ಸಾಲುಗಳು - 6 (ನನ್ನ ಸ್ಟೇಟಸ್)
ಸಾಲುಗಳು - 6 (ನನ್ನ ಸ್ಟೇಟಸ್)
<42>
ಅಡ್ಜಸ್ಟ್ ಮೆಂಟ್
--------------
ಜೀವನದಲ್ಲಿ ಪ್ರತಿ ವಿಷ್ಯದಲ್ಲೂ ಅಡ್ಜಸ್ಟ್ ಆಗಲೇ ಬೇಕು !
.
.
,
ಸಾಗು ಜಾಸ್ತಿಯಾಯಿತು ಎಂದು ಪೂರಿ , ಪೂರಿ ಉಳಿಯಿತು ಎಂದು ಸಾಗು ಹಾಕಿಸಿಕೊಳ್ಳುತ್ತಿದ್ದರೆ ತಿನ್ನುವ ಕ್ರಿಯೆ ಮುಗಿಯುವುದೇ ಇಲ್ಲ!
ಕಡೆಯಲ್ಲಿ ಉಳಿಯುವ ಪೂರಿಗೆ ಸಾಗುವನ್ನು ಅಡ್ಜಸ್ಟ್ ಮಾಡಿ ತಿನ್ನಬೇಕು !!
<43>
ಸ್ವತಂತ್ರ ಭಾರತದಲ್ಲಿ ಎಲ್ಲ ಸಮಸ್ಯೆಗಳು ರಸ್ತೆಗಳಲ್ಲೆ ನಿರ್ಧಾರವಾಗಲಿ ಎನ್ನುವ ಪರಿಸ್ಥಿತಿ ಬಂದೊದಗಿದೆ ಅನ್ನುವದಾದರೆ ಚುನಾವಣೆ, ವಿಧಾನಸಭೆ, ಲೋಕಸಭೆ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ಎನ್ನುವ ರೀತಿಯ ವ್ಯವಸ್ಥೆ ಏಕಿರಬೇಕು?
<44>
ಪ್ರಸಿದ್ದರಾಗಲು ಹಲವು ಮಾರ್ಗಗಳು.
ಜೀವಮಾನಕಾಲವನ್ನೆ ತಾವು ಗುರುತಿಸಿದ ಸಾಧನೆಗಾಗಿ ಸವೆಸಿ, ಇಳಿವಯಸಿನಲ್ಲಿ ಸಾರ್ಥಕತೆಯಿಂದ ಸಂಭ್ರಮಿಸುವುದು.
.
.
ಯಾವ ಸಾಧನೆ ತಾವು ಮಾಡಲಾಗದಿರುವಾಗಲು, ಅಲ್ಪ ಸಾಧನೆ ಮಾಡಿದವರ ತಪ್ಪು ಒಪ್ಪುಗಳೆಲ್ಲವನ್ನು ಕೆದಕುತ್ತ,
ಅವರ ಸಾಧನೆ ನಿರರ್ತಕವೆಂದು ಸಾಧಿಸುತ್ತ, ವಿಚಿತ್ರ ಆಪಾದನೆಗಳನ್ನು ಅವರ ಮೇಲೆ ಹೊರೆಸಿ ತಾವು ಪ್ರಸಿದ್ದರಾಗುವುದು.
<45>
ಈ ಪ್ರಪಂಚವೇ ವಿಚಿತ್ರ
ಕೆಲವರು ಹತ್ತು ಹನ್ನೆರಡನೇ ವಯಸ್ಸಿಗೆ ಎಲ್ಲ ಜವಾಬ್ದಾರಿ ಹೊತ್ತು ದೊಡ್ಡವರೆನಿಸುತ್ತಾರೆ,
ಕೆಲವರು ನಲವತ್ತು ನಲವತೈದು ವಯಸ್ಸು ಬಂದರು ಇನ್ನು ಚಿಕ್ಕವರಂತೆ ಪ್ರತಿಬಿಂಬಿಸಿ, ವರ್ತಿಸುತ್ತಾರೆ.
<46>
ಕೆಲವೊಂದು ಬರಹಕ್ಕೆ ನಮ್ಮೊಳಗೆ ಹುಟ್ಟುವ ಪ್ರತಿಕ್ರಿಯೆ ಏನು ಅಂತ ನಮಗೇ ಅರ್ಥವಾಗಲ್ಲ !
<47>
ನಮಗೆ ಇಷ್ಟವಿರುವದಷ್ಟೆ ಅಲ್ಲ ಇಷ್ಟವಿಲ್ಲದಿರುವ ಕೆಲಸಗಳನ್ನೂ ಮಾಡಬೇಕಾಗುತ್ತದೆ ಎನ್ನುವದನ್ನು ಅರ್ಥಮಾಡಿಕೊಂಡಾಗ ಹಿರಿಯರಿಗು ಕಿರಿಯರಿಗೂ ಇರುವ ’ಜನರೇಶನ್ ಗ್ಯಾಪ್ ’ ಎನ್ನುವುದು ಕಡೆಮೆಯಾಗುತ್ತಾ ಹೋಗುತ್ತದೆ
<48>
ದೇಶದ ಅತ್ಯಂತ ದುರಂತವೆಂದರೆ.
ಯಾವ ಪಾರ್ಟಿ ಇದ್ದಾಗ ಎಷ್ಟು ಜನ ಸತ್ತರು ಗಲಬೆಗಳಲ್ಲಿ ಎನ್ನುವ ಹೋಲಿಕೆ ಪ್ರಾರಂಭವಾಗಿದೆ.
ಏನು ನಡೆಯುತ್ತಿದೆ ದೇಶದಲ್ಲಿ ಎಂದು ಅರ್ಥವೇ ಆಗುತ್ತಿಲ್ಲ
ಎಲ್ಲಿ ದೇಶದ ಅಭಿವೃದ್ದಿಯ ಹೋಲಿಕೆಗಳು ಆಗಬೇಕಾಗಿತ್ತೊ,
ಎಲ್ಲಿ ದೇಶದ ಸಾಧನೆಗಳ ಹೋಲಿಕೆಗಳು ಆಗಬೇಕಾಗಿತ್ತೊ
ಅಲ್ಲಿ ಯಾವ ಪಾರ್ಟಿ ಆಳುವಾಗ ಎಷ್ಟು ಜನ ಸತ್ತರು,
ಎಷ್ಟು ಕೋಮುಗಲಬೆಗಳು ನಡೆದವು ಎನ್ನುವ ಹೋಲಿಕೆ !!!
< 49 >
doubt:
=====
ಎರಡು ರೂಪಾಯಿಗೆ ಒಂದು ಚಹಾ! ಇದು ಚುನಾವಣೆ ಮುಗಿಯುವರೆಗೂ ಮಾತ್ರನಾ ಅಥವ ಚುನಾವಣೆ ಮುಗಿದ ನಂತರವೂ ಅಂಗಡಿ ತೆರೆದಿರುತ್ತಾ ?
< 50 >
ಇದ್ದರೂ ಇರಲೇಳು ಹೆಂಗಸಿಗೆ ಮೀಸೆ
ಯಾವ ತಂಟೆ ಇಲ್ಲ!
ಅದನ್ನು ಅವರು ತಿರುವದಿದ್ದರೇ ಸಾಕು!
ಗಂಡಸರಿಗೆ ಚಿಂತೆ ಇಲ್ಲ
<51 >
ಹಿಂದೆಲ್ಲ್ಲ ಯಾರನ್ನಾದರು ನೋಡಿದರೆ ಮಾತನಾಡಿಸಿದರೆ ನೆನಪು ಬಹಳ ಕಾಲ ಉಳಿಯೋದು,
ಈಗ ಎಲ್ಲ ಹಾಳಾಗಿ ಹೋಗಿದೆ,
ದಿನ ಪ್ರತಿ ನೋಡುವ ಟೀವಿ, ಸಿನಿಮಾಗಳು ಅಂತ ನೂರಾರು ಮುಖಗಳು,
ಫೇಸ್ ಬುಕ್, ಅದು ಇದು ಅಂತ ಇಂಟರ್ನೆಟ್ ನ ಮುಖಗಳು,
ಎಲ್ಲಿ ಯಾರನ್ನು ನೋಡಿದರು ಒಮ್ಮೆ ನೋಡಿರಬಹುದೆ ಎನ್ನುವ ಭಾವ,
ಹಾಗಾಗಿ ನೆನಪುಗಳೆಲ್ಲ ಕಲಸುಮೇಲೋಗರವಾಗಿ,
ಒಮ್ಮೆ ಬೇಟಿ ಮಾಡಿದ ಪರಿಚಯಸ್ತರು ಎರಡನೇ ಬಾರಿ ಇನ್ನೇಲ್ಲೊ ಎದುರಿಗೆ ಸಿಗುವಾಗ ಗಲಿಬಿಲಿಯಾದರೆ
ಖಂಡೀತ ಅದು
ವಯಸ್ಸಿನ ಪ್ರಭಾವ ಅನ್ನಬೇಡಿ.
<52 >
ಸಂಸತ್ತಿನ ನೇರ ಪ್ರಸಾರವನ್ನು ಸ್ಥಗಿತಗೊಳಿಸಿ (ಸದ್ಯ ಲೈಟ್ ಗಳನ್ನೆಲ್ಲ ಆರಿಸಿಲ್ಲ)
ಆಂದ್ರದ ವಿಭಜನೆಯ ಬಿಲ್ ಪಾಸ್ ಮಾಡಲಾಯಿತು. (ಟೀವಿ ವರದಿ)
ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೆ ನಡೆಸುವ ಆಡಳಿತ ಪ್ರಜಾಪ್ರಭುತ್ವದಲ್ಲಿ
ಲೋಕಸಭೆ ಈ ರೀತಿ ಪ್ರಜೆಗಳಿಂದ ದೂರವಾಗಿ ಕುಳಿತು ಬಿಲ್ ಪಾಸ್ ಮಾಡುವದೇಕೆ ?
ಅಂದ್ರಕ್ಕೆ ಸಂಬಂಧಿಸಿದ್ದು ತಾನೆ ಎಂದು ಸುಮ್ಮನೆ ನೆಮ್ಮದಿಯಾಗಿರುವಂತಿಲ್ಲ.
ಮುಂದೆ ಒಂದು ದಿನ ಸಂಸತ್ತಿನಲ್ಲಿ
ಕರ್ನಾಟಕದ ವಿಭಜನೆಯ
ಬಗ್ಗೆಯೂ ಇದೆ ರೀತಿ ಬಿಲ್ ಪಾಸ್ ಮಾಡಿ ಕಾನೂನು ರಚಿಸಬಹುದು ಅಲ್ಲವೇ ?
<53 >
ಕಾನೂನು ಎನ್ನುವಾಗ ನೆನಪಿಗೆ ಬಂದಿತು,
ಇಂದು ದೇಶದಲ್ಲಿ ಕಾನೂನು ಎಲ್ಲರಿಗೂ ಸಮನಾಗಿ ಏನು ಇಲ್ಲ,
ನ್ಯಾಯವೂ ಕೂಡ ಎಲ್ಲರನ್ನು ಸಮನಾಗಿ ನೋಡುತ್ತಿಲ್ಲ, ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗಿದೆ,
ಇಂದು ಆಕೆ ಕೂಡ ನ್ಯಾಯ ನೀಡುವಾಗ ಸಾಮಾನ್ಯರ್ಯಾರು , ವಿ ಐ ಪಿ ಯಾರು ಎಂದು ಗಮನಿಸಿಯೆ ನ್ಯಾಯ ನೀಡುತ್ತಾಳೆ ಅನ್ನಿಸುತ್ತಿದೆ,
ಪತ್ನಿಗೆ ಆರೋಗ್ಯ ಸರಿಯಿಲ್ಲ ಎನ್ನುವ ಕಾರಣಕ್ಕೆ ಸಂಜಯ್ ದತ್ತ್ ಪರೋಲ್ ಮೇಲೆ ಮನೆಯಲ್ಲಿ ಮತ್ತಷ್ಟು ಕಾಲ ಮಾರ್ಚಿ ಕಳೆಯುವವರೆಗೂ ???
ಇರಬಹುದು ಎಂದು ಆಜ್ಞೆಯಾಗಿದೆ.
ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಬಾಗೋಣ!
18-feb-2014
-----------------
ಚಿತ್ರದ ಮೂಲ : https://www.facebook.com/kannadacb/photos/a.183862001704370.43724.183850...
Comments
ಉ: ಸಾಲುಗಳು - 6 (ನನ್ನ ಸ್ಟೇಟಸ್)
ಪೂರಿ ಸಾಗು ಕಥೆಯಂತು ಸಾರ್ವತ್ರಿಕ ಸತ್ಯ..ಮಾಡಿ ಬಡಿಸುವವರು ಮಿಕ್ಕ ಸಾಗಿಗೊ, ಮಿಕ್ಕ ಚಟ್ನಿಗೊ ಪೂರಿ, ದೋಸೆ ಸೇರಿಸುತ್ತಲೆ ಹೋಗುವುದರಿಂದಲೇ ಏನೊ ದೇಹದ ಮಿಕ್ಕಿದ್ದ ಅಷ್ಟುಷ್ಟು ಅಷ್ಟಿಷ್ಟು ಜಾಗವೂ ಊದುತ್ತ ದೊಡ್ಡದಾಗುತ್ತ ಹೋಗುವುದು. ಹಾಗೆಯೆ ಹನ್ನೆರಡಕ್ಕೆ ಬೆಳೆದವರ ನಲವತ್ತಾದರೂ ಬೆಳೆಯದವರ ಕಥೆ : ಎರಡು ವಿಸ್ಮಯ, ಬೆರಗು, ಅಚ್ಚರಿಯ ಪ್ರತೀಕಗಳೆ! ಈಚೆಗೆ ಕಂಡ ಮುಖವೆಲ್ಲೊ ಎಲ್ಲೊ ನೋಡಿದಂತಿದೆಯಲ್ಲ...ಹೆಸರೆ ಮರೆತುಹೋಗಿದೆಯಲ್ಲ ಅನಿಸಿ ಖೇದವಾಗುತ್ತಿತ್ತು. ನೀವು ಕೊಟ್ಟ ಕಾರಣ ಓದಿದ ನಂತರ ಅದೂ ದೂರವಾಯ್ತು ! ಪಕ್ಕದ ಮನೆ ಬೆ!ಕಿ ಎಂದು ಸುಮ್ಮನಿರುವಂತಿಲ್ಲ..ನಮ್ಮ ಕಡೆಗೂ ಹಬ್ಬಬಹುದು ಅನ್ನುವುದು ಸತ್ಯದ ಮಾತು - ಆಂಧ್ರ ವಿಭಜನೆ ಹಾಗೆ.
In reply to ಉ: ಸಾಲುಗಳು - 6 (ನನ್ನ ಸ್ಟೇಟಸ್) by nageshamysore
ಉ: ಸಾಲುಗಳು - 6 (ನನ್ನ ಸ್ಟೇಟಸ್)
ನಾಗೇಶ ಮೈಸೂರು ರವರಿಗೆ ಧನ್ಯವಾದಗಳು.
ನಿಮ್ಮ ಮಾತು ನಿಜ ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ಹಬ್ಬಬಹುದು
ತಿಳಿದವರೊಬ್ಬರು ಹೇಳುತ್ತಿದ್ದರು, ರಾಜಕಾರಣಿಗಳನ್ನು ನಂಬುವಂತಿಲ್ಲ
ಕರ್ನಾಟಕದ ಎರಡನೆ ಹೈಕೋರ್ಟ್ ಪೀಠ, ಉತ್ತರಕರ್ನಾಟಕದಲ್ಲೊಂದು ವಿಧಾನಸೌದ ಇಂತಹಹುದೆಲ್ಲ ಸುಮ್ಮನೆ ಆಗುತ್ತಿಲ್ಲ
ಅದು ಮುಂದೆ ಕರ್ನಾಟಕವನ್ನು ಇಬ್ಬಾಗ ಮಾಡುವ ಸಮಯ ಬಂದಾಗ ಉಪಯೋಗಿಸಿಕೊಳ್ಳಲು ಮಾಡಿರುವ ಅವಕಾಶಗಳು ಎಂದು.
ಒಳಗೊಳಗೆ ಲೆಕ್ಕಚಾರ ಹಾಕುವ ಕಾಂಗ್ರೆಸ್ ಮುಂದೊಂದು ದಿನ ಕರ್ನಾಟಕವನ್ನು ಎರಡು , ಮೂರು ಬಾಗ ಮಾಡಿದರು ಆಶ್ಚರ್ಯವಿಲ್ಲ. ಅಧಿಕಾರಕ್ಕಾಗಿ ಹಾತೊರೆಯುವ ಇತರೇ ಪಕ್ಷಗಳು ಸಹ ಅದಕ್ಕೆ ಸಹಕರಿಸುತ್ತವೆ ಎಂಬುದು ಸತ್ಯ.
ಉ: ಸಾಲುಗಳು - 6 (ನನ್ನ ಸ್ಟೇಟಸ್)
ಪಾರ್ಥಸಾರಥಿ ಯವರಿಗೆ ವಂದನೆಗಳು
ಸಾಲುಗಳು 6 ( ನನ್ನ ಸ್ಟೇಟಸ್ ) ಒಂದು ಲವಲವಿಕೆಯ ಬರಹ ಜೊತೆಗೆ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳ ಕುರಿತು ಯೋಚಿಸುವಂತಿವೆ. ಭಿನ್ನ ಶೈಲಿಯ ಮನ ಮುಟ್ಟುವ ನಿರೂಪಣೆ. ಧನ್ಯವಾದಗಳು.
In reply to ಉ: ಸಾಲುಗಳು - 6 (ನನ್ನ ಸ್ಟೇಟಸ್) by H A Patil
ಉ: ಸಾಲುಗಳು - 6 (ನನ್ನ ಸ್ಟೇಟಸ್)
ವಂದನೆಗಳು ಪಾಟೀಲರಿಗೆ , ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಉ: ಸಾಲುಗಳು - 6 (ನನ್ನ ಸ್ಟೇಟಸ್)
ಪಾರ್ಥರೆ,
ಎಲ್ಲಾ ಸ್ಟೇಟಸ್ ಚೆನ್ನಾಗಿದೆ. ಪೂರಿ ಸಾಗು ಸೂಪರ್.
In reply to ಉ: ಸಾಲುಗಳು - 6 (ನನ್ನ ಸ್ಟೇಟಸ್) by ಗಣೇಶ
ಉ: ಸಾಲುಗಳು - 6 (ನನ್ನ ಸ್ಟೇಟಸ್)
ಗಣೇಶರಿಗೆ ನಮಸ್ಕಾರಗಳು
ಪೂರಿ ಸಾಗುವಿನ ಬಗ್ಗೆ ತಮ್ಮ ಪ್ರತಿಕ್ರಿಯೆ ಬರುವದೆಂದು ನಿರೀಕ್ಷೆ ಮಾಡಿದ್ದೆ :-)
ಶುಭದಿನ!
ಉ: ಸಾಲುಗಳು - 6 (ನನ್ನ ಸ್ಟೇಟಸ್)
ನಿಮ್ಮ ಚುಟುಕು-ಕುಟುಕುಗಳನ್ನು ಓದಿ ನಾವಡರನ್ನು ಜ್ಞಾಪಿಸಿಕೊಂಡೆ. ಅವರು ಇತ್ತೀಚೆಗೆ ಸಂಪದದಲ್ಲಿ ಕಾಣುತ್ತಿಲ್ಲ.