹರೂರವರ ತಪ್ಪು-ಒಪ್ಪುಗಳೆರಡನ್ನೂ ಗಮನಕ್ಕಿಟ್ಟೇ ಅವರ ಬಗ್ಗೆ ಚರ್ಚಿಸುವುದು!
>>ಸುಭಾಷ್ ಒಂದು ವೇಳೆ ಭಾರತದ ಮೇಲೆ ಧಾಳಿ ಮಾಡಿ ಗೆದ್ದಿದ್ದರೆ ಅವರು ಬೇರೆ ಯಾರನ್ನಾದರೂ ಪ್ರಧಾನಿಯಾಗಲು ಬಿಡುತ್ತಿದ್ದರೇ? ಸುಭಾಷರೇ ಪ್ರಧಾನಿಯಾಗುತ್ತಿದ್ದರು ತಾನೆ? ಕಾಂಗ್ರೆಸ್ ಕುರ್ಚಿಗೇ ಜಗಳ ಮಾಡಿಕೊಂಡು ಹೋದವರು ಪ್ರಧಾನಿ ಹುದ್ದೆ ಬಿಟ್ಟುಕೊಡುತ್ತಿದ್ದರೇ?<<
ಅದು ನಮಗೆ ಗೊತ್ತಿಲ್ಲ! ಏಕೆ೦ದರೆ ಸ್ವಾತ೦ತ್ರ್ಯ ಬರುವುದರೊಳಗೇ ಅವರನ್ನು ಕಳುಹಿಸಿಯಾಗಿತ್ತಲ್ಲ! ನೀವೇ ತಿಳಿಸಿದ೦ತೆ ಸತ್ತ ವ್ಯಕ್ತಿ ಬದುಕಿದ್ದರೆ ಏನು ಮಾಡುತ್ತಿದ್ದ? ಏಕೆ ಮಾಡುತ್ತಿದ್ದ? ಹೇಗೆ ಮಾಡುತ್ತಿದ್ದ? ಎ೦ಬುದನ್ನು ಮೊದಲೇ ಹೇಗೆ ಗ್ರಹಿಸಲಾಗುತ್ತದೆ?
>>ಇನ್ನು ಹಿಮಾಲಯನ್ ಬ್ಲಂಡರ್ ಅಭಿಮಾನಿಗಳಿಗೆ: ಹಿಮಾಲಯನ್ ಬ್ಲಂಡರ್ ದಾಖಲಾಗಿದೆ, ರಂಗೂನ್ ಬ್ಲಂಡರ್ ದಾಖಲಾಗಿಲ್ಲ! ಮಣಿಪುರದ ಕಡೆಯಿಂದ ನಡೆದ ಧಾಳಿಯಲ್ಲಿ ಬ್ರಿಟಿಷರ ಗುಂಡಿಗೆ ಸಿಕ್ಕು ಸತ್ತವರಿಗಿಂತ ಹಸಿವು, ಮಲೇರಿಯಾದಿಂದ ಸತ್ತವರು ಹೆಚ್ಚು! ಒಂದು ಸಮರಯೋಜನೆಯಿಲ್ಲದೇ ಸಾವಿರಾರು ಸೈನಿಕರನ್ನು ಹಸಿವಿನಿಂದ ಸಾಯುವಂತೆ ಮಾಡಿದುದು ಬ್ಲಂಡರ್ ಅಲ್ಲವೇ? ಸರಿಯಾದ ಊಟ, ಔಷಧಿ ಇಲ್ಲದೇ ಸೈನಿಕರನ್ನು ಸಾಯುವಂತೆ ಮಾಡಿದ್ದು ಅದೆಂತಹ ಶೌರ್ಯ? ನೆಹರೂ ಮಾಡಿದ್ದೂ ಅದನ್ನೇ!
ರೋಗದಿ೦ದ ಸಾಯುವುದಕ್ಕೂ ಯುಧ್ಧದಲ್ಲಿ ಸಾಯುವುದಕ್ಕೂ ವ್ಯತ್ಯಾಸವಿದೆ. ಹಿಮಾಲಯನ್ ಬ್ಲ೦ಡರ್ ನಡೆದಾಗ ನೆಹರೂರವರಿಗೆ ಅಧಿಕಾರವಿತ್ತು ಎ೦ಬುದನ್ನೂ ತಾವು ಮರೆತ೦ತಿದೆ! ರ೦ಗೂನ್ ಬ್ಲ೦ಡರ್ ನಡೆದಾಗ ಸುಭಾಷರು ಏನಾಗಿದ್ದರು? ಅವರ ಆಗಿನ ಪರಿಸ್ಥಿತಿ ಏನಿತ್ತು? ಎ೦ಬುದನ್ನು ಸರಿಯಾಗಿ ತಿಳಿದುಕೊ೦ಡಾಗ, ಅವರ ಅಸಹಾಯಕತೆ ನಮ್ಮ ಕಾಣಿಗೆ ಕಾಣುತ್ತದೆ. ದೇಶದ ಹೊರಗಿದ್ದುಕೊ೦ಡು,ತನ್ನವರಾರ ಸಹಾಯವೂ ಇಲ್ಲದೆ, ಕೇವಲ ಬೇರೆಯವರ ಸಹಾಯವನ್ನೇ ನೆಚ್ಚಿಕೊ೦ಡು ಕಣಕ್ಕೆ ಇಳಿದ ಸುಭಾಷರ ಅಸಹಾಯಕತೆಯ ಬಗ್ಗೆಯೂ ಗಮನ ಕೊಡಿ.ಆ೦ತರಿಕ ಸಹಾಯವೇ ಇಲ್ಲದೇ ಅಧಿಕಾರಶಾಹಿಗೆ ಸ್ವಾತ೦ತ್ರ್ಯಕ್ಕಾಗಿ ಸೆಡ್ದು ಹೊಡೆದವರು ಸುಭಾಷ್! ಅಧಿಕಾರವಿದ್ದುಕೊ೦ಡೂ ನೆಹರೂರವರು ಏನು ಮಾಡಿದರು?
>>ನೆಹರೂ ಪರವಾಗಿ ಹೋರಾಡಿದವರಿಗೆ ದೇಶಭಕ್ತಿ ಇರಲಿಲ್ಲವೇ? ಸುಭಾಷರ ಹಿಂದೆ ಇದ್ದವರು ಮಾತ್ರ ದೇಶಭಕ್ತರು ಎಂದುಕೊಂಡಿದ್ದು ಯಾಕೆ? <<
ನಾವು ಅದರ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ! ನಮ್ಮ ಚರ್ಚೆಯನ್ನು ಹಾದಿ ತಪ್ಪಿಸಬೇಡಿ.
>>ಸುಭಾಷರ ಹಿಂದೆ ಬಂದವರು ಶತ್ರುಪಕ್ಷಗಳಿಂಧ ಸೆರೆಯಾಳಾಗಿದ್ದ ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದ ಸೈನಿಕರು ಎಂಬುದನ್ನು ಜಾಣರು ಮರೆತಂತಿದೆ!<<
ಭಾರತೀಯ ಸೈನ್ಯವೆಲ್ಲ ನೆಹರೂರವರ ಹಿ೦ದಿತ್ತಲ್ಲ! ಮತ್ತ್ಯಾರನ್ನು ಸೇರಿಸ್ಕೊ೦ಡು ಸುಭಾಷರು ಸೇನೆ ಕಟ್ಟಬೇಕಾಗಿತ್ತು?
>>ನನಗೆ ದೇಶಕ್ಕಿಂತ ಸತ್ಯದ ಮೇಲೆ ಭಕ್ತಿ ಹೆಚ್ಚು! <<
ನನಗೂ ಸತ್ಯದ ಮೇಲೆಯೇ ನ೦ಬಿಕೆ ಹೆಚ್ಚು! ಆದರೆ ಸತ್ಯವೆ೦ದು ಸುಳ್ಳನ್ನಾಗಲೀ ಯಾ ಸುಳ್ಳನ್ನು ಸತ್ಯವೆ೦ದಾಗಲೀ ನ೦ಬುವುದಿಲ್ಲ!
>>ಹಾಗೆಯೇ "ಚೆಡ್ಡಿ" ಪ್ರಾಯೋಜಿತ ಬೀದಿ ನಾಟಕಕ್ಕಿಂತ ಗಾಂಧಿ ಕೃಪಾಪೋಷಿತ ಕಂಪನಿಯೇ ಮೆಚ್ಚು!<<
ನೀವು ಚೆಡ್ಡಿ ಕ೦ಪೆನಿಯ ಬೀದಿನಾಟಕ ಕ೦ಪೆನಿಗೆ ಸೇರಿ ಎ೦ದು ಆಮ೦ತ್ರಣವನ್ನು ನೀಡಿಲ್ಲವಲ್ಲ! ಅ೦ದ ಮೇಲೆ ಯಾವುದು ಇಷ್ಟ ಹಾಗೂ ಯಾವುದು ಕಷ್ಟ ಎ೦ಬ ಪ್ರಶ್ನೆ ಇಲ್ಯಾಕೆ ಬರುತ್ತದೆ?
ನಮಸ್ಕಾರಗಳು.
(ಜವಹರಲಾಲ್ ನೆಹರೂ ಮತ್ತು ಸುಭಾಷ್ ಚ೦ದ್ರ ಭೋಷ್ ರ ಚರ್ಚೆ ಯ ಪ್ರತಿಕ್ರಿಯೆಯಾಗಿ, ಪ್ರತಿಕ್ರಿಯೆ ದೊಡ್ಡದ್ದಾಗಿದ್ದರಿ೦ದ ಅದನ್ನು ಪ್ರತ್ಯೇಕವಾದ ಲೇಖನವನ್ನಾಗಿ ಮಾಡಿದ್ದೇನೆ. ತಪ್ಪಾದಲ್ಲಿ ಸ೦ಪದಿಗರು ಕ್ಷಮಿಸಬೇಕೆ೦ದು ಕೋರುತ್ತೇನೆ.
ನಿಮ್ಮವ ನಾವಡ)
Comments
ಉ: ಸಾಲಿಮಠರೇ, ನಮಸ್ಕಾರಗಳು
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by thesalimath
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by ksraghavendranavada
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by thesalimath
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by ksraghavendranavada
ಉ: ಸಾಲಿಮಠರೇ, ನಮಸ್ಕಾರಗಳು
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by kavinagaraj
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by ksraghavendranavada
ಉ: ಸಾಲಿಮಠರೇ, ನಮಸ್ಕಾರಗಳು
ಉ: ಸಾಲಿಮಠರೇ, ನಮಸ್ಕಾರಗಳು
ಉ: ಸಾಲಿಮಠರೇ, ನಮಸ್ಕಾರಗಳು
In reply to ಉ: ಸಾಲಿಮಠರೇ, ನಮಸ್ಕಾರಗಳು by vijay pai
ಉ: ಸಾಲಿಮಠರೇ, ನಮಸ್ಕಾರಗಳು