ಸಾಲುಗಳು - 4 (ನನ್ನ ಸ್ಟೇಟಸ್)

ಸಾಲುಗಳು - 4 (ನನ್ನ ಸ್ಟೇಟಸ್)

ಚಿತ್ರ

ಸಾಲುಗಳು - 4  (ನನ್ನ ಸ್ಟೇಟಸ್)

 

ಚಿತ್ರ ಒಂದು : ಕಾಲಯ ತಸ್ಮೈ ನಮಹ‌!

ಚಿತ್ರ ಎರಡು : ಮತ್ಸ್ಯ ಕನ್ಯೆ ಕೇಳಿದ್ದೀರಿ ಶ್ವಾನಕನ್ಯೆ ನೋಡಿದ್ದೀರಾ? 

 

 

26
ಎಲ್ಲ ಮರಗಳಲ್ಲಿ ತೆಂಗಿನ ಮರ ಬೇರೆಯಾಗಿಯೆ ನಿಲ್ಲುವುದು, ವಸಂತದಲ್ಲಿ ಚಿಗುರಿ, ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಇತರ ಮರಗಳಂತಿರದೆ ಸದಾಕಾಲವು ಎಲ್ಲ ಕಾಲಕ್ಕು ಒಂದೆ ರೀತಿ ಇರುವ ಮರಗಳು ಉದ್ದಕ್ಕೆ ನಿಂತಿರುವುದು ನೋಡುವಾಗ ನನಗೆ ರೆಕ್ಕೆಗಳನ್ನು ಬಿಚ್ಚಿ ಹಾರಲು ಸಿದ್ದವಾಗಿರುವ ಒಂಟಿಕಾಲಿನ ಪಕ್ಷಿಗಳ ಹಾಗೆ ಕಾಣುತ್ತಿತ್ತು 
- ಜಿ ಎಸ್ ಶಿವರುದ್ರಪ್ಪ 
http://sampada.net/article/1165

--------------------------------------------------------------------------------------------------
27

ದೇವರಿದ್ದಾನೊ ಇಲ್ಲವೊ ನನಗೆ ಗೊತ್ತಿಲ್ಲ ಅವನ ಅಡ್ರೆಸ್ ನನಗೆ ಗೊತ್ತಿಲ್ಲ 
ಪ್ರೀತಿ ಕರುಣೆ ಮರುಕ ದೇವರು ....
- ಜಿ ಎಸ್ ಶಿವರುದ್ರಪ್ಪನವರು
http://sampada.net/article/1165

-------------------------------------------------------------------------------------------------------------
28
ನನ್ನ ಕವಿತೆಯ ನಿಲುವು ಅಡ್ಡಗೋಡೆಗಳನ್ನು ಒಡೆದು ಮನದ ಮಧ್ಯ ಸೇತುವೆಗಳನ್ನು ನಿರ್ಮಾಣ ಮಾಡುವುದು 
- ಜಿ ಎಸ್ ಎಸ್ 
http://sampada.net/article/1165
----------------------------------------------------------------------------------------------------------
29
ಹೀಗೆ ಕೇಳಿದ ಒಂದು ಜೋಕ್ :
ಜೆರಾಕ್ಸ್ ಅಂಗಡಿಯ ಪ್ರಾರಂಭೋತ್ಸವಕ್ಕೆ ಬಂದಿದ್ದ ರಾಹುಲ್ ಗಾಂದಿಯವರು , ನಡುವೆ ಅದನ್ನು ಉದ್ಘ್ಹಾಟಿಸಲು ನಿರಾಕರಿಸಿ ಹೊರನಡೆದರಂತೆ , ಕಾರಣ ಹೊರಗಿದ್ದ ಭೋರ್ಡ್
"ಮೋದಿ ಜೆರಾಕ್ಸ್ "
------------------------------------------------------------------------------------------------------------------------------
30
ಎದುರಿಗಡೆಯಿಂದ ಸೈಕಲ್ ನಲ್ಲಿ ಬರುತ್ತಿದ್ದವನು ದಡಾರ್ ಎಂದು ಕೆಳಗೆ ಬಿದ್ದ,
ಪಾಪ ಬಿದ್ದನಲ್ಲ ಎನ್ನುವ ಆತಂಕದಿಂದ ಹತ್ತಿರ ಹೋಗಿ ಎಬ್ಬಿಸಿನಿಲ್ಲಿಸಿದರೆ 
"ರೀ ನಿಮಗೆ ಏಕೆ ಸುಮ್ಮನೆ ಹೋಗ್ರಿ, ನಾನು ಸೈಕಲ್ ನಿಂದ ಇಳಿಯೋದೆ ಹಾಗೆ" 
ಅಂತ ರೋಪು ಹಾಕಿದನಂತೆ 
..
ಈಗ ಕಾಲವೆ ಹೀಗೆ ಆಗಿದೆ ...
ನಮಗೆ ಬಹಳಷ್ಟು ವಿಷಯ ಅರ್ಥವೇ ಆಗುವದಿಲ್ಲ!
---------------------------------------------------------------------------------------------------------------------------------
31
ಯಾರೆ ಆಗಲಿ ಸೃಷ್ಟಿಕರಣ ಕೊಡುತ್ತಿದ್ದಾರೆ ಅಂದರೆ ಟೀಕೆಗೆ ಬೆಲೆ ಕೊಟ್ಟಿದ್ದಾರೆ ಎಂದೇ ಅರ್ಥ. 
ಬಹುಶಃ ಅದು ಒಪ್ಪಿಕೊಳ್ಳಲೇ ಬೇಕಾದ ಮನಸ್ಥಿತಿ. 
ಬಹಳಷ್ಟು ಜನ ತಾವು ಮಾಡುವ ಕೆಲಸಗಳನ್ನು ಬಂಡತನದಿಂದ ಸಮರ್ಥಿಸುವಾಗ, 
ನಾನು ಏಕೆ ಮಾಡಿದೆನೆಂದು ವಿವರಿಸಲು ಯತ್ನಿಸುವ ಪ್ರಯತ್ನ
ನಿಜಕ್ಕು ಆರೋಗ್ಯಕರ ವಾತವರಣ ಸೃಷ್ಟಿಸುತ್ತದೆ. 
ನಿಮಗೆ ಕೆಲವೊಮ್ಮೆ ಸೃಷ್ಟಿಕರಣ ಸಮಾದಾನ ಕೊಡದೆ ಇರುವಾಗಲು, 
ಸೃಷ್ಟೀಕರಣ ಕೊಡುವ ಮನಸ್ಥಿತಿಯನ್ನು ಸ್ವಾಗತಿಸಬೇಕು!
------------------------------------------------------------------------------------------------------------------------
32
ಭಾವಪೂರ್ಣ ಶ್ರದ್ಧಾಂಜಲಿ ... ಅನ್ನುವರು ..
’ಆ ಭಾವ..’ ನಿಜವಾಗಲೂ ಇರುತ್ತಾ ಅನ್ನುವುದೇ ಪ್ರಶ್ನೆ.
---------------------------------------------------------------------------------------------------------------
33
ಕ್ರಾಂತಿಕಾರಕ ಕವನ
==========

ಕ್ರಾಂತಿಕಾರಕ ಕವನ 
ಎಂದರೆ
ಸಮಾಜದ 
ದುಷ್ಟತನವನ್ನು 
ಇದ್ದ ಹಾಗೆ ಬರೆಯುವುದು, ...
ಕೆಲವೊಮ್ಮೆ 
ಇಲ್ಲದ ದುಷ್ಟತನವನ್ನು 
ಕಲ್ಪಿಸಿಕೊಂಡು 
ಬರೆಯುವುದು.

----------------------------------------------------------------------------------------------------------------

34

ಇದು ಯಾವ ಕನ್ನಡ ಪ್ರೇಮವೋ ನನಗಂಗೂ ಅರ್ಥವಾಗುವದಿಲ್ಲ. ಗಣೇಶ ಬಂದರೆ ದೈವಭಕ್ತಿಯೂ ಹೀಗೆ ಮೈಕ್ ಮೂಲಕ ಅರ್ಧರಾತ್ರಿಯವರೆಗೂ ಮುಂದುವರೆಯುವುದು. ಕೆಟ್ಟ ಚಲನಚಿತ್ರ ಗೀತೆಗಳನ್ನು ಅಷ್ಟೆ ಕೆಟ್ಟದ್ವನಿಯಲ್ಲಿ
ಹಾಡಿ ಮುಗಿಸುವರು. 
ನನಗೆ ಅರ್ಥವಾಗದ ವಿಷಯವೆಂದರೆ ಕನ್ನಡ ರಾಜ್ಯೋತ್ಸವವೆಂದರೆ 'ಅರ್ಕೇಷ್ಟ್ರಾ' ಎಂದು ಏಕೆ ಎಲ್ಲರೂ ಅಂದುಕೊಂಡಿದ್ದಾರೆ , ಅದು ಬಿಟ್ಟು ಬೇರೆ ರೀತಿಯ 'ಕ್ರಿಯೆಟಿವಿಟಿ' ತೋರಿಸುವ ಕಾರ್ಯಕ್ರಮಗಳೆ ಇಲ್ಲವೆ ?. 

ವಾರದಲ್ಲಿ ಇದು ಮೂರನೇ ದಿನ ಅರ್ಧರಾತ್ರಿ ಆಗುತ್ತ ಬಂದರು , ಮೈಕ್ ಹಾಕಿ ಕೂಗಿಕೊಳ್ಳುತ್ತ ಇರುವುದು. 
ಮನೆಯಲ್ಲಿ ನಾಳೆ ಇರುವ ಪರೀಕ್ಷೆಗೆ ಸಿದ್ದವಾಗುತ್ತಿರುವ ಮಗಳು ತಲೆಕೆಟ್ಟು ಕುಳಿತಿದ್ದಾಳೆ, ದಿಕ್ಕುತೋರದೆ . 
ಇದೆಂತಹ ಜನರೋ ಇದೆಂತಹ ದೇಶವೋ ಇದೆಂತ ಭಾಷಪ್ರೇಮ, ರಾಜ್ಯಪ್ರೇಮ, ದೇಶಪ್ರೇಮ,ದೈವಭಕ್ತಿಗಳೋ ನನಗಂತು ಅರ್ಥವಾಗುತ್ತಿಲ್ಲ. 
---------------------------------------------------------------------------------------
35
ಒಂದು ರುಪಾಯಿಗೆ ಕೇಜಿ ಅಕ್ಕಿ ಕೊಡುವೆ ಎನ್ನುವ ಕರ್ನಾಟಕ ಮು.ಮ. ರವರಿಗೂ ,
ನೀರು ಫ್ರೀ ಕೊಡುವೆ, ಕರೆಂಟ ಅರ್ಧ ಚಾರ್ಚ್ ಎನ್ನುವ ದೆಹಲಿ ಮು.ಮ. ರವರಿಗು
ಹೋಲಿಕೆ ವ್ಯೆತ್ಯಾಸಗಳೇನಾದರು ಇದೆಯ ??
-----------------------------------------------------------------------------------------------------

 

ಚಿತ್ರದ ಮೂಲಗಳು : 

https://fbcdn-sphotos-g-a.akamaihd.net/hphotos-ak-frc3/p480x480/1499463_...
https://fbcdn-sphotos-a-a.akamaihd.net/hphotos-ak-ash3/p480x480/575787_5...

Rating
No votes yet

Comments

Submitted by lpitnal Thu, 01/02/2014 - 21:58

ಪಾರ್ಥರವರೇ, ಸಾಲುಗಳು- 4, ಹಲವಾರು ವೈಚಾರಿಕ ವಿಷಯಗಳನ್ನು, ತಮ್ಮ ತಲೆತಿನ್ನುವ ವಿಚಾರಗಳನ್ನು ನಮ್ಮ ತಲೆಗೂ ವರ್ಗಾಯಿಸುವ ಹುನ್ನಾರ? ವೂ ಇಲ್ಲ ತಾನೆ ಸರ್. ಕೆಲವಂತು ತುಂಬ ವೈಚಾರಿಕ, ಕೆಲ ಲಘು ಹರಟೆಗಳು ತುಂಬ ಚನ್ನಾಗಿವೆ. ಧನ್ಯವಾದಗಳು

Submitted by partha1059 Fri, 01/03/2014 - 17:00

In reply to by lpitnal

ಇಟ್ನಾಳ್ ರವರಿಗೆ ವಂದನೆಗಳು
ನನಗೆ ತಿನ್ನುವದನ್ನೆಲ್ಲ ಹಂಚಿಕೊಂಡು ಅಭ್ಯಾಸ :-)
ಹಾಗೆ ತಲೆತಿನ್ನುವ ವಿಚಾರಗಳನ್ನು ನಿಮ್ಮಂತ ಗೆಳೆಯರ ಜೊತೆ ಹಂಚಿಕೊಂಡರೆ ಸಂತಸ
-ಪಾರ್ಥಸಾರಥಿ

Submitted by nageshamysore Thu, 01/02/2014 - 23:05

ಪಾರ್ಥಾ ಸಾರ್ ಹೊಸವರ್ಷದ ಶುಭಾಶಯಗಳು ಮತ್ತು ನಮಸ್ಕಾರ. ಸ್ಟೇಟಸ್ಸಿನ ಸ್ಟ್ಯಾಟಿಸ್ಟಿಕ್ಸು ತುಂಬಾ ಕುತೂಹಲಕಾರಿಯಾಗಿ, ರಸವತ್ತಾಗಿ ಬರುತ್ತಿದೆ. ಹೀಗೆಯೆ ಮುಂದುವರೆಯಲಿ ರಸದೌತಣ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by partha1059 Fri, 01/03/2014 - 17:01

In reply to by nageshamysore

ನಾಗೇಶ್ ವಂದನೆಗಳು
ಸ್ವಲ್ಪ ದಿನ ನೀವು ಕಾಣಲಿಲ್ಲ . ಹೊಸವರ್ಷಕ್ಕೆ ಮತ್ತೆ ಕಾಣಿಸಿದಿರಿ
ತಮ್ಮ ಕೆಲಸವೂ ಮುಂದುವರೆಯಲಿ
ಹೊಸವರ್ಷದ ಶುಭಾಶಯಗಳೊಡನೆ
-ಪಾರ್ಥಸಾರಥಿ

Submitted by nageshamysore Fri, 01/03/2014 - 20:24

In reply to by partha1059

ಪಾರ್ಥಾ ಸಾರ್ ನಮಸ್ಕಾರ,
.
ಒಂದು ಎಂಟು ದಿನ ಊರಿನಲ್ಲಿರಲಿಲ್ಲ. ಹೋಗಿದ್ದ ಜಾಗದಲ್ಲಿ ಇಂಟರ್ನೆಟ್ಟಿನ ಸೌಲಭ್ಯ ಸಕಾಲಕ್ಕೆ ಒದಗದೆ ಇದ್ದ ಕಾರಣ 'ಬಲವಂತ ಸನ್ಯಾಸ' ಸ್ವೀಕರಿಸಬೇಕಾಯ್ತು. ಈಗ ಮರಳಿ ಗೂಡಿಗೆ  :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by ಗಣೇಶ Thu, 01/02/2014 - 23:11

ಪಾರ್ಥರೆ,
-ಒಂದು ರುಪಾಯಿಗೆ ಕೇಜಿ ಅಕ್ಕಿ ಕೊಡುವೆ ಎನ್ನುವ ಕರ್ನಾಟಕ ಮು.ಮ. ರವರಿಗೂ ,
ನೀರು ಫ್ರೀ ಕೊಡುವೆ, ಕರೆಂಟ ಅರ್ಧ ಚಾರ್ಚ್ ಎನ್ನುವ ದೆಹಲಿ ಮು.ಮ. ರವರಿಗು
ಹೋಲಿಕೆ ವ್ಯೆತ್ಯಾಸಗಳೇನಾದರು ಇದೆಯ ??
-ಇದನ್ನೇ ಕುರ್ಚಿ ಮಹಿಮೆ ಅನ್ನೋದು :)

Submitted by makara Fri, 01/03/2014 - 09:04

In reply to by ಗಣೇಶ

ಏನನ್ನಾದರೂ ಫ್ರೀ ಆಗಿ ಕೊಡುತ್ತಿದ್ದಾನೆ ಅಂದರೆ ಅವನು ಅಗ್ಗದ ಪ್ರಚಾರಕ್ಕೆ ಲಗ್ಗೆ ಹಾಕುತ್ತಿದ್ದಾನೆ ಎಂದೇ ಅರ್ಥ. ಅದೇ ವ್ಯಥೆ.

Submitted by partha1059 Fri, 01/03/2014 - 18:53

In reply to by makara

ಶ್ರೀದರ್ ಬಂಡ್ರಿರವರಿಗೆ ವಂದನೆಗಳು
ನಿಜ
ಶ್ರಮದ ದುಡಿಮೆಯಿಂದ ಬರದ ಯಾವುದೆ ಗಳಿಕೆ ಎಂದಿಗೂ ಉತ್ತಮ ಪರಿಣಾಮ ಬೀರುವದಿಲ್ಲ

Submitted by H A Patil Fri, 01/03/2014 - 15:02

ಪಾರ್ಥ ಸಾರಥಿ ಯವರಿಗೆ ವಂದನೆಗಳು,
ನನ್ನ ಸ್ಟೇಟಸ್ ಚೆನ್ನಾಗಿ ಮೂಡಿ ಬರುತ್ತಿದೆ, ಕೊಟ್ಟಿರುವ ಚಿತ್ರಗಳು ಅವುಗಳಿಗೆ ನೀಡಿದ ಶೀರ್ಷಿಕೆಗಳು ಚೆನ್ನಾಗಿವೆ, ಜಿಎಸ್ ಎಸ್ ರವರ ನುಡಿ ಗಳು, ಮೋದಿ ಮತ್ತು ರಾಹುಲ್ ಕುರಿತ ಜೋಕುಗಳು, ವರ್ತಮಾನದ ಜಗದ ನಡುವಳಿಕೆಗಳ ಕುರಿತು ಚೆನ್ನಾಗಿ ದಾಖಲಿಸಿದ್ದೀರಿ, ಕ್ರಾಂತಿಕಾರಿ ಕವನದ ದ್ವಿತಿಯಾರ್ಧ ವರ್ತಮಾನದ ಕಾವ್ಯದ ಮಜಲು ಸಾಗಿರುವ ದಿಕ್ಕು ತೋರಿಸುವ ಸಾಲುಗಳು, ದೆಹಲಿ ಮತ್ತು ಕರ್ನಾಟಕ ಮು.ಮಂ.ಗಳಲ್ಲಿ ಏನೂ ವ್ಯತ್ಯಾಸವಿಲ್ಲ ಹೋಲಿಕೆ ಒಂದೆ, ಸತ್ವಡೂರ್ಣ ಬರಹ ನೀಡಿದ್ದೀರಿ ಧನ್ಯವಾದಗಳು.

Submitted by partha1059 Fri, 01/03/2014 - 17:03

In reply to by H A Patil

ಪಾಟೀಲರೆ ತಮ್ಮ ಮೆಚ್ಚುಗೆಗೆ ವಂದನೆಗಳು
ತಾವು ಚಿತ್ರಗಳನ್ನು ಶೀರ್ಷಿಕೆಗಳನ್ನು ಗಮನಿಸಿದ್ದು ನನಗೆ ಖುಷಿ ಕೊಟ್ಟಿತು